Karnataka Weather Today: ಬೆಂಗಳೂರು ನಗರದಲ್ಲಿ ನಿರ್ಮಲ ಆಕಾಶ, ದಟ್ಟ ಮಂಜು ಮುಸುಕುವ ಸಾಧ್ಯತೆ; ರಾಜ್ಯದ ಇತರ ಸ್ಥಳಗಳ ಹವಾಮಾನ ಹೇಗಿರಲಿದೆ?
Feb 17, 2024 07:51 AM IST
ಬೆಂಗಳೂರು ನಗರದಲ್ಲಿ ನಿರ್ಮಲ ಆಕಾಶ, ದಟ್ಟ ಮಂಜು ಮುಸುಕುವ ಸಾಧ್ಯತೆ
Karnataka Weather Today: ಶುಕ್ರವಾರ ಹಾಗೂ ಮುಂದಿನ 48 ಗಂಟೆಗಳಲ್ಲಿ ರಾಜ್ಯಾದ್ಯಂತ ಒಣಹವೆ ಮುಂದುವರೆಯಲಿದೆ. ಬೆಳಗಿನ ಜಾವ ಕೆಲವೆಡೆ ದಟ್ಟ ಮಂಜು ಮುಸುಕುವ ಸಾಧ್ಯತೆಗಳಿವೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶ 14.0 ಡಿಗ್ರಿ ಸೆಲ್ಸಿಯಸ್ ಚಿಕ್ಕನಹಳ್ಳಿಯಲ್ಲಿ ದಾಖಲಾಗಿದೆ.
ಬೆಂಗಳೂರು: ನಿನ್ನೆಯಷ್ಟೇ (ಫೆ 16) ರಾಜ್ಯ ಬಜೆಟ್ ಮುಗಿದಿದೆ. ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ 15ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ವಿವಿಧ ಕ್ಷೇತ್ರಗಳಿಗೆ ಅನುದಾನ ಘೋಷಣೆ ಮಾಡಿದ್ದಾರೆ. ಬಜೆಟ್ ಬಗ್ಗೆ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ನಡುವೆ ಇಂದು ಶನಿವಾರ ಜನರು ವೀಕೆಂಡ್ ಎಂಜಾಯ್ ಮಾಡಲು ಕಾಯುತ್ತಿದ್ದಾರೆ. ಈ ನಡುವೆ ಇಂದು ಹಾಗೂ ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹವಾಮಾನ ವರದಿ ಹೇಗಿದೆ ನೋಡೋಣ.
ರಾಜ್ಯಾದ್ಯಂತ ಮುಂದುವರೆದ ಒಣಹವೆ
ಶುಕ್ರವಾರ, ರಾಜ್ಯದಲ್ಲಿ ಒಣಹವೆ ಇದ್ದರೂ ಬೆಳ್ಳಂ ಬೆಳಗ್ಗೆ, ಮಾಘ ಮಾಸದ ಚಳಿ ಎಲ್ಲರಿಗೂ ಅನುಭವ ಆಗುತ್ತಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶ ಅತ್ಯಂತ ಗಮನಾರ್ಹವಾಗಿ ಇಳಿಕೆ ಆಗಿದೆ. ಉತ್ತರ ಒಳನಾಡು, ದಕ್ಷಿಣ ಒಣನಾಡಿನ ಒಂದೆರಡು ಕಡೆಗಳಲ್ಲಿ ಗಮನಾರ್ಹವಾಗಿ ಇಳಿಕೆ ಕಂಡಿದೆ. ಕರಾವಳಿಯ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಅತ್ಯಂತ ಗಮನಾರ್ಹವಾಗಿ ಏರಿಕೆ ಆಗಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶ 14.0 ಡಿಗ್ರಿ ಸೆಲ್ಸಿಯಸ್ ಚಿಕ್ಕನಹಳ್ಳಿಯಲ್ಲಿ ದಾಖಲಾಗಿದೆ.
18ನೆೇ ಫೆಬ್ರವರಿ 2024 ಬೆಳಗ್ಗಿನವರೆಗಿನ ರಾಜ್ಯದಲ್ಲಿ ಮಳೆಯ ಮುನ್ಸೂಚನೆ
ಮುಂದಿನ 24 ಗಂಟೆ ಹಾಗೂ ಸೋಮವಾರದವರೆಗೂ ರಾಜ್ಯಾದ್ಯಂತ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯು ಯಾವುದೇ ಗುಡುಗು ಮುನ್ನೆಚರಿಕೆ ಅಥವಾ ಮಳೆಯ ಮುನ್ನೆಚರಿಕೆ ಬಗ್ಗೆ ವರದಿ ಮಾಡಿಲ್ಲ. ಮೀನುಗಾರರಿಗೂ ಯಾವುದೇ ಮುನ್ನೆಚರಿಕೆ ನೀಡಿಲ್ಲ. ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿರುವ ಸಾಧ್ಯತೆ ಇದೆ.
ಫೆ 18 ಬೆಳಗ್ಗಿನವರೆಗೆ ಬೆಂಗಳೂರು, ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ
ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 31 ಹಾಗೂ ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ.
ಬೆಂಗಳೂರಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳು