Mysore News: ನಿಯಮದಂತೆಯೇ ವಿದ್ಯುತ್ ದರ ಏರಿಕೆ, ಎಲ್ಲ ಎಸ್ಕಾಂಗಳಿಂದಲೂ ಜಾರಿ: ಸ್ಪಷ್ಟನೆ ಕೊಟ್ಟ ಎಂಡಿ
Jun 09, 2023 01:45 PM IST
ಮೈಸೂರಿನ ಚೆಸ್ಕಾಂ ಕೆಇಆರ್‌ಸಿ ಆದೇಶದಂತೆಯೇ ವಿದ್ಯುತ್ ದರ ಏರಿಕೆ ಮಾಡಿರುವುದಾಗಿ ಹೇಳಿದೆ.
- ಮೊದಲೆಲ್ಲಾ ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ( ಕೆಇಆರ್‌ಸಿ) ವರ್ಷಕ್ಕೆ ಒಮ್ಮೆ ವಿದ್ಯುತ್ ದರ ಏರಿಕೆ ಆದೇಶ ನೀಡುತ್ತಿತ್ತು. ಕಳೆದ ಫೆಬ್ರವರಿಯಲ್ಲಿ ಕೆಇಆರ್‌ಸಿ ತನ್ನ ಆದೇಶಕ್ಕೆ ತಿದ್ದುಪಡಿ ಮಾಡಿ ವಿದ್ಯುತ್ ಹಾಗೂ ಇಂಧನ ದರವನ್ನು ಆಯಾ ಎಸ್ಕಾಂಗಳೇ ತೀರ್ಮಾನಿಸಬಹುದು. ಮೂರು ತಿಂಗಳಿಗೊಮ್ಮೆ ನಿರ್ಧರಿಸಿ ವೆಬ್‌ಸೈಟ್‌ನಲ್ಲಿ ಅಳವಡಿಸಿದರೆ ಸಾಕು ಎಂದು ಹೇಳಿದೆ.
ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿ( ಚೆಸ್ಕಾಂ) ವಿದ್ಯುತ್ ದರ ಏರಿಕೆ ಮಾಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದರೆ, ನಿಯಮದಂತೆಯೇ ದರ ಏರಿಕೆ ಮಾಡಲಾಗಿದೆ ಎಂದು ಕಂಪೆನಿ ಸ್ಪಷ್ಟನೆ ನೀಡಿದೆ.
ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್ ಅವರು ನಿಯಮ ಬಾಹಿರವಾಗಿ ದರ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಇದಕ್ಕೆ ಚೆಸ್ಕಾಂನ ವಾಣಿಜ್ಯ ಪ್ರಧಾನ ವ್ಯವಸ್ಥಾಪಕರು ಸ್ಪಷ್ಟನೆ ನೀಡಿದ್ದಾರೆ.
ಮೊದಲೆಲ್ಲಾ ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ( ಕೆಇಆರ್‌ಸಿ) ವರ್ಷಕ್ಕೆ ಒಮ್ಮೆ ವಿದ್ಯುತ್ ದರ ಏರಿಕೆ ಆದೇಶ ನೀಡುತ್ತಿತ್ತು. ಆದರೆ ಕಳೆದ ಫೆಬ್ರವರಿಯಲ್ಲಿ ಕೆಇಆರ್‌ಸಿ ತನ್ನ ಆದೇಶಕ್ಕೆ ತಿದ್ದುಪಡಿ ಮಾಡಿ ವಿದ್ಯುತ್ ಹಾಗೂ ಇಂಧನ ದರವನ್ನು ಆಯಾ ಎಸ್ಕಾಂಗಳೇ ತೀರ್ಮಾನಿಸಬಹುದು. ಮೂರು ತಿಂಗಳಿಗೊಮ್ಮೆ ನಿರ್ಧರಿಸಿ ವೆಬ್‌ಸೈಟ್‌ನಲ್ಲಿ ಅಳವಡಿಸಿದರೆ ಸಾಕು ಎಂದು ಹೇಳಿದೆ.
ಈ ಬದಲಾವಣೆ ಪ್ರಕಾರ ಈ ವರ್ಷದ ಜನವರಿಯಿಂದ ಏಪ್ರಿಲ್‌ವರೆಗೆ ಹೊಸ ದರ ಸಂಗ್ರಹಿಸಲು ಸೂಚಿಸಲಾಗಿದೆ. ಅದನ್ನು ಜೂನ್ ತಿಂಗಳಿನ ಬಿಲ್‌ನಲ್ಲಿ ತೋರಿಸಲಾಗಿದೆ. ನಾವು ಈ ಸಂಬಂಧ ಮಾಹಿತಿಯನ್ನು ಚೆಸ್ಕಾಂ ವೆಬ್‌ಸೈಟ್‌ನಲ್ಲೂ ಪ್ರಕಟಿಸಿದ್ದೇವೆ. ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ವಿವರಣೆ ನೀಡಿದ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ, ಕೆಆರ್‌ಇಸಿ ಈಗಾಗಲೇ ದರ ನಿರ್ಧಾರದ ಆದೇಶವನ್ನು ಪರಿಷ್ಕರಿಸಿದೆ. ಅದರನ್ವಯವೇ ನಾವು ಆದೇಶ ಜಾರಿ ಮಾಡಿದ್ದೇವೆ. ಎಲ್ಲಾ ನಿಯಮ, ಮಾನದಂಡಗಳನ್ನು ಪಾಲಿಸಿದ್ದೇವೆ. ಕಲಬುರಗಿ, ಹುಬ್ಬಳ್ಳಿ, ಬೆಂಗಳೂರು, ಮಂಗಳೂರು ವಿದ್ಯುತ್ ಕಂಪೆನಿಗಳು ದರ ಏರಿಕೆ ಮಾಡಿವೆ. ಅದರಂತೆ ಯೂನಿಟ್‌ಗೆ ನಾವು ಪ್ರತಿ ಯೂನಿಟ್‌ಗೆ 2.42 ರೂ. ಹೆಚ್ಚಳ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ..
ವಿಭಾಗ