IPS Postings: ಕರ್ನಾಟಕ ಐಪಿಎಸ್ ಅಧಿಕಾರಿಗಳಿಗೆ ಬಡ್ತಿ: ಕಮಲ್‌ಪಂತ್, ಅಲೋಕ್‌ಕುಮಾರ್‌ಗೆ ಹೊಸ ಹುದ್ದೆ, ಅಮಿತ್‌ಸಿಂಗ್ ಮಂಗಳೂರು ಡಿಐಜಿ
Dec 31, 2023 08:21 AM IST
ಕರ್ನಾಟಕದ ಕಮಲ್ ಪಂತ್, ಅಲೋಕ್ ಕುಮಾರ್, ಅಮಿತ್ ಸಿಂಗ್ ಸಹಿತ ಹಲವು ಅಧಿಕಾರಿಗಳನ್ನು ವರ್ಗ ಮಾಡಲಾಗಿದೆ.
- IPS promotiona Transfer ಕರ್ನಾಟಕದ ಹಲವು ಐಪಿಎಸ್ ಅಧಿಕಾರಿಗಳಿಗೆ ಬಡ್ತ ನೀಡಲಾಗಿದೆ. ಕೆಲವರಿಗೆ ಹೊಸ ಹುದ್ದೆ, ಮತ್ತೆ ಕೆಲವರನ್ನು ಅದೇ ಹುದ್ದೆಗಳಲ್ಲಿ ಮುಂದುವರೆಸಲಾಗಿದೆ.
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸರ್ಕಾರ 37 ಐಪಿಎಸ್ ಅಧಿಕಾರಿಗಳಿಗೆ ಪದೋನ್ನತಿ ನೀಡಿದೆ. ಇವರಲ್ಲಿ ಬಹುತೇಕ ಅಧಿಕಾರಿಗಳನ್ನು ಈ ಹಿಂದೆ ಇದ್ದ ಹುದ್ದೆಯಲ್ಲೇ ಮುಂದುವರೆಸಿದೆ.
ಕಮಲ್ ಪಂತ್, ಅಲೋಕ್ ಕುಮಾರ್ ಅವರಿಗೆ ಹೊಸ ಹುದ್ದೆ ನೀಡಲಾಗಿದೆ. ಮಂಗಳೂರು ಡಿಐಪಿಯಾಗಿ ಅಮಿತ್‌ಸಿಂಗ್ ಅವರನ್ನು ನೇಮಿಸಲಾಗಿದೆ. ಹಿರಿಯ ಅಧಿಕಾರಿಗಳಾದ ಸೀಮಂತ್ ಕುಮಾರ್ ಸಿಂಗ್, ಹರಿಶೇಖರನ್, ಎಂ.ನಂಜುಂಡಸ್ವಾಮಿ, ಡಾ.ದಿವ್ಯಾ ವಿ.ಗೋಪಿನಾಥ್ ಅವರನ್ನು ವರ್ಗಾವಣೆ ಮಾಡಲಾಗಿದೆ.
37 ಐಪಿಎಸ್ ಅಧಿಕಾರಿಗಳ ವರ್ಗಾವಣೆಯ ಸಂಪೂರ್ಣ ಪಟ್ಟಿ ಹೀಗಿದೆ.
- ಹಿರಿಯ ಐ ಪಿ ಎಸ್ ಅಧಿಕಾರಿ ಕಮಲ್ ಪಂತ್ ಅವರನ್ನು ಪೊಲೀಸ್ ಮಹಾನಿರ್ದೇಶಕರು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕರು, ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ಮಹಾನಿರ್ದೇಶಕರು, ಕರ್ನಾಟಕ ರಾಜ್ಯದ ನಾಗರಿಕ ರಕ್ಷಣಾ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.
- ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಕುಮಾರ್ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವಿಶೇಷ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿದೆ.
- ಕರ್ನಾಟಕ ರಾಜ್ಯ ಮೀಸಲು ಪೋಲೀಸ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಅವರನ್ನು ಬಿ ಎಂಟಿ ಎಫ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
- ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹರಿಶೇಖರನ್ ಅವರನ್ನು ಗೃಹರಕ್ಷಕ ದಳದ ಹೆಚ್ಚುವರಿ ಕಮಾಂಡೆಂಟ್ ಜನರಲ್ ಮತ್ತು ಬೆಂಗಳೂರಿನ ನಾಗರಿಕ ರಕ್ಷಣಾ ಇಲಾಖೆಯ ಪದನಿಮಿತ್ತ ಹೆಚ್ಚುವರಿ ನಿರ್ದೇಶಕರಾಗಿ ನೇಮಿಸಲಾಗಿದೆ.
- ಎಂ.ನಂಜುಂಡಸ್ವಾಮಿ- ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ( ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆ)
- ಡಾ.ಚಂದ್ರಗುಪ್ತ- ಹೆಚ್ಚುವರಿ ಪೊಲೀಸ್ ಆಯುಕ್ತರು(ಅಪರಾಧ ವಿಭಾಗ) *
- ಡಾ.ಕೆ.ತ್ಯಾಗರಾಜನ್- ಐಜಿಪಿ (ಪೂರ್ವ ವಲಯ,ದಾವಣಗೆರೆ)
- ಅಮಿತ್ ಸಿಂಗ್- ಉಪ ಪೊಲೀಸ್ ಇನ್ ಸ್ಪೆಕ್ಟರ್ ಜನರಲ್ (ಮಂಗಳೂರು ಪಶ್ಚಿಮ ವಲಯ)
- ಡಾ.ವೈ.ಎಸ್.ರವಿಕುಮಾರ್- ಉಪ ಪೊಲೀಸ್ ಮಹಾನಿರೀಕ್ಷಕರು ಬೆಂಗಳೂರು, (ಗುಪ್ತಚರ ವಿಭಾಗ)
- ಶಂತನು ಸಿನ್ಹಾ- ಉಪ ಪೊಲೀಸ್ ಮಹಾನಿರೀಕ್ಷಕರಾಗಿ ಬಡ್ತಿ
- ಡಾ.ದಿವ್ಯಾ ವಿ.ಗೋಪಿನಾಥ್- ಉಪ ಪೊಲೀಸ್ ಮಹಾನಿರೀಕ್ಷಕರು( ವಿಧಿ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು)
- ಸುಧೀರ್ ಕುಮಾರ್ ರೆಡ್ಡಿ- ಉಪ ಪೊಲೀಸ್ ಮಹಾನಿರೀಕ್ಷಕರು, ಅರಣ್ಯ, ಅಪರಾಧ ತನಿಖಾ ವಿಭಾಗ
- ಆರ್.ಚೇತನ್-ಉಪ ಪೊಲೀಸ್ ಮಹಾನಿರೀಕ್ಷಕರು ಮತ್ತು ಆಯುಕ್ತರು ಕಲಬುರ್ಗಿ
- ವರ್ತಿಕಾ ಕಟಿಯಾರ್ - ಉಪ ಪೊಲೀಸ್ ಮಹಾನಿರೀಕ್ಷಕರು, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು
- ಕಾರ್ತಿಕ್ ರೆಡ್ಡಿ- ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ
- ಕುಲದೀಪ್ ಕುಮಾರ್ ಆರ್.ಜೈನ್ - ಉಪ ಪೊಲೀಸ್ ಆಯುಕ್ತರು, ಬೆಂಗಳೂರು ಪೂರ್ವ ವಿಭಾಗ,
- ವಿನಾಯಕ್ ವಸಂತರಾವ್ ಪಾಟೀಲ್- ಉಪ ಕಾರ್ಯದರ್ಶಿ, ಕ್ಯಾಬಿನೆಟ್ ಸೆಕ್ರೆಟರಿಯೇಟ್, ನವದೆಹಲಿ
- ಕೆ.ಸಂತೋಷ್ ಬಾಬು- ಉಪ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಆಡಳಿತ
- ಇಶಾ ಪಂತ್ -ಜಂಟಿ ಉಪ ನಿರ್ದೇಶಕರು, ಗುಪ್ತಚರ ಬ್ಯೂರೋ
ಇದನ್ನೂ ಓದಿರಿ: ಕನ್ನಡ ನಾಮಫಲಕ ವಿವಾದ; ಕರ್ನಾಟಕದಲ್ಲಿ ಮಾತ್ರ ಈ ನಿಯಮನಾ? ಬೇರೆ ರಾಜ್ಯಗಳಲ್ಲೂ ಇದ್ಯಾ ಇಂತಹ ಕಾನೂನು? ಇಲ್ಲಿದೆ ಮಾಹಿತಿ
- ಜಿ.ಸಂಗೀತಾ- ಪೊಲೀಸ್ ವರಿಷ್ಠಾಧಿಕಾರಿ, ಯಾದಗಿರಿ
- ಸೀಮಾ ಲಾಟ್ಕರ್- ಪೊಲೀಸ್ ವರಿಷ್ಠಾಧಿಕಾರಿ, ಮೈಸೂರು
- ರೇಣುಕಾ ಕೆ.ಸುಕುಮಾರ್- ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ನಗರ, ಹುಬ್ಬಳ್ಳಿ
- ಡಿ.ಆರ್.ಸಿರಿಗೌರಿ- ಉಪ ಪೊಲೀಸ್ ಆಯುಕ್ತರು, ಸಂಚಾರ, ಬೆಂಗಳೂರು ನಗರದ ಉತ್ತರ
- ಪುಟ್ಟಮಾದಯ್ಯ - ಪೊಲೀಸ್ ವರಿಷ್ಠಾಧಿಕಾರಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ
- ಟಿ. ಶ್ರೀಧರ- ಸಹಾಯಕ ಪೊಲೀಸ್ ಮಹಾನಿರೀಕ್ಷಕರು, ಪ್ರಧಾನ ಕಚೇರಿ -1, ರಾಜ್ಯ ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು
- ಡಾ.ಸಂಜೀವ್ ಎಂ.ಪಾಟೀಲ್- ಸಹಾಯಕ ಪೊಲೀಸ್ ಮಹಾನಿರ್ದೇಶಕ, ರಾಜ್ಯ ಪೊಲೀಸ್ ಪ್ರಧಾನ ಕಚೇರಿ
- ಡಾ.ಸುಮನ್ ಡಿ.ಪೆನ್ನೇಕರ್- ಸಹಾಯಕ ಪೊಲೀಸ್ ಮಹಾನಿರೀಕ್ಷಕರು, ಆಡಳಿತ, ರಾಜ್ಯ ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು
- ರವೀಂದ್ರ ಕಾಶಿನಾಥ್ ಗಡಾಡಿ- ಪೊಲೀಸ್ ವರಿಷ್ಠಾಧಿಕಾರಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ.
- ಕ್ಯಾಪ್ಟನ್ ಅಯ್ಯಪ್ಪ ಎಂ.ಎ- ಪೊಲೀಸ್ ಅಧೀಕ್ಷಕರು(ಲೋಕಾಯುಕ್ತ)
- ಸೋನವಾನೆ ರಿಷಿಕೇಶ್ ಭಗವಾನ್- ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
- ಬಿ.ಅರುನಾಂಶು ಗಿರಿ- ಬೆಂಗಳೂರು ನಗರದ ನಗರ ಸಶಸ್ತ್ರ ಮೀಸಲು ಕೇಂದ್ರ ಕಚೇರಿಯ ಉಪ ಪೊಲೀಸ್ ಆಯುಕ್ತ
ಇದನ್ನೂ ಓದಿರಿ: Gold Rate: ಆಭರಣ ಪ್ರಿಯರೇ ಗಮನಿಸಿ, ವರ್ಷದ ಕೊನೆಯ ದಿನ ಬದಲಾಗಿಲ್ಲ ಚಿನ್ನ-ಬೆಳ್ಳಿ ಬೆಲೆ, ನಿನ್ನೆಯ ದರದಲ್ಲೇ ಮುಂದುವರಿಕೆ
- ಹಕೈ ಅಕ್ಷಯ್ ಮಚೀಂದ್ರ-ಗೃಹರಕ್ಷಕ ದಳದ ಡೆಪ್ಯುಟಿ ಕಮಾಂಡೆಂಟ್ ಜನರಲ್ ಮತ್ತು ನಾಗರಿಕ ರಕ್ಷಣಾ ಇಲಾಖೆಯ ಪದನಿಮಿತ್ತ ಉಪ ನಿರ್ದೇಶಕ
- ನಾಗೇಶ್ ಡಿ.ಎಲ್.-ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
- ಲೋಕೇಶ್ ಭರಮಪ್ಪ ಜಗಲಾಸರ್- ಎಸ್ ಪಿ, ಕರ್ನಾಟಕ ಪೊಲೀಸ್ ಆಕಾಡೆಮಿ
- ಡಾ.ಸಿಮಿ ಮರಿಯಮ್ ಜಾರ್ಜ್-ಸಹಾಯಕ ಪೊಲೀಸ್ ಮಹಾನಿರೀಕ್ಷಕರು, ಅಪರಾಧಗಳು, ಬೆಂಗಳೂರು
- ಪದ್ಮಿನಿ ಸಾಹೂ- ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ,
- ಮಿಥುನ್ ಎಚ್.ಎನ್-ಉಡುಪಿಯ ಕರಾವಳಿ ಭದ್ರತಾ ಪೊಲೀಸ್ ಪೊಲೀಸ್ ವರಿಷ್ಠಾಧಿಕಾರಿ
(ವರದಿ: ಎಚ್. ಮಾರುತಿ, ಬೆಂಗಳೂರು)