logo
ಕನ್ನಡ ಸುದ್ದಿ  /  ಕರ್ನಾಟಕ  /  Dasara 2023: ಮೈಸೂರು ದಸರಾದಲ್ಲಿ ಏರ್‌ಶೋ ಆಯೋಜನೆ: ಕೇಂದ್ರ ರಕ್ಷಣಾ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಮನವಿ

Dasara 2023: ಮೈಸೂರು ದಸರಾದಲ್ಲಿ ಏರ್‌ಶೋ ಆಯೋಜನೆ: ಕೇಂದ್ರ ರಕ್ಷಣಾ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಮನವಿ

HT Kannada Desk HT Kannada

Aug 03, 2023 01:25 PM IST

google News

ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಮೈಸೂರು ದಸರಾದಲ್ಲಿ ಏರ್‌ ಶೋಗೆ ಅನುಮತಿ ನೀಡುವಂತೆ ಕೋರಿದರು

    • Mysuru Dasara 2023 ಈಗಾಗಲೇ ಮೈಸೂರು ದಸರಾ2023 ಕ್ಕೆ ಸಿದ್ದತೆಗಳು ಶುರುವಾಗಿದೆ. ಗುರುವಾರ ದೆಹಲಿಯಲ್ಲಿದ್ದ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ರಾಜನಾಥಸಿಂಗ್‌ ಅವರನ್ನು ಭೇಟಿ ಮಾಡಿ ದಸರಾ ಏರ್‌ಶೋಗೆ ಅನುಮತಿ ನೀಡಲು ನಿರ್ದೇಶನ ನೀಡುವಂತೆ ಕೋರಿದರು.
ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಮೈಸೂರು ದಸರಾದಲ್ಲಿ ಏರ್‌ ಶೋಗೆ ಅನುಮತಿ ನೀಡುವಂತೆ ಕೋರಿದರು
ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಮೈಸೂರು ದಸರಾದಲ್ಲಿ ಏರ್‌ ಶೋಗೆ ಅನುಮತಿ ನೀಡುವಂತೆ ಕೋರಿದರು

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜನರನ್ನು ಆಕರ್ಷಿಸುವ ಏರ್‌ ಶೋ ಆಯೋಜನೆಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿದ್ದರು. ನಾಡಹಬ್ಬದಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕದ ಪರವಾಗಿ ಆಹ್ವಾನ ನೀಡಿದ ಸಿದ್ದರಾಮಯ್ಯ ಅವರು ಏರ್‌ಶೋ ಆಯೋಜನೆಗೂ ಅನುಮತಿ ನೀಡುವಂತೆ ಮನವಿ ಮಾಡಿದರು.

ಈ ಬಾರಿಯ ದಸರಾ ಮಹೋತ್ಸವವನ್ನು ಅಕ್ಟೋಬರ್‌ 15 ರಿಂದ 24 ರವರೆಗ ವಿಜೃಂಭಣೆಯಿಂದ ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಈ ಕುರಿತು ನಡೆಸಲಾಗಿರುವ ಕರ್ನಾಟಕ ಸರ್ಕಾರದ ಉನ್ನತ ಮಟ್ಟದ ಸಮಿತಿ ಸಭೆಯೂ ನಡೆದಿದೆ. ದಸರಾದಲ್ಲಿ ಏರ್‌ಶೋ ಆಚರಿಸುವ ಸಂಬಂಧ ಉನ್ನತ ಮಟ್ಟದ ಸಭೆಯಲ್ಲಿ ಬಹುತೇಕ ಸಚಿವರು, ಪ್ರಮುಖರು ಸಲಹೆ ನೀಡಿದ್ದಾರೆ. ಇದಕ್ಕೆ ಅನುಮತಿ ನೀಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹಿಂದಿನ ಹಲವು ವರ್ಷಗಳಲ್ಲಿ ದಸರಾದ ಭಾಗವಾಗಿ ಏರ್‌ಶೋ ಕೂಡ ಇದ್ದು, ಸಹಸ್ರಾರು ಮಂದಿ ಇದನ್ನು ವೀಕ್ಷಿಸಲು ಬರುತ್ತಾರೆ. ಮೈಸೂರಿನ ಬನ್ನಿಮಂಟಪದಲ್ಲಿರುವ ಕವಾಯತು ಮೈದಾನದಲ್ಲಿ ಏರ್‌ ಶೋ ಆಯೋಜಿಸುತ್ತಾ ಬರುತ್ತಿರುವುದು ಸಹಸ್ರಾರು ಪ್ರವಾಸಿಗರನ್ನೂ ಆಕರ್ಷಿಸಿದೆ. ಭಾರತೀಯ ಸೇನೆಯು 2017 ಹಾಗೂ 2019 ನೇ ಸಾಲಿನ ದಸರಾದಲ್ಲಿ ಏರ್‌ ಶೋ ಆಯೋಜಿಸಲಾಗಿದ್ದು ಗಮನ ಸೆಳೆದಿತ್ತು ಎಂದು ಹೇಳಿದ್ದಾರೆ.

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದಸರಾ 2023ರಲ್ಲಿ ಏರ್‌ಶೋ ಆಯೋಜನೆಗೆ ಅನುಮತಿ ನೀಡುವಂತೆ ತಾವು ನಿರ್ದೇಶನ ನೀಡಬೇಕು. ನಿಮ್ಮ ಸೂಕ್ತ ನಿರ್ದೇಶನಿಂದ ದಸರಾದಲ್ಲಿ ಏರ್‌ ಶೋ ಆಯೋಜನೆಗೊಂಡು ದಸರಾ ಮತ್ತಷ್ಟು ಆಕರ್ಷಕವಾಗಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎರಡು ದಶಕದಿಂದ ಏರ್‌ ಶೋ

ಮೈಸೂರಿನಲ್ಲಿ ಎರಡು ದಶಕಗಳ ಹಿಂದೆ ಎಚ್‌.ವಿಶ್ವನಾಥ್‌ ಅವರು ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿಯಾಗಿದ್ದ ದಸರಾ ವಿಶೇಷಾಧಿಕಾರಿ ಜಿ.ಕುಮಾರನಾಯಕ್‌ ಅವರ ಕಾಲದಲ್ಲಿ ಮೊದಲ ಬಾರಿಗೆ ಏರ್‌ ಶೋ ಆಯೋಜಿಸಲಾಗಿತ್ತು.

ಬಗೆಬಗೆಯ ಯುದ್ದ ವಿಮಾನಗಳು ಆಗಸದಲ್ಲಿ ಹಾರಾಡಿ ದಸರಾಗೆ ಆಗಮಿಸುವ ಪ್ರವಾಸಿಗರನ್ನು ಆಕರ್ಷಿಸಿದ್ದವು. ಮೊದಲೆಲ್ಲಾ ಎರಡು ದಿನ ಏರ್‌ ಶೋ ಆಯೋಜಿಸಿ ಒಂದೇ ದಿನ ಗದ್ದಲ ಆಗುವುದನ್ನು ತಪ್ಪಿಸಲಾಗುತ್ತಿತ್ತು. ಕೆಲವು ವರ್ಷ ತಾಂತ್ರಿಕ ಕಾರಣದಿಂದ ಏರ್‌ ಶೋ ರದ್ದುಪಡಿಸಲಾಗಿತ್ತು.

ನಾಲ್ಕು ವರ್ಷದ ಹಿಂದೆ ಏರ್‌ ಶೋ ನಡೆದಿತ್ತು. ಬಳಿಕ ಕೋವಿಡ್‌ ಕಾರಣದಿಂದ ಮೂರು ವರ್ಷವೂ ದಸರಾವನ್ನೇ ಸರಳವಾಗಿ ಆಚರಿಸಿದ್ದರಿಂದ ಏರ್‌ ಶೋ ಇರಲಿಲ್ಲ. ಈ ಬಾರಿ ಮತ್ತೆ ಏರ್‌ ಶೋ ನಡೆಸಲು ಕರ್ನಾಟಕ ಸರ್ಕಾರವೂ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಭಾರತೀಯ ಸೇನೆಯೂ ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆಯಿದೆ. ಇದರಿಂದ ಈ ದಸರಾದಲ್ಲಿ ಏರ್‌ಶೋ ವಿಶೇಷ ಆಕರ್ಷಣೆಯಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ