Karnataka Weather Today: ರಾಜ್ಯದಲ್ಲಿ ಅತಿಯಾದ ಬಿಸಿಲು, ಮುಂದುವರಿದ ಒಣಹವೆ; ಹೇಗಿದೆ ಇಂದಿನ ಹವಾಮಾನ ಸ್ಥಿತಿಗತಿ?
Feb 18, 2024 06:24 AM IST
Karnataka Weather Today: ರಾಜ್ಯದಲ್ಲಿ ಅತಿಯಾದ ಬಿಸಿಲು, ಮುಂದುವರಿದ ಒಣಹವೆ; ಹೇಗಿದೆ ಇಂದಿನ ಹವಾಮಾನ ಸ್ಥಿತಿಗತಿ?
- ಮಳೆ ಅಭಾವ ಒಂದೆಡೆಯಾದರೆ, ಬೇಸಿಗೆಯೂ ನಾಡಿನ ಜನರನ್ನು ಹೈರಾಣಾಗಿಸುತ್ತಿದೆ. ರಾಜ್ಯಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಮಳೆ ಮಾಯವಾದರೆ, ಬೆಳಗಿನ ಜಾವ ರಾಜ್ಯದ ಕೆಲವೆಡೆ ದಟ್ಟ ಮಂಜು ಆವರಿಸುತ್ತಿದೆ. ಬೆಂಗಳೂರಿನಲ್ಲೂ ಗರಿಷ್ಠ ಉಷ್ಣಾಂಶ 32ಕ್ಕೆ ಏರಿಕೆಯಾಗಿದೆ. ಹೀಗಿದೆ ಹವಾಮಾನ ವರದಿ.
Karnataka Weather Today: ಬೇಸಿಗೆಯ ಝಳ ಕಳೆದ ಬಾರಿಗಿಂತಲೂ ಈ ಸಲ ತುಸು ಹೆಚ್ಚೇ ಇದೆ. ರಾಜ್ಯದಲ್ಲಿ ಮಳೆಯ ಅಭಾವ ಒಂದೆಡೆಯಾದರೆ, ಸರ್ಕಾರ 223 ತಾಲೂಕುಗಳನ್ನು ಬರ ಪೀಡಿತ ಎಂದೂ ಘೋಷಣೆ ಮಾಡಿ, ಬಜೆಟ್‌ನಲ್ಲಿ ಅನುದಾನವನ್ನೂ ಮೀಸಲಿಟ್ಟಿದೆ. ಹವಾಮಾನದಲ್ಲಿ ದಿನೇ ದಿನೇ ಬಿಸಿಲಿನ ಹೀಟ್ ಹೆಚ್ಚಾಗುತ್ತಿದೆ. ಇವತ್ತೂ ಸಹ ಹವಾಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಂದಿನ 24 ಗಂಟೆ ಮತ್ತು 48 ಗಂಟೆಗಳ ಅವಧಿಯಲ್ಲಿ ರಾಜ್ಯದಾದ್ಯಂತ ಒಣಹವೆ ಮುಂದುವರಿಯಲಿದೆ. ಇಲ್ಲಿದೆ ನೋಡಿ ರಾಜ್ಯದ ಹವಾಮಾನ ಸ್ಥಿತಿಗತಿಯ ಮಾಹಿತಿ.
ಮುಂದುವರೆದ ಒಣಹವೆ
ಶನಿವಾರ, ರಾಜ್ಯದಲ್ಲಿ ಒಣಹವೆ ಮುಂದುವರಿದಿತ್ತು. ಎಂದಿನಂತೆ ರಾಜ್ಯದಲ್ಲಿ ಎಲ್ಲೂ ಮಳೆ ದಾಖಲಾಗಿಲ್ಲ. ಉಷ್ಣಾಂಶದ ವಿಚಾರದಲ್ಲಿ ರಾಜ್ಯದ ಒಂದಷ್ಟು ಕಡೆಗಳಲ್ಲಿ ಗಮನಾರ್ಹವಾಗಿ ಇಳಿಕೆ ಕಂಡರೆ, ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗಮನಾರ್ಹವಾಗಿ ಇಳಿಕೆ ಕಂಡಿದೆ. ಕರಾವಳಿ ಮತ್ತು ಒಳನಾಡಿನ ಬಹುತೇಕ ಕಡೆಗಳಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಒಳನಾಡಿನ ಒಂದೆರಡು ಕಡೆಗಳಲ್ಲಿ ಗಮನಾರ್ಹವಾಗಿ ಏರಿಕೆ ಕಂಡಿದೆ. ರಾಜ್ಯದ ಸಮತಟ್ಟಾ ಪ್ರದೆೇಶಗಳಲ್ಲಿಅತೀ ಕಡಿಮೆ ಕನಿಷ್ಠ ಉಷ್ಣಾಂಶ 13.4 ಡಿಗ್ರಿ ಸೆಲ್ಸಿಯಸ್ ವಿಜಯಪುರದಲ್ಲಿ ದಾಖಲಾಗಿದೆ.
ರಾಜ್ಯದಲ್ಲಿ ಮಳೆಯ ಮುನ್ಸೂಚನೆ
ಮುಂದಿನ 24 ಗಂಟೆ ಹಾಗೂ ಮಂಗಳವಾರದವರೆಗೂ ರಾಜ್ಯಾದ್ಯಂತ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹಮಾವಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಗುಡುಗು ಸಹಿತ ಮಳೆ ಮುನ್ನೆಚರಿಕೆ ಅಥವಾ ಮಳೆಯ ಬಗ್ಗೆ ವರದಿ ಮಾಡಿಲ್ಲ. ಮೀನುಗಾರರಿಗೂ ಯಾವುದೇ ಮುನ್ನೆಚರಿಕೆ ನೀಡಿಲ್ಲ. ಕರಾವಳಿಯ ಕೆಲವು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿರುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಹವಾಮಾನ ಸ್ಥಿತಿಗತಿ ಹೇಗಿದೆ?
ಬೆಂಗಳೂರು ನಗರದಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 32 ಹಾಗೂ ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ. ಅದೇ ರೀತಿ ಮುಂದಿನ 48 ಗಂಟೆಗಳ ಹವಾಮಾನವನ್ನು ನೋಡುವುದಾದರೆ, ಎಂದಿನಂತೆ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಮುಸುಕುವ ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 32 ಹಾಗೂ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ.
(You are reading this copy on "Hindustan Times Kannada". For latest updates on entertainment, OTT, Web series, Kannada film industry, Kannada serials, Reality shows visit kannada.hindustantimes.com)