logo
ಕನ್ನಡ ಸುದ್ದಿ  /  ಕರ್ನಾಟಕ  /  ವಾರಾಂತ್ಯದಲ್ಲೂ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ; ಶನಿವಾರ, ಭಾನುವಾರ ಎಲ್ಲೆಲ್ಲಿ ಕರೆಂಟ್​ ಇರಲ್ಲ?

ವಾರಾಂತ್ಯದಲ್ಲೂ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ; ಶನಿವಾರ, ಭಾನುವಾರ ಎಲ್ಲೆಲ್ಲಿ ಕರೆಂಟ್​ ಇರಲ್ಲ?

Meghana B HT Kannada

Oct 20, 2023 05:52 PM IST

google News

ಬೆಂಗಳೂರಿನಲ್ಲಿ ವಿದ್ಯುತ್ ಕಡಿತ (ಪ್ರಾತಿನಿಧಿಕ ಚಿತ್ರ)

    • Bengaluru Power Cut: ಶನಿವಾರ, ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ವಿದ್ಯುತ್​ ಕಡಿತವಾಗಲಿದೆ. ಕೆಲಸಗಳನ್ನು ಮೊದಲೇ ಪೂರ್ಣಗೊಂಡರೆ 4 ಗಂಟೆಗೆ ಮುನ್ನವೇ ಕರೆಂಟ್​ ಬರಲಿದೆ. ವಿದ್ಯುತ್ ಕಡಿತಕ್ಕೊಳಗಾಗುವ ಬೆಂಗಳೂರಿನ ಪ್ರದೇಶಗಳ ಪಟ್ಟಿ ಇಲ್ಲಿದೆ.
ಬೆಂಗಳೂರಿನಲ್ಲಿ ವಿದ್ಯುತ್ ಕಡಿತ (ಪ್ರಾತಿನಿಧಿಕ ಚಿತ್ರ)
ಬೆಂಗಳೂರಿನಲ್ಲಿ ವಿದ್ಯುತ್ ಕಡಿತ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಮಳೆ ಇಲ್ಲದೆ ವಿದ್ಯುತ್ ಉತ್ಪಾದನೆಯಲ್ಲಿ ತೀವ್ರ ಕುಸಿತದ ನಡುವೆ ಬೆಂಗಳೂರು ನಗರವು ಈ ವಾರಾಂತ್ಯದಲ್ಲೂ ವಿದ್ಯುತ್ ವ್ಯತ್ಯಯಕ್ಕೆ ಸಾಕ್ಷಿಯಾಗಲಿದೆ. ಅಕ್ಟೋಬರ್​ 17ರಿಂದ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಿದ್ದು, ಶನಿವಾರ, ಭಾನುವಾರವೂ ವಿದ್ಯುತ್​ ಕಡಿತವಾಗಲಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಕೆಲವು ಪ್ರದೇಶಗಳಲ್ಲಿ ನಿರ್ವಹಣಾ ಕೆಲಸಗಳನ್ನು ನಡೆಸುತ್ತಿರುವ ಕಾರಣ ವಿದ್ಯುತ್​ ವ್ಯತ್ಯಯ ಉಂಟಾಗುತ್ತಿದೆ.

ಶನಿವಾರ, ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ವಿದ್ಯುತ್​ ಕಡಿತವಾಗಲಿದೆ. ಕೆಲಸಗಳನ್ನು ಮೊದಲೇ ಪೂರ್ಣಗೊಂಡರೆ 4 ಗಂಟೆಗೆ ಮುನ್ನವೇ ಕರೆಂಟ್​ ಬರಲಿದೆ. ವಿದ್ಯುತ್ ಕಡಿತಕ್ಕೊಳಗಾಗುವ ಬೆಂಗಳೂರಿನ ಪ್ರದೇಶಗಳ ಪಟ್ಟಿ ಇಲ್ಲಿದೆ.

ಅಕ್ಟೋಬರ್ 21, ಶನಿವಾರ:

ಬಿಳೇಕಹಳ್ಳಿ, ರಂಕಾ ರಸ್ತೆ, ಅನುಗ್ರಹ ಬಡಾವಣೆ, ಎನ್.ಎಸ್​​ ಪಾಳ್ಯ, ವಿಜಯ ಬ್ಯಾಂಕ್ ಲೇಔಟ್ ಭಾಗ 1 ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಎಸ್‌ಜೆಎಂ ನಗರ, ಎಸ್‌ಎಂಕೆ ನಗರ, ಬಾಬು ಜಗಜೀವನ ನಗರ, ಮತ್ತು ಇತರ ಪ್ರದೇಶಗಳು, ದೇವರಾಜ್ ಅರಸ್ ಬಡಾವಣೆ, ವಿಜಯನಗರ ಬಡಾವಣೆ, ರಾಜೀವ್ ಗಾಂಧಿ ಬಡಾವಣೆ, ಎಸ್‌ಪಿ ಕಚೇರಿ, ಆರ್‌ಟಿಒ ಕಚೇರಿ, ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್‌ಎಚ್‌ ಪಾಳ್ಯ, ಬೋರಸಂದ್ರ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ಸೀಬಿ ಅಗ್ರಹಾರ, ದೊಡ್ಡಸೀಬಿ, ತಿಮ್ಮೇಗೌಡ, ಕಳ್ಳಶೆಟ್ಟಿಹಳ್ಳಿ, ಯತ್ತಪ್ಪನಹಟ್ಟಿ, ಕಾಳಜ್ಜಿರೊಪ್ಪ, ಸೀಬಯ್ಯನಪಾಳ್ಯ, ಬಸರಿಹಳ್ಳಿ , ಹುಂಜನಾಳ್ ಮತ್ತು ಬ್ಯಾಡರಹಳ್ಳಿ.

ಅಕ್ಟೋಬರ್ 22, ಭಾನುವಾರ:

ಚೋಳೂರಪಾಳ್ಯ, ಪ್ರೇಮನಗರ, ಶಂಕರಪ್ಪ ಇಂಡಸ್ಟ್ರಿಯಲ್​ ಎಸ್ಟೇಟ್, ಯುನಾನಿ ಆಸ್ಪತ್ರೆ, ನಿರಾಶ್ರಿತರ ಭವನ, ಪಿ & ಟಿ ಲೇಔಟ್, ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್.ಎಚ್.ಪಾಳ್ಯ, ಬೋರಸಂದ್ರ, ಸೀದಪ್ಪರಹಳ್ಳಿ, ದಾಸರಹಳ್ಳಿ, ಬೈದರಹಳ್ಳಿ, ವೆಂಕಟರಪುರ, ದಾಸರಹಳ್ಳಿ, ತಿಪ್ಪನಹಳ್ಳಿ, ದೊಡ್ಡಸೀಬಿ , ದುರ್ಗದಹಳ್ಳಿ, ತಿಪ್ಪನಹಳ್ಳಿ, ಬೋರಸಂದ್ರ, ಕಲ್ಲಶೆಟ್ಟಿಹಳ್ಳಿ, ಯತ್ತಪ್ಪನಹಟ್ಟಿ, ಕಾಳಜ್ಜಿರೊಪ್ಪ, ಸೀಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ್ ಮತ್ತು ಬ್ಯಾಡರಹಳ್ಳಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ