logo
ಕನ್ನಡ ಸುದ್ದಿ  /  ಕರ್ನಾಟಕ  /  Ks Eshwarappa: ಲೋಕಸಭಾ ಚುನಾವಣೆ ಉಲ್ಟಾ ಹೊಡೆದಿತ್ತು, ಸಮೀಕ್ಷೆ ಮೇಲೆ ನಂಬಿಕೆ ಇಲ್ಲ ಎಂದ ಕೆಎಸ್ ಈಶ್ವರಪ್ಪ

KS Eshwarappa: ಲೋಕಸಭಾ ಚುನಾವಣೆ ಉಲ್ಟಾ ಹೊಡೆದಿತ್ತು, ಸಮೀಕ್ಷೆ ಮೇಲೆ ನಂಬಿಕೆ ಇಲ್ಲ ಎಂದ ಕೆಎಸ್ ಈಶ್ವರಪ್ಪ

HT Kannada Desk HT Kannada

May 12, 2023 03:18 PM IST

google News

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೆ.ಎಸ್. ಈಶ್ವರಪ್ಪ ಭೇಟಿ

    • KS Eshwarappa: ಚುನಾವಣೆಯ ಮರುದಿನ ಸ್ಪರ್ಧಿಗಳು ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸುವುದು ಮಾಮೂಲಿ. ಆದರೆ ಈ ಬಾರಿ ಸ್ಪರ್ಧೆಯನ್ನೇ ಮಾಡದಿದ್ದ ಹಿರಿಯ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರು ನಿನ್ನೆ ( ಮೇ 11, ಗುರುವಾರ) ಬೆಳ್ಳಂಬೆಳಗ್ಗೆ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
 ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೆ.ಎಸ್. ಈಶ್ವರಪ್ಪ ಭೇಟಿ
ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೆ.ಎಸ್. ಈಶ್ವರಪ್ಪ ಭೇಟಿ

ಮಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election) ಮತದಾನ ಮುಗಿದಿದ್ದು, ಮತದಾನೋತ್ತರ ಸಮೀಕ್ಷೆಗಳು (Exit Poll) ಕಾಂಗ್ರೆಸ್​ ಬಹುಮತ ಪಡೆಯುವ ಸಾಧ್ಯತೆಗಳನ್ನು ಸೂಚಿಸಿವೆ. ಚುನಾವಣೆಯ ಸಮೀಕ್ಷೆಗಳ ಮೇಲೆ ನಂಬಿಕೆ ಇಲ್ಲ ಎಂದ ಬಿಜೆಪಿ ನಾಯಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಅವರು ಇದಕ್ಕೆ ಕಾರಣವನ್ನೂ ತಿಳಿಸಿದ್ದಾರೆ.

ಚುನಾವಣೆಯ ಮರುದಿನ ಸ್ಪರ್ಧಿಗಳು ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸುವುದು ಮಾಮೂಲಿ. ಆದರೆ ಈ ಬಾರಿ ಸ್ಪರ್ಧೆಯನ್ನೇ ಮಾಡದಿದ್ದ ಹಿರಿಯ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರು ನಿನ್ನೆ ( ಮೇ 11, ಗುರುವಾರ) ಬೆಳ್ಳಂಬೆಳಗ್ಗೆ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

ಈ ಸಂದರ್ಭ ಸುದ್ದಿಗಾರರು ಚುನಾವಣೆ ಸಮೀಕ್ಷೆಯ ಕುರಿತು ಪ್ರಶ್ನಿಸಿದಾಗ, "ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲೂ ಬಿಜೆಪಿ ಬಹುಮತ ಪಡೆದು ಅಧಿಕಾರಿ ನಡೆಸುವ ವಿಶ್ವಾಸ ಇದೆ. ಸಮೀಕ್ಷೆ ಮೇಲೆ ನಂಬಿಕೆ ಇಲ್ಲ. ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 26, ಬಿಜೆಪಿಗೆ 1 ಸ್ಥಾನ ಎಂದು ಸಮೀಕ್ಷೆ ಬಂದಿತ್ತು. ಆದರೆ ಫಲಿತಾಂಶ ಬಂದ ಬಳಿಕ ಬಿಜೆಪಿ 25, ಕಾಂಗ್ರೆಸ್ 1 ಸ್ಥಾನ ಪಡೆದಿತ್ತು. ಈ ಸಮೀಕ್ಷೆಗಳ ಬಗ್ಗೆ ನಂಬಿಕೆ ಇಲ್ಲ. ಜನರ ಭಾವನೆ ಬಗ್ಗೆ ನಂಬಿಕೆ ಇದೆ" ಎಂದರು.

ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಸರಕಾರ ನಡೆಸಲಿದೆ ಎಂದ ಈಶ್ವರಪ್ಪ ಬಳಿ ಬಿಜೆಪಿ ಸರಕಾರ ಬಂದ ಮೇಲೆ ನಿಮಗೆ ಯಾವ ಸ್ಥಾನ ಸಿಗಬಹುದು ಎಂಬ ಪ್ರಶ್ನೆಗೆ ಇದರ ಬಗ್ಗೆ ಬಿಜೆಪಿ ಕೇಂದ್ರ ನಾಯಕರ ನಿರ್ಧಾರ ಅಂತಿಮ ಎಂದು ತಿಳಿಸಿದರು.

ಉರುಳು ಸೇವೆ, ಆಶ್ಲೇಷ ಬಲಿ ಸೇವೆ;

ಗುರುವಾರ ಮುಂಜಾನೆ ಆದಿಸುಬ್ರಹ್ಮಣ್ಯದಲ್ಲಿ ಈಶ್ವರಪ್ಪ ಕುಟುಂಬದವರು ಉರುಳು ಸೇವೆ ನೆರವೇರಿಸಿದರು. ಬಳಿಕ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಸೇವೆ ನೆರವೇರಿಸಿದರು. ಬಳಿಕ ಕುಟುಂಬ ಸಮೇತ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ, ಶ್ರೀ ಹೊಸಳಿಗಮ್ಮನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈಶ್ವರಪ್ಪ ಅವರ ಪತ್ನಿ, ಮಗ ಕಾಂತೇಶ್ ಮತ್ತು ಸೊಸೆ, ಕುಟುಂಬಸ್ಥರು ಜತೆಗಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀವತ್ಸಾ, ಪ್ರಸನ್ನ ದರ್ಬೆ, ವನಜಾ ವಿ.ಭಟ್, ಶೋಭಾ ಗಿರಿಧರ್, ಮನೋಹರ ರೈ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ: ಹರೀಶ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ