logo
ಕನ್ನಡ ಸುದ್ದಿ  /  ಕರ್ನಾಟಕ  /  Love Jihad Case?: ಸುಳ್ಯದಲ್ಲಿ ಮುಸ್ಲಿಂ ಯುವಕನಿಗೆ ಥಳಿಸಿದ ಕಾಲೇಜ್‌ಮೇಟ್ಸ್‌; ಕೇಸ್‌ ದಾಖಲು

Love Jihad Case?: ಸುಳ್ಯದಲ್ಲಿ ಮುಸ್ಲಿಂ ಯುವಕನಿಗೆ ಥಳಿಸಿದ ಕಾಲೇಜ್‌ಮೇಟ್ಸ್‌; ಕೇಸ್‌ ದಾಖಲು

HT Kannada Desk HT Kannada

Aug 31, 2022 12:38 PM IST

google News

ಹಲ್ಲೆಗೊಳಗಾದ ವಿದ್ಯಾರ್ಥಿ ಮೊಹಮ್ಮದ್ ಸನಿಫ್ ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದು, ಹಿಂದೂ ಸಮುದಾಯಕ್ಕೆ ಸೇರಿದ ಹುಡುಗಿಯೊಂದಿಗೆ ಮಾತನಾಡಿದ್ದಕ್ಕಾಗಿ ಥಳಿಸಿದ ಸಹಪಾಠಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    • ಶಂಕಿತ ಲವ್‌ ಜಿಹಾದ್‌ (Love Jihad Case?) ಪ್ರಕರಣದ ಮೂಲಕ ದಕ್ಷಿಣ ಕನ್ನಡದ ಸುಳ್ಯ ಮತ್ತೆ ಸುದ್ದಿಯಲ್ಲಿದೆ. ಹಿಂದು ಹುಡುಗಿ ಜತೆಗೆ ಫ್ರೆಂಡ್‌ಶಿಪ್‌ ಮಾಡಿಕೊಂಡ ಮುಸ್ಲಿಂ ಯುವಕನಿಗೆ ಆತನ ಕಾಲೇಜ್‌ಮೇಟ್ಸ್‌ ಹಿಡಿದು ಥಳಿಸಿದ ಪ್ರಕರಣ ಸುಳ್ಯದಿಂದ ವರದಿಯಾಗಿದೆ. ಈ ಘಟನೆಯ ಲಭ್ಯ ಮಾಹಿತಿ ಇಲ್ಲಿದೆ. 
ಹಲ್ಲೆಗೊಳಗಾದ ವಿದ್ಯಾರ್ಥಿ ಮೊಹಮ್ಮದ್ ಸನಿಫ್ ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದು, ಹಿಂದೂ ಸಮುದಾಯಕ್ಕೆ ಸೇರಿದ ಹುಡುಗಿಯೊಂದಿಗೆ ಮಾತನಾಡಿದ್ದಕ್ಕಾಗಿ ಥಳಿಸಿದ ಸಹಪಾಠಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿ ಮೊಹಮ್ಮದ್ ಸನಿಫ್ ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದು, ಹಿಂದೂ ಸಮುದಾಯಕ್ಕೆ ಸೇರಿದ ಹುಡುಗಿಯೊಂದಿಗೆ ಮಾತನಾಡಿದ್ದಕ್ಕಾಗಿ ಥಳಿಸಿದ ಸಹಪಾಠಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರು: ಸಹಪಾಠಿ ವಿದ್ಯಾರ್ಥಿನಿ ಜತೆಗೆ ಸಲುಗೆ ಬೆಳೆಸಿದ್ದನ್ನು ಪ್ರಶ್ನಿಸಿ ಮುಸ್ಲಿಂ ಯುವಕನೊಬ್ಬನಿಗೆ ಆತನ ಕಾಲೇಜಿನ ಸಹಪಾಠಿಗಳೇ ಹಿಡಿದು ಥಳಿಸಿದ ಪ್ರಕರಣ ಸುಳ್ಯದಿಂದ ವರದಿಯಾಗಿದೆ. ಇದು ಶಂಕಿತ ಲವ್‌ ಜಿಹಾದ್‌ ಪ್ರಕರಣ (Love Jihad Case?) ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರಾಜ್ಯ ರಾಜಧಾನಿ ಬೆಂಗಳೂರಿನಿಂದ ಸುಮಾರು 300 ಕಿ.ಮೀ. ದೂರ ಇರುವ ಸುಳ್ಯ ಪಟ್ಟಣ ಮಂಗಳವಾರ ಈ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಹಲ್ಲೆಗೊಳಗಾದ ಮುಸ್ಲಿಂ ಯುವಕನನ್ನು ಮೊಹಮ್ಮದ್‌ ಸನೀಫ್‌ ಎಂದು ಗುರುತಿಸಲಾಗಿದೆ. ಸಹಪಾಠಿಯಾಗಿರುವ ಹಿಂದು ಹುಡುಗಿಯ ಜತೆಗೆ ಆತ ಸಲುಗೆ ಬೆಳೆಸಿಕೊಂಡಿದ್ದ. ಒಂಟಿಯಾಗಿ ಆಕೆಯನ್ನು ಕರೆದುಕೊಂಡು ಸುತ್ತಾಡತೊಡಗಿದ್ದ. ಈ ನಡವಳಿಕೆಯನ್ನು ಬಿಡಬೇಕು ಎಂದು ಸನೀಫ್‌ಗೆ ಸಹಪಾಠಿಗಳು ಎಚ್ಚರಿಕೆ ನೀಡಿದ್ದರು.

ಆದರೆ, ಇಬ್ಬರೂ ತಮ್ಮಿಚ್ಛೆಯಂತೆ ವರ್ತಿಸುವುದನ್ನು ಮುಂದುವರಿಸಿದ್ದರು. ಈ ವಿಚಾರದಲ್ಲಿ ವಾಗ್ವಾದ ನಡೆದಿತ್ತು. ಆಗ ಪರಿಸ್ಥಿತಿ ಕೈಮೀರಿದ್ದು ಕ್ಲಾಸ್‌ಮೇಟ್ಸ್‌ ಸನೀಫ್‌ ಮೇಲೆ ಹಲ್ಲೆ ನಡೆಸಿದ್ದರು. ಈ ವಿಚಾರವಾಗಿ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದವರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹಲ್ಲೆ ನಡೆಸಿದವರನ್ನು ದೀಕ್ಷಿತ್‌, ಧನುಷ್‌, ಪ್ರಜ್ವಲ್‌, ತನುಜ್‌, ಅಕ್ಷಯ್‌, ಮೋಕ್ಷಿತ್‌, ಗೌತಮ್‌ ಮತ್ತು ಇತರರು ಎಂದು ಗುರುತಿಸಲಾಗಿದೆ. ಸನೀಫ್‌ ದೂರು ನೀಡಿದ್ದು ಅದರಲ್ಲಿ ಇವರೆಲ್ಲರ ಹೆಸರನ್ನು ಆತ ನಮೂದಿಸಿದ್ದ. ಇದುವರೆಗೆ ಪೊಲೀಸರು ಯಾರನ್ನೂ ಬಂಧಿಸಿಲ್ಲ. ತನಿಖೆ, ವಿಚಾರಣೆ ಪ್ರಗತಿಯಲ್ಲಿದೆ ಎಂದು ಎಎನ್‌ಐ ವರದಿ ಮಾಡಿದೆ.

ಸ್ಥಳೀಯ ಮಾಧ್ಯಮ ವರದಿಯಲ್ಲಿರುವುದೇನು?

ಸ್ಥಳೀಯ ಮಾಧ್ಯಮಗಳು ಈ ಪ್ರಕರಣವನ್ನು ಲವ್‌ ಜಿಹಾದ್‌ ಎಂದೇ ಬಿಂಬಿಸಿವೆ. ಸನೀಫ್‌ ನೀಡಿದ ದೂರು ಆಧರಿಸಿದ ಮ್ಯಾಂಗಲೋರಿಯನ್‌ ವರದಿ ಪ್ರಕಾರ, ಸುಳ್ಯ ಕಸಬಾ ಗ್ರಾಮದ ಕೊಡಿಯಾಲ ಬೈಲ್‌ ಪ್ರಥಮದರ್ಜೆ ಕಾಲೇಜಿನ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿ ಮೊಹಮ್ಮದ್‌ ಸನೀಫ್.‌ ಈತ ಹಿಂದು ಹುಡುಗಿ ಅದೇ ಕಾಲೇಜಿನ ವಿದ್ಯಾರ್ಥಿನಿ ಜತೆಗೆ ಸಲುಗೆ ಬೆಳೆಸಿಕೊಂಡಿದ್ದ. ಇದು ಕೆಲವರಿಗೆ ಇಷ್ಟ ಇರಲಿಲ್ಲ. ಹೀಗಾಗಿ, ಮಂಗಳವಾರ (ಆಗಸ್ಟ್‌ 30) ಬೆಳಗ್ಗೆ 10.30ಕ್ಕೆ ಅದೇ ಕಾಲೇಜಿನ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿಗಳಾದ ದೀಕ್ಷಿತ್ ಮತ್ತು ಧನುಷ್ ಪ್ರಥಮ ವರ್ಷದ ತರಗತಿಗೆ ಬಂದು, ʻಸನೀಫ್‌, ಮಾತನಾಡುವುದು ಇದೆ ಬಾʼ ಎಂದು ಕರೆದುಕೊಂಡು ಕಾಲೇಜು ಗ್ರೌಂಡ್‌ಗೆ ಹೋಗಿದ್ದಾರೆ. ಅಲ್ಲಿ ಇದ್ದ ಅದೇ ಕಾಲೇಜಿನ ಇತರ ವಿದ್ಯಾರ್ಥಿಗಳಾದ ಪ್ರಜ್ವಲ್, (ಅಂತಿಮ ವರ್ಷದ ಬಿಬಿಎ) ತನುಜ್ (ಅಂತಿಮ ವರ್ಷದ ಬಿಕಾಂ) ಅಕ್ಷಯ್ (ದ್ವಿತಿಯ ವರ್ಷದ ಬಿಕಾಂ) ಮೋಕ್ಷಿತ್ (ಅಂತಿಮ ವರ್ಷದ ಬಿಕಾಂ) ಅವರಲ್ಲದೆ, ಸುಳ್ಯದ ಎನ್ ಎಂಸಿ ಕಾಲೇಜಿನ ಗೌತಮ್ ಮತ್ತು ಇತರರು, ʻನೀನು ಪಲ್ಲವಿ ಜತೆಗೆ ಯಾಕೆ ಮಾತನಾಡುತ್ತೀ?ʼ ಸನೀಫ್‌ ಮೇಲೆ ವಾಗ್ವಾದಕ್ಕೆ ಇಳಿದಿದ್ದಾರೆ. ಅದು ಸಂಘರ್ಷಕ್ಕೆ ತಿರುಗಿದ್ದು, ಸನೀಫ್‌ ಮೇಲೆ ಹಲ್ಲೆ ನಡೆಯಿತು. ಬಳಿಕ ಅವರು ಸನೀಫ್‌ಗೆ ಜೀವ ಬೆದರಿಕೆ ಹಾಕಿದ್ದಾರೆ.

ಸಂಘರ್ಷ ಹೊಸದೇನಲ್ಲ…

ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ವರ್ಷದ ಏಪ್ರಿಲ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಿರಿಬಾಗಿಲು ಗ್ರಾಮದಲ್ಲಿ ಹಿಂದೂ ಮಹಿಳೆಗೆ ಸವಾರಿ ಮಾಡಿದ್ದಕ್ಕೆ ಆಟೋ ರಿಕ್ಷಾ ಚಲಾಯಿಸುತ್ತಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿತ್ತು. ಈ ವರ್ಷದ ಜುಲೈನಲ್ಲಿ ಮತ್ತೊಂದು ಪ್ರಕರಣದಲ್ಲಿ ಮಂಗಳೂರಿನ ಪಬ್‌ಗೆ ನುಗ್ಗಿ ವಿದ್ಯಾರ್ಥಿನಿಯರು ತಡರಾತ್ರಿ ಪಾರ್ಟಿ ಮಾಡುವುದನ್ನು ಆಕ್ಷೇಪಿಸಿತ್ತು. ವಿದ್ಯಾರ್ಥಿಗಳು ಪಬ್ ತೊರೆಯುವಂತೆ ಒತ್ತಾಯಿಸಲಾಯಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ