logo
ಕನ್ನಡ ಸುದ್ದಿ  /  ಕರ್ನಾಟಕ  /  Mangalore Crime: ಮಂಗಳೂರಲ್ಲಿ ಒಂದೂವರೆ ಕೋಟಿ ರೂ. ಮೌಲ್ಯದ ಅಂಬರ್‌ ಗ್ರೀಸ್‌ ಜಪ್ತಿ: ಮೂವರ ಸೆರೆ

Mangalore Crime: ಮಂಗಳೂರಲ್ಲಿ ಒಂದೂವರೆ ಕೋಟಿ ರೂ. ಮೌಲ್ಯದ ಅಂಬರ್‌ ಗ್ರೀಸ್‌ ಜಪ್ತಿ: ಮೂವರ ಸೆರೆ

HT Kannada Desk HT Kannada

Nov 26, 2023 07:28 AM IST

google News

ಮಂಗಳೂರು ಪೊಲೀಸರು ವಶಪಡಿಸಿಕೊಂಡ ಅಂಬರ್‌ ಗ್ರೀಸ್‌ ಹಾಗೂ ಮೂವರು ಆರೋಪಿಗಳು.

    • Mangalore Crime ಮಂಗಳೂರಿನಲ್ಲಿ ಅಂಬರ್‌ ಗ್ರೀಸ್(‌ amber Greece) ಸಾಗಿಸುತ್ತಿದ್ದ ಮೂವರನ್ನು ಬಂಧಿಸಿ ಅವರಿಂದ ಭಾರೀ ಮೌಲ್ಯದ ವಸ್ತು,ವಾಹನ ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ಪೊಲೀಸರು ವಶಪಡಿಸಿಕೊಂಡ ಅಂಬರ್‌ ಗ್ರೀಸ್‌ ಹಾಗೂ ಮೂವರು ಆರೋಪಿಗಳು.
ಮಂಗಳೂರು ಪೊಲೀಸರು ವಶಪಡಿಸಿಕೊಂಡ ಅಂಬರ್‌ ಗ್ರೀಸ್‌ ಹಾಗೂ ಮೂವರು ಆರೋಪಿಗಳು.

ಮಂಗಳೂರು: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಕೋಟ್ಯಾಂತರ ರೂಪಾಯಿ ಬೆಲೆಬಾಳುವ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಸೆರೆ ಹಿಡಿದಿದ್ದು, ಒಟ್ಟು 1,62,80,000ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಲದ ಸದ್ಯ ವಿಟ್ಲದ ಮಂಗಿಲಪದವು ನಿವಾಸಿಯಾಗಿರುವ ಪ್ಯಾರೇಜಾನ್ (37), ವಿಟ್ಲ ಸಮೀಪದ ಪಾತಿರತೋಟ ನಿವಾಸಿ ಬದ್ರುದ್ದೀನ್ (28), ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ನಿವಾಸಿ ರಾಜೇಶ್ ಆರ್ (22) ಬಂಧಿತ ಆರೋಪಿಗಳು.

ಮಂಗಳೂರಿನ ಪಂಪ್ ವೆಲ್ ಬಳಿ ನಾಲ್ವರು ಸ್ವಿಪ್ಟ್ ಕಾರಿನಲ್ಲಿ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್) ಎಂಬ ಬೆಲೆಬಾಳುವ ವನ್ಯಜೀವಿ ಉತ್ಪನ್ನವನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ದಸ್ತಗಿರಿ ಮಾಡಿದ ಮೂರು ಆರೋಪಿತರಿಂದ 1,57,50,000 ರೂ ಮೌಲ್ಯದ 1.575 ಕೆಜಿ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್), ಕಾರು ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ವಿವರ ಹೀಗಿದೆ. 1.575 ಕೆಜಿ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್), ಸಿಲ್ವರ್ ಬಣ್ಣದ ಸ್ವಿಪ್ಟ್ ಹಾಗೂ ಮೊಬೈಲ್ ಫೋನ್ ಗಳು.

ಆರೋಪಿಗಳಲ್ಲಿ ಇಬ್ಬರು ಬಂಟ್ವಾಳ ತಾಲೂಕಿನ ವಿಟ್ಲ ಸಮೀಪ ಮಂಗಳಪದವು ನಿವಾಸಿಗಳಾಗಿದ್ದರೆ, ಮತ್ತೋರ್ವ ತಮಿಳುನಾಡಿನವನು.

ಅಂಬರ್ ಗ್ರೀಸ್ ಎಂಬುದು ಅಪರೂಪದ ವಸ್ತು . ಸ್ಪರ್ಮ್ ತಿಮಿಂಗಿಲಗಳು ಉಗಿಯುವ ವಸ್ತುವಿಗೆ ಮಾತ್ರ ಇಷ್ಟು ಬೆಲೆ ಇದೆ. ಇದನ್ನು ಸೌಂದರ್ಯವರ್ಧಕ ಹಾಗೂ ಸುಗಂಧ ದ್ರವ್ಯಗಳನ್ನು ತಯಾರಿಸಲು ಪಾಶ್ಚಿಮಾತ್ಯ ದೇಶಗಳಲ್ಲಿ ಬಳಸಲಾಗುತ್ತದೆ. ಕರ್ನಾಟಕದ ಕರಾವಳಿ ಭಾಗವಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕರ್ನಾಟಕದ ಸಮುದ್ರ ಪ್ರದೇಶಗಳಿಂದ ಇದನ್ನು ಸಂಗ್ರಹಿಸಿ ಮಾರಾಟ ಮಾಡುವ ಜಾಲ ಬಲವಾಗಿದೆ. ಅದರಲ್ಲೂ ತಮಿಳುನಾಡಿನ ಮೂಲಕ ಹೊರ ದೇಶಗಳಿಗೆ ಸರಬರಾಜು ಮಾಡಿ ಕೋಟಿಗಟ್ಟಲೇ ಆದಾಯ ಗಳಿಸುವುದು ನಡೆಯುತ್ತಲೇ ಇದೆ ಎನ್ನುವುದು ಪೊಲೀಸ್‌ ಅಧಿಕಾರಿಗಳು ನೀಡುವ ವಿವರಣೆ.

ಕಾರ್ಯಾಚರಣೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆ ನೇತೃತ್ವದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿ ಪಾಲ್ಗೊಂಡಿದ್ದರು.

ವ್ಯಾಪಾರಿ ಮೃತದೇಹ ಪತ್ತೆ

ಕಾಸರಗೋಡು ಚಂದ್ರಗಿರಿ ಸೇತುವೆಯಿಂದ ನದಿಗೆ ಹಾರಿದ್ದ ನಗರದ ವ್ಯಾಪಾರಿಯೋರ್ವರ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಉಳಿಯತ್ತಡ್ಕ ಶಿರಿಬಾಗಿಲಿನ ಹಸೈನಾರ್ (46) ಮೃತಪಟ್ಟವರು. ನನ್ನ ಜೀವನ ಅಂತ್ಯಗೊಳಿಸುವುದಾಗಿ ಕುಟುಂಬದ ವಾಟ್ಸಪ್ ಗ್ರೂಪ್ ನಲ್ಲಿ ಶುಕ್ರವಾರ ಮುಂಜಾನೆ ಸಂದೇಶ ಕಳುಹಿಸಿದ್ದ ಹಸೈನಾರ್ ಬಳಿಕ ಕಾರಿನಲ್ಲಿ ಬಂದು ಚಂದ್ರಗಿರಿ ಸೇತುವೆಯಲ್ಲಿ ನಿಲ್ಲಿಸಿ ನಂತರ ನದಿಗೆ ಹಾರಿದ್ದರು. ವ್ಯಕ್ತಿ ಹಾರುತ್ತಿರುವುದನ್ನು ಗಮನಿಸಿದ ಪ್ರತ್ಯಕ್ಷದರ್ಶಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಚಪ್ಪಲಿ ಸೇತುವೆಯಲ್ಲಿ ಪತ್ತೆಯಾಗಿತ್ತು. ಬಳಿಕ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು , ನಾಗರಿಕರು ಶೋಧ ನಡೆಸಿದ್ದರು. ಘಟನೆ ನಡೆದ ಒಂದು ಕಿ.ಮೀ ದೂರದ ನದಿ ತೀರದಲ್ಲಿ ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ಆರ್ಥಿಕ ಮುಗ್ಗಟ್ಟು ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.

( ವರದಿ: ಹರೀಶ್‌ ಮಾಂಬಾಡಿ, ಮಂಗಳೂರು)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ