logo
ಕನ್ನಡ ಸುದ್ದಿ  /  ಕರ್ನಾಟಕ  /  Kerala News: ಆಫ್ರಿಕನ್ ಹಂದಿ ಜ್ವರ ಆತಂಕ: ಕರ್ನಾಟಕ ಕೇರಳ ಗಡಿಯಲ್ಲಿ ಕಟ್ಟೆಚ್ಚರ

Kerala News: ಆಫ್ರಿಕನ್ ಹಂದಿ ಜ್ವರ ಆತಂಕ: ಕರ್ನಾಟಕ ಕೇರಳ ಗಡಿಯಲ್ಲಿ ಕಟ್ಟೆಚ್ಚರ

HT Kannada Desk HT Kannada

Aug 22, 2023 06:23 PM IST

google News

ಹಂದಿಜ್ವರದ ಹಿನ್ನೆಲೆಯಲ್ಲಿ ಮೈಸೂರಿನಿಂದ ಕೇರಳಕ್ಕೆ ಹೋಗುವ ಚೆಕ್‌ಪೋಸ್ಟ್‌ ನಲ್ಲಿ ತಪಾಸಣೆ ಚುರುಕುಗೊಂಡಿದೆ.

    • Kerala Swine influenza ಕೇರಳದಲ್ಲಿ ಹಂದಿಜ್ವರ ಕಂಡು ಬಂದಿರುವುದರಿಂದ ಕರ್ನಾಟಕದ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. 
ಹಂದಿಜ್ವರದ ಹಿನ್ನೆಲೆಯಲ್ಲಿ ಮೈಸೂರಿನಿಂದ ಕೇರಳಕ್ಕೆ ಹೋಗುವ ಚೆಕ್‌ಪೋಸ್ಟ್‌ ನಲ್ಲಿ ತಪಾಸಣೆ ಚುರುಕುಗೊಂಡಿದೆ.
ಹಂದಿಜ್ವರದ ಹಿನ್ನೆಲೆಯಲ್ಲಿ ಮೈಸೂರಿನಿಂದ ಕೇರಳಕ್ಕೆ ಹೋಗುವ ಚೆಕ್‌ಪೋಸ್ಟ್‌ ನಲ್ಲಿ ತಪಾಸಣೆ ಚುರುಕುಗೊಂಡಿದೆ.

ಮೈಸೂರು: ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾದ ಹಿನ್ನಲೆ ಇದೀಗ ಕರ್ನಾಟಕ ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರು, ಕೊಡಗು ಹಾಗು ಚಾಮರಾಜನಗರ ಜಿಲ್ಲೆಯನ್ನು ಕೇರಳ ಗಡಿ ಹಂಚಿಕೊಂಡಿದ್ದು, ಇಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ.

ಇದು ಹಂದಿಗಳಲ್ಲಿ ಕಾಣಿಸಿಕೊಳ್ಳುವ ರೋಗವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೇರಳದಿಂದ ರಾಜ್ಯಕ್ಕೆ ಪ್ರಾಣಿಗಳ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ.

ಜೊತೆಗೆ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್​ನಲ್ಲಿ ವಿಶೇಷ ತಂಡ ರಚನೆ ಮಾಡಿ, ತಪಾಸಣೆ ಮಾಡಲಾಗುತ್ತಿದೆ.

ಸ್ಥಳಕ್ಕೆ ಹೆಚ್.ಡಿ ಕೋಟೆ ತಹಶೀಲ್ದಾರ್ ಸಣ್ಣ ರಾಮಪ್ಪ, ತಾಲೂಕು ಆರೋಗ್ಯಧಿಕಾರಿ ರವಿಕುಮಾರ್ ಹಾಗೂ ಪಶು ಇಲಾಖೆ ನಿರ್ದೇಶಕ ಪ್ರಸನ್ನ ಅವರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೇರಳದಲ್ಲಿ ರೋಗಪೀಡಿತ ಹಂದಿಗಳನ್ನು ಎರಡು ಫಾರ್ಮ್‌ಗಳಲ್ಲಿ ಕೊಲ್ಲಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು.

ಆ.19 ರಂದು ಕೇರಳದ ಕನಿಚಾರ್ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ಏಕಾಏಕಿ ವರದಿಯಾಗಿದ್ದು, ಈ ಬಗ್ಗೆ ಜಿಲ್ಲಾ ಪಶುಸಂಗೋಪನೆ ಅಧಿಕಾರಿಗಳು ದೃಢಪಟ್ಟಿಸಿದ್ದರು. ನಂತರ, ಜಿಲ್ಲಾಧಿಕಾರಿಗಳು ಮಲೆಯಂಪಾಡಿಯಲ್ಲಿರುವ ಮತ್ತು 10 ಕಿಮೀ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ಕೊಲ್ಲಲು ಆದೇಶ ನೀಡಿದ್ದು, ಅದನ್ನು ಶಿಷ್ಟಾಚಾರದ ಪ್ರಕಾರ ಶವಗಳನ್ನು ಹೂಳಲು ಹೇಳಿದ್ದರು.

ಹಂದಿ ಮಾಂಸದ ವಿತರಣೆ, ಮಾರಾಟ ಮತ್ತು ಸಾಗಣೆಯನ್ನು ಮೂರು ತಿಂಗಳವರೆಗೆ ನಿಷೇಧ ಮಾಡಿ ಆದೇಶಿಸಲಾಗಿದೆ.

ಹಂದಿ ಸಾಕಾಣಿಕೆ ಕೇಂದ್ರದ ಸುತ್ತಲಿನ ಒಂದು ಕಿ.ಮೀ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಘೋಷಿಸಲಾಗಿದ್ದು, ಮತ್ತು 10 ಕಿಮೀ ವ್ಯಾಪ್ತಿಯನ್ನು ರೋಗ ಕಣ್ಗಾವಲು ವಲಯ ಎಂದು ಅಧಿಕೃತ ಮೂಲಗಳು ತಿಳಿಸಿತ್ತು. ಈ ಪ್ರದೇಶದಲ್ಲಿ ಹಂದಿ ಮಾಂಸದ ವಿತರಣೆ ಮತ್ತು ಮಾರಾಟ, ಸಾಗಣೆಯನ್ನು ಮೂರು ತಿಂಗಳವರೆಗೆ ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ