logo
ಕನ್ನಡ ಸುದ್ದಿ  /  ಕರ್ನಾಟಕ  /  Pothole Accidents In Karnataka: ರಸ್ತೆಗುಂಡಿ ಅಪಘಾತದ ದೂರು ದಾಖಲಿಸಿ ಎಫ್‌ಐಆರ್‌ ಹಾಕಿ! - ರಾಜ್ಯ ಗೃಹ ಇಲಾಖೆಗೆ ಹೈಕೋರ್ಟ್‌ ನಿರ್ದೇಶನ

Pothole accidents in Karnataka: ರಸ್ತೆಗುಂಡಿ ಅಪಘಾತದ ದೂರು ದಾಖಲಿಸಿ ಎಫ್‌ಐಆರ್‌ ಹಾಕಿ! - ರಾಜ್ಯ ಗೃಹ ಇಲಾಖೆಗೆ ಹೈಕೋರ್ಟ್‌ ನಿರ್ದೇಶನ

HT Kannada Desk HT Kannada

Dec 15, 2022 05:16 PM IST

google News

ರಸ್ತೆ ಗುಂಡಿ ಕಾರಣ ಅಪಘಾತವಾಯಿತೇ? ಗಾಯಗೊಂಡರೂ ಸಂಬಂಧಪಟ್ಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ. ಎಫ್‌ಐಆರ್‌ ದಾಖಲಿಸಲು ಹೈಕೋರ್ಟ್‌ ರಾಜ್ಯ ಗೃಹ ಇಲಾಖೆಗೆ ಸೂಚನೆ ನೀಡಿದೆ.

  • Pothole accidents in Karnataka: ರಸ್ತೆ ಗುಂಡಿಯ ಕಾರಣ ಅಪಘಾತವಾಯಿತೇ? ತರಚು ಗಾಯಗಳಾದರೂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಬಹುದು. ರಾಜ್ಯ ಗೃಹ ಇಲಾಖೆಗೆ ಇಂದು ರಾಜ್ಯ ಹೈಕೋರ್ಟ್‌ ಮಹತ್ವದ ನಿರ್ದೇಶನ ನೀಡಿದೆ. ಇಲ್ಲಿದೆ ಆ ವಿವರ.

ರಸ್ತೆ ಗುಂಡಿ ಕಾರಣ ಅಪಘಾತವಾಯಿತೇ? ಗಾಯಗೊಂಡರೂ ಸಂಬಂಧಪಟ್ಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ. ಎಫ್‌ಐಆರ್‌ ದಾಖಲಿಸಲು ಹೈಕೋರ್ಟ್‌ ರಾಜ್ಯ ಗೃಹ ಇಲಾಖೆಗೆ ಸೂಚನೆ ನೀಡಿದೆ.
ರಸ್ತೆ ಗುಂಡಿ ಕಾರಣ ಅಪಘಾತವಾಯಿತೇ? ಗಾಯಗೊಂಡರೂ ಸಂಬಂಧಪಟ್ಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ. ಎಫ್‌ಐಆರ್‌ ದಾಖಲಿಸಲು ಹೈಕೋರ್ಟ್‌ ರಾಜ್ಯ ಗೃಹ ಇಲಾಖೆಗೆ ಸೂಚನೆ ನೀಡಿದೆ.

ಬೆಂಗಳೂರು: ರಸ್ತೆ ಗುಂಡಿಯಿಂದ ಅಪಘಾತ ಆಗಿದೆ ಎಂದು ದೂರು ಬಂದರೆ ಕೂಡಲೇ ಆ ಕುರಿತು ಎಫ್‌ಐಆರ್‌ ದಾಖಲಿಸಿ ಕ್ರಮ ತೆಗೆದುಕೊಳ್ಳಿ ಎಂದು ರಾಜ್ಯ ಗೃಹ ಇಲಾಖೆಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ.

ರಸ್ತೆ ಅಪಘಾತ ಸಂಭವಿಸಿ ಗಾಯಗಳೋ ಅಥವಾ ಸಾವೋ ಸಂಭವಿಸಿದರೆ ಅಂತಹ ಸಂದರ್ಭದಲ್ಲಿ ಸಂಬಂಧಪಟ್ಟವರು ದೂರು ದಾಖಲಿಸಿದರೆ ಅಂತಹ ದೂರುಗಳನ್ನು ಪೊಲೀಸರು ಸ್ವೀಕರಿಸಬೇಕು. ಅದರ ಹಿಂದಿನ ತಾಂತ್ರಿಕತೆಯನ್ನು ಮನಗಾಣಬೇಕು ಮತ್ತು ಕೂಡಲೇ ಎಫ್‌ಐಆರ್‌ ದಾಖಲಿಸಬೇಕು ಎಂದು ಹೈಕೋರ್ಟ್‌ ಹೇಳಿದೆ.

ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಿ ವರಲೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌ ಕಿಣಗಿ ಅವರಿದ್ದ ನ್ಯಾಯಪೀಟ ಗುರುವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಈ ನಿರ್ದೇಶನ ನೀಡಿದೆ. ಬೆಂಗಳೂರಿನ ರಸ್ತೆಗಳಲ್ಲಿ ಗುಮಡಿಗಳೇ ತುಂಬಿಕೊಂಡಿದ್ದು, ಸ್ಥಳೀಯಾಡಳಿತ ಸಂಸ್ಥೆಯ ಆಡಳಿತ ವೈಫಲ್ಯವನ್ನು ಮುಂದಿಟ್ಟುಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಈ ಪ್ರಕರಣದಲ್ಲಿ ರಾಜ್ಯ ಗೃಹ ಇಲಾಖೆಯನ್ನು ಕೂಡ ಪ್ರತಿವಾದಿ ಮಾಡಬೇಕು ಎಂದು ದೂರುದಾರರಿಗೆ ಕೋರ್ಟ್‌ ನಿರ್ದೇಶನ ನೀಡಿತು.

ರಸ್ತೆ ಗುಂಡಿಯಿಂದ ಅಪಘಾತವಾಯಿತಾ? ದೂರು ನೀಡಲು ಹಿಂದೇಟು ಹಾಕಬೇಡಿ!

ರಸ್ತೆಗುಂಡಿಯಿಂದ ಅಪಘಾತವಾದರೆ ಇನ್ನು ಸಾರ್ವಜನಿಕರು ದೂರು ನೀಡಲು ಹಿಂದೇಟು ಹಾಕಬೇಕಾಗಿಲ್ಲ. ಆ ಅಪಘಾತ ಯಾವ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆಯೋ ಅಲ್ಲಿ ಹೋಗಿ ದೂರು ದಾಖಲಿಸಬಹುದಾಗಿದೆ. ಪೊಲೀಸರು ಸ್ಥಳ ಮಹಜರು ನಡೆಸಿ ತನಿಖಾ ವರದಿ ಸಿದ್ಧಪಡಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಹೇಳಿದೆ.

ಎರಡು ತಿಂಗಳ ಒಳಗೆ ವರದಿ ಕೊಡಿ- ಎನ್‌ಎಚ್‌ಎಐಗೆ ನಿರ್ದೇಶನ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿದ್ದು, ಅದರ ಸಮೀಕ್ಷೆಯನ್ನು ನಡೆಸಿ ಎಂಟು ವಾರದ ಒಳಗೆ ವರದಿ ಸಲ್ಲಿಸಬೇಕು ಎಂದು ನ್ಯಾಷನಲ್‌ ಹೈವೇ ಅಥಾರಿಟಿ ಆಫ್‌ ಇಂಡಿಯಾ (ಎನ್‌ಎಚ್‌ಎಐ)ಗೆ ಹೈಕೋರ್ಟ್‌ ನ್ಯಾಯಪೀಠ ಗುರುವಾರ ನಿರ್ದೇಶನ ನೀಡಿದೆ.

ಬಿಬಿಎಂಪಿ ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಎನ್‌ಎಚ್‌ಎಐಗೆ ಸಲ್ಲಿಸಬೇಕು. ಫೆ.3ರ ಒಳಗೆ ಎನ್‌ಎಚ್‌ಎಐ ಈ ಕುರಿತ ವರದಿಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಬೇಕು.

ಪಿಐಎಲ್‌ ವಿಚಾರಣೆ ಫೆ.6ಕ್ಕೆ ಮುಂದೂಡಿಕೆ

ನ್ಯಾಷನಲ್‌ ಹೈವೇ ಅಥಾರಿಟಿ ಆಫ್‌ ಇಂಡಿಯಾ ಫೆ.3ರ ಒಳಗೆ ವರದಿ ಸಲ್ಲಿಸಿದ ಬಳಿಕ, ಫೆ. 6ರಂದು ಈ ಪಿಐಎಲ್‌ ವಿಚಾರಣೆ ಮುಂದುವರಿಸುವುದಾಗಿ ಹೈಕೋರ್ಟ್‌ ಗುರುವಾರ ಹೇಳಿತು.

ಹೈಕೋರ್ಟ್‌ನಲ್ಲಿ ಗುರುವಾರ ನಡೆದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ಬಿಬಿಎಂಪಿಯು ತನ್ನ ರಸ್ತೆ ತುಂಬುವ ಒಪ್ಪಂದವನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿದ್ದ 'ಅಮೆರಿಕನ್ ರೋಡ್ ಟ್ರಾನ್ಸ್‌ಪೋರ್ಟ್ ಸರ್ವಿಸಸ್' ತನ್ನ ಅರ್ಜಿಯನ್ನು ಹಿಂಪಡೆಯುತ್ತಿರುವುದಾಗಿ ಸಲ್ಲಿಸಿತು. ಹಾಗೆ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.

ಗಮನಾರ್ಹ ಸುದ್ದಿಗಳು

ಬಿಬಿಎಂಪಿ ಚುನಾವಣೆ ಇನ್ನೆಷ್ಟು ತಿಂಗಳು ಮುಂದಕ್ಕೆ? ಹೈಕೋರ್ಟಲ್ಲಿ ದಾಖಲಿಸಿದ್ದ ಪಿಟಿಷನ್‌ ಹಿಯರಿಂಗ್‌ ಯಾವಾಗ?

BBMP election: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಯಾವಾಗ ಎಂಬುದು ಒಂದು ಯಕ್ಷಪ್ರಶ್ನೆಯಾಗುವಂತೆ ತೋರುತ್ತಿದೆ. ಇದು ಕೂಡ ಒಂದಿಲ್ಲೊಂದು ಕಾರಣಕ್ಕೆ ಮುಂದೂಡಲ್ಪಡುತ್ತಲೇ ಇದೆ. ಇದಕ್ಕೆ ಸಂಬಂಧಿಸಿದ ವಿಚಾರಣೆ ಕೂಡ ನಿನ್ನೆ ಹೈಕೋರ್ಟ್‌ನಲ್ಲಿ ನಡೆದಿತ್ತು. ಅದರ ವಿವರ ಇಲ್ಲಿದೆ ಕ್ಲಿಕ್‌ ಮಾಡಿ.

ಬಿಬಿಎಂಪಿ ಚುನಾವಣೆ -ರಾಜ್ಯ ಸರ್ಕಾರಕ್ಕೆ ಬಿಗ್‌ ರಿಲೀಫ್‌; ಇಂದು ಸುಪ್ರೀಂ ಕೋರ್ಟ್‌ನಲ್ಲಿ ಏನಾಯಿತು? ಇಲ್ಲಿದೆ ಡಿಟೇಲ್ಸ್‌

BBMP Elections: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬಿಗ್‌ ರಿಲೀಫ್‌ ಸಿಕ್ಕಿದೆ. ರಾಜಕೀಯ ಮೀಸಲು, ಒಬಿಸಿ ಮೀಸಲು ವಿಚಾರವಾಗಿ ಹೈಕೋರ್ಟ್‌ ನಿರ್ದೇಶನದಲ್ಲಿ ರಚಿಸಿದ ಆಯೋಗದ ವರದಿ ಸಲ್ಲಿಕೆಗೆ ಸರ್ಕಾರಕ್ಕೆ ಮಾ.31ರ ತನಕ ಸುಪ್ರೀಂ ಕೋರ್ಟ್‌ ಸಮಯ ನೀಡಿದೆ. ಇಂದು ಸುಪ್ರೀಂ ಕೋರ್ಟ್‌ನಲ್ಲಿ ಏನಾಯಿತು? ಇಲ್ಲಿದೆ ವಿವರ ಕ್ಲಿಕ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ