logo
ಕನ್ನಡ ಸುದ್ದಿ  /  ಕರ್ನಾಟಕ  /  Melkote News: ಮೇಲುಕೋಟೆಯಲ್ಲಿ ಒಂದೇ ದಿನ ಆರು ಮನೆಗಳಲ್ಲಿ ಭಾರೀ ಕಳ್ಳತನ; ಪೊಲೀಸ್‌ ಬೀಟ್‌ ವೈಫಲ್ಯಕ್ಕೆ ಆಕ್ರೋಶ

Melkote News: ಮೇಲುಕೋಟೆಯಲ್ಲಿ ಒಂದೇ ದಿನ ಆರು ಮನೆಗಳಲ್ಲಿ ಭಾರೀ ಕಳ್ಳತನ; ಪೊಲೀಸ್‌ ಬೀಟ್‌ ವೈಫಲ್ಯಕ್ಕೆ ಆಕ್ರೋಶ

Umesha Bhatta P H HT Kannada

Oct 17, 2024 04:05 PM IST

google News

ಮೇಲುಕೋಟೆಯಲ್ಲಿ ಕಳ್ಳತನವಾಗಿರುವುದನ್ನು ತೋರಿಸಿದ ಮಹಿಳೆ.

    • ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಒಂದೇ ದಿನ ಸರಣಿ ಕಳ್ಳತನ ನಡೆದಿದೆ. ಆರು ಮನೆಗಳ ಬಾಗಿಲು ಮುರಿದು ನಗದು, ಚಿನ್ನಾಭರಣಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ಮೇಲುಕೋಟೆಯಲ್ಲಿ ಕಳ್ಳತನವಾಗಿರುವುದನ್ನು ತೋರಿಸಿದ ಮಹಿಳೆ.
ಮೇಲುಕೋಟೆಯಲ್ಲಿ ಕಳ್ಳತನವಾಗಿರುವುದನ್ನು ತೋರಿಸಿದ ಮಹಿಳೆ.

ಮೇಲುಕೋಟೆ : ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ದೇಗುಲ ಗ್ರಾಮ ಮೇಲುಕೋಟೆಯಲ್ಲಿ ಭಾರೀ ಕಳ್ಳತನವಾಗಿದೆ. ಅದೂ ಒಂದೇ ಆರು ಮನೆಳಲ್ಲಿ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಪೊಲೀಸ್‌ ಇಲಾಖೆಯ ವೈಫಲ್ಯದ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿನ ಒಕ್ಕಲಿಗರ ಬೀದಿ ಸುತ್ತ ಮತ್ತಲ ಆರು ಮನೆಗಳಲ್ಲಿ ಬುಧವಾರ ತಡರಾತ್ರಿ ಸರಣಿಗಳ್ಳತನ ನಡೆದಿದ್ದು ಮೇಲುಕೋಟೆ ನಾಗರೀಕರು ಆತಂಕಗೊಂಡಿದ್ದಾರೆ. ರಾತ್ರಿ ನಡೆದ ಕಳ್ಳತನ ಗುರುವಾರ ಮುಂಜಾನೆ ಬೆಳಕಿಗೆ ಬಂದಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಿದ್ದಾರೆ. ಈವರೆಗೂ ಕಳ್ಳತನ ಮಾಡಿರುವವರ ಸುಳಿವು ಸಿಕ್ಕಿಲ್ಲವಾದರೂ ಪೊಲೀಸರ ತನಿಖೆಯಂತೂ ಚುರುಕುಗೊಂಡಿದೆ.

ಮೇಲುಕೋಟೆ ಒಕ್ಕಲಿಗರ ಬೀದಿಯಲ್ಲಿ ಬೀಗಹಾಕಿರುವ ಮನೆಗಳನ್ನೇ ಗುರಿ ಮಾಡಿಕೊಂಡಿರುವ ಕಳ್ಳರು ರಾತ್ರಿ ವೇಳೆ ಮುಂಬಾಗಿಲಿನ ಬೀಗ ಒಡೆದು ಒಳನುಗ್ಗಿದ್ದಾರೆ. ಮನೆಯ ಬೀರುಗಳನ್ನು ಜಜ್ಜಿ ಹಾಕಿ ಲಾಕರ್ ತೆರೆದ ಕಳ್ಳರು ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ. ಮನೆಗಳ ಲಾಕರ್ನಲ್ಲಿದ್ದ ಚಿನ್ನಾಭರಣ ದಾಖಲೆಗಳನ್ನು ಚೀಲದಲ್ಲಿ ತುಂಬಿಕೊಂಡು ಹೋಗಿ ಪಾಳುಮನೆಯೊಂದರ ಬಳಿ ಪರಿಶೀಲಿಸಿರುವ ಕಳ್ಳರು ಬೆಲೆಬಾಳುವ ವಸ್ತಗಳನ್ನು ದೋಚಿ ದಾಖಲೆಗಳನ್ನು ಬಿಸುಟುಹೋಗಿದ್ದಾರೆ ಎಂದು ನಾಗರೀಕರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ

ಮೇಲುಕೋಟೆಯ ಒಕ್ಕಲಿಗರ ಬೀದಿ ರೈತಭವನದ ಪಕ್ಕದ ಲೇ ತಮ್ಮಣ್ಣೇಗೌಡರ ಪತ್ನಿ ಕೆಂಪಮ್ಮ, ನಂಜುಂಡೇಗೌಡನ ಮಗ ಈರೇಗೌಡ, ಲೀಲಾವತಿ, ಸವಿತಾ ಸಮಾಜದ ಬೀದಿ ಮರಿಯಮ್ಮ, ಮೂಡಲಬಾಗಿಲು ರುಕ್ಷ್ಮಿಣಿ, ಬಸವರಾಜು ಇತರ ಮನೆಗಳಲ್ಲಿ ಸರಣಿ ಕಳ್ಳತನವಾಗಿದೆ. ಚಿನ್ನ ಬೆಳ್ಳಿ ನಗದು ಸೇರಿದಂತೆ ಸಾವಿರಾರು ರೂ ಮೌಲ್ಯದ ವಸ್ತುಗಳು ಕಳ್ಳತನವಾದ ಪ್ರಾಥಮಿಕ ಮಾಹಿತಿಗಳು ಲಭ್ಯವಾಗಿದ್ದು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಂಪಮ್ಮ ಮನೆಯಲ್ಲಿ ಕುರಿಮಾರಿ ಮನೆಯಲ್ಲಿಟ್ಟಿದ್ದ ನಗದು 35ಸಾವಿರ ಒಂದು ಚಿನ್ನದ ಉಂಗುರ ಹಾಗು ಸಣ್ಣಪುಟ್ಟ ಆಭರಣಗಳು, ಮೂಡಲಬಾಗಿಲ ರುಕ್ಮಿಣಿಯ ಮನೆಯಲ್ಲಿ 10 ಸಾವಿರ ನಗದು ಹಾಗೂ 20 ಸಾವಿರ ಮೌಲ್ಯದ ಬೆಳ್ಳಿಸಾಮಗ್ರಿಗಳು ಕಳುವಾಗಿವೆ ಎಂದು ದೂರು ನೀಡಿದ್ದಾರೆ.

ದಸರಾ ರಜೆ ಇದ್ದುದಿಂದ ಕೆಲವರು ಪ್ರವಾಸ ಹೋಗಿದ್ದರೆ, ಇನ್ನು ಕೆಲವರು ಸಂಬಂಧಿಕರ ಮನೆಗೆ ಹೋಗಿದ್ದರು. ವಾಪಾಸ್ ಬಂದಾಗ ಅವರಿಗೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಅವರು ಮನೆಯಲ್ಲಿ ಇಲ್ಲದೇ ಸಮಯ ನೋಡಿಕೊಂಡೇ ಗುಂಪೊಂದು ಕಳ್ಳತನ ನಡೆಸಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಮೇಲುಕೋಟೆಯಲ್ಲಿ ಮುಂಜಾಗೃತೆ ವಹಿಸಲು ಪೊಲೀಸ್ ಬೀಟ್ ಹೆಚ್ಚಿಸಿ ಆತಂಕ ದೂರಮಾಡಲು ನಾಗರೀಕರು ಕೋರಿದ್ದಾರೆ ಪ್ರಖ್ಯಾತ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವಾಲಯಗಳಿಗೆ ರಾತ್ರಿಯ ವೇಳೆ ಹೆಚ್ಚಿನ ಭದ್ರತೆ ನೀಡಬೇಕೆಂದೂ ಒತ್ತಾಯಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ