logo
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ರೌಡಿಶೀಟರ್ ಕಡಪ್ಪರ ಸಮೀರ್‌ನನ್ನು ಅಟ್ಟಾಡಿಸಿ ಹತ್ಯೆ; ಟಾರ್ಗೆಟ್ ಇಲ್ಯಾಸ್ ಹತ್ಯೆ ಆರೋಪಿಯಾಗಿದ್ದ ಈತ

ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ರೌಡಿಶೀಟರ್ ಕಡಪ್ಪರ ಸಮೀರ್‌ನನ್ನು ಅಟ್ಟಾಡಿಸಿ ಹತ್ಯೆ; ಟಾರ್ಗೆಟ್ ಇಲ್ಯಾಸ್ ಹತ್ಯೆ ಆರೋಪಿಯಾಗಿದ್ದ ಈತ

Umesh Kumar S HT Kannada

Aug 12, 2024 10:25 AM IST

google News

ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ರೌಡಿಶೀಟರ್ ಕಡಪ್ಪರ ಸಮೀರ್‌ನನ್ನು ಅಟ್ಟಾಡಿಸಿ ಹತ್ಯೆ ಮಾಡಲಾಗಿದೆ. ಟಾರ್ಗೆಟ್ ಇಲ್ಯಾಸ್ ಹತ್ಯೆ ಪ್ರಕರಣದ ಅರೋಪಿಯಾಗಿದ್ದ ಈತ.

  • Mangalore Crime News; ಉಳ್ಳಾಲದ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪ ಹೊತ್ತು ನ್ಯಾಯಾಲಯದಿಂದ ಖುಲಾಸೆಯಾಗಿದ್ದ ರೌಡಿ ಶೀಟರ್ ಕಡಪ್ಪರ ಸಮೀರ್‌ ಭಾನುವಾರ ತಡರಾತ್ರಿ ಹತ್ಯೆಗೊಳಗಾಗಿದ್ದಾನೆ. ದುಷ್ಕರ್ಮಿಗಳ ತಂಡ ಒಂದು ಆತನನ್ನು ಅಟ್ಟಾಡಿಸಿ ಹತ್ಯೆ ಮಾಡಿದೆ. ಈ ಸಂದರ್ಭದಲ್ಲಿ ಸಮೀರ್ ತಾಯಿ ಕೂಡ ಅಲ್ಲೇ ಇದ್ದರು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ರೌಡಿಶೀಟರ್ ಕಡಪ್ಪರ ಸಮೀರ್‌ನನ್ನು ಅಟ್ಟಾಡಿಸಿ ಹತ್ಯೆ ಮಾಡಲಾಗಿದೆ. ಟಾರ್ಗೆಟ್ ಇಲ್ಯಾಸ್ ಹತ್ಯೆ ಪ್ರಕರಣದ ಅರೋಪಿಯಾಗಿದ್ದ ಈತ.
ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ರೌಡಿಶೀಟರ್ ಕಡಪ್ಪರ ಸಮೀರ್‌ನನ್ನು ಅಟ್ಟಾಡಿಸಿ ಹತ್ಯೆ ಮಾಡಲಾಗಿದೆ. ಟಾರ್ಗೆಟ್ ಇಲ್ಯಾಸ್ ಹತ್ಯೆ ಪ್ರಕರಣದ ಅರೋಪಿಯಾಗಿದ್ದ ಈತ.

ಮಂಗಳೂರು: ಹಲವು ಪ್ರಕರಣಗಳಿಗೆ ಬೇಕಾಗಿದ್ದ ಉಳ್ಳಾಲದ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪ ಹೊತ್ತು ನ್ಯಾಯಾಲಯದಿಂದ ಖುಲಾಸೆಯಾಗಿದ್ದ ರೌಡಿ ಶೀಟರ್ ಕಡಪ್ಪರ ಸಮೀರ್‌ (35)ನನ್ನು ದುಷ್ಕರ್ಮಿಗಳ ತಂಡವೊಂದು ಅಟ್ಟಾಡಿಸಿ ಕೊಲೆಗೈದ ಘಟನೆ ಮಂಗಳೂರು ಹೊರವಲಯದ ಕಲ್ಲಾಪುನಲ್ಲಿ ನಡೆದಿದೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ವಿ.ಕೆ. ಫರ್ನಿಚರ್ ಕಟ್ಟಡದ ಹಿಂಭಾಗದಲ್ಲಿ ಭಾನುವಾರ ತಡರಾತ್ರಿ ವೇಳೆ ಘಟನೆ ನಡೆದಿದೆ. ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಸಮೀರ್ ಮತ್ತು ಜೊತೆಗಿದ್ದವರು ನ್ಯಾಯಾಲಯದಿಂದ ಖುಲಾಸೆಗೊಂಡಿದ್ದರು.

ಕೊಲೆ, ಕೊಲೆಯತ್ನ, ಶೂಟೌಟ್, ದರೋಡೆ ಮೊದಲಾದ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸಮೀರ್ ಇತ್ತೀಚೆಗಷ್ಟೇ ದರೋಡೆ ಪ್ರಕರಣ ಸಂಬಂಧ ಜೈಲು ಸೇರಿ, ಜಾಮೀನು ಪಡೆದು ಹೊರಬಂದಿದ್ದ.

ಸಮೀರ್‌ನ ಹತ್ಯೆ ಹೀಗಾಯಿತು

ಮಂಗಳೂರು ಸಮೀಪದ ಉಳ್ಳಾಲದಲ್ಲಿ ಭಾನುವಾರ ರಾತ್ರಿ ತನ್ನ ತಾಯಿ ಜೊತೆ ಹೋಟೆಲ್‌ಗೆ ಕಾರಿನಲ್ಲಿ ಬಂದಿದ್ದ ಸಮೀರ್‌ (35) ನನ್ನು ದುಷ್ಕರ್ಮಿಗಳ ತಂಡ ಕಾರಿನಲ್ಲಿ ಹಿಂಬಾಲಿಸುತ್ತಾ ಬಂದಿತ್ತು. ಹೊಟೇಲ್ ಮುಂದೆ ಕಾರಿನಿಂದ ಇಳಿಯುತ್ತಿದ್ದಂತೆ ತಂಡ ಆತನ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದೆ

ಅಪಾಯವನ್ನು ಅರಿತ ಸಮೀರ್​ ತಕ್ಷಣ ಸ್ಥಳದಿಂದ ಓಡಲು ಯತ್ನಿಸಿದಾಗ ಅಟ್ಟಾಡಿಸಿದ ಐದು ಮಂದಿಯ ತಂಡ ಕಲ್ಲಾಪು ಜಂಕ್ಷನ್​ನಿಂದ 500 ಮೀಟರ್​ ದೂರದಲ್ಲಿರುವ ವಿ.ಕೆ. ಫರ್ನಿಚರ್​ ಹಿಂಭಾಗದವರೆಗೂ ಓಡಿಸಿಕೊಂಡು ಹೋಗಿ, ಅಲ್ಲಿ ತಲವಾರಿನಿಂದ ಕೊಚ್ಚಿ ಹತ್ಯೆ ಮಾಡಿದೆ.

ಕೊಲೆಯಾದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಉಳ್ಳಾಲ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಟಾರ್ಗೆಟ್ ಇಲ್ಯಾಸ್ ಹತ್ಯೆ ಪ್ರಕರಣ

2018 ರಲ್ಲಿ ರೌಡಿಶೀಟರ್ ಟಾರ್ಗೆಟ್​ ಇಲ್ಯಾಸ್​ನನ್ನು ಜೆಪ್ಪುವಿನ ಫ್ಲಾಟ್‍ವೊಂದರಲ್ಲಿ ದಾವುದ್, ಸಮೀರ್, ರಿಯಾಝ್, ನಮೀರ್​, ಅಬ್ದುಲ್ ಖಾದರ್, ಉಮ್ಮರ್ ನವಾಫ್, ಮೊಹಮ್ಮದ್ ನಝೀರ್, ನೌಷಾದ್, ಅಝ್ಗರ್​ ಆಲಿ ಎಂಬವರು ಸೇರಿಕೊಂಡು ಕೊಲೆ ಮಾಡಿದ್ದರು.

ಪ್ರಕರಣದಲ್ಲಿ ಸಮೀರ್ ಎರಡನೇ ಆರೋಪಿಯಾಗಿದ್ದು, ದಾವುದ್​ ಮತ್ತು ಸಮೀರ್ ಇಬ್ಬರು ನೇರವಾಗಿ ಫ್ಲ್ಯಾಟ್ ಪ್ರವೇಶಿಸಿ ಇಲ್ಯಾಸ್​ನನ್ನು ಹತ್ಯೆ ಮಾಡಿರುವುದಾಗಿ ಆರೋಪಿಸಲಾಗಿತ್ತು ಪ್ರಕರಣ ಸಂಬಂಧ ಜೈಲುಪಾಲಾದ ಸಮೀರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ