logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Dam Water Level: ಉತ್ತಮ ಮಳೆಯ ನಡುವೆಯೂ ಕಡಿಮೆಯಾಗ್ತಿದೆ ಜಲಾಶಯಗಳ ನೀರಿನ ಮಟ್ಟ, ಎಲ್ಲೆಲ್ಲಿ ಎಷ್ಟಿದೆ?

Karnataka Dam Water Level: ಉತ್ತಮ ಮಳೆಯ ನಡುವೆಯೂ ಕಡಿಮೆಯಾಗ್ತಿದೆ ಜಲಾಶಯಗಳ ನೀರಿನ ಮಟ್ಟ, ಎಲ್ಲೆಲ್ಲಿ ಎಷ್ಟಿದೆ?

Prasanna Kumar P N HT Kannada

Aug 22, 2024 11:49 AM IST

google News

ಜಲಾಶಯಗಳ ನೀರಿನ ಮಟ್ಟ

    • Karnataka Dam Water Level: ಯಾವ್ಯಾವ ಜಲಾಶಯದಲ್ಲಿ ಇಂದು ನೀರಿನ ಮಟ್ಟ ಎಷ್ಟಿದೆ? ಎಷ್ಟು ಟಿಎಂಸಿ ನೀರಿದೆ? ಒಳ ಹರಿವು ಹಾಗೂ ಹೊರ ಹರಿವು ಎಷ್ಟಿದೆ ಎಂಬುದನ್ನು ಈ ಮುಂದೆ ತಿಳಿಯೋಣ.
ಜಲಾಶಯಗಳ ನೀರಿನ ಮಟ್ಟ
ಜಲಾಶಯಗಳ ನೀರಿನ ಮಟ್ಟ

ಕರ್ನಾಟಕದ ಜಲಾಶಯಗಳು ಬಹುತೇಕ ತುಂಬಿದ್ದರೂ ಜುಲೈ ತಿಂಗಳು ಮತ್ತು ಆಗಸ್ಟ್‌ ಆರಂಭಕ್ಕೆ ಹೋಲಿಸಿದರೆ ಕಳೆದ 10 ದಿನಗಳಿಂದ ಡ್ಯಾಮ್​ಗಳಿಗೆ ನೀರಿನ ಹರಿವು ಪ್ರಮಾಣ ಇಳಿಕೆ ಕಂಡಿದೆ. ಇತ್ತೀಚೆಗೆ ಉತ್ತಮ ಮಳೆ ಸುರಿಯುತ್ತಿದೆ. ಆದರೆ ಕೇರಳ, ಮಲೆನಾಡು ಭಾಗ ಸೇರಿದಂತೆ ಹಲವೆಡೆ ಮಳೆ ತಗ್ಗಿದ ಕಾರಣ ಜಲಾಶಯಗಳಿಗೆ ಬರಬೇಕಿದ್ದ ನೀರಿನ ಹರಿವಿನಲ್ಲಿ ಕೊಂಚ ತಗ್ಗಿದೆ.

ಒಳ ಹರಿವು ಚೆನ್ನಾಗಿದ್ದರೂ ಹೊರ ಹರಿವು ಹೆಚ್ಚಿರುವ ಕಾರಣ ಕೆಲವು ಜಲಾಶಯಗಳ ನೀರಿನ ಮಟ್ಟದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಆದರೆ, ಕೆಆರ್​ಎಸ್​, ಹೇಮಾವತಿ ಜಲಾಶಯಗಳ ನೀರಿನ ಪ್ರಮಾಣ ಏರಿಕೆಯಾಗಿದೆ. ಆದರೆ, ಕಬಿನಿ, ಹಾರಂಗಿ, ಮಲೆನಾಡಿನ ಲಿಂಗನಮಕ್ಕಿ, ಭದ್ರಾ ಜಲಾಶಯಗಳಿಗೆ ಒಳ ಹರಿವು ಪ್ರಮಾಣ ಉತ್ತಮವಾಗಿ ಏರಿಕೆಗೊಂಡಿಲ್ಲ.

ಹಾಗಿದ್ದರೆ ಯಾವ್ಯಾವ ಜಲಾಶಯದಲ್ಲಿ ಇಂದು ನೀರಿನ ಮಟ್ಟ ಎಷ್ಟಿದೆ? ಎಷ್ಟು ಟಿಎಂಸಿ ನೀರಿದೆ? ಒಳ ಹರಿವು ಹಾಗೂ ಹೊರ ಹರಿವು ಎಷ್ಟಿದೆ ಎಂಬುದನ್ನು ಈ ಮುಂದೆ ತಿಳಿಯೋಣ.

ಕೆಆರ್​ಎಸ್​ ಜಲಾಶಯ

ಗರಿಷ್ಠ ಮಟ್ಟ: 124.80 ಅಡಿ

ಇಂದಿನ ಮಟ್ಟ: 123.68 ಅಡಿ.

ಗರಿಷ್ಠ ಮಿತಿ: 49.452 ಟಿಎಂಸಿ

ಇಂದಿನ ಮಿತಿ: 47.898 ಟಿಎಂಸಿ

ಒಳ ಹರಿವು: 8122 ಕ್ಯೂಸೆಕ್

ಹೊರ ಹರಿವು: 7299 ಕ್ಯೂಸೆಕ್ಸ್

ಕಬಿನಿ ಜಲಾಶಯ

ಗರಿಷ್ಠ ಮಟ್ಟ: 2284.00 ಅಡಿ

ಇಂದಿನ ಮಟ್ಟ: 2282.28 ಅಡಿ

ಗರಿಷ್ಠ ಮಿತಿ: 19.52 ಟಿಎಂಸಿ

ಇಂದಿನ ಮಿತಿ: 18.41 ಟಿಎಂಸಿ

ಒಳಹರಿವು: 2966 ಕ್ಯೂಸೆಕ್

ಹೊರಹರಿವು: 2850 ಕ್ಯೂಸೆಕ್

ಹೇಮಾವತಿ ಜಲಾಶಯ

ಗರಿಷ್ಠ ಮಟ್ಟ - 2922 ಅಡಿ

ಇಂದಿನ ಮಟ್ಟ - 2920.90 ಅಡಿ

ಗರಿಷ್ಠ ಮಿತಿ - 36.040 / 37.10 ಟಿಎಂಸಿ

ಒಳಹರಿವು - 5500 ಕ್ಯೂಸೆಕ್

ಒಟ್ಟು ಹೊರಹರಿವು - 5505 ಕ್ಯೂಸೆಕ್ (ಹೊರ ಹರಿವು ನದಿ - 1100 ಕ್ಯೂಸೆಕ್, ಕಾಲುವೆ - 4405 ಕ್ಯೂಸೆಕ್)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ