Lok Sabha Elections2024: ಲೋಕಸಭೆ ಚುನಾವಣೆ2024 ಫಲಿತಾಂಶ ಊಹಿಸಿ, 10 ಲಕ್ಷ ರೂ. ಬಹುಮಾನ ಗೆಲ್ಲಿರಿ
May 30, 2024 05:08 PM IST
ಲೋಕಸಭೆ ಚುನಾವಣೆ ಕುರಿತು ಉತ್ತರ ಕೊಡಿ. ಬಹುಮಾನ ಗೆಲ್ಲಿ
- Mangalore News ಮಂಗಳೂರು ಮೂಲದ ನರೇಂದ್ರ ನಾಯಕ್ ಅವರು ಈ ಬಾರಿಯೂ ಸಾರ್ವತ್ರಿಕ ಚುನಾವಣೆ ಕುರಿತು 20 ಪ್ರಶ್ನೆಗಳ ಸ್ಪರ್ಧೆ ಆಯೋಜಿಸಿದ್ದಾರೆ. ಸರಿ ಉತ್ತರ ನೀಡುವವರಿಗೆ 10ಲಕ್ಷ ರೂ. ಬಹುಮಾನ ನೀಡುವರು.
ಮಂಗಳೂರು: ಇನ್ನೇನು ಲೋಕಸಭೆ ಚುನಾವಣೆ2024 ಮುಗಿಯುವ ಹಂತಕ್ಕೆ ಬಂದಿತು. ಇನ್ನೊಂದೇ ಹಂತ ಬಾಕಿಯಿದೆ. ಈ ಚುನಾವಣೆ ಕುರಿತಾಗಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ ನಿಮಗೆ ಭಾರೀ ಬಹುಮಾನವೇ ಸಿಗಲಿದೆ. ಮಂಗಳೂರಿನ ಫೆಡರೇಷನ್ ಆಫ್ ಇಂಡಿಯನ್ ರ್ಯಾಷನಲಿಸ್ಟ್ ಅಸೋಸಿಯೇಷನ್( FIRA) ಈ ಸ್ಪರ್ಧೆಯನ್ನು ಆಯೋಜಿಸಿದೆ. ಸಾರ್ವಜನಿಕ ಚುನಾವಣೆ ವೇಳೆ ಗೆಲುವು ಊಹಿಸಿ ಭಾರೀ ಬಹುಮಾನ ಗೆಲ್ಲಿರಿ ಎನ್ನುವ ಸ್ಪರ್ಧೆಯನ್ನು ಅಸೋಸಿಯೇಷನ್ ಅಧ್ಯಕ್ಷ ನರೇಂದ್ರನಾಯಕ್ ಅವರು 1991ರಿಂದಲೂ ಆಯೋಜಿಸುತ್ತಾ ಬಂದಿದ್ದಾರೆ. ಲೋಕಸಭಾ ಚುನಾವಣೆ 2024ರ ಕುರಿತಾಗಿಯೂ ಸ್ಪರ್ಧೆಯನ್ನು ನಡೆಸುತ್ತಿದ್ದು 20 ಪ್ರಶ್ನೆಗಳಿಗೆ ಉತ್ತರ ನೀಡುವವರಿಗೆ ಬರೋಬ್ಬರಿ 10 ಲಕ್ಷ ರೂ. ಬಹುಮಾನ ಲಭಿಸಲಿದೆ.
ನಾಯಕ್ ಲೋಕಸಭೆ ಚುನಾವಣೆ 2024 ಆಧರಿಸಿ 20 ಪ್ರಶ್ನೆಗಳನ್ನು ಸಿದ್ದಪಡಿಸಿದ್ದಾರೆ. ಎಲ್ಲಾ 20 ಪ್ರಶ್ನೆಗಳಿಗೆ ಉತ್ತರ ನೀಡಿದವರಿಗೆ ಮಾತ್ರ ಬಹುಮಾನ ಸಿಗಲಿದೆ. ಒಂದು ಪ್ರಶ್ನೆಗೆ ಉತ್ತರ ತಪ್ಪಾದರೂ ಬಹುಮಾನ ಸಿಗುವುದಿಲ್ಲ. ಹೆಚ್ಚು ಮಂದಿ ಉತ್ತರ ನೀಡಿದರೆ ಮೊತ್ತವನ್ನು ಸಮಾನವಾಗಿ ಸರಿ ಉತ್ತರ ನೀಡಿದವರಿಗೆ ಹಂಚಿಕೆ ಮಾಡಲಾಗುತ್ತದೆ.
ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಬಹುಮತ ಬರಲಿದೆ. ಯಾವ ಪಕ್ಷಕ್ಕೆ ಬಹುಮತ ಬರಲಿದೆ ಎನ್ನುವುದನ್ನು ನಿಖರವಾಗಿ ಆ ಪಕ್ಷ ಪಡೆಯುವ ಸೀಟುಗಳನ್ನಾಧರಿಸಿ ಉಲ್ಲೇಖಿಸಬೇಕು. ಶೇ 5 ರ ಆಜುಬಾಜಿನಲ್ಲಿ ಉತ್ತರಕ್ಕೆ ಅವಕಾಶವಿದೆ. ಇದಲ್ಲದೇ ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಜೆಪಿ, ಡಿಎಂಕೆ. ಬಿಆರ್‌ಎಸ್. ವೈಎಸ್ ಆರ್‌ಪಿ, ಸಿಪಿಐಎಂ, ಸಿಪಿಐ, ಎಐಎಡಿಎಂಕೆ, ಎನ್‌ಸಿಪಿ. ಟಿಎಂಸಿ ಹಾಗೂ ಆಮ್ ಆದ್ಮಿ ಪಕ್ಷ ಪಡೆಯುವ ಸ್ಥಾನಗಳನ್ನು ನಿಖರವಾಗಿ ತಿಳಿಸಬೇಕು. ಇದರೊಟ್ಟಿಗೆ ಪ್ರಮುಖ ಅಭ್ಯರ್ಥಿಗಳಾದ ವಾರಣಾಯಿಂದ ಪ್ರಧಾನಿ ನರೇಂದ್ರಮೋದಿ, ವಯನಾಡಿನಿಂದ ರಾಹುಲ್‌ಗಾಂಧೀ ಪೂರ್ವ ದೆಹಲಿಯಿಂದ ಕನ್ನಯ್ಯ ಕುಮಾರ್, ದಕ್ಷಿಣ ಕನ್ನಡದಿಂದ ಆರ್.ಪದ್ಮರಾಜ್, ಗಾಂಧಿನಗರದಲ್ಲಿ ಅಮಿತ್ ಶಾ., ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಎಷ್ಟು ಮತ ಪಡೆಯುವರು ಎನ್ನುವ ವಿವರ ನೀಡಬೇಕು. ಇಲ್ಲಿಯೂ ಶೇ. 5 ರಷ್ಟು ಆಜುಬಾಜುವಿನಲ್ಲಿ ಉತ್ತರವಿದ್ದರೆ ಪರಿಗಣಿಸಲಾಗುತ್ತದೆ.
ಸ್ಪರ್ಧೆಯಲ್ಲ ಭಾಗವಹಿಸುವವರು ಎಲ್ಲಾ ಪ್ರಶ್ನೆಗಳಗೆ ಉತ್ತರವನ್ನು ನೀಡಲೇಬೇಕು. ಅಪೂರ್ಣ ಅರ್ಜಿಗಳನ್ನು ಬಹುಮಾನಕ್ಕೆ ಪರಿಗಣಿಸುವುದಿಲ್ಲ. ಜೂನ್ 1 ರ ಒಳಗೆ ಪ್ರವೇಶಾತಿಗಳನ್ನು ಸಲ್ಲಿಸಬೇಕು. ಸಣ್ಣ ಪುಟ್ಟ ತಪ್ಪುಗಳನ್ನು ಒಪ್ಪಿಕೊಂಡು ಎಲ್ಲಾ ಉತ್ತರ ನೀಡಿದವರನ್ನು ಬಹುಮಾನಕ್ಕೆ ಪರಿಗಣಿಸಲಾಗುತ್ತದೆ.
ಎಲ್ಲ ಉತ್ತರಗಳೊಂದಿಗೆ ಪತ್ರಗಳನ್ನು ಪೂರ್ಣ ಹೆಸರು, ವಿಳಾಸದೊಂದಿಗೆ ಸಲ್ಲಿಸಬೇಕು. ಒಬ್ಬರಿಗೆ ಒಂದು ಉತ್ತರ ಕಳುಹಿಸಲು ಮಾತ್ರ ಅವಕಾಶ. ಹೆಚ್ಚು ಕಳುಹಿಸಿದ್ದರೆ ಒಂದನ್ನು ಮಾತ್ರ ಪರಿಗಣಿಸಲಾಗುತ್ತದೆ. ಹತ್ತು ಲಕ್ಷ ರೂ. ಬಹುಮಾನವನ್ನು ಸರ್ಕಾರದ ನಿಯಮದಂತೆ ತೆರಿಗೆ ಕಡಿತಗೊಳಿಸಿ ನೀಡಲಾಗುತ್ತದೆ ಎನ್ನುವುದು ನಾಯಕ್ ಅವರು ನೀಡುವ ವಿವರಣೆ.
ಪ್ರವೇಶ ಪತ್ರಗಳನ್ನು 13-0-1220/2, ಸುರಕ್ಷಾ ಅಪಾರ್ಟ್‌ಮೆಂಟ್ಸ್, ವಿಟಿ ರೋಡ್, ಮಂಗಳೂರು575001 ಅಥವಾ ಮೇಲ್ ಐಡಿ narenyen@gmail.com ಗೂ ಕಳುಹಿಸಬಹುದು. ವಿವರಗಳಿಗೆ ನರೇಂದ್ರ ನಾಯಕ್ ಅವರನ್ನು9448216343 ಸಂಪರ್ಕಿಸಬಹುದು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)