logo
ಕನ್ನಡ ಸುದ್ದಿ  /  ಕರ್ನಾಟಕ  /  ರಾಜ್ಯದ 5 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್;‌ ಕರಾವಳಿ ಸಮುದ್ರ ತೀರದಲ್ಲಿ ಭಾರೀ ಅಲೆಗಳ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ರಾಜ್ಯದ 5 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್;‌ ಕರಾವಳಿ ಸಮುದ್ರ ತೀರದಲ್ಲಿ ಭಾರೀ ಅಲೆಗಳ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

Rakshitha Sowmya HT Kannada

Jul 08, 2024 07:18 AM IST

google News

ರಾಜ್ಯದ 5 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್;‌ ಕರಾವಳಿ ಸಮುದ್ರ ತೀರದಲ್ಲಿ ಭಾರೀ ಅಲೆಗಳ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

  • Karnataka Weather: ರಾಜ್ಯದಲ್ಲಿ ಇಂದು ಉ. ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದ ಕನ್ನಡದಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಕರಾವಳಿ ತೀರದಲ್ಲಿ ಭಾರೀ ಅಲೆಗಳ ಮುನ್ನೆಚರಿಕೆ ನೀಡಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. 

ರಾಜ್ಯದ 5 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್;‌ ಕರಾವಳಿ ಸಮುದ್ರ ತೀರದಲ್ಲಿ ಭಾರೀ ಅಲೆಗಳ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ರಾಜ್ಯದ 5 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್;‌ ಕರಾವಳಿ ಸಮುದ್ರ ತೀರದಲ್ಲಿ ಭಾರೀ ಅಲೆಗಳ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಕರ್ನಾಟಕ ಹವಾಮಾನ ಜುಲೈ 8: ಇಂದು ಬೆಳಗ್ಗೆ 05:59ಕ್ಕೆ ಸೂರ್ಯೋದಯವಾಗಿದ್ದು ಸಂಜೆ 6:50ಕ್ಕೆ ಸೂರ್ಯಾಸ್ತವಾಗಲಿದೆ. 07:55 ಕ್ಕೆ ಚಂದ್ರೋಯವಾಗಲಿದೆ. ಹವಾಮಾನ ಇಲಾಖೆ ವರದಿಯ ಪ್ರಕಾರ ಇಂದು ಸಿಲಿಕಾನ್‌ ಸಿಟಿ ಬೆಂಗಳೂರಿನ ವಾತಾವರಣ 21.2 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ನಿನ್ನೆ ಕರ್ನಾಟಕದ ಯಾವ ಸ್ಥಳಗಳಲ್ಲಿ ಮಳೆ ಆಯ್ತು? ಇಂದು ಎಲ್ಲೆಲ್ಲಿ ಮಳೆ ಆಗಲಿದೆ? ಹವಾಮಾನ ಇಲಾಖೆ ಎಲ್ಲೆಲ್ಲಿ ಅಲರ್ಟ್‌ ಘೋಷಿಸಿದೆ? ಇಲ್ಲಿದೆ ವಿವರ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ನಿನ್ನೆ ಎಲ್ಲೆಲ್ಲಿ, ಎಷ್ಟು ಮಳೆ ಆಯ್ತು?

ಭಾನುವಾರ ಉತ್ತರ ಕನ್ನಡ ಜಿಲ್ಲೆಯಲ್ಲಿ 21ಸೆಮೀ ಮಳೆ ಆಗಿದ್ದು ಅತಿ ಹೆಚ್ಚು ಮಳೆ ಆದ ಪ್ರದೇಶವಾಗಿದೆ. ಇದನ್ನು ಹೊರತುಪಡಿಸಿದರೆ ಮಂಕಿ, ಕೊಟ್ಟಿಗೆಹಾರ, ಲೋಂಡಾದಲ್ಲಿ ತಲಾ 11, ಕುಮಟಾ, ಕದ್ರಾ, ಶಿರಾಲಿಯಲ್ಲಿ ತಲಾ 8 ಸೆಮೀ, ಕೊಲ್ಲೂರು, ಗೋಕರ್ಣ, ಸೇಡಂ, ಆಗುಂಬೆಯಲ್ಲಿ ತಲಾ 7 ಸೆಮೀ, ಕಾರವಾರ, ಕೋಟ, ಉಡುಪಿ, ಅಂಕೋಲಾ, ಕುಂದಾಪುರ, ಜಗಲ್‌ಬೆಟಟ್‌, ಧರ್ಮಸ್ಥಳ, ಸುಲೇಪೇಟೆ, ಚಿತ್ತಾಪುರ, ಚಿಂಚೋಳಿ, ಕಳಸ, ಮೂಲ್ಕಿಯಲ್ಲಿ ತಲಾ 5 ಸೆಮೀ, ಕಲಬುರಗಿ, ಫರಹತಾಬಾದ್‌, ಮಂಗಳೂರು, ಉಪ್ಪಿನಂಗಡಿ, ಸಿದ್ದಾಪುರ, ಕಾರ್ಕಳ, ಮಾಣಿ, ಯಲ್ಲಾಪುರ, ಶೃಂಗೇರಿ, ಅಡಗಿ, ಜಯಪುರ, ಲಿಂಗನಮಕ್ಕಿ, ಕೊಡಗಿನಲ್ಲಿ ತಲಾ 3 ಸೆಮೀ, ಭಾಗಮಂಡಲ, ಬನವಾಸಿ, ಸುಳ್ಯ, ಪಣಂಬೂರು, ಮಂಗಳೂರು, ಕಮಲಾಪುರದಲ್ಲಿ ತಲಾ 2 ಸೆಮೀನಷ್ಟು ಮಳೆ ಆಗಿದೆ.

ಇಂದು ಎಲ್ಲಿ ಮಳೆ ಆಗಲಿದೆ

ಇಂದು ಉತ್ತರ ಒಳನಾಡು ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಮಳೆ ಆಗಲಿದೆ.

ಯಾವ ಸ್ಥಳದಲ್ಲಿ ಎಚ್ಚರಿಕೆ ಅಗತ್ಯ?

ದ. ಕನ್ನಡ ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಕಲಬುರ್ಗಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿಮೀ ಬೀಸುವ ಗಾಳಿಯೊಂದಿಗೆ ಭಾರೀ ಮಳೆ ಆಗುವ ಸಾಧ್ಯತೆಗಳಿವೆ. ತೀವ್ರ ಬಿರುಗಾಳಿಯಿಂದ ಕೂಡಿದ ಹವಾಮಾನವು ಗಂಟೆಗೆ 35 ರಿಂದ 45 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ದ.ಕನ್ನಡ ಕರಾವಳಿಯಲ್ಲಿ ಮುಲ್ಕಿಯಿಂದ ಮಂಗಳೂರಿನವರಗೆ, ಉಡುಪಿಯ ಬೈಂದೂರಿನ ಕಾಪುವರೆಗೆ, ಉ ಕನ್ನಡ ಕರ್ನಾಟಕ ಕರಾವಳಿಯಲ್ಲಿ ಮಾಜಾಳಿಯಿಂದ ಭಟ್ಕಳದವರೆಗೆ ಭಾರೀ ಅಲೆಗಳ ಎಚ್ಚರಿಕೆ ನೀಡಲಾಗಿದೆ. ಬೀದರ್‌, ಗುಲಬರ್ಗಾ, ಯಾದಗಿರಿ, ಬೆಳಗಾವಿಯಲ್ಲಿ ಯೆಲ್ಲೋ ಅಲರ್ಟ್‌, ಉ. ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದ ಕನ್ನಡದಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಬೆಂಗಳೂರಿನ ವಾತಾವರಣ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವಣವಿದ್ದು ಹಗುರದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗ ಗಂಟೆಗೆ 40-50 ವೇಗದಲ್ಲಿ ಬೀಸಲಿದೆ. ಗರಿಷ್ಠ ತಾಪಮಾನ 28 ° ಹಾಗೂ ಕನಿಷ್ಠ ತಾಪಮಾನ 21° C ಇರಲಿದೆ. ಮುಂದಿನ 48 ಗಂಟೆಗಳಲ್ಲಿ ಕೂಡಾ ಇದೇ ವಾತಾವರಣ ಮುಂದುವರೆಯಲಿದೆ.

ಇಂದು ಪ್ರಮುಖ ನಗರಗಳ ವಾತಾವರಣ

ಭಾರತೀಯ ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು (ಜೂನ್ 28) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ಹವಾಮಾನ ವಿವರ.

ಬೆಂಗಳೂರು - 21.2°ಸೆ.

ಮಂಗಳೂರು- 22°ಸೆ.

ಚಿತ್ರದುರ್ಗ- 21.4°ಸೆ.

ಗದಗ- 22.4°ಸೆ.

ಹೊನ್ನಾವರ- 23.8°ಸೆ.

ಕಲಬುರ್ಗಿ- 23 ಸೆ.

ಬೆಳಗಾವಿ- 22°ಸೆ.

ಕಾರವಾರ- 27.8°ಸೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ