ಕರ್ನಾಟಕ ಬಜೆಟ್ 2024: ಸಿದ್ದರಾಮಯ್ಯ ತವರು ಮೈಸೂರಲ್ಲೇ ಹಿಂದಿನ ಬಜೆಟ್ ಘೋಷಣೆ ಅನುಷ್ಠಾನ ಆಗಿಲ್ಲ, ಇಲ್ಲಿದೆ 10 ಯೋಜನೆ ಪಟ್ಟಿ
Feb 15, 2024 07:43 PM IST
ಸಿದ್ದರಾಮಯ್ಯ ಅವರು ಹಿಂದಿನ ಬಜೆಟ್‌ನಲ್ಲಿ ಮೈಸೂರಿಗೆ ಕೊಟ್ಟಿದ್ದ ಯೋಜನೆಗಳು ಬಹುಪಾಲು ಜಾರಿಯಾಗಿಯೇ ಇಲ್ಲ
- Mysore News ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರಿಮ ಮೇಲೆ ವಿಶೇಷ ಅಭಿಮಾನ. ರಾಜಕೀಯ ಶಕ್ತಿ ನೀಡಿದ ಊರಿನ ಮೇಲೆ ಪ್ರೀತಿಯಿಂದ ಕಳೆದ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಿದ್ದರು. ಅನುದಾನ ಕೊರತೆ ಸಹಿತ ನಾನಾ ಕಾರಣಗಳಿಂದ ಜಾರಿಯಾಗಿಲ್ಲ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವರ್ಷ ಮಂಡಿಸಿದ್ದ ಬಜೆಟ್‌ನಲ್ಲಿ ಮೈಸೂರಿಗೆ ಹೆಚ್ಚಿನ ಕೊಡುಗೆ ನೀಡಿ ತವರಿನ ಪ್ರೀತಿ ಮೆರೆದಿದ್ದರು. ಆದರೆ ಅವರು ಘೋಷಿಸಿದ್ದ ಹಲವಾರು ಯೋಜನೆಗಳು ಈವರೆಗೂ ಜಾರಿಯಾಗಿಯೇ ಇಲ್ಲ. ಕೆಲವು ಯೋಜನೆಗಳಿಗೆ ಅನುದಾನ ಘೋಷಿಸಿಲ್ಲ. ಇನ್ನಷ್ಟು ಯೋಜನೆಗಳಿಗೆ ಅನುದಾನದ ಕೊರತೆಯಿಂದ ಬರೀ ಬಜೆಟ್ ಪ್ರತಿಗೆ ಮಾತ್ರ ಸೀಮಿತವಾಗಿದೆ. ಮೈಸೂರು ಪಾರಂಪರಿಕ, ಪ್ರವಾಸಿ ನಗರಿಯೂ ಹೌದು. ಇದನ್ನು ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ ಅವರು ಘೋಷಿಸಿದ ಯೋಜನೆಗಳು ಜಾರಿಯಾಗದೇ ಹಿಂದೆ ಬಿದ್ದಿವೆ.
ಖುದ್ದು ಸಿಎಂ ಸಿದ್ದರಾಮಯ್ಯ, ಇಲ್ಲವೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳ ಜಾರಿ ಕುರಿತು ಒಮ್ಮೆಯೂ ಸಭೆ ನಡೆಸಲಿಲ್ಲ. ಸಿಎಂ ಅವರೇ ಕೇಳದೇ ಇದ್ದಾಗ ನಮ್ಮದೇನೂ ಎಂದು ಅಧಿಕಾರಿಗಳು ಮೌನಕ್ಕೆ ಜಾರಿದರು. ಈ ಬಾರಿ ಬಜೆಟ್‌ನಲ್ಲಿ ತವರಿಗೆ ಸಿದ್ದರಾಮಯ್ಯ ಮತ್ತೇನು ಘೋಷಿಸುತ್ತಾರೆ ಎನ್ನುವ ಕುತೂಹಲವಂತೂ ಮೈಸೂರು ಭಾಗದ ಜನರಲ್ಲಿದೆ.
ಜಾರಿಯಾಗದ ಯೋಜನೆಗಳ ಪಟ್ಟಿ ಇಲ್ಲಿದೆ.
- ಮೈಸೂರು ಮಾತ್ರವಲ್ಲದೇ ಹೊರ ಭಾಗ, ರಾಜ್ಯದಿಂದಲೂ ಆಗಮಿಸುವ ಭಕ್ತರ ಆರಾಧ್ಯದೈವ ಚಾಮುಂಡೇಶ್ವರ ದೇಗುಲ ಅಭಿವೃದ್ದಿಗೆ ಪೂರಕವಾಗಿ ಪ್ರಾಧಿಕಾರ ರಚನೆ ಘೋಷಣೆಯಾದರೂ ಅದು ಹೇಗೆ ಕಾರ್ಯನಿರ್ವಹಿಸಲಿದೆ, ಕಾರ್ಯವ್ಯಾಪ್ತಿ ಏನು ಎನ್ನುವುದು ನಿಗದಿಯಾಗಲೇ ಇಲ್ಲ.
- ಮೈಸೂರು ಭಾಗದಲ್ಲೇ ಚಿತ್ರ ನಗರಿ ಆಗಬೇಕು ಎನ್ನುವುದು ದಶಕಗಳ ಬೇಡಿಕೆ.ಮೊದಲ ಬಾರಿಗೆ ಸಿಎಂ ಆಗಿದ್ದಾಗ ನಂಜನಗೂಡು ತಾಲ್ಲೂಕಿನ ಇಮ್ಮಾವು ಬಳಿ ಚಿತ್ರ ನಗರಿ ಸ್ಥಾಪಿಸುವ ಯೋಜನೆಯನ್ನು ಸಿದ್ದರಾಮಯ್ಯ ಅವರೇ ಘೋಷಿಸಿದ್ದರು. ಆನಂತರ ಬಂದ ಬಿಜೆಪಿ ಸರ್ಕಾರ ಇದನ್ನು ಬೆಂಗಳೂರಿಗೆ ಸ್ಥಳಾಂತರಿಸಿತ್ತು. ಎರಡನೇ ಬಾರಿಗೆ ಸಿಎಂ ಆದ ಸಿದ್ದರಾಮಯ್ಯ ಅವರು ತಾವು ಪ್ರತಿನಿಧಿಸುವ ವರುಣಾ ಕ್ಷೇತ್ರಕ್ಕೆ ಬರುವ ಇಮ್ಮಾವಿನಲ್ಲೇ ಇದನ್ನು ಪ್ರಕಟಿಸಿದ್ದರು, ಇದಕ್ಕೆ110 ಎಕರೆ ಭೂಮಿ ಗುರುತಿಸಿದ್ದರೂ ಅನುದಾನ ನಿಗದಿಪಡಿಸದೇ ಚಿತ್ರನಗರಿಯೂ ಬರೀ ಹೇಳಿಕೆಯಾಗಿಯೇ ಉಳಿದಿದೆ.
- ಮೈಸೂರಿನಲ್ಲಿ ಸೈಕ್ಲಿಂಗ್‌ಚಟುವಟಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸೈಕ್ಲಿಂಗ್ ವೇಲೋಡ್ರೋಮ್ ಸ್ಥಾಪನೆಗೆ ₹10 ಕೋಟಿ ಅನುದಾನ ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಇದು ಈವರೆಗೂ ಬರೀ ಘೋಷಣೆಯಾಗಿಯೇ ಉಳಿದುಕೊಂಡಿದೆ.
ಇದನ್ನೂ ಓದಿರಿ: ಮಾಘ ಮಾಸದಲ್ಲಿ ಪುಣ್ಯಸ್ನಾನ ಮಾಡುವಾಗ ಆಚರಿಸಬೇಕಾದ ಕ್ರಮಗಳೇನು, ಯಾವ ಶ್ಲೋಕ ಪಠಿಸಬೇಕು; ಇಲ್ಲಿದೆ ಮಾಹಿತಿ - ಮೈಸೂರಿಗೆ ಬರುವ ಅಂತರಾಷ್ಟ್ರೀಯ ಪ್ರವಾಸಿಗರನ್ನು ಗಮನದಲ್ಲಿರಿಸಿಕೊಂಡು ಅತ್ಯಾಧುನಿಕ ತಂತ್ರಜ್ಞಾನ ಆಧರಿತ ಕಲಾ ಗ್ಯಾಲರಿ ಹಾಗೂ ವಸ್ತು ಸಂಗ್ರಹಾಲಯಕ್ಕೆ ಘೋಷಣೆ ಮಾಡಲಾಗಿತ್ತು.
- ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದ ಬಳಿ ಎಆರ್ (ಆಗ್ಯೂಮೆಂಟೆಡ್ ರಿಯಾಲಿಟಿ) ಮತ್ತು ವಿಆರ್ (ವರ್ಚುವಲ್ ರಿಯಾಲಿಟಿ) ತಂತ್ರಜ್ಞಾನದೊಂದಿಗೆ ಅಂತರರಾಷ್ಟ್ರೀಯ ಗುಣಮಟ್ಟದ ‘ಕರ್ನಾಟಕ ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ’ ಬರಲಿದೆ ಎನ್ನುವುದನ್ನು ತಿಳಿಸಲಾಗಿತ್ತು. ಇದು ಕೂಡ ಯೋಜನೆಯ ಹಂತದಲ್ಲಿಯೇ ಹೊರತು ಏನೂ ಆಗಿಲ್ಲ.
- ಸರ್ವ ಋತು ವಸ್ತುಪ್ರದರ್ಶನವನ್ನು ಮೈಸೂರಿನಲ್ಲಿ ರೂಪಿಸುವ ಭಾಗವಾಘಿ ದಸರಾ ವಸ್ತುಪ್ರದರ್ಶನ ಆವರಣವನ್ನು ದೆಹಲಿಯ ಪ್ರಗತಿ ಮೈದಾನದ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದರು. ಈಗ ಇಲ್ಲಿ ಬಹುಯೋಜನೆಗೆ ಕೆಲ ದಿನಗಳ ಹಿಂದೆಯಷ್ಟೇ ಏಕತಾಮಾಲ್‌ಗೆ ಸಂಪುಟ ಅನುಮೋದನೆ ನೀಡಿದೆ. ಅದೂ ಇನ್ನೂ ಜಾರಿಯಾಗಬೇಕಿದೆ.
ಇದನ್ನೂ ಓದಿರಿ:ಶಿವಕಾರ್ತಿಕೇಯನ್ ಸಿನಿಮಾಕ್ಕೆ ಸಪ್ತ ಸಾಗರದಾಚೆ ಚೆಲುವೆ ರುಕ್ಮಿಣಿ ವಸಂತ್, ಪ್ರೀತಿಯ ಪಾರಿವಾಳ ಹಾರಿಹೋಯ್ತು ಅಂದ್ರು ನೆಟ್ಟಿಗರು - ಮೈಸೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭಕ್ಕೆ ಕ್ರಮ ವಹಿಸಲಾಗಿದೆ. ಸುಟ್ಟ ಗಾಯಗಳ ಘಟಕ ಸ್ಥಾಪನೆಗೆ ಅನುದಾನ ನೀಡುವ ಜತೆಗೆ ಟ್ರಾಮಾ ಕೇರ್ ಸೆಂಟರ್ ಕಾರ್ಯಾಚರಣೆಗೆ ಅನುದಾನ ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೂ ಅನುದಾನ ಮೀಸಲಾಗದೇ ಕಾಗದದಲ್ಲೇ ಉಳಿದುಕೊಂಡಿದೆ.
- ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಿದ್ವಾಯಿ ಮಾದರಿ ಕ್ಯಾನ್ಸರ್ ಘಟಕಕ್ಕೆ 20 ಕೋಟಿ ರೂ. ಮೀಸಲಿಡಲಾಗಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿತ್ತು. ಅನುದಾನವೂ ಬಿಡುಗಡೆಯಾಗದೇ ಆಸ್ಪತ್ರೆ ಕೆಲಸವೂ ಆಗಿಲ್ಲ.
- ಮೈಸೂರು ಭಾಗದಲ್ಲಿ ವನ್ಯಜೀವಿ ಹಾಗೂ ಮಾನವ ಸಂಘರ್ಷ ಹೆಚ್ಚಿದೆ. ಕಾಡಿನಿಂದ ಹೊರಬಂದ ಪ್ರಾಣಿಗಳನ್ನು ಆಗಾಗ ಸೆರೆ ಹಿಡಿಯಲಾಗುತ್ತದೆ. ಇದೇ ಕಾರಣದಿಂದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮೈಸೂರು ಹೊರ ವಲಯದ ಕೂರ್ಗಳ್ಳಿಯಲ್ಲಿರುವ ವನ್ಯಜೀವಿಗಳ ಪುನರ್ವಸತಿ ಕೇಂದ್ರದ ಬಲವರ್ಧನೆ ಮಾಡಲಾಗುವುದು ಎನ್ನುವುದನ್ನು ತಿಳಿಸಿದ್ದರು. ಅನುದಾನವೇನೂ ಇದಕ್ಕೆ ಮೀಸಲಾಗಿರಲಿಲ್ಲ. ಇದು ಈ ಬಾರಿ ಆಗಲೇ ಇಲ್ಲ.
- ಹೆಚ್ಚು ವಿಮಾನಗಳು ಬಾರದೇ ಸೀಮಿತ ಚಟುವಟಿಕೆಗೆ ಇಳಿದಿರುವ ಮೈಸೂರು ವಿಮಾನನಿಲ್ದಾಣದ ರನ್‌ವೇ ವಿಸ್ತರಣೆ ಮಾಡಲಾಗುವುದು ಎಂದು ಬಜೆಟ್ ಹೇಳಲಾಗಿತ್ತು. ಆದರೆ ಇದು ಕೂಡ ಇನ್ನೂ ಆಗಿಲ್ಲ. ವಿಮಾನ ನಿಲ್ದಾಣ ವಿಸ್ತರಣೆಗೆ ಹಿಂದಿನ ಯೋಜನೆಯಂತೆ ಬರೀ ಭೂಸ್ವಾಧೀನ ಚಟುವಟಿಕೆ ಮಾತ್ರ ನಡೆದಿದೆ.