Karnataka Weather: ಕೆಲವೆಡೆ ಮಂಜು ಮುಸುಕಿದ ವಾತಾವರಣ; ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅತಿ ಕಡಿಮೆ ಕನಿಷ್ಠ ಉಷ್ಣಾಂಶ ದಾಖಲು
Feb 02, 2024 06:35 AM IST
ಕರ್ನಾಟಕ ಹವಾಮಾನ ವರದಿ; ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅತಿ ಕಡಿಮೆ ಕನಿಷ್ಠ ಉಷ್ಣಾಂಶ ದಾಖಲು
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುರುವಾರ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಇತ್ತು. ಶನಿವಾರ ಹಾಗೂ ಮುಂದಿನ 48 ಗಂಟೆಗಳಲ್ಲಿ ರಾಜ್ಯಾದ್ಯಂತ ಒಣಹವೆ ಮುಂದುವರೆಯಲಿದೆ.
Karnataka Weather: ನಿನ್ನೆಯಷ್ಟೇ ಕೇಂದ್ರದ ಮಧ್ಯಂತರ ಬಜೆಟ್ ಮುಗಿದಿದೆ. ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು ಜುಲೈನಲ್ಲಿ ಹೊಸ ಸರ್ಕಾರ ಮತ್ತೆ ಬಜೆಟ್ ಮಂಡಿಸಲಿದೆ. ಜನರು ತಮ್ಮ ತಮ್ಮ ಕ್ಷೇತ್ರಗಳಿಗೆ ಬಜೆಟ್‌ನಿಂದ ಏನೆಲ್ಲಾ ದೊರೆಯಿತು ಎಂಬ ಬಿಸಿ ಬಿಸಿ ಚರ್ಚೆಯಲಿದ್ದಾರೆ. ಇದರೊಂದಿಗೆ ವಾತಾವರಣ ಕೂಡಾ ಬಿಸಿ ತಾಪಮಾನ ಸ್ವಲ್ಪ ಸ್ವಲ್ಪವೇ ಹೆಚ್ಚಾಗುತ್ತಿದೆ.
ಮಂಜು ಮುಸುಕಿದ ವಾತಾವರಣ
ಕೆಲವೆಡೆ ಮುಂಜಾನೆ ಮುಂಜು ಮುಸುಕಿದ ವಾತಾವರಣ ಇದ್ದು ಚಳಿಯ ಅನುಭವವಾದರೆ ಬೆಳಗ್ಗೆ 10ರ ನಂತರ ಲಘುವಾಗಿ ಸೆಕೆ ಆರಂಭವಾಗಿದೆ. ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ ಗುರುವಾರ ರಾಜ್ಯಾದ್ಯಂತ ಒಣಹವೆ ಇತ್ತು. ಯಾವುದೇ ಮಳೆಯ ಪ್ರಮಾಣ ವರದಿಯಾಗಿಲ್ಲ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶ 2.1 ಡಿಗ್ರಿ ಸೆಲ್ಸಿಯಸ್‌ನಿಂದ 4.0 ಡಿ.ಸೆವರೆಗೆ ದಾಖಲಾಗಿದೆ. ಕರಾವಳಿಯಲ್ಲಿ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ 2.0 ಡಿ.ಸೆ. ನಿಂದ +2.0 ಡಿ.ಸೆವರೆಗೆ ದಾಖಲಾಗಿದೆ. ಹಾಗೇ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ 2.1 ಡಿ.ಸೆ. ನಿಂದ 4.0 ಡಿ.ಸೆವರೆಗೆ ಗಮನಾರ್ಹವಾಗಿ ಏರಿಕೆ ಆಗಿದೆ. ರಾಜ್ಯದ ಸಮತಟ್ಟಾದ ಪ್ರದೆೇಶಗಳಲ್ಲಿಅತಿ ಕಡಿಮೆ ಕನಿಷ್ಠ ಉಷ್ಣಾಂಶ 11.2 ಡಿ.ಸೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿದೆ.
ಒಣ ಹವೆ ಮುಂದುವರಿಕೆ
ಶುಕ್ರವಾರ ಹಾಗೂ ಶನಿವಾರ ರಾಜ್ಯಾದ್ಯಂತ ಒಣ ಹವೆ ಮುಂದುವರೆಯಲಿದ್ದು ಮಳೆ ಮನ್ಸೂಚನೆ ವರದಿ ಆಗಿಲ್ಲ. ಗುಡುಗು ಮುನ್ನೆಚರಿಕೆ ಆಗಲೀ ಮೀನುಗಾರರಿಗೆ ಕೂಡಾ ಹವಾಮಾನ ಇಲಾಖೆ ಯಾವ ಮುನ್ಸೂಚನೆ ನೀಡಿಲ್ಲ.
ಬೆಂಗಳೂರಿನಲ್ಲಿ ವಾತಾವರಣ ಹೇಗಿರಲಿದೆ?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿರುತ್ತದೆ. ಕೆಲ್ವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿವೆ. ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ.
ವಿಭಾಗ