logo
ಕನ್ನಡ ಸುದ್ದಿ  /  ಕರ್ನಾಟಕ  /  Tejasvi Surya Eat Benne Dosa: ಜನರು ಪ್ರವಾಹದಿಂದ ತತ್ತರಿಸುತ್ತಿದ್ದರೆ ತೇಜಸ್ವಿ ಸೂರ್ಯ ದೋಸೆ ತಿನ್ತಾ ಇದ್ರಂತೆ! ವಿಡಿಯೋ ವೈರಲ್‌

Tejasvi Surya Eat Benne Dosa: ಜನರು ಪ್ರವಾಹದಿಂದ ತತ್ತರಿಸುತ್ತಿದ್ದರೆ ತೇಜಸ್ವಿ ಸೂರ್ಯ ದೋಸೆ ತಿನ್ತಾ ಇದ್ರಂತೆ! ವಿಡಿಯೋ ವೈರಲ್‌

Praveen Chandra B HT Kannada

Sep 06, 2022 12:40 PM IST

google News

Tejasvi Surya: ಜನರು ಪ್ರವಾಹದಿಂದ ತತ್ತರಿಸುತ್ತಿದ್ದರೆ ತೇಜಸ್ವಿ ಸೂರ್ಯ ದೋಸೆ ತಿನ್ತಿದ್ರು

    • ಭಾನುವಾರ ಸುರಿದ ಭಾರಿ ಮಳೆಗೆ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿರುವಾಗ ಸಂಸದ ಹೋಟೆಲ್‌ ಒಂದನ್ನು ಪ್ರಚಾರ ಮಾಡುತ್ತ ದೋಸೆ ಮೆಲ್ಲುತ್ತಿದ್ದರು. "ಪದ್ಮನಾಭ ನಗರದ ಸ್ವಾತಿ ಕಿಚನ್‌ಗೆ ಹೋಗಿದ್ದೆ. ಇನ್‌ಸ್ಟಾಗ್ರಾಂನಲ್ಲಿ ದೋಸೆ ಫೋಟೊ ನೋಡಿ ಟೆಂಪ್ಟ್‌ ಆಗಿ ಇಲ್ಲಿಗೆ ಬಂದಿದ್ದೇನೆ. ಬೆಣ್ಣೆ ದೋಸೆ ಚೆನ್ನಾಗಿದೆ. ನೀವು ಬನ್ನಿ, ತಿನ್ನಿʼʼ ಎಂದು ತೇಜಸ್ವಿ ಸೂರ್ಯ ಪೋಸ್ಟ್‌ ಹಾಕಿದ್ದರು.
Tejasvi Surya: ಜನರು ಪ್ರವಾಹದಿಂದ ತತ್ತರಿಸುತ್ತಿದ್ದರೆ ತೇಜಸ್ವಿ ಸೂರ್ಯ ದೋಸೆ ತಿನ್ತಿದ್ರು
Tejasvi Surya: ಜನರು ಪ್ರವಾಹದಿಂದ ತತ್ತರಿಸುತ್ತಿದ್ದರೆ ತೇಜಸ್ವಿ ಸೂರ್ಯ ದೋಸೆ ತಿನ್ತಿದ್ರು

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರು ವರುಣನ ಆರ್ಭಟಕ್ಕೆ ತತ್ತರಿಸಿ ಹೋದ ಸಮಯದಲ್ಲಿ ಟೆಂಪ್ಟ್‌ ಆಗಿ ದೋಸೆ ತಿನ್ನಲು ಹೋದ ಸಂಸದ ತೇಜಸ್ವಿ ಸೂರ್ಯ ಅವರ ಇನ್‌ಸ್ಟಾಗ್ರಾಂ ವಿಡಿಯೋ ಸಾಕಷ್ಟು ಟೀಕೆಗೆ ಈಡಾಗಿದೆ. ರೋಮ್‌ ಹೊತ್ತಿ ಉರಿಯುತ್ತಿರುವಾಗ "ತೇಜಸ್ವಿ ದೋಸೆ ತಿನ್ನುತ್ತಿದ್ದರುʼʼ ಎಂದು ಜನರು ತೇಜಸ್ವಿ ಸೂರ್ಯರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಭಾನುವಾರ ಸುರಿದ ಭಾರಿ ಮಳೆಗೆ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿರುವಾಗ ಸಂಸದ ಹೋಟೆಲ್‌ ಒಂದನ್ನು ಪ್ರಚಾರ ಮಾಡುತ್ತ ದೋಸೆ ಮೆಲ್ಲುತ್ತಿದ್ದರು. "ಪದ್ಮನಾಭ ನಗರದ ಸ್ವಾತಿ ಕಿಚನ್‌ಗೆ ಹೋಗಿದ್ದೆ. ಇನ್‌ಸ್ಟಾಗ್ರಾಂನಲ್ಲಿ ದೋಸೆ ಫೋಟೊ ನೋಡಿ ಟೆಂಪ್ಟ್‌ ಆಗಿ ಇಲ್ಲಿಗೆ ಬಂದಿದ್ದೇನೆ. ಬೆಣ್ಣೆ ದೋಸೆ ಚೆನ್ನಾಗಿದೆ. ನೀವು ಬನ್ನಿ, ತಿನ್ನಿʼʼ ಎಂದು ತೇಜಸ್ವಿ ಸೂರ್ಯ ಪೋಸ್ಟ್‌ ಹಾಕಿದ್ದರು. ಇಲ್ಲಿನ ಉಪ್ಪಿಟ್ಟು ಕೂಡ ತುಂಬಾ ಚೆನ್ನಾಗಿದೆ ಎಂದು ಅವರು ಪೋಸ್ಟ್‌ ಹಾಕಿದ್ದರು. ಈ ರೀತಿ ಬೆಣ್ಣೆ ಮಸಾಲೆ, ಉಪ್ಪಿಟ್ಟು ಪ್ರಚಾರ ಮಾಡುತ್ತಿರುವಾಗ ಬೆಂಗಳೂರು ಅಕ್ಷರಶಃ ಮುಳುಗಿತ್ತು.

ಮಳೆಯಿಂದಾಗಿ ಬೆಳ್ಳಂದೂರು, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ವೈಟ್‌ ಫೀಲ್ಡ್‌, ಮಾರತ್‌ಹಳ್ಳಿ, ದೊಡ್ಡನೆಕುಂದಿ, ಕೆ.ಆರ್‌.ಪುರ, ಎಚ್‌ಎಎಲ್‌, ಬೊಮ್ಮನಹಳ್ಳಿ, ಮಹಾದೇವಪುರ, ಯಮಲೂರು, ಬಿಇಎಂಎಲ್‌ ಬಡಾವಣೆ, ತುಮಕೂರು ರಸ್ತೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸಾಕಷ್ಟು ತೊಂದರೆಗಳಾಗಿವೆ.

" ಮೂರ್ಖ ಜನರು(ಮತದಾರರು) ಈ ಮೂರ್ಖನಿಗೆ ವೋಟ್ ಹಾಕಿ ಸಂಸದ ಮಾಡಿದರು,ಈಗ ಈ ಮೂರ್ಖ ಸಂಸದ ಆಗಿ ಯಾವುದೇ ಕೆಲಸ ಮಾಡುತ್ತಿಲ್ಲ. ಇಂತಹ ಮೂರ್ಖ ಸಂಸದ ಆಗಲು ಜನರೇ ಕಾರಣ. ಮುಂದಿನ ಚುನಾವಣೆಯಲ್ಲಿ ಜನರು ಇಂತಹ ಮೂರ್ಖನಿಗೆ ವೋಟ್ ಹಾಕಿ ಸಂಸದ ಆಗಿ ಆಯ್ಕೆ ಮಾಡಬಾರದುʼʼ ಎಂದು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡು ಶರಣು ಎನ್ನುವವರು ಟೀಕೆ ಮಾಡಿದ್ದಾರೆ.

ಇದೇ ವಿಡಿಯೋಗೆ ಹಲವು ಬಗೆಯ ಕಮೆಂಟ್‌ಗಳು ಬಂದಿದ್ದು, ಕೆಲವರು ಮುಂಬೈ ಕ್ರೈಸಿಸ್‌ ಸಮಯದಲ್ಲಿ ರಾಹುಲ್‌ ಗಾಂಧಿಯೂ ಪಾರ್ಟಿ ಮಾಡುತ್ತಿದ್ದರು ಎಂದಿದ್ದಾರೆ.

ನಗರದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಬೀಳಲಿದ್ದು, ಹವಾಮಾನ ಇಲಾಖೆಯು ಯಲ್ಲೊ ಅಲರ್ಟ್‌ ಘೋಷಿಸಿದೆ. ಇಂದು ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿಯೂ ವ್ಯತ್ಯಯವಾಗಿದೆ. ಪ್ರವಾಹದಂತಹ ಮಳೆಯಿದ್ದರೂ ಸ್ನಾನಕ್ಕೆ, ಬಾತ್‌ರೂಂಗೆ ನೀರಿಲ್ಲದೆ ಸಾಕಷ್ಟು ಜನರು ಪರದಾಡುತ್ತಿದ್ದಾರೆ.

ಸವಾಲಿನ ಪರಿಸ್ಥಿತಿ, ನಿಭಾಯಿಸಲು ಪ್ರಯತ್ನಿಸುತ್ತಿದ್ದೇವೆ: ಬೊಮ್ಮಾಯಿ

ಬೆಂಗಳೂರು, ಸೆಪ್ಟೆಂಬರ್ 06: ಕರ್ನಾಟಕದಾದ್ಯಂತ ವಿಶೇಷವಾಗಿ ಬೆಂಗಳೂರಿನಲ್ಲಿ ಕಳೆದ 90 ವರ್ಷಗಲ್ಲಿ ಆಗದಷ್ಟು ಅತಿವೃಷ್ಟಿಯಾಗಿದೆ. ಸವಾಲಿನ ಪರಿಸ್ಥಿತಿಯಲ್ಲಿಯೂ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

24/7 ಕಾರ್ಯಾಚರಣೆ

ಸತತವಾಗಿ ಮಳೆಯಾಗುತ್ತಿರುವುದರಿಂದ ಎಲ್ಲಾ ಕೆರೆಗಳು ತುಂಬಿದ್ದು ಕೆಲವು ಕೋಡಿ ಹರಿದಿದೆ. ಕೆಲವು ಕೆರೆಗಳು ಬಿರುಕು ಬಿಟ್ಟಿವೆ. ಇಡೀ ಬೆಂಗಳೂರು ಜಲಾವೃತವಾಗಿದೆ ಎಂದು ಬಿಂಬಿಸಲಾಗುತ್ತಿದೆ. ಎರಡು ವಲಯಗಳು, ಅದರಲ್ಲೂ ಮಹದೇವಪುರ ವಲಯ ಸಮಸ್ಯೆಗೆ ಒಳಗಾಗಿದೆ. 69 ಕೆರೆಗಳು ಈ ಪ್ರದೇಶದಲ್ಲಿವೆ. ಎಲ್ಲವೂ ಕೋಡಿ ಹರಿದಿವೆ. ಎಲ್ಲಾ ಕಟ್ಟಡಗಳು ಕೆಳ ಮಟ್ಟದಲ್ಲಿವೆ ಹಾಗೂ ಒತ್ತುವರಿ ಕೂಡ ಆಗಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ನಮ್ಮ ಅಧಿಕಾರಿಗಳು, ಇಂಜಿನಿಯರ್ ಗಳು, ಎಸ್.ಡಿ.ಆರ್.ಎಫ್ ತಂಡಗಳು 24/ 7 ಕೆಲಸ ಮಾಡುತ್ತಿವೆ. ಸಾಕಷ್ಟು ಒತ್ತುವರಿಯನ್ನು ನಾವು ತೆರವುಗೊಳಿಸಿದ್ದೇವೆ. ತೆರವುಗೊಳಿಸುವ ಕಾರ್ಯವನ್ನು ಮುಂದುವರೆಸಲಾಗುವುದು. ಕೆರೆಗಳ ನಿರ್ವಹಣೆಗೆ ಸ್ಲೂಯಿಸ್ ಗೇಟ್ ಗಳನ್ನು ಅಳವಡಿಸಲಾಗುತ್ತಿದೆ. ಎಲ್ಲಾ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡುವಂತೆ ಸೂಚಿಸಿದ್ದು, ಕರೆ ಬಂದ ಕೂಡಲೇ ಸಮಸ್ಯೆಯನ್ನು ಬಗೆಹರಿಸಲು ತಿಳಿಸಲಾಗಿದೆ. ನೀರು ತೆಗೆಯುವ ಕೆಲಸ ಜಾರಿಯಲ್ಲಿದೆ. ಒಂದೆರಡು ಸ್ಥಳಗಳಲ್ಲಿ ಸಮಸ್ಯೆ ಬಿಟ್ಟರೆ ಉಳಿಡೆದೆ ನೀರು ಹೊರತೆಗೆಯಲಾಗಿದೆ. ಮಳೆ ನಿರಂತರವಾಗಿ ಸುರಿ ಯುತ್ತಿರುವುದರಿಂದ ಕೆಲಸ ವಿಳಂಬವಾಗುತ್ತಿದೆ ಎಂದರು.

ನೀರು ಸರಬರಾಜಿನಲ್ಲಿ ವ್ಯತ್ಯಯ: ಸಾರ್ವಜನಿಕರು ಸಹಕರಿಸಬೇಕು

ನಿನ್ನೆ ಜಲಾವೃತವಾಗಿದ್ದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಟಿ. ಕೆ ಹಳ್ಳಿ ನೀರು ಸರಬರಾಜು ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಭೀಮೇಶ್ವರ ನದಿ ಉಕ್ಕಿ ಹರಿದು ಪಂಪ್ ಹೌಸ್ ಗೆ ನುಗ್ಗಿತ್ತು. 2 ಪಂಪ್ ಹೌಸ್ ಗಳಿಗೆ ಹಾನಿಯಾಗಿದ್ದು, ಒಂದು ಪಂಪ್ ಹೌಸ್ ನಲ್ಲಿದ್ದ ನೀರು ಹೊರಗೆ ಹಾಕಲಾಗಿದೆ. ಇಂದು ರಾತ್ರಿಯೊಳಗೆ 230 ಎಂ.ಎಲ್.ಡಿ ನೀರು ಸರಬರಾಜು ಪ್ರಾರಂಭವಾಗಲಿದೆ. 550 ಎಂ.ಎಲ್.ಡಿ ನೀರು ಸರಬರಾಜು ಮಾಡುವ ಪಂಪ್ ಹೌಸ್ ನ ನೀರನ್ನು ತೆಗೆಯಲು 2 ದಿನಗಳಾಗುತ್ತವೆ. ಈ ಮಧ್ಯೆ ಜಲಮಂಡಳಿಯ 8000 ಹಾಗೂ ಬಿಬಿಎಂಪಿ ವ್ಯಾಪ್ತಿಯ 4000 ಕೊಳವೆಬಾವಿಗಳನ್ನು ಸಕ್ರಿಯ ಗೊಳಿಸಲಾಗುವುದು ಹಾಗೂ ಟ್ಯಾಂ ಕರ್ ಮೂಲಕ ನೀರು ಸರಬರಾಜು ಮಾಡಲು ವ್ಯವಸ್ಥೆ ಕೈಗೊಳ್ಳಲಾಗುವುದು. ಇನ್ನೆರೆಡು ದಿನಗಳ ಕಾಲ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.

ಕೇಂದ್ರದಿಂದ ಸೂಕ್ತ ಪರಿಹಾರ

ಕೇಂದ್ರ ಅಧ್ಯಯನ ತಂಡ ಇಂದು ಭೇಟಿ ನೀಡಲಿದ್ದು, ರಾಜ್ಯ ಹಾಗೂ ಬೆಂಗಳೂರಿನ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು. ಬೆಳೆ, ಮನೆಗಳು ಹಾಗೂ ಮೂಲಸೌಕರ್ಯ ಹಾನಿಯ ಬಗ್ಗೆ ಮಾಹಿತಿ ನೀಡಲಾಗುವುದು. ಹಾಗೂ ಸೂಕ್ತ ಪರಿಹಾರವನ್ನು ಕೇಂದ್ರ ಒದಗಿಸಲಾಗುವುದು ಎಂದರು.

ಪಿ.ಎಸ್.ಐ ನೇಮಕಾತಿ

ಪಿ.ಎಸ್.ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ಜಾರಿಯಲ್ಲಿದ್ದು ಆರೋಪಪಟ್ಟಿ ಸಲ್ಲಿಸಲಾಗಿದೆ. ಹೊಸದೇನೆ ಆದರೂ ತನಿಖೆ ಕೈಗೊಳ್ಳಲಾಗುವುದು ಎಂದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ