logo
ಕನ್ನಡ ಸುದ್ದಿ  /  ಕರ್ನಾಟಕ  /  Kodagu News: ಕೊಡಗಿನ ಮನೆಯಲ್ಲೇ ಅಕ್ರಮ ನಾಡ ಬಂದೂಕು ತಯಾರಿಸಿ ಮಾರಾಟ; ಕೇರಳದ ತಯಾರಕ, ಮೂವರು ಖರೀದಿದಾರರ ಬಂಧನ

Kodagu News: ಕೊಡಗಿನ ಮನೆಯಲ್ಲೇ ಅಕ್ರಮ ನಾಡ ಬಂದೂಕು ತಯಾರಿಸಿ ಮಾರಾಟ; ಕೇರಳದ ತಯಾರಕ, ಮೂವರು ಖರೀದಿದಾರರ ಬಂಧನ

Umesha Bhatta P H HT Kannada

Aug 16, 2024 08:32 AM IST

google News

Kodagu Crime ಕೊಡಗಿನ ಭಾಗಮಂಡಲ ಬಳಿ ಸಕ್ರಿಯವಾಗಿದ್ದ ನಾಡಬಂದೂಕು ತಯಾರಿ ಘಟಕದ ಮೇಲೆ ದಾಳಿ ಮಾಡಲಾಗಿದೆ.

    • Guns Seized ಕೊಡಗಿನಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಸುತ್ತಿದ್ದ ಘಟಕದ ಮೇಲೆ ಪೊಲೀಸರು ದಾಳಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ.
Kodagu Crime ಕೊಡಗಿನ ಭಾಗಮಂಡಲ ಬಳಿ ಸಕ್ರಿಯವಾಗಿದ್ದ ನಾಡಬಂದೂಕು ತಯಾರಿ ಘಟಕದ ಮೇಲೆ ದಾಳಿ ಮಾಡಲಾಗಿದೆ.
Kodagu Crime ಕೊಡಗಿನ ಭಾಗಮಂಡಲ ಬಳಿ ಸಕ್ರಿಯವಾಗಿದ್ದ ನಾಡಬಂದೂಕು ತಯಾರಿ ಘಟಕದ ಮೇಲೆ ದಾಳಿ ಮಾಡಲಾಗಿದೆ.

ಮಡಿಕೇರಿ: ಕೊಡಗು ನಾಡ ಬಂದೂಕು ಬಳಕೆಗೆ ಜನಪ್ರಿಯ. ಇಲ್ಲಿನ ಬಹುತೇಕರ ಮನೆಯಲ್ಲಿ ನಾಡ ಬಂದೂಕು ಇದ್ದೇ ಇರುತ್ತದೆ. ಅದೂ ವನ್ಯಜೀವಿಗಳ ಹಾವಳಿಯೂ ಸೇರಿದಂತೆ ನಾನಾ ಕಾರಣಗಳಿಗೆ ಬಂದೂಕು ಬಳಕೆಗೆ ಕೊಡಗಿನ ಪ್ರತಿಯೊಂದು ಮನೆಯವರು ಅನುಮತಿ ಪಡೆದುಕೊಂಡಿರುತ್ತಾರೆ. ಆದರೆ ಅನುಮತಿ ಇಲ್ಲದೇ ಇದ್ದರೆ ಬಳಕೆಯೂ ಅಕ್ರಮ. ಇದರ ನಡುವೆಯ ಕೊಡಗಿನಲ್ಲಿ ಅಕ್ರಮವಾಗಿ ನಾಡಬಂದೂಕು ತಯಾರಿಸುತ್ತಿದ್ದ ಜಾಲವೊಂದನ್ನು ಪೊಲೀಸರು ಬೇಧಿಸಿದ್ದಾರೆ. ಇದರಲ್ಲಿ ಕೊಡಗಿನವರು ಮಾತ್ರವಲ್ಲದೇ ಕೇರಳದವರೂ ಭಾಗಿಯಾಗಿದ್ದ ಅನುಮಾನಗಳ ಮೇಲೆ ಕೊಡಗು ಪೊಲೀಸರು ದಾಳಿ ಮಾಡಿ ತಯಾರಕ ಹಾಗೂ ಖರೀದಿದಾರರನ್ನು ಬಂಧಿಸಿದ್ದಾರೆ.

ಕೊಡಗಿನ ಮನೆಯೊಂದರಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪ್ರಕರಣವನ್ನು ಪತ್ತೆಹಚ್ಚಿರುವ ಪೊಲೀಸರು, ಈ ದಂಧೆಯಲ್ಲಿ ನಿರತರಾಗಿದ್ದ ಕೇರಳ ಮೂಲದ ಆರೋಪಿ ಮತ್ತು ಈತನಿಂದ ಅಕ್ರಮ ನಾಡ ಬಂದೂಕುಗಳನ್ನು ಖರೀದಿಸಿದ್ದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಸಣ್ಣಪುಲಿಕೋಟು ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ತಂಡವನ್ನು ರಚಿಸಿ ಪೊಲೀಸರು ದಾಳೊ ಮಾಡಿದ್ದರು. ಮಡಿಕೇರಿ ಉಪವಿಭಾಗ ಡಿಎಸ್‌ಪಿ ಮಹೇಶ್ ಕುಮಾರ್,, ಮಡಿಕೇರಿ ಗ್ರಾಮಾಂತರ ವೃತ್ತದ ಸಿಪಿಐ ಅನೂಪ್ ಮಾದಪ್ಪ, ಭಾಗಮಂಡಲ ಪೊಲೀಸ್ ಠಾಣೆ ಪಿಎಸ್‌ಐ ಶೋಭಾ ಲಮಾಣಿ ಹಾಗೂ ಭಾಗಮಂಡಲ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು.

ಈ ತಂಡವು ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಸಣ್ಣಪುಲಿಕೋಟು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದ ಕೇರಳ ರಾಜ್ಯ ಇಡುಕ್ಕಿ ಜಿಲ್ಲೆ ಮೂಲದ ಸುರೇಶ್ ಎಂಬಾತನ ಮನೆಯ ಮೇಲೆ ದಾಳಿ ನಡೆಸಿತು.

ಈ ಸಂದರ್ಭ, ಅಕ್ರಮವಾಗಿ ನಾಡ ಬಂದೂಕು ತಯಾರಿಸಲು ಬಳಸುತ್ತಿದ್ದ ಸಾಮಾಗ್ರಿಗಳು ಮತ್ತು 02 – ನಾಡ ಬಂದೂಕು (ಎಸ್.ಬಿ.ಬಿ.ಎಲ್) ಹಾಗೂ 01 ನಾಡ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಸುರೇಶ್(52 )ವರ್ಷ ಎಂಬಾತನನ್ನು ಬಂಧಿಸಲಾಗಿದೆ.

ಅಲ್ಲದೇ ಆರೋಪಿ ಸುರೇಶ್ ಅಕ್ರಮವಾಗಿ ತಯಾರಿಸಿರುವ ನಾಡ ಬಂದೂಕುಗಳನ್ನು ಖರೀದಿ ಮಾಡಿದ್ದ ಕೊಡಗಿನ ಕರಿಕೆ ಸಮೀಪದ ಚೇತುಕಾಯ ಗ್ರಾಮದ ಎನ್.ಜೆ.ಶಿವರಾಮ(45), ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಮಾಗಳಿ ಗ್ರಾಮದ ಎಸ್.ರವಿ(35), ಭಾಗಮಂಡಲ ಸಮೀಪದ ದೊಡ್ಡಪುಲಿಕೋಟು, ಕೋಟಿ( 55) ಅವರನ್ನು ಬಂಧಿಸಲಾಗಿದೆ.

ಇವರಿಂದ ತಲಾ ಒಂದು ನಾಡ ಬಂದೂಕು (ಎಸ್.ಬಿ.ಬಿ.ಎಲ್) ಅನ್ನು ವಶಪಡಿಸಿಕೊಂಡು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 05 – ನಾಡ ಬಂದೂಕು (ಎಸ್.ಬಿ.ಬಿ.ಎಲ್) ಹಾಗೂ 01 – ನಾಡ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಡಗು ಎಸ್ಪಿ ಕೆ. ರಾಮರಾಜನ್ ತಿಳಿಸಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ