logo
ಕನ್ನಡ ಸುದ್ದಿ  /  ಕರ್ನಾಟಕ  /  Mangaluru News: ಜೆಸಿಬಿ ಬಳಸಿ ಎಟಿಎಂ ಕಳವು ಯತ್ನ, ನಾಲ್ವರು ಆರೋಪಿಗಳ ಬಂಧನ; ಹದಿನೈದು ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ವಶ

Mangaluru News: ಜೆಸಿಬಿ ಬಳಸಿ ಎಟಿಎಂ ಕಳವು ಯತ್ನ, ನಾಲ್ವರು ಆರೋಪಿಗಳ ಬಂಧನ; ಹದಿನೈದು ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ವಶ

HT Kannada Desk HT Kannada

Aug 21, 2023 07:00 PM IST

google News

Mangaluru News: ಜೆಸಿಬಿ ಬಳಸಿ ಎಟಿಎಂ ಕಳವು ಯತ್ನ, ನಾಲ್ವರು ಆರೋಪಿಗಳ ಬಂಧನ; ಹದಿನೈದು ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ವಶ.

    • ಸುರತ್ಕಲ್ ಪೊಲೀಸ್‌ ಠಾಣೆಯ ವ್ಯಾಪ್ತಿಯ ಇಡ್ಯಾ ಗ್ರಾಮದ ವಿದ್ಯೋದಾಯ ಇಂಗ್ಲಿಷ್ ಮೀಡಿಯಂ ಶಾಲೆಯ ಎದುರುಗಡೆ ರಾಜಶ್ರೀ ಕಟ್ಟಡದಲ್ಲಿ ಇರುವ ದಿ ಸೌತ್ ಇಂಡಿಯನ್ ಬ್ಯಾಂಕ್ ನ ಎಟಿಎಂ ಕಳವು ಯತ್ನ ಆಗಸ್ಟ್‌ 4 ರಂದು ನಡೆದಿತ್ತು.
Mangaluru News: ಜೆಸಿಬಿ ಬಳಸಿ ಎಟಿಎಂ ಕಳವು ಯತ್ನ, ನಾಲ್ವರು ಆರೋಪಿಗಳ ಬಂಧನ; ಹದಿನೈದು ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ವಶ.
Mangaluru News: ಜೆಸಿಬಿ ಬಳಸಿ ಎಟಿಎಂ ಕಳವು ಯತ್ನ, ನಾಲ್ವರು ಆರೋಪಿಗಳ ಬಂಧನ; ಹದಿನೈದು ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ವಶ.

ಮಂಗಳೂರು: ಇತ್ತೀಚೆಗೆ ಎಟಿಎಂ ಒಂದನ್ನು ಜೆಸಿಬಿ ಬಳಸಿ ಹೊತ್ತೊಯ್ಯುವ ಯತ್ನವೊಂದು ಸುರತ್ಕಲ್ ಸಮೀಪ ನಡೆದಿತ್ತು. ಇದೀಗ ಆ ಕೆಲಸ ಮಾಡಿದವರು ಕಂಬಿ ಎಣಿಸುತ್ತಿದ್ದಾರೆ. ಜೆಸಿಬಿ ಬಳಸಿ ಎಟಿಎಂ ಯಂತ್ರವನ್ನು ಕಳವು ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ ರೂ 15.50 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮದ ದೊಡ್ಡತಾಂಡದ ದೇವರಾಜ್, ಭರತ್‌ ಹೆಚ್, ನಾಗರಾಜ ನಾಯ್ಕ ಹಾಗೂ ಈ ಕೃತ್ಯಕ್ಕೆ ಧನಸಹಾಯ ಮಾಡಿದ ಆರೋಪದ ಮೇರೆಗೆ ಧನರಾಜ್ ನಾಯ್ಕ್ ಯಾನೆ ಧನು ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ ಸುಮಾರು 50,000/- ಮೌಲ್ಯದ ಬೈಕನ್ನು ಹಾಗೂ 2 ಆಂಡ್ರಾಯ್ಡ್ ಮೊಬೈಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆಗಸ್ಟ್‌ 4 ರಂದು ಸುರತ್ಕಲ್ ಪೊಲೀಸ್‌ ಠಾಣೆಯ ವ್ಯಾಪ್ತಿಯ ಇಡ್ಯಾ ಗ್ರಾಮದ ವಿದ್ಯೋದಾಯ ಇಂಗ್ಲಿಷ್ ಮೀಡಿಯಂ ಶಾಲೆಯ ಎದುರುಗಡೆ ರಾಜಶ್ರೀ ಕಟ್ಟಡದಲ್ಲಿ ಇರುವ ದಿ ಸೌತ್ ಇಂಡಿಯನ್ ಬ್ಯಾಂಕ್ ನ ಎಟಿಎಂ ಕಳವು ಯತ್ನ ನಡೆದಿತ್ತು. ಎಟಿಎಂ ನ ಮುಂಭಾಗದ ಗಾಜನ್ನು ಒಡೆದು ಎಟಿಎಂ ಮೆಷಿನ್ ನ್ನು ಕಳವು ಮಾಡಲು ಪ್ರಯತ್ನಿಸಿ ಕೆಳ ಮಹಡಿಗೆ ಬಿಳಿಸಿ ಹೋಗಿರುವುದು ಕಂಡು ಬಂದಿತ್ತು.

ಈ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಿದ್ದು ಸುರತ್ಕಲ್ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್‌ರವರ ನೇತೃತ್ವದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ನಿರೀಕ್ಷಕರಾದ ರಘು ನಾಯ್ಕ, ಅರುಣ್ ಕುಮಾರ್ ಡಿ ಮತ್ತು ಎ.ಎಸ್.ಎ ರಾಧಾಕೃಷ್ಣ, ಹೆಚ್ಸಿ ಉಮೇಶ್ ಕೊಟ್ಟಾರಿ, ಹೆಚ್.ಸಿ ಅಣ್ಣಪ್ಪ ಮಂಡ್ಯ, ಪಿ.ಸಿ: ಕಾರ್ತಿಕ್ ಕುಲಾಲ್, ಪಿಸಿ ಸುನಿಲದ ಕುಸುನಾಳ ರವರುಗಳು ಈ ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.

ಘಟನೆ ನಡೆದ ದಿನ ಕೃತ್ಯಕ್ಕೆ ಬಳಸಲಾದ ಜೆಸಿಬಿ ಯನ್ನು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಐಓಸಿಎಲ್‌ ಕಡೆಯಿಂದ ಜೋಕಟ್ಟೆ ಕಡೆಗೆ ಹೋಗುವ ಪತ್ತೆ ಮಾಡಲಾಗಿದ್ದು, ಇದರ ಮೌಲ್ಯವು 15 ಲಕ್ಷ ಆಗಿರುತ್ತದೆ. ಈ ಜೆ.ಸಿ.ಬಿ ಯನ್ನು ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಲಾಗಿತ್ತು.

ಆರೋಪಿಗಳು ಜುಲೈ 21 ರಂದು ಸಮಯ 10.10 ರಿಂದ 10.30 ರ ಮಧ್ಯದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ವಿನೋಬಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿನೋಭಾ ನಗರದ ಶಿವಾಲಯ ದೇವಾಸ್ಥಾನದ ಎದುರು ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕಿನ ಎ.ಟಿ.ಎಂ ಅನ್ನು ಜೆ.ಸಿ.ಬಿ ಯಿಂದ ಒಡೆಯಲು ಪ್ರಯತ್ನ ಪಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. ಆಗಷ್ಟ್ 4 ರಂದು ಆರೋಪಿಗಳು ಉಡುಪಿ ಜಿಲ್ಲೆಯ ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಬಿದ್ರೆ ಕಾರ್ಕಳ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಜೆಸಿಬಿ ವಾಹನವನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡಿರುತ್ತಾರೆ.

ಈ ಆರೋಪಿಗಳನ್ನು ಆಗಷ್ಟ್ 15 ರಂದು ಬಂಧಿಸಿ ಆಗಷ್ಟ್ 16 ರಂದು ಒಂದನೇ ಹೆಚ್ಚುವರಿ ಸಿ.ಜೆ.ಎಮ್. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು 1 ರಿಂದ 3ನೇ ಆರೋಪಿತರುಗಳಿಗೆ 4 ದಿವಸಗಳ ಪೊಲೀಸ್ ಕಸ್ಟಡಿ ಹಾಗೂ 4 ನೇ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

(ವರದಿ: ಹರೀಶ್‌)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ