Mysuru News: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿ ವ್ಯರ್ಥವಾಗಿರುವ ಮಾರುಕಟ್ಟೆ
Jul 12, 2023 04:46 PM IST
ಪಾಳುಬಿದ್ದಿರುವ ತಿ.ನರಸೀಪುರದ ತರಕಾರಿ ಮಾರುಕಟ್ಟೆ
- T Narasipura Vegetable Market: ತರಕಾರಿ ವ್ಯಾಪಾರಿಗಳಿಗೆಂದೇ ನಿರ್ಮಾಣ ಮಾಡಲಾದ 52 ಮಳಿಗೆಗಳು ಒಂಒತ್ತು ವರ್ಷದಿಂದ ಪಾಳುಬಿದ್ದು, ಪುರಸಭೆಗೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ.
ಮೈಸೂರು–ತಿ.ನರಸೀಪುರ: ಜೂಜು, ವಾಹನ ನಿಲುಗಡೆ ಸ್ಥಳ, ರಾತ್ರಿ ಅಕ್ರಮ ಚಟುವಟಿಕೆ, ಎಲ್ಲೆಲ್ಲೂ ಪುಂಡ ಪೋಕರಿಗಳ ಹಾವಳಿ. ಇದು ತಿ.ನರಸೀಪುರ ಪಟ್ಟಣದ ಹೃದಯಭಾಗದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಪುರಸಭೆ ವತಿಯಿಂದ ನಿರ್ಮಾಣ ಮಾಡಲಾಗಿರುವ ಎಸ್‌ಎಫ್‌ಸಿ ತರಕಾರಿ ಮಾರುಕಟ್ಟೆ ಮಳಿಗೆಗಳ ಶೋಚನೀಯ ಸ್ಥಿತಿ. ತರಕಾರಿ ವ್ಯಾಪಾರಿಗಳಿಗೆಂದೇ ನಿರ್ಮಾಣ ಮಾಡಲಾದ 52 ಮಳಿಗೆಗಳು ಒಂಒತ್ತು ವರ್ಷದಿಂದ ಪಾಳುಬಿದ್ದು, ಪುರಸಭೆಗೆ ಕೋಟ್ಯಂತರ ರೂ. ನಷ್ಟವಾಗಲಿದೆ.
ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣ ಮಾಡಲಾದ ಕಟ್ಟಡಗಳಿಂದ ಯಾವುದೇ ಲಾಭ ಇಲ್ಲದಂತಾಗಿದೆ. ಅಲ್ಲದೇ ಅಲ್ಲಿನ ಅವ್ಯವಸ್ಥೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಪಾಳುಬಿದ್ದ ಮಳಿಗೆಗಳಲ್ಲಿಜೂಜು ಆಟವಾಡುವವರ ಸಂಖ್ಯೆ ಹೆಚ್ಚಾಗಿದೆ. ಜತೆಗೆ ವಾಹನಗಳನ್ನು ನಿಲುಗಡೆ ಸ್ಥಳ ಮಾಡಿಕೊಂಡಿದ್ದಾರೆ. ಇಲ್ಲಿತರಕಾರಿ ವ್ಯಾಪಾರಸ್ಥರು ರಸ್ತೆಗಳಲ್ಲಿಎಲ್ಲೆಂದರಲ್ಲಿಗಾಡಿಗಳಲ್ಲಿವ್ಯಾಪಾರ ಮಾಡುತ್ತಿದ್ದಾರೆ.
ಮಳಿಗೆಗಳು ಪಾಳು ಬಿದ್ದಿರುವುದರಿಂದ ಅಕ್ಕಪಕ್ಕದ ಕಸವೆಲ್ಲಾಇಲ್ಲೆಬಂದು ಬೀಳುತ್ತಿದ್ದು, ಸುತ್ತ ದುರ್ವಾಸನೆ ಬೀರುತ್ತಿದೆ. ಪಕ್ಕದಲ್ಲೇ ಮಾಂಸದ ಅಂಗಡಿಗಳು ಇರುವುದರಿಂದ ಸಾರ್ವಜನಿಕರಿಗೂ ಕಿರಿಕಿರಿ. ನೂತನ ತರಕಾರಿ ಮಾರುಕಟ್ಟೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಮೂಲ ಸೌಕರ್ಯಗಳಿಲ್ಲದೇ ಸ್ಥಳಾಂತರವಾಗಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಕಟ್ಟಡ ಮಳೆಗಾಲದಲ್ಲಿನೀರಿನಿಂದ ತೇವಾಂಶಗೊಳ್ಳುತ್ತದೆ.
ತರಕಾರಿ ವ್ಯಾಪಾರಸ್ಥರು ಮಳಿಗೆಗಳು ಸಮರ್ಪಕವಾಗಿಲ್ಲ. ನಾವು ಒಳಗೆ ಹೋಗುವುದಿಲ್ಲಎನ್ನುತ್ತಿದ್ದಾರೆ. ಸರಕಾರ 2013-14ನೇ ಸಾಲಿನ ಎಸ್‌ಎಫ್‌ಸಿ ಯೋಜನೆಯಲ್ಲಿ1.36 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಂಬತ್ತು ವರ್ಷಗಳು ಕಳೆದರೂ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸದೆ ಇರುವುದರಿಂದ ಸರಕಾರದ ಹಣ ಪೋಲಾಗುತ್ತಿದೆ.