logo
ಕನ್ನಡ ಸುದ್ದಿ  /  ಕರ್ನಾಟಕ  /  Bus Ticket Price Hike: ದುಪ್ಪಟ್ಟಾಯ್ತು ಬಸ್‌ ದರ, ಹಬ್ಬಕ್ಕೆಂದು ಊರಿಗೆ ಹೊರಟ ಪ್ರಯಾಣಿಕರಿಗೆ ಖಾಸಗಿ ಬಸ್‌ಗಳಿಂದ ಬಿಗ್‌ ಶಾಕ್

Bus Ticket Price Hike: ದುಪ್ಪಟ್ಟಾಯ್ತು ಬಸ್‌ ದರ, ಹಬ್ಬಕ್ಕೆಂದು ಊರಿಗೆ ಹೊರಟ ಪ್ರಯಾಣಿಕರಿಗೆ ಖಾಸಗಿ ಬಸ್‌ಗಳಿಂದ ಬಿಗ್‌ ಶಾಕ್

Suma Gaonkar HT Kannada

Sep 04, 2024 09:47 AM IST

google News

ಕೆಎಸ್‌ಆರ್‌ಟಿಸಿ ಬಸ್‌ಗಳು

  • Private Bus Ticket Price: ಹಬ್ಬಕ್ಕೆಂದು ಊರಿಗೆ ಹೊರಟ ಪ್ರಯಾಣಿಕರಿಗೆ ಪ್ರತಿಬಾರಿಯಂತೆ ಈ ಬಾರಿಯೂ ನಿರಾಸೆಯಾಗಿದೆ. ಈಗ ಪ್ರಯಾಣಿಕರು ಖಾಸಗಿ ಬಸ್ ಅಥವಾ ಸರ್ಕಾರಿ ಬಸ್ ಯಾವುದನ್ನು ಬುಕ್ ಮಾಡಿದರೂ ದರ ಏರಿಕೆಯ ಬಿಸಿ ಮಾತ್ರ ಕೈ ಸುಡುತ್ತಿದ್ದೆ. 

ಕೆಎಸ್‌ಆರ್‌ಟಿಸಿ ಬಸ್‌ಗಳು
ಕೆಎಸ್‌ಆರ್‌ಟಿಸಿ ಬಸ್‌ಗಳು (KSRTC)

ಯಾವುದೇ ಹಬ್ಬ ಬಂದ್ರು ಪ್ರಯಾಣಿಕರಿಗೆ ಪದರದಾಟ ತಪ್ಪಿದ್ದಲ್ಲ. ಒಂದಕ್ಕೆ ಎರಡರಷ್ಟು ಹಣ ಕೊಟ್ಟು ಖಾಸಗಿ ಬಸ್‌ಗಳಿಗೆ ಓಡಾಡಬೇಕಾದ ಸಂದರ್ಭ ಇದೆ. ಪ್ರತಿಬಾರಿಯಂತೆ ಈ ವರ್ಷವೂ ಗೌರಿ ಗಣೇಶ ಹಬ್ಬಕ್ಕೆ ಜನರು ತಮಗೆ ಸಿಕ್ಕ ರಜೆಯಲ್ಲಿ ಹಬ್ಬ ಆಚರಿಸಲು ಊರಿಗೆ ಹೊರಟಿದ್ದಾರೆ. ಆದರೆ ಬಸ್‌ ದರ ಹೆಚ್ಚಳದಿಂದ ಬೇಸತ್ತಿದ್ದಾರೆ. ಇನ್ನು ಸರ್ಕಾರಿ ಬಸ್‌ಗಳಿಗೆ ಹೋಗೋಣ ಎಂದಾದರೂ ಸಮರ್ಪಕವಾದ ಬಸ್‌ ವ್ಯವಸ್ಥೆ ಹಲವು ಕಡೆಗಳಲ್ಲಿ ಇಲ್ಲ. ಇನ್ನು ಬಸ್‌ ವ್ಯವಸ್ಥೆ ಇದ್ದರೂ ಅಗತ್ಯಕ್ಕೆ ಬೇಕಾದಷ್ಟು ಬಸ್‌ಗಳಿಲ್ಲ. ಅಂದರೆ ಬಸ್‌ ಸಂಖ್ಯೆ ಕಡಿಮೆ. ಪ್ರಯಾಣಿಕರ ಸಂಖ್ಯೆ ಹೆಚ್ಚು ಹೀಗಿದೆ ಪರಿಸ್ಥಿತಿ.

ಸೆಪ್ಟೆಂಬರ್ 3ರಂದು ಖಾಸಗಿ ಬಸ್​ ಟಿಕೆಟ್ ದರ

ಬೆಂಗಳೂರು – ಹಾವೇರಿ: 600 – 1200 ರೂ.

ಬೆಂಗಳೂರು-ಗುಲ್ಬರ್ಗ : 600-1200 ರೂ.

ಬೆಂಗಳೂರು-ಹಾಸನ: 475-600 ರೂ.

ಬೆಂಗಳೂರು-ದಾವಣಗೆರೆ: 550-900 ರೂ.

ಬೆಂಗಳೂರು-ಧಾರವಾಡ: 500-1100 ರೂ.

ಬೆಂಗಳೂರು-ಚಿಕ್ಕಮಗಳೂರು: 500-900 ರೂ.

ಬೆಂಗಳೂರು - ಯಲ್ಲಾಪುರ: 700 -900

ಬೆಂಗಳೂರು-ಯಾದಗಿರಿ: 600-1400 ರೂ.

ಬೆಂಗಳೂರು-ಹಾವೇರಿ: 1550-1600 ರೂ.

ಬೆಂಗಳೂರು-ಗುಲ್ಬರ್ಗ: 1200-1800 ರೂ.

ಬೆಂಗಳೂರು-ಯಾದಗಿರಿ: 1100-1750 ರೂ.

ಬೆಂಗಳೂರು-ಹಾಸನ: 899-1800 ರೂ.

ಬೆಂಗಳೂರು-ಧಾರವಾಡ: 1200-3000 ರೂ.

ಬೆಂಗಳೂರು-ಚಿಕ್ಕಮಗಳೂರು: 900-1500 ರೂ.

ಬೆಂಗಳೂರು - ಯಲ್ಲಾಪುರ: 700 - 1600

ಬೆಂಗಳೂರು-ದಾವಣಗೆರೆ: 900-2000 ರೂ.

ಐನನೂರಕ್ಕೂ ಹೆಚ್ಚು ದರ ಏರಿಕೆ ಮಾಡಲಾಗಿದ್ದು ಇನ್ನು ಕೆಲವು ಕಡೆ ಈ ಸಂಖ್ಯೆ ಸಾವಿರವನ್ನೂ ದಾಟಿದೆ. ಇದು ಕೇವಲ ಸಂಖ್ಯೆಯಾಗಿದ್ದರೆ ಬೇಸರವಿರಲಿಲ್ಲ. ಜನರು ದುಡಿದ ಹಣದಲ್ಲಿ ಅರ್ಧದಷ್ಟು ಓಡಾಟಕ್ಕೆ ಖರ್ಚಾಗುತ್ತಿದೆ ಎಂದು ಬೇಸರಪಡುತ್ತಿದ್ದಾರೆ.

ಸರ್ಕಾರಿ ಬಸ್‌ ಟಿಕೆಟ್‌ ದರ ವಿವರ

ಸರ್ಕಾರಿ ಬಸ್‌ಗಳಲ್ಲೂ ಟಿಕೆಟ್ ದರ ಏರಿಕೆಯಾಗಿದೆ. ಇದು ಖಾಸಗಿ ಬಸ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಾಮಾನ್ಯ ದಿನಗಳಿಗಿಂತ 300-400 ರೂಪಾಯಿ ದರವನ್ನು ಕೆಲ ಬಸ್‌ಗಳಿಗೆ ಏರಿಕೆ ಮಾಡಲಾಗಿದೆ.

ಹೆಚ್ಚವರಿ ಬಸ್‌ ವ್ಯವಸ್ಥೆ
KSRTC ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಿದ್ದೂ ಸಾವಿರದ ಐನೂರಕ್ಕೂ ಹೆಚ್ಚು ಬಸ್‌ಗಳನ್ನು ಬೇರೆ ಬೇರೆ ಊರುಗಳಿಗೆ ಬಿಟ್ಟಿದೆ. ಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ,ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಹುಬ್ಬಳ್ಳಿ, ದಾರವಾಡ, ದಾವಣಗೆರೆ ತಿರುಪತಿ, ವಿಜಯವಾಡ, ಹೈದಾರಬಾದ್​ಗೆ ಹೆಚ್ಚುವರಿ ಬಸ್‌ಗಳನ್ನು ನೀಡಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ