Navika World Kannada Summit 2023: 7ನೇ ನಾವಿಕ ವಿಶ್ವ ಕನ್ನಡ ಸಮಾವೇಶ- ಸೆ.1ರಿಂದ 3
Jan 29, 2023 05:29 PM IST
ಏಳನೇ ನಾವಿಕ ವಿಶ್ವ ಕನ್ನಡ ಸಮಾವೇಶ 2023
Navika World Kannada Summit 2023: ನ್ಯೂಯಾರ್ಕ್‌ನಿಂದ ಬೆಂಕಿ ಬಸಣ್ಣ ಅವರು HT ಕನ್ನಡಕ್ಕೆ ನೀಡಿದ ಮಾಹಿತಿ ಪ್ರಕಾರ, ಟೆಕ್ಸಾಸ್ ರಾಜ್ಯದ ರಾಜಧಾನಿ ಆಸ್ಟಿನ್ ನಗರ ಏಳನೇ ನಾವಿಕ ವಿಶ್ವ ಕನ್ನಡ ಸಮಾವೇಶದ ಆತಿಥ್ಯವಹಿಸಲು ಸಜ್ಜಾಗುತ್ತಿದೆ. ಸಮಾವೇಶವು ಸೆಪ್ಟೆಂಬರ್ 1ರಿಂದ 3ರ ತನಕ ನಡೆಯಲಿದೆ ಎಂದು ನಾವಿಕ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ರಾವ್ ಪ್ರಕಟಿಸಿದರು.
ನ್ಯೂಯಾರ್ಕ್: ಅಮೆರಿಕದ ದೇಶದ ಟೆಕ್ಸಾಸ್ ರಾಜ್ಯದ ಆಸ್ಟಿನ್‌ನಲ್ಲಿ ಸೆಪ್ಟೆಂಬರ್ 1ರಿಂದ ಸೆಪ್ಟೆಂಬರ್ 3 ರ ತನಕ ಏಳನೇ ನಾವಿಕ ವಿಶ್ವ ಕನ್ನಡ ಸಮಾವೇಶ ನಡೆಯಲಿದೆ.
ನ್ಯೂಯಾರ್ಕ್‌ನಿಂದ ಬೆಂಕಿ ಬಸಣ್ಣ ಅವರು HT ಕನ್ನಡಕ್ಕೆ ನೀಡಿದ ಮಾಹಿತಿ ಪ್ರಕಾರ, ಟೆಕ್ಸಾಸ್ ರಾಜ್ಯದ ರಾಜಧಾನಿ ಆಸ್ಟಿನ್ ನಗರ ಏಳನೇ ನಾವಿಕ ವಿಶ್ವ ಕನ್ನಡ ಸಮಾವೇಶದ ಆತಿಥ್ಯವಹಿಸಲು ಸಜ್ಜಾಗುತ್ತಿದೆ. ಸಮಾವೇಶವು ಸೆಪ್ಟೆಂಬರ್ 1ರಿಂದ ಸೆಪ್ಟೆಂಬರ್ 3ರ ತನಕ ನಡೆಯಲಿದೆ ಎಂದು ನಾವಿಕ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ರಾವ್ ಪ್ರಕಟಿಸಿದರು.
ನಾವಿಕ ವಿಶ್ವ ಕನ್ನಡ ಸಮಾವೇಶವನ್ನು ನಾವಿಕ ಸಂಸ್ಥೆಯು ʻಆಸ್ಟಿನ್ ಕನ್ನಡ ಸಂಘʼದ ಸಹಯೋಗದೊಂದಿಗೆ ಆಯೋಜಿಸುತ್ತಿದೆ. ಈ ಸಮಾವೇಶದಲ್ಲಿ ಬಿಸಿನೆಸ್ ಫೋರಮ್, ವುಮೆನ್ಸ್ ಫೋರಮ್, ಕವಿ ಗೋಷ್ಠಿ , ಯೂಥ್ ಫೋರಮ್, ಸಾಹಿತ್ಯ ಗೋಷ್ಠಿ ಹೀಗೆ ಅನೇಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಸತತವಾಗಿ ನಡೆಯಲಿವೆ. ಈ ಸಮಾವೇಶದಲ್ಲಿ ಅನಿವಾಸಿ ಕನ್ನಡಿಗರಲ್ಲದೆ ಕರ್ನಾಟಕದ ಖ್ಯಾತನಾಮ ಕಲಾವಿದರಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ವಿವರಿಸಿದರು.
ಆಸ್ಟಿನ್ ಕನ್ನಡ ಸಂಘದ ಅಧ್ಯಕ್ಷ ಸದಾಶಿವ ಕಲ್ಲೂರ್, " ಈ ರೀತಿ ಬೃಹತ್ ವಿಶ್ವ ಕನ್ನಡ ಸಮ್ಮೇಳನದ ಆಯೋಜನೆಯಲ್ಲಿ ಸಹಭಾಗಿತ್ವ ವಹಿಸುವುದು ನಮಗೆ ಒದಗಿ ಬಂದ ಸುವರ್ಣಾವಕಾಶ. ಆಸ್ಟಿನ್ ನಗರದ ಕನ್ನಡಿಗರು ಅತಿ ಉತ್ಸಾಹದೊಂದಿಗೆ ಈ ಸಮಾವೇಶವನ್ನು ಆಯೋಜಿಸುವ ನಿರೀಕ್ಷೆಹೊಂದಿದ್ದಾರೆ. ಜತೆಗೆ ನಮ್ಮ ಪಕ್ಕದ ಡಲ್ಲಾಸ್ ಮತ್ತು ಹೂಸ್ಟನ್ ನಗರಗಳ ಕನ್ನಡಿಗರು ಸಹ ಉತ್ಸಾಹದಿಂದ ಸಕ್ರಿಯವಾಗಿ ಭಾಗವಹಿಸಲಿದ್ದಾರೆ." ಎಂದು ತಿಳಿಸಿದರು.
ನಾವಿಕ ಸಂಸ್ಥೆಯು ಮಾತೃಭೂಮಿ ಕರ್ನಾಟಕ ಜನತೆಗೆ, ವಿದ್ಯಾರ್ಥಿಗಳಿಗೆ ಕೋವಿಡ್ ಸಮಯದಲ್ಲಿ, ಪ್ರವಾಹ ವಿಕೋಪ , ನೈಸರ್ಗಿಕ ವಿಕೋಪ ಮುಂತಾದ ಸಂದರ್ಭಗಳಲ್ಲಿ ಸಹಾಯ ಮಾಡುತ್ತಲೇ ಬಂದಿದೆ. ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ತಮ್ಮ ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗುವ ಅನೇಕ ಪ್ರಯತ್ನಗಳಲ್ಲಿ ಒಂದು ಭಾಗವಾಗಿ ನಾವಿಕ ಸಂಸ್ಥೆಯು ವಿಶ್ವ ಕನ್ನಡ ಸಮ್ಮೇಳನಗಳನ್ನು ಸಂಯೋಜಿಸುತ್ತಾ ಬಂದಿದೆ.
ನಾವಿಕ ಸಂಸ್ಥೆಯು ಬೆಸ ವರ್ಷಗಳಲ್ಲಿ ಅಮೆರಿಕದಲ್ಲಿ ಮತ್ತು ಸಮ ವರ್ಷಗಳಲ್ಲಿ ಅಮೆರಿಕದ ಹೊರಗಡೆ ವಿಶ್ವ ಕನ್ನಡ ಸಮ್ಮೇಳನಗಳನ್ನು ಆಯೋಜಿಸುತ್ತಾ ಬಂದಿದೆ. ಕಳೆದ ವರ್ಷ ೨೦೨೨ ರಲ್ಲಿ ಆಫ್ರಿಕಾ ಖಂಡದ ಕೀನ್ಯಾ ದೇಶದಲ್ಲಿ ನಾವಿಕ ಸಂಸ್ಥೆಯು ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನವನ್ನು ಭಾರಿ ಅದ್ದೂರಿಯಾಗಿ ಆಯೋಜಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಗಮನಿಸಬಹುದಾದ ಸುದ್ದಿ
ಬಂಡಾಯ ಸಾಹಿತ್ಯ ಸಂಘಟನೆ ಹರಿಹರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಇಂದು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಅವರು ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಸ್ಥಳೀಯ ಅಕ್ಷಯ್ ಹಾಸ್ಪಿಟಲ್‌ಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ಒದಗಿಸಲಾಗಿದೆ. ಅವರು ಚೇತರಿಸಿಕೊಂಡಿದ್ದಾರೆ. ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಹೊಸ ಮೊಬೈಲ್ ಅಪ್ಲಿಕೇಶನ್‌ನಲ್ಲಿ ದೇವರ ದರ್ಶನ ಟಿಕೆಟ್ ಬುಕಿಂಗ್, ವಸತಿ ಬುಕಿಂಗ್, ಇ-ಹುಂಡಿ ಮುಂತಾದ ವಿವಿಧ ಯಾತ್ರಿ ಸೇವೆಗಳು ವೆಂಕಟೇಶ್ವರನ ಭಕ್ತರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಜಿಯೋ ಪ್ಲಾಟ್‌ಫಾರ್ಮ್ಸ್ ಪ್ರತಿನಿಧಿಗಳು ಟಿಟಿಡಿಯ ಮೊಬೈಲ್ ಅಪ್ಲಿಕೇಶನ್‌ನ ಅತ್ಯಾಕರ್ಷಕ ಫೀಚರ್ಸ್ ಅನ್ನು ಶುಕ್ರವಾರ ತಿರುಮಲ ತಿರುಪತಿ ದೇವಸ್ಥಾನಮ್ಸ್ ನ ಆಡಳಿತ ಮಂಡಳಿಗೆ ಪ್ರಸ್ತುತಪಡಿಸಿದರು. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ