logo
ಕನ್ನಡ ಸುದ್ದಿ  /  ಕರ್ನಾಟಕ  /  Aero India 2023 Manthan Program: ರಕ್ಷಣಾ ವಲಯದಲ್ಲಿ ನಾವೀನ್ಯತೆ, ಹೊಸ ಪರಿವರ್ತನೆ; ಏರೋ ಇಂಡಿಯಾದಲ್ಲಿ 'ಮಂಥನ್' ಕಾರ್ಯಕ್ರಮ

Aero India 2023 Manthan Program: ರಕ್ಷಣಾ ವಲಯದಲ್ಲಿ ನಾವೀನ್ಯತೆ, ಹೊಸ ಪರಿವರ್ತನೆ; ಏರೋ ಇಂಡಿಯಾದಲ್ಲಿ 'ಮಂಥನ್' ಕಾರ್ಯಕ್ರಮ

HT Kannada Desk HT Kannada

Feb 04, 2023 07:00 AM IST

google News

ಬೆಂಗಳೂರು ಏರ್ ಶೋ ವೇಳೆ ಮಂಥನ್ ಕಾರ್ಯಕ್ರಮ

  • ಬೆಂಗಳೂರು ಏರ್ ಶೋ ವೇಳೆ ರಕ್ಷಣಾ ವಲಯದನ ಸಂಶೋಧನೆ, ನಾವೀನ್ಯತೆ, ಅತ್ಯಾಧುನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಮಂಥನ್ ಕಾರ್ಯಕ್ರಮ ನಡೆಯಲಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ. 

ಬೆಂಗಳೂರು ಏರ್ ಶೋ ವೇಳೆ ಮಂಥನ್ ಕಾರ್ಯಕ್ರಮ
ಬೆಂಗಳೂರು ಏರ್ ಶೋ ವೇಳೆ ಮಂಥನ್ ಕಾರ್ಯಕ್ರಮ

ಬೆಂಗಳೂರು: ಏಷ್ಯಾದ ಅತಿದೊಡ್ಡ ಏರ್‌ ಶೋ 'ಏರೋ ಇಂಡಿಯಾ- 2023' ಫೆಬ್ರವರಿ 13 ರಿಂದ 17 ರವರೆಗೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ.

14 ನೇ ಆವೃತ್ತಿಯ ಏರ್‌ ಶೋ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಏರ್ ಶೋ ವೇಳೆ ರಕ್ಷಣಾ ವಲಯದಲ್ಲಿ ಹಲವು ಒಪ್ಪಂದಗಳು ನಡೆಯಲಿವೆ ಎಂದು ಕೇಂದ್ರ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

ಮತ್ತೊಂದೆಡೆ ಏರೋ ಇಂಡಿಯಾ 2023ರ ಮಂಥನ್ ಕಾರ್ಯಕ್ರಮ ಫೆ.15 ರಂದು ನಡೆಯಲಿದ್ದು, ಸೈಬರ್ ಭದ್ರತೆ ಕುರಿತ ಡಿಫೆನ್ಸ್ ಇಂಡಿಯಾ ಸ್ಟಾರ್ಟ್ಅಪ್ ಸ್ಪರ್ಧೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ.

ಏನಿದು ಮಂಥನ್ ಕಾರ್ಯಕ್ರಮ?

ಏರೋ ಇಂಡಿಯಾ 2023 ನಲ್ಲಿ ವಾರ್ಷಿಕ ರಕ್ಷಣಾ ನಾವೀನ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಹತ್ವದ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮ ಇದಾಗಿದೆ. ಮಂಥನ್ ವೇದಿಕೆಯಡಿ ಪ್ರಮುಖ ನಾವೀನ್ಯಕಾರರು, ನವೋದ್ಯಮಗಳು, ಎಂಎಸ್‌ಎಂಇಗಳು, ಇನ್‌ಕ್ಯುಬೇಟರ್‌(ಸಂಪೋಷಣಾ ಕೇಂದ್ರ)ಗಳು, ಮತ್ತು ಶೈಕ್ಷಣಿಕ ತಜ್ಞರು, ಹೂಡಿಕೆದಾರರನ್ನು ರಕ್ಷಣಾ ಮತ್ತು ಬಾಹ್ಯಾಕಾಶ ಪೂರಕ ವ್ಯವಸ್ಥೆಯನ್ನು ಒಂದೇ ಸೂರಿನಡಿ ತರುತ್ತದೆ. ಮಂಥನ್ ಅನ್ನು ಐಡೆಕ್ಸ್ (iDEX) ಆಯೋಜಿಸುತ್ತಿದೆ.

ಐಡೆಕ್ಸ್ ಯೋಜನೆಯ ಉದ್ದೇಶವೇನು?

ಐಡೆಕ್ಸ್ (ರಕ್ಷಣಾ ಶ್ರೇಷ್ಠತೆಗಾಗಿ ನಾವೀನ್ಯತೆ) ರಕ್ಷಣಾ ಸಚಿವಾಲಯದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, 2018ರಲ್ಲಿ ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಸ್ಟಾರ್ಟ್‌ಅಪ್‌ಗಳು, ವೈಯಕ್ತಿಕ ನಾವೀನ್ಯಕಾರರು, ಎಂಎಸ್ಎಂಇಗಳು, ಇನ್‌ಕ್ಯುಬೇಟರ್‌ಗಳು, ಶೈಕ್ಷಣಿಕ ತಜ್ಞರು ಮತ್ತಿತರರನ್ನು ತೊಡಗಿಸಿಕೊಳ್ಳುವ ಮೂಲಕ ರಕ್ಷಣಾ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಅಭಿವೃದ್ಧಿಯನ್ನು ಉತ್ತೇಜಿಸಲು ಪೂರಕ ವ್ಯವಸ್ಥೆ ಸೃಷ್ಟಿಸುವುದು ಯೋಜನೆಯ ಉದ್ದೇಶವಾಗಿದೆ.

ಅಲ್ಲದೆ, ಭಾರತೀಯ ರಕ್ಷಣಾ ಮತ್ತು ಬಾಹ್ಯಾಕಾಶ ಅಗತ್ಯತೆಗಳಿಗಾಗಿ ಭವಿಷ್ಯದ ಅಳವಡಿಕೆಗೆ ಉತ್ತಮ ಸಾಮರ್ಥ್ಯವನ್ನು ಹೊಂದಿರುವ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲು ಐಡೆಕ್ಸ್ ಅವರಿಗೆ ಅನುದಾನ/ನಿಧಿ ಮತ್ತು ಇತರ ನೆರವನ್ನು ಒದಗಿಸುತ್ತದೆ. ಐಡೆಕ್ಸ್ ರಕ್ಷಣಾ ವಲಯದಲ್ಲಿ ಪಥ ಪರಿವರ್ತಕ (ಗೇಮ್ ಚೇಂಜರ್) ಆಗಿ ಹೊರಹೊಮ್ಮಿದ್ದು, ನಾವೀನ್ಯತೆಗಾಗಿ ಪ್ರಧಾನಮಂತ್ರಿಗಳಿಂದ ಪ್ರಶಸ್ತಿ ಪಡೆದಿದೆ.

ಸೈಬರ್ ಭದ್ರತೆಯ ಕುರಿತ ಸ್ಪರ್ಧೆಗಳಿಗೆ ಚಾಲನೆ

ಮಂಥನ್ 2023 ಹಲವು ಪ್ರಥಮಗಳನ್ನು ಹೊಂದಿರಲಿದೆ, ಅದರಲ್ಲಿ ಸೈಬರ್ ಭದ್ರತೆಯ ಕುರಿತ ಸ್ಪರ್ಧೆಗಳಿಗೆ ಚಾಲನೆ ನೀಡುವುದು, ಐಡೆಕ್ಸ್ ಹೂಡಿಕೆದಾರರ ತಾಣ ಸ್ಥಾಪನೆ, ಹೂಡಿಕೆದಾರರೊಂದಿಗಿನ ಒಡಂಬಡಿಕೆಗಳು ಮತ್ತಿತರವು ಒಳಗೊಂಡಿವೆ. ಮಂಥನ್ 2023 ರಕ್ಷಣಾ ವಲಯದಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ತ್ವರಿತಗೊಳಿಸಲು ನವೋದ್ಯಮ ಪೂರಕ ವ್ಯವಸ್ಥೆಯನ್ನು ಉತ್ತೇಜಿಸಲು ಐಡೆಕ್ಸ್ ನ ಭವಿಷ್ಯದ ದೂರದೃಷ್ಟಿ / ಮುಂದಿನ ಉಪಕ್ರಮಗಳ ಕುರಿತು ಒಂದು ಸ್ಥೂಲನೋಟವನ್ನು ಒದಗಿಸುತ್ತದೆ.

ರಕ್ಷಣಾ ಸಚಿವರು, ರಕ್ಷಣಾ ಸಚಿವಾಲಯ ಮತ್ತು ಇತರ ಸಚಿವಾಲಯಗಳ ಉನ್ನತ ಶ್ರೇಣಿಯ ಅಧಿಕಾರಿಗಳು, ಸೇವಾ ಮುಖ್ಯಸ್ಥರು, ಕೇಂದ್ರ ಗೃಹ ಸಚಿವಾಲಯ, ಉದ್ಯಮದ ಮುಖ್ಯಸ್ಥರುಗಳು, ನಾವೀನ್ಯಕಾರರು, ರಕ್ಷಣಾ ಸ್ಟಾರ್ಟಪ್‌ಗಳು, ಪ್ರಮುಖ ಇನ್‌ಕ್ಯುಬೇಟರ್‌ಗಳು, ಕ್ಷೇತ್ರ ತಜ್ಞರು, ಪ್ರಮುಖ ಹೂಡಿಕೆದಾರರು, ವಿದೇಶಿ ಗಣ್ಯರು ಮತ್ತಿತರರು ಏರೋ ಇಂಡಿಯಾ 2023 ರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪ್ರಮುಖ ಮುಖ್ಯಾಂಶಗಳು

- ಸೈಬರ್ ಭದ್ರತೆಯ ವಿಷಯದ ಡಿಫೆನ್ಸ್ ಇಂಡಿಯಾ ಸ್ಟಾರ್ಟ್ಅಪ್ ಸ್ಪರ್ಧೆ 9 (ಡಿಐಎಸ್ ಸಿ 9) ಗೆ ಚಾಲನೆ. ಇದು ನೂರಾರು ನವೋದ್ಯಮಿಗಳಿಗೆ/ ಸ್ಟಾರ್ಟ್‌ಅಪ್‌ಗಳಿಗೆ ಭಾಗವಹಿಸಲು ಮತ್ತು ರಕ್ಷಣಾ ಮತ್ತು ಭದ್ರತಾ ಪೂರಕ ವ್ಯವಸ್ಥೆಯ ಭಾಗವಾಗಲು ಅವಕಾಶ ಒದಗಿಸುತ್ತದೆ.

- ಐಡೆಕ್ಸ್ ಸಂಬಂಧಿತ ಸ್ಟಾರ್ಟ್‌ಅಪ್‌ಗಳು/ ಎಂಎಸ್ ಎಂಇಗಳಿಂದ ತಂತ್ರಜ್ಞಾನ ಪ್ರದರ್ಶನ ಮಂಥನ್ ಕಾರ್ಯಕ್ರಮದ ಕೆಲವು ಮುಖ್ಯಾಂಶಗಳಲ್ಲಿ ಇವು ಸೇರಿವೆ.

- ರಕ್ಷಣಾ ಸಚಿವರಿಂದ ಸೈಬರ್ ಭದ್ರತೆ ವಿಷಯ ಕುರಿತಾದ iDEX ಚಾಲೆಂಜಸ್ / ಡಿಫೆನ್ಸ್ ಇಂಡಿಯಾ ಸ್ಟಾರ್ಟ್‌ಅಪ್ ಚಾಲೆಂಜ್ 9 (ಡಿಐಎಸ್ಸಿ 9) ರ ಮುಂದಿನ ಆವೃತ್ತಿಗೆ ಚಾಲನೆ.

- ಸ್ವಾಯತ್ತ ವ್ಯವಸ್ಥೆಗಳು, ಸುಧಾರಿತ ಸೆನ್ಸಾರ್ ಗಳು, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಕೈಗಾರಿಕೆ 4.0 ನಂತಹ ಭವಿಷ್ಯದ ತಂತ್ರಜ್ಞಾನದ ವಲಯಗಳ ಮೇಲೆ ಕೇಂದ್ರೀಕರಿಸುವ iDEX ಸ್ಟಾರ್ಟ್‌ಅಪ್‌ಗಳಿಂದ ತಂತ್ರಜ್ಞಾನ ಪ್ರದರ್ಶನ

- iDEX ಇನ್ವೆಸ್ಟರ್ ತಾಣಕ್ಕೆ ಚಾಲನೆ, ರಕ್ಷಣೆಗಾಗಿ ನಾವೀನ್ಯತೆ (i4d) ಇಂಟರ್ನ್‌ಶಿಪ್ ಇತ್ಯಾದಿ.

- ಹೊಸ iDEX ವಿಜೇತರಿಗೆ ಸನ್ಮಾನ

- ಹಣಕಾಸು ಸಂಸ್ಥೆಗಳು, ಮಾರ್ಕ್ಯೂ ಹೂಡಿಕೆದಾರರು ಮತ್ತಿರರೊಂದಿಗೆ ಒಡಂಬಡಿಕೆ (ಎಂಒಯು)ಗಳಿಗೆ ಸಹಿ ಹಾಕುವುದು

- ಶ್ರೇಷ್ಠ ತಂತ್ರಜ್ಞರು, ನಾವೀನ್ಯಕಾರರು, ಉದ್ಯಮದ ತಜ್ಞರು ಮತ್ತು ನೀತಿ ನಿರೂಪಕರು ಸೇರಿದಂತೆ ಸಂವಾದಕಾರರೊಂದಿಗೆ 'ಮುಂದಿನ ಪೀಳಿಗೆಯ ಯುದ್ಧಭೂಮಿ: ಸೈಬರ್, ಬಾಹ್ಯಾಕಾಶ ಮತ್ತು ಅದರಾಚೆ’ ಮತ್ತು ‘ತಂತ್ರಜ್ಞಾನ ನಾಯಕತ್ವಕ್ಕಾಗಿ ಸ್ಟಾರ್ಟ್‌ಅಪ್ ಪೂರಕ ವ್ಯವಸ್ಥೆಯನ್ನು ಬಳಸಿಕೊಳ್ಳುವುದು' ಕುರಿತು ಸಂವಾದಗಳು.

- ಹೂಡಿಕೆದಾರರ ಗೋಷ್ಠಿ- ಆಯ್ದ iDEX ಸ್ಟಾರ್ಟ್‌ಅಪ್‌ಗಳ ಮೂಲಕ ಲೈವ್ ಪಿಚಿಂಗ್ ಸೆಷನ್

iDEX ಸ್ಟಾರ್ಟ್‌ಅಪ್‌ಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೆಲವು ಮುಂಚೂಣಿ ತಂತ್ರಜ್ಞಾನಗಳು ಹೀಗಿವೆ

ಎಐ/ವಿಆರ್ ಸೆನ್ಸಾರ್ ತಂತ್ರಜ್ಞಾನ

ದ್ರೋನ್ ಗಳು/ಆಂಟಿ ದ್ರೋನ್ ಗಳು

ಡೊಮೈನ್ ಜಾಗೃತಿ

ಉಪಗ್ರಹ ದೃಶ್ಯಾವಳಿ

ಅನ್ ಮ್ಯಾನ್ಡ್ ಟೆಕ್ನಾಲಜೀಸ್

ವೈಯಕ್ತಿಕ ರಕ್ಷಣಾ ವ್ಯವಸ್ಥೆ

ರಿಮೋಟ್ ಆಧರಿತ ವಾಹಕಗಳ

ಸಿಮ್ಯುಲೇಷನ್

ಸ್ಟೆಲ್ತ್ ತಂತ್ರಜ್ಞಾನಗಳು

ಅಟಾನಮಸ್ ಮತ್ತು ಸ್ಮಾರ್ಟ್ ಲಿಯೋಟರಿಂಗ್ ಮುನಿಷನ್ಸ್

ಸಂವಹನ

ಸುರಕ್ಷಿತ ದತ್ತಾಂಶ ಎನ್ ಕ್ಪಿಪ್ಷನ್ ವ್ಯವಸ್ಥೆ

ಕೃತಕ ಬುದ್ದಿಮತ್ತೆ ಮತ್ತು ಕಣ್ಗಾವಲು ವ್ಯವಸ್ಥೆ

ಪ್ರಿಡಿಕ್ಟಿವ್ ಮೈನ್ ಟೆನೆನ್ಸ್

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ