Mangalore news: ಮೊಬೈಲ್ ಪತ್ತೆಹಚ್ಚಲು ಮಂಗಳೂರು ಸಿಟಿ ಪೊಲೀಸರಿಂದ ನೂತನ ತಂತ್ರಜ್ಞಾನ: ಏನಿದು ಕಾರ್ಯಾಚರಣೆ?
Jun 09, 2023 09:07 AM IST
ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್
- ಮಂಗಳೂರು ಸಿಟಿ ಪೊಲೀಸರು ಸಿಇಐಆರ್ ಪೋರ್ಟಲ್ ಮೂಲಕ ಸುಲಿಗೆಯಾದ, ಕಳೆದುಹೋದ ಮೊಬೈಲ್ ಗಳನ್ನು ಮರಳಿ ವಾರೀಸುದಾರರಿಗೆ ಹಸ್ತಾಂತರಿಸಿದ್ದಾರೆ. ಏನಿದು ಕಾರ್ಯಾಚರಣೆ
ಮಂಗಳೂರು: ಜನರಿಗೆ ಇಂದು ಸ್ಮಾರ್ಟ್ ಪೋನ್ ಅವಶ್ಯಕ. ಯಾವುದೋ ಕಾರಣದಿಂದ ಈ ಮೊಬೈಲ್ ಪೋನ್ ಗಳು ಕಳೆದುಹೋಗುವುದು, ಕಳ್ಳತನವಾಗುವುದು ನಡೆಯುತ್ತಿರುತ್ತದೆ. ಈ ಪೋನ್ ಗಳು ದುರುಪಯೋಗವಾಗುವ ಸಾಧ್ಯತೆಗಳು ಇರುವುದರಿಂದ ಮೊಬೈಲ್ ಪೋನ್ ಕಳೆದುಕೊಂಡವರಲ್ಲಿ ಆತಂಕ ಹೆಚ್ಚಿರುತ್ತದೆ. CEIR ಪೋರ್ಟಲ್ ಈ ಆತಂಕ ಶಮನ ಮಾಡಿದೆ.
ಮಂಗಳೂರು ಸಿಟಿ ಪೋಲಿಸ ರು Central Equipment Identity Register(CEIR) (www.ceir.gov.in) ಮೂಲಕ ಕಳೆದು ಹೋದ, ಸುಲಿಗೆಯಾದ 93 ಮೊಬೈಲ್ ಪೋನನ್ನು ವಾರೀಸುದಾರರಿಗೆ ಹಸ್ತಾಂತರಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳವು ಆಗಿರುವ ಮೊಬೈಲ್ ಫೋನ್ ಗಳನ್ನು ಸಿಐಇಆರ್ ಪೋರ್ಟಲ್ ತಂತ್ರಜ್ಞಾನದ ಸಹಕಾರದಿಂದ ಪತ್ತೆಹಚ್ಚಲಾಗಿದೆ. ಈ ಫೋನ್ ಗಳನ್ನು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ಸಂಬಂಧಪಟ್ಟವರಿಗೆ ಹಸ್ತಾಂತರಿಸಿದರು.
ಏನಂತಾರೆ ಕಮೀಷನರ್:
ಇಲ್ಲಿಯವರೆಗೆ ಮಂಗಳೂರು ನಗರದಲ್ಲಿ ಕಳೆದುಹೋದ, ಸುಲಿಗೆಯಾದ 2,133 ಮೊಬೈಲ್ ಫೋನ್ ಗಳ ಪತ್ತೆಗೆ ಸಿಐಇಆರ್ ಪೋರ್ಟಲ್ ನಲ್ಲಿ ಐಎಂಇಐ ಬ್ಲಾಕ್ ಗೆ ಕೋರಿಕೆ ಸಲ್ಲಿಕೆಯಾಗಿತ್ತು. ಇವುಗಳಲ್ಲಿ 524 ಫೋನ್ ಗಳು ಪತ್ತೆಯಾಗುವ ಮಾಹಿತಿಯಿದೆ. ಸದ್ಯ 240 ಮೊಬೈಲ್ ಫೋನ್ ಗಳು ಪತ್ತೆಯಾಗಿದ್ದು, ಈಗಾಗಲೇ 147 ಫೋನ್ ಗಳನ್ನು ವಾರೀಸುದಾರರಿಗೆ ಒಪ್ಪಿಸಲಾಗಿದೆ. 93 ಮೊಬೈಲ್ ಫೋನ್ ಗಳನ್ನು ಇದೀಗ ವಾರೀಸುದಾರರಿಗೆ ನೀಡಲಾಯಿತು ಎಂದು ತಿಳಿಸಿದ್ದಾರೆ.
ಕಳೆದುಹೋದ ಮೊಬೈಲ್ ಫೋನ್ ಗಳು ದುರುಪಯೋಗವಾಗದಂತೆ ಅನ್ ಬ್ಲಾಕ್ ಮಾಡಲು CEIR ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಮೂಲಕ ಮೊಬೈಲ್ ಕಳೆದುಕೊಂಡವರು ಹತ್ತಿರದ ಪೊಲೀಸ್ ಠಾಣೆಯಲ್ಲಿ ಅಥವಾ ಸ್ವತಃ ತಾವೇ ಕೆಎಸ್ ಪಿ ಆ್ಯಪ್ ನಲ್ಲಿ ದೂರು ಸಲ್ಲಿಸಬಹುದು. ಬಳಿಕ (www.celr.gov.in) ಪೋರ್ಟಲ್ ನಲ್ಲಿ ಕಳೆದು ಹೋಗಿರುವ ಮೊಬೈಲ್ ವಿವರ ಹಾಗೂ ದೂರಿನ ವಿವರಗಳನ್ನು ನಮೂದಿಸಿ ಸ್ವತಃ ಅರ್ಜಿದಾರರೆ ಬ್ಲಾಕ್ ರಿಕ್ವೆಸ್ಟ್ ಗೆ ನೇರವಾಗಿ ಸಲ್ಲಿಸಬಹುದು. ಅಲ್ಲದೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲೂ ಬ್ಲಾಕ್ ರಿಕ್ವೆಸ್ಟ್ ಗೆ ದೂರು ನೀಡಬಹುದು. ಈ ಮೂಲಕ ಪೊಲೀಸರು ಇದರ ಜಾಡುಹಿಡಿದು ಮೊಬೈಲ್ ಫೋನ್ ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುತ್ತಾರೆ
ಮೊಬೈಲ್ ಪಡೆದುಕೊಂಡವರ ಅಭಿಪ್ರಾಯವೇನು
ಕಳೆದು ಹೋದ ಮೊಬೈಲ್ ನ್ನು ಮತ್ತೆ ಪಡೆದುಕೊಂಡ ನವ್ಯಾ ಎಂಬ ಯುವತಿ ಮಾತನಾಡಿ ನನ್ನ ಮೊಬೈಲ್ 2022 ರ ಡಿಸೆಂಬರ್ 18 ರಲ್ಲಿ ನನ್ನ ಮೊಬೈಲ್ ಕಳೆದುಹೋಗಿತ್ತು. ನಗರದ ಧಕ್ಕೆ ಯಲ್ಲಿ ಮೊಬೈಲ್ ಕಳೆದುಕೊಂಡಿದ್ದೆ. ಮನೆಗೆ ಹೋಗಿ ನೋಡಿದಾಗ ಮೊಬೈಲ್ ಕಳೆದುಹೋಗಿದ್ದು ಗೊತ್ತಾಗಿತ್ತು. ಆ ನಂಬರ್ ಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದೆ. ಐದು ತಿಂಗಳಲ್ಲಿ ನನ್ನ ಮೊಬೈಲ್ ವಾಪಾಸು ಸಿಕ್ಕಿದೆ. ಮಂಗಳೂರು ಪೊಲೀಸರಿಗೆ ಧನ್ಯವಾದ ತಿಳಿಸುತ್ತೇನೆ ಎನ್ನುತ್ತಾರೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ರವರು “SAY HI TO WHATSAPP" ಎಂಬ CHAT HOT ಜಾರಿಗೆ ತಂದಿದ್ದು, ಇದರಲಿ, ದೂರುದಾರರು " 8277949183 "ನೇ ನಂಬರಿಗೆ - HI" ಎಂದು ಮೇಸೆಜ್ ಕಳುಹಿಸಿದ ನಂತರ ಒಂದು GOOGLE FORM ಲಿಂಕ್ ತೆರೆದುಕೊಳ್ಳುತ್ತದೆ . ಈ ಲಿಂಕ್ ನು ಕ್ಲಿಕ್ ಮಾಡಿ ಅದರಲ್ಲಿ ಯೂ ಸಹ ದೂರುದಾರರು ಕಳೆದುಹೊದ ಮೊಬೈಲ್ ನ ಮಾಹಿತಿಯನ್ನು ದಾಖಲಿಸಬಹುದಾಗಿದೆ.
(ವರದಿ: ಹರೀಶ ಮಾಂಬಾಡಿ, ಮಂಗಳೂರು)
ವಿಭಾಗ