logo
ಕನ್ನಡ ಸುದ್ದಿ  /  ಕರ್ನಾಟಕ  /  Nps Vs Ops: ಹಳೆಯ ಪಿಂಚಣಿ ವ್ಯವಸ್ಥೇನಾ ಅಥವಾ ಹೊಸತಾ?; ಸಮಾಲೋಚಿಸಿ ತೀರ್ಮಾನಿಸೋಣ ಎಂದ ಮುಖ್ಯಮಂತ್ರಿ

NPS vs OPS: ಹಳೆಯ ಪಿಂಚಣಿ ವ್ಯವಸ್ಥೇನಾ ಅಥವಾ ಹೊಸತಾ?; ಸಮಾಲೋಚಿಸಿ ತೀರ್ಮಾನಿಸೋಣ ಎಂದ ಮುಖ್ಯಮಂತ್ರಿ

HT Kannada Desk HT Kannada

Dec 20, 2022 03:29 PM IST

google News

ವಿಧಾನ ಸಭೆ ಕಲಾಪ

  • NPS vs OPS: ರ್ಕಾರಿ ನೌಕರರ ನೂತನ ಪಿಂಚಣಿ ವ್ಯವಸ್ಥೆಯ ಬಗ್ಗೆ ಸದನದಲ್ಲಿ ಸಮಗ್ರ ಚರ್ಚೆ ನಡೆಸಿ ನಂತರ ಈ ಬಗ್ಗೆ ತೀರ್ಮಾನ ಮಾಡೋಣ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆಗೆ ವಿಧಾನಸಭೆ ಒಪ್ಪಿದೆ. ನೂತನ ಪಿಂಚಣಿ ವ್ಯವಸ್ಥೆ ಕುರಿತಾದ ತನ್ನ ನಿಲುವನ್ನು ನಾಳೆ ತಪ್ಪಿದರೆ ನಾಡಿದ್ದು ಸರ್ಕಾರವು ಸದನದಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.

ವಿಧಾನ ಸಭೆ ಕಲಾಪ
ವಿಧಾನ ಸಭೆ ಕಲಾಪ (CMO)

ಬೆಳಗಾವಿ: ರಾಜ್ಯ ವಿಧಾನಸಭೆಯ ಕಲಾಪದ ವೇಳೆ ಇಂದು ಹಳೆಯ ಪಿಂಚಣಿ ವ್ಯವಸ್ಥೆ ಮತ್ತು ಹೊಸ ಪಿಂಚಣಿ ವ್ಯವಸ್ಥೆ ವಿಚಾರ ಪ್ರಸ್ತಾಪವಾಗಿದೆ.

ಸರ್ಕಾರಿ ನೌಕರರ ನೂತನ ಪಿಂಚಣಿ ವ್ಯವಸ್ಥೆಯ ಬಗ್ಗೆ ಸದನದಲ್ಲಿ ಸಮಗ್ರ ಚರ್ಚೆ ನಡೆಸಿ ನಂತರ ಈ ಬಗ್ಗೆ ತೀರ್ಮಾನ ಮಾಡೋಣ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆಗೆ ವಿಧಾನಸಭೆ ಒಪ್ಪಿದೆ. ನೂತನ ಪಿಂಚಣಿ ವ್ಯವಸ್ಥೆ ಕುರಿತಾದ ತನ್ನ ನಿಲುವನ್ನು ನಾಳೆ ತಪ್ಪಿದರೆ ನಾಡಿದ್ದು ಸರ್ಕಾರವು ಸದನದಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.

ವಿಧಾನಸಭೆಯ ಮಂಗಳವಾರದ ಕಲಾಪದಲ್ಲಿ ಶೂನ್ಯವೇಳೆಯಲ್ಲಿ ಬೇಲೂರು ಶಾಸಕ ಜೆಡಿಎಸ್‌ನ ಲಿಂಗೇಶ್ ಅವರು ನೂತನ ಪಿಂಚಣಿ ಯೋಜನೆ (NPS) ತೆಗೆದು ಹಾಕುವಂತೆ ನೌಕರರು ಹೋರಾಟ ನಡೆಸುತ್ತಿದ್ದಾರೆ. ಇದನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು. ಅವರ ಈ ಮಾತಿಗೆ ಪಕ್ಷಭೇದ ಮರೆತು ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ದನಿಗೂಡಿಸಿದರು.

ಎನ್‌ಪಿಎಸ್‌ ವಿಚಾರ ಪ್ರಸ್ತಾಪಿಸಲು ಪೈಪೋಟಿ ಎಂದ ಸಿಎಂ

ಎನ್‌ಪಿಎಸ್‌ ವಿಚಾರವಾಗಿ ಸದಸ್ಯರು ಪೈಪೋಟಿಗೆ ಬಿದ್ದವರಂತೆ ವಿಷಯ ಪ್ರಸ್ತಾಪಿಸುತ್ತಿರುವ ಕಡೆಗೆ ಗಮನಸೆಳೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎನ್‌ಪಿಎಸ್ ವಿಚಾರವನ್ನು ಪ್ರಸ್ತಾಪಿಸಲು ಸದನದಲ್ಲಿ ಎಲ್ಲ ಪಕ್ಷಗಳ ನಡುವೆ ಪೈಪೋಟಿ ನಡೆದಿದೆ ಎಂದು ಲಘುವಾಗಿ ಛೇಡಿಸಿದರು.

ಎನ್‌ಪಿಎಸ್ ಗಂಭೀರ ವಿಚಾರವಾಗಿದೆ. ಇಡೀ ರಾಜ್ಯದ ಜನರ ಶ್ರಮದಿಂದ ಬೊಕ್ಕಸಕ್ಕೆ ಹಣ ಬರುತ್ತದೆ. ಸದನದ ಒಪ್ಪಿಗೆ ಪಡೆದೇ ಯಾವುದಕ್ಕೆ ಎಷ್ಟು ಹಣ ಖರ್ಚು ಮಾಡಬೇಕು ಎಂಬುದನ್ನು ತೀರ್ಮಾನಿಸುತೇವೆ. ಸರ್ಕಾರಿ ನೌಕರರಿಗೆ ಹತ್ತು ಹಲವು ಸವಲತ್ತುಗಳನ್ನು ನೀಡಲಾಗಿದೆ. ಟಿಎ, ಡಿಎಗಳನ್ನು ಸಕಾಲಿಕವಾಗಿ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರ ಡಿಎ ಪ್ರಕಟಿಸಿದ 24 ಗಂಟೆಗಳಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ಡಿಎ ಸಿಗುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಹಾಗೆಯೇ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗವನ್ನು ರಚನೆ ಮಾಡಿದ್ದೇವೆ. ಈ ಕುರಿತು ಸಾಧಕ-ಬಾಧಕಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಲಿ. ಸರ್ಕಾರದ ತೀರ್ಮಾನ ಏಕಪಕ್ಷೀಯವೆನಿಸುವುದು ಬೇಡ ಎಂಬುದು ನನ್ನ ನಿಲುವು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಬೊಕ್ಕಸವನ್ನು ನಿಭಾಯಿಸಲು ಅಭಿವೃದ್ಧಿ ಕಾರ್ಯಗಳ ವಿಚಾರ, ನೌಕರರ ಹಿತಾಸಕ್ತಿ ಎಲ್ಲದರ ಬಗ್ಗೆಯೂ ಚರ್ಚೆಗಳಾಗಲಿ. ಸರ್ಕಾರ ಸುದೀರ್ಘ ಉತ್ತರ ನೀಡುತ್ತದೆ ಎಂದು ಹೇಳಿದರು.ಆಗ ಈ ವಿಚಾರದ ಚರ್ಚೆಗೆ ಮುಕ್ತ ಅವಕಾಶ ನೀಡುದಾಗಿ ವಿಧಾನಸಭೆಯ ಸ್ಪೀಕರ್ ಭರವಸೆ ನೀಡಿದರು.

ಗಮನಿಸಬಹುದಾದ ಇತರೆ ಸುದ್ದಿಗಳು

ಡಿಕೆಶಿ ಮತ್ತು ಸಿದ್ರಾಮಣ್ಣ ಪರಸ್ಪರ ಸೋಲಿಸ್ತಾರೆ, ಬಿಜೆಪಿ ಬೆಂಬಲಕ್ಕೆ ಜನ ನಿಲ್ತಾರೆ ಎಂದ ಕಟೀಲ್‌

BJP state office bearers meet: ಡಿಕೆಶಿ ಕೊಟ್ಟ ಸೀಟನ್ನು ಸಿದ್ರಾಮಣ್ಣ ಸೋಲಿಸ್ತಾರೆ. ಅದೇ ಮಾದರಿಯಲ್ಲಿ ಸಿದ್ರಾಮಣ್ಣ ಬೆಂಬಲಿಗರನ್ನು ಡಿಕೆಶಿ ಮುಗಿಸುತ್ತಾರೆ. ಇವರಿಬ್ಬರನ್ನು ಸೋಲಿಸಲು ಖರ್ಗೆ ಶ್ರಮಿಸುತ್ತಾರೆ. ಇನ್ನೊಂದೆಡೆ, ರೇವಣ್ಣ- ಕುಮಾರಣ್ಣನ ನಡುವೆ ಗಲಾಟೆ ಕಾರಣ ಹಾಸನದ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

ಗೆದ್ದು ಅಧಿಕಾರ ಚುಕ್ಕಾಣಿ ಉಳಿಸುವುದು ಅನಿವಾರ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ

BJP meet in Murudeshwar: ಟಿಪ್ಪು ನರಮೇಧದ ಕುರಿತು ಸಾಮಾನ್ಯ ಜನರಿಗೆ ಮನವರಿಕೆ ಮಾಡಬೇಕಲ್ಲವೇ? ವೀರ ಸಾವರ್ಕರ್ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡಿದ್ದನ್ನು ಖಂಡಿಸಬೇಕಲ್ಲವೇ? ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು. ಅವರು ಮಂಗಳವಾರ ಮುರುಡೇಶ್ವರದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ವಿಶೇಷ ಸಭೆಗೆ ಚಾಲನೆ ನೀಡಿ ಮಾತನಾಡಿದರು. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ