logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysuru Dasara2023 : ಭಾವನಾ ಬರೀ ನಟಿಯಲ್ಲ ನೃತ್ಯಪಟುವೂ ಹೌದು: ಮೈಸೂರು ದಸರಾದಲ್ಲಿ ಹೀಗಿತ್ತು ಭಾವನಾ ನೃತ್ಯ ವೈಭವ

Mysuru Dasara2023 : ಭಾವನಾ ಬರೀ ನಟಿಯಲ್ಲ ನೃತ್ಯಪಟುವೂ ಹೌದು: ಮೈಸೂರು ದಸರಾದಲ್ಲಿ ಹೀಗಿತ್ತು ಭಾವನಾ ನೃತ್ಯ ವೈಭವ

Oct 16, 2023 09:27 AM IST

ಕನ್ನಡ ಚಿತ್ರರಂಗದಲ್ಲಿ ಚಂದ್ರಮುಖಿಯಾಗಿ ಗಮನಸೆಳೆದ ನಟಿ, ರಾಜಕಾರಣಿ ಭಾವನಾ ರಾಮಣ್ಣ( Bhavana Ramanna) ಬಹುಮುಖ ಪ್ರತಿಭೆ. ಮೈಸೂರು ದಸರಾ( Mysuru Dasara)ದ ಭವ್ಯ ಅರಮನೆ ವೇದಿಕೆಯಲ್ಲಿ ಭಾವನಾ ಹಾಗೂ ಅವರ ತಂಡದ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ದಸರಾ ಹಿನ್ನೆಲೆಯ ಕಥಾನಕದೊಂದಿಗೆ ನೃತ್ಯರೂಪಕ ಪ್ರದರ್ಶಿಸಿ ಜನಮನಗೆದ್ದರು ಭಾವನಾ. ಹೀಗಿತ್ತು ಈ ನೃತ್ಯ ಝಲಕ್‌..

  • ಕನ್ನಡ ಚಿತ್ರರಂಗದಲ್ಲಿ ಚಂದ್ರಮುಖಿಯಾಗಿ ಗಮನಸೆಳೆದ ನಟಿ, ರಾಜಕಾರಣಿ ಭಾವನಾ ರಾಮಣ್ಣ( Bhavana Ramanna) ಬಹುಮುಖ ಪ್ರತಿಭೆ. ಮೈಸೂರು ದಸರಾ( Mysuru Dasara)ದ ಭವ್ಯ ಅರಮನೆ ವೇದಿಕೆಯಲ್ಲಿ ಭಾವನಾ ಹಾಗೂ ಅವರ ತಂಡದ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ದಸರಾ ಹಿನ್ನೆಲೆಯ ಕಥಾನಕದೊಂದಿಗೆ ನೃತ್ಯರೂಪಕ ಪ್ರದರ್ಶಿಸಿ ಜನಮನಗೆದ್ದರು ಭಾವನಾ. ಹೀಗಿತ್ತು ಈ ನೃತ್ಯ ಝಲಕ್‌..
ಮೈಸೂರು ದಸರಾದ ಪ್ರತಿಷ್ಠಿತ ಅರಮನೆ ವೇದಿಕೆಯಲ್ಲಿ ಭಾನುವಾರ ಸಂಜೆ ತಮ್ಮ ತಂಡದೊಂದಿಗೆ ಚಾಮುಂಡೇಶ್ವರಿ, ಮಹಿಷ ಮರ್ದಿನಿ, ಸಿಂಹ ವಾಹಿನಿ ನೃತ್ಯರೂಪಕ ಆರಂಭಿಸಿದ ನಟಿ ಭಾವನಾ ರಾಮಣ್ಣ ಹಾಗೂ ಅವರ ತಂಡ
(1 / 7)

ನಟಿಯಾಗಿ ಜನಪ್ರಿಯವಾಗಿರುವ ಭಾವನಾ ಅವರು ನೃತ್ಯಪಟುವಾಗಿಯೂ ಸೈ ಎನ್ನಿಸಿಕೊಂಡ ಕ್ಷಣವಿದು. ಈಗಾಗಲೇ ಹಲವು ನೃತ್ಯ ರೂಪಕ ಪ್ರದರ್ಶಿಸಿರುವ ಭಾವನಾ ಮೈಸೂರು ದಸರಾದಲ್ಲಿ ಚಾಮುಂಡೇಶ್ವರಿಯಾಗಿ ಕಂಡಿದ್ದು ಹೀಗೆ.
(2 / 7)

ಸಿಂಹವಾಹಿನಿಯಾಗಿ ನಟಿ ಭಾವನಾ ಮೈಸೂರು ದಸರಾ ಅರಮನೆಯ ಸಾಂಸ್ಕೃತಿಕ ವೇದಿಕೆಯ ನೃತ್ಯರೂಪಕದಲ್ಲಿ ಕಾಣಿಸಿಕೊಂಡರು.
(3 / 7)

ಭಾವನಾ ಅವರು ಒಂದು ಗಂಟೆಗೂ ಹೆಚ್ಚು ಕಾಲ ಚಾಮುಂಡೇಶ್ವರಿಯ ವಿವಿಧ ಅವತಾರಗಳನ್ನು ನೃತ್ಯರೂಪದಲ್ಲಿ ಪ್ರದರ್ಶಿಸಿದರು.
(4 / 7)

ಚಾಮುಂಡೇಶ್ವರಿ ಮಹಿಷ ಮರ್ದಿನಿ ನೃತ್ಯರೂಪಕದ ಮುಖ್ಯಭಾಗವೇ ಆದ ಮಹಿಷನೊಂದಿಗೆ ಕಾಳಗದ ಸನ್ನಿವೇಶ. ಈ ಅಭಿನಯ ಭಾವನಾ ಅವರ ನೃತ್ಯ ಪ್ರತಿಭೆಯ ಪ್ರತೀಕದಂತೆಯೇ ಇತ್ತು,
(5 / 7)

ಚಾಮುಂಡೇಶ್ವರಿ ಮೇಲೆ ದಾಳಿ ಮಾಡಲು ಬಂದ ಮಹಿಷಾಸುರ ಹಾಗು ಅವರ ಪಡೆಯನ್ನು ನಿಗ್ರಹಿಸಿ ಗೆದ್ಧಾಗ
(6 / 7)

ಚಾಮುಂಡೇಶ್ವರಿ ಮಹಿಷ ಮರ್ದನ ನೃತ್ಯರೂಪಕದಲ್ಲಿ ಕೊನೆಗೆ ರಕ್ಕಸರನ್ನು ಮೆಟ್ಟಿ ನಿಂತ  ಕೊನೆಯ ಕ್ಷಣ. ಇಡೀ ನೃತ್ಯ ರೂಪದ ಈ ಸನ್ನಿವೇಶ ಭಕ್ತಿ ಭಾವ ತುಂಬಿತು.
(7 / 7)

    ಹಂಚಿಕೊಳ್ಳಲು ಲೇಖನಗಳು