Rare fish in Kalaburagi: ಅಪರೂಪದ ವಿಚಿತ್ರ ಮೀನು ಕಲಬುರಗಿಯಲ್ಲಿ ಪತ್ತೆ!; ನಾಗರಾಳ ಜಲಾಶಯದಲ್ಲಿ ಮೀನುಗಾರರ ಬಲೆಗೆ ಬಿದ್ದ ಮೀನು
Nov 26, 2022 11:07 AM IST
ಅಪರೂಪದ ವಿಚಿತ್ರ ಮೀನು
Rare fish in Kalaburagi: ನಾಗರಾಳ ಜಲಾಶಯದಲ್ಲಿ ಮೀನುಗಾರಿಕೆಗೆ ನಡೆಯುತ್ತಿದ್ದ ವೇಳೆ, ಮೀನುಗಾರರು ಹಾಕಿದ್ದ ಬಲೆಗೆ ಈ ಮೀನು ಬಿದ್ದಿದೆ. ಮೀನುಗಾರ ಈಶ್ವರ್ ಎಂಬುವರರ ಬಲೆಗೆ ಬಿದ್ದ ಈ ಮೀನು ನ್ಯೂಜಿಲೆಂಡ್ ಮೂಲದ್ದು (Freshwater eels in New Zealand) ಎಂದು ಹೇಳಲಾಗುತ್ತಿದೆ. ಏನಿದರ ವಿಶೇಷತೆ ಇಲ್ಲಿದೆ ವಿವರ.
ಕಲಬುರಗಿ: ಕಲಬುರಗಿಯಲ್ಲಿ ಅಪರೂಪದ ವಿಚಿತ್ರ ಮೀನು (Rare fish in Kalaburagi) ಪತ್ತೆಯಾಗಿದೆ. ಚಿಂಚೋಳಿ ತಾಲೂಕಿನ ನಾಗರಾಳ ಜಲಾಶಯದಲ್ಲಿ ಮೀನುಗಾರರ ಬಲೆಗೆ ಬಿದ್ದ ಈ ಮೀನು ಎಲ್ಲರ ಕುತೂಹಲ ಕೆರಳಿಸಿದೆ.
ನಾಗರಾಳ ಜಲಾಶಯದಲ್ಲಿ ಮೀನುಗಾರಿಕೆಗೆ ನಡೆಯುತ್ತಿದ್ದ ವೇಳೆ, ಮೀನುಗಾರರು ಹಾಕಿದ್ದ ಬಲೆಗೆ ಈ ಮೀನು ಬಿದ್ದಿದೆ. ಮೀನುಗಾರ ಈಶ್ವರ್ ಎಂಬುವರರ ಬಲೆಗೆ ಬಿದ್ದ ಈ ಮೀನು ನ್ಯೂಜಿಲೆಂಡ್ ಮೂಲದ್ದು (Freshwater eels in New Zealand) ಎಂದು ಹೇಳಲಾಗುತ್ತಿದೆ.
ಈ ಮೀನು ಆರು ಅಡಿ ಉದ್ದ, 13 ಕಿಲೋ ತೂಕ ಇದೆ. ಇದು ಅಪರೂಪದ ವಿಚಿತ್ರ ಮೀನು ಎಂಬ ಕಾರಣಕ್ಕೆ ಸ್ಥಳೀಯರು ಮೀನು ನೋಡಲು ಈಶ್ವರ ಅವರ ಮನೆ ಕಡೆಗೆ ಹೆಜ್ಜೆ ಹಾಕಿದ್ದು ಸುದ್ದಿಯಾಗಿದೆ.
ಮೀನುಗಾರಿಕೆ ವಿಚಾರದಲ್ಲಿ ಪರಿಣತರು ಇದು ಅಪರೂಪದ ಈಲ್ ಮೀನು ಎಂದು ಗುರುತಿಸಿದ್ದಾರೆ. ಆದರೆ, ತಿನ್ನುವುದಕ್ಕೆ ಯೋಗ್ಯವೇ ಎಂಬುದನ್ನು ದೃಢೀಕರಿಸಿಲ್ಲ. ಈ ಕುರಿತು ವಿಶ್ಲೇಷಣೆ ನಡೆಸಿದ ಬಳಿಕವಷ್ಟೇ ಆ ಮೀನನ್ನು ಮಾರಾಟ ಮಾಡಬಹುದು ಎಂದು ಸ್ಥಳೀಯ ಅಧಿಕಾರಿಗಳು ಈಶ್ವರ್‌ಗೆ ಸೂಚಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ನ್ಯೂಜಿಲೆಂಡ್‌ನ ಸಿಹಿನೀರಿನ ಈಲ್ ಮೀನು
ನ್ಯೂಜಿಲೆಂಡ್ ಸಿಹಿನೀರಿನ ಈಲ್‌ಗಳು ಒಂದೇ ರೀತಿ ಕಾಣುತ್ತವೆ. ಆದರೆ ಮೂರು ಜಾತಿಗಳಿವೆ:
ಲಾಂಗ್ಫಿನ್ ಈಲ್ - ಅಳಿವಿನಂಚಿಗೆ ತಲುಪಿದ ಸಂತತಿ ಇದು. ನ್ಯೂಜಿಲೆಂಡ್‌ನಲ್ಲಿ ಮಾತ್ರ ಕಂಡುಬರುತ್ತದೆ.
ಶಾರ್ಟ್‌ಫಿನ್ ಈಲ್- ಅಳಿವಿನಂಚಿಗೆ ತಲುಪಿದ್ದರೂ ಅಳಿಯುವ ಬೆದರಿಕೆ ಇಲ್ಲ. ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಕೆಲವು ಪೆಸಿಫಿಕ್ ದ್ವೀಪಗಳಲ್ಲಿ ಇದು ಕಂಡುಬರುತ್ತದೆ.
ಮಚ್ಚೆಯುಳ್ಳ ಈಲ್- ಆಸ್ಟ್ರೇಲಿಯಾದಲ್ಲಿ ಆಗಾಗ ಕಂಡುಬರುವ ಮೀನು
ನ್ಯೂಜಿಲೆಂಡ್ ಥ್ರೆಟ್ ಕ್ಲಾಸಿಫಿಕೇಶನ್ ಸಿಸ್ಟಮ್ ಪಟ್ಟಿಗಳಲ್ಲಿ (2014) ಲಾಂಗ್‌ಫಿನ್ ಈಲ್ ಅನ್ನು 'ಅಪಾಯದಲ್ಲಿದೆ - ಕ್ಷೀಣಿಸುತ್ತಿದೆ' ಎಂದು ಶ್ರೇಣೀಕರಿಸಲಾಗಿದೆ. ಇದು ನ್ಯೂಜಿಲೆಂಡ್‌ನಲ್ಲಿ ಮಾತ್ರ ಕಂಡುಬರುತ್ತದೆ. ಲಾಂಗ್‌ಫಿನ್ ಈಲ್‌ಗಳು, ಹಾಗೆಯೇ ಅಪರೂಪವಾಗಿರುವುದರಿಂದ, ಅವುಗಳ ಶಾರ್ಟ್-ಫಿನ್ಡ್ ಸಂಬಂಧಿಗಿಂತ ತಮ್ಮ ಪರಿಸರದಲ್ಲಿನ ಬದಲಾವಣೆಗಳನ್ನು ನಿಭಾಯಿಸಲು ಕಡಿಮೆ ಸಾಮರ್ಥ್ಯ ಹೊಂದಿವೆ. ಮಾಲಿನ್ಯ, ಅಣೆಕಟ್ಟುಗಳ ನಿರ್ಮಾಣ, ತಮ್ಮ ಆವಾಸಸ್ಥಾನದ ಸಮೀಪವಿರುವ ಸಸ್ಯವರ್ಗದ ನಷ್ಟ ಮತ್ತು ಅತಿಯಾದ ಮೀನುಗಾರಿಕೆಯಂತಹ ಮಾನವ ಚಟುವಟಿಕೆಗಳಿಂದ ಅವು ಹೆಚ್ಚು ಪ್ರಭಾವಿತವಾಗಿವೆ.
ಹಾಗಾಗಿ ಅವುಗಳನ್ನು ಗುರುತಿಸಲು ಕೆಲವು ಸರಳ ವಿಚಾರಗಳನ್ನು ಗಮನಿಸಿದರೆ ಸಾಕು. ಅವು ಹೀಗಿವೆ -
- ಈಲ್ ಬಹುಶಃ ಲಾಂಗ್‌ಫಿನ್ ಆಗಿದ್ದರೆ: ತುಂಬಾ ಗಾಢ ಬಣ್ಣ ಹೊಂದಿರುತ್ತದೆ.
- ಮೀಟರ್‌ಗಿಂತಲೂ ಹೆಚ್ಚು ಉದ್ದವಾಗಿರುತ್ತದೆ.
- ಎತ್ತರದ-ದೇಶದ ನದಿ ಅಥವಾ ಸರೋವರದಲ್ಲಿ ವಾಸಿಸುವುದು, ಅಥವಾ ಯಾವುದೇ ಪ್ರದೇಶದಲ್ಲಿ ಸ್ಪಷ್ಟ, ಶೀತ ಹೆಚ್ಚಿರುವ ಜಲಾಶಯದಲ್ಲಿರುತ್ತವೆ.
- ಲಾಂಗ್‌ಫಿನ್‌ನ ಚರ್ಮವು ಬಾಗಿದಾಗ ದೊಡ್ಡ, ಸಡಿಲವಾದ, ಸ್ಪಷ್ಟವಾದ ಸುಕ್ಕುಗಳನ್ನು ರೂಪಿಸುತ್ತದೆ. ಶಾರ್ಟ್‌ಫಿನ್‌ನ ಚರ್ಮದ ಸುಕ್ಕುಗಳು ತುಂಬಾ ಚಿಕ್ಕದಾಗಿದೆ.
ನೀವು ನಿಜವಾಗಿಯೂ ಅದೃಷ್ಟವಂತರಾಗಿದ್ದರೆ ಅಪರೂಪದ 'ಗೋಲ್ಡನ್' ಲಾಂಗ್‌ಫಿನ್ ಅನ್ನು ಕಾಣಬಹುದು. ಬಣ್ಣದಲ್ಲಿನ ಈ ಬದಲಾವಣೆಯು ಗಾಢ ವರ್ಣದ್ರವ್ಯಗಳ ನಷ್ಟದಿಂದ ಉಂಟಾಗುತ್ತದೆ. ಆಗ ಹಳದಿ ವರ್ಣದ್ರವ್ಯಗಳು ಸ್ಪಷ್ಟವಾಗಿ ಗೋಚರಿಸುವಂತೆ ಮಾಡುತ್ತದೆ ಎನ್ನುತ್ತಿದೆ ನ್ಯೂಜಿಲೆಂಡ್ ಸರ್ಕಾರದ ಡಿಪಾರ್ಟ್‌ಮೆಂಟ್ ಆಫ್ ಕನ್ಸರ್ವೇಶನ್ ವೆಬ್‌ಸೈಟ್.