logo
ಕನ್ನಡ ಸುದ್ದಿ  /  ಕರ್ನಾಟಕ  /  Republic Day 2023: ಗಣತಂತ್ರ ಪರೇಡ್‌ನಲ್ಲಿ ಈ ಸಲ ಕರ್ನಾಟಕದ ಸ್ತಬ್ಧಚಿತ್ರ ಇರಲ್ಲ; ನಾಲ್ಕೂ ಥೀಮ್‌ ರಿಜೆಕ್ಟ್‌ ಮಾಡಿದ ಆಯ್ಕೆ ಸಮಿತಿ!

Republic Day 2023: ಗಣತಂತ್ರ ಪರೇಡ್‌ನಲ್ಲಿ ಈ ಸಲ ಕರ್ನಾಟಕದ ಸ್ತಬ್ಧಚಿತ್ರ ಇರಲ್ಲ; ನಾಲ್ಕೂ ಥೀಮ್‌ ರಿಜೆಕ್ಟ್‌ ಮಾಡಿದ ಆಯ್ಕೆ ಸಮಿತಿ!

HT Kannada Desk HT Kannada

Jan 07, 2023 02:08 PM IST

google News

ಕಳೆದ ವರ್ಷ ಪ್ರದರ್ಶನವಾಗಿದ್ದ ಕರ್ನಾಟಕದ ಸ್ತಬ್ಧಚಿತ್ರ

  • Republic Day 2023: ದೆಹಲಿಯ ರಾಜಪಥದಲ್ಲಿ ಜನವರಿ 26ರಂದು ನಡೆಯಲಿರುವ ಗಣತಂತ್ರ ದಿನದ ಪರೇಡ್‌ (Republic Day Parade) ನಲ್ಲಿ ಈ ಸಲ ಕರ್ನಾಟಕದ ಸ್ತಬ್ಧಚಿತ್ರ (Karnataka Tableau) ಇರಲ್ಲ. ಕರ್ನಾಟಕ ಕೊಟ್ಟಿದ್ದ ನಾಲ್ಕೂ ಥೀಮ್‌ಗಳನ್ನು ಆಯ್ಕೆ ಸಮಿತಿ ತಿರಸ್ಕರಿಸಿದೆ. ಹದಿಮೂರು ವರ್ಷಗಳಲ್ಲಿ ಇದೇ ಮೊದಲ ಸಲ ಅವಕಾಶ ಕೈತಪ್ಪಿ ಹೋಗಿದೆ. 

    Karnataka Tableau

ಕಳೆದ ವರ್ಷ ಪ್ರದರ್ಶನವಾಗಿದ್ದ ಕರ್ನಾಟಕದ ಸ್ತಬ್ಧಚಿತ್ರ
ಕಳೆದ ವರ್ಷ ಪ್ರದರ್ಶನವಾಗಿದ್ದ ಕರ್ನಾಟಕದ ಸ್ತಬ್ಧಚಿತ್ರ (DIPR Karnataka)

ದೆಹಲಿಯ ರಾಜಪಥದಲ್ಲಿ ಜನವರಿ 26ರಂದು ನಡೆಯಲಿರುವ ಗಣತಂತ್ರ ದಿನದ ಪರೇಡ್‌ (Republic Day Parade) ನಲ್ಲಿ ಈ ಸಲ ಕರ್ನಾಟಕದ ಸ್ತಬ್ಧಚಿತ್ರ (Karnataka Tableau) ಇರಲ್ಲ. ಕರ್ನಾಟಕ ಕೊಟ್ಟಿದ್ದ ನಾಲ್ಕೂ ಥೀಮ್‌ಗಳನ್ನು ಆಯ್ಕೆ ಸಮಿತಿ ತಿರಸ್ಕರಿಸಿದೆ.

ಸರ್ಕಾರದ ಮೂಲಗಳನ್ನು ಉಲ್ಲೇಖಿಸಿರುವ ಮಾಧ್ಯಮ ವರದಿ ಪ್ರಕಾರ, ಕಳೆದ 13 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಸಲ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ಕೈ ತಪ್ಪಿದೆ. ಕೇರಳ, ತಮಿಳುನಾಡು ಸೇರಿ 13 ರಾಜ್ಯಗಳನ್ನು ಈ ಸಲ ಸ್ತಬ್ಧಚಿತ್ರಕ್ಕೆ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ಕೇರಳಕ್ಕೆ ಅವಕಾಶ ಮಿಸ್‌ ಆಗಿತ್ತು.

ಬೇರೆ ರಾಜ್ಯಗಳಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೇಂದ್ರ ಆಯ್ಕೆ ಸಮಿತಿ ಅವಕಾಶ ನಿರಾಕರಿಸಿದೆ. ನಾಲ್ಕು ಥೀಮ್‌ಗಳನ್ನು ಸಲ್ಲಿಸಲಾಗಿತ್ತು. ಇದರಲ್ಲಿ ನಾರಿ ಶಕ್ತಿ ಸ್ತಬ್ಧಚಿತ್ರ ಫೈನಲ್ ಆಗಿತ್ತು. ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮರ ಸ್ತಬ್ಧಚಿತ್ರ ಇದಾಗಿತ್ತು. ಆದರೆ ಅಂತಿಮ ಹಂತದಲ್ಲಿ ಇದು ತಿರಸ್ಕರಿಸಲ್ಪಟ್ಟಿದೆ. ಕರ್ನಾಟಕಕ್ಕೆ ಕಳೆದ ಸಲ ಎರಡನೇ ಬಹುಮಾನ ಬಂದಿತ್ತು.

ಗಮನಾರ್ಹ ಸುದ್ದಿಗಳು

SDPI in Karnataka: ಕರ್ನಾಟಕದಲ್ಲಿ ಎಸ್‌ಡಿಪಿಐ ನಿಷೇಧಕ್ಕೆ ಚಿಂತನೆ ಎನ್ನುತ್ತಿವೆ ವರದಿಗಳು

SDPI in Karnataka: ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI)ದ ರಾಜಕೀಯ ಘಟಕವೇ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2020ರಲ್ಲಿ ನಡೆದ ಗಲಭೆಯಲ್ಲಿ ಎಸ್‌ಡಿಪಿಐ ಕೈವಾಡ ಇರುವುದು ದೃಢಪಟ್ಟ ಕಾರಣ ರಾಜ್ಯ ಬಿಜೆಪಿ ಸರ್ಕಾರ ಈ ಚಿಂತನೆ ನಡೆಸಿದೆ ಎಂದು ವರದಿ ಹೇಳಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Ediga-Billava Yatra: ಸಮುದಾಯದ ಹಿತಕ್ಕಾಗಿ ಈ ಪಾದಯಾತ್ರೆ; ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದ ಡಾ. ಪ್ರಣವಾನಂದ ಸ್ವಾಮೀಜಿ

Ediga-Billava Yatra: ಕಲಬುರ್ಗಿ ಕರದಾಳು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ. ಪ್ರಣವಾನಂದ ಸ್ವಾಮೀಜಿ ನೇತೃತ್ವದ ಮಂಗಳೂರಿನಿಂದ ಬೆಂಗಳೂರಿಗೆ ಈಡಿಗ - ಬಿಲ್ಲವ ಮಹಾಪಾದಯಾತ್ರೆ (Ediga-Billava Yatra) ಶುರುವಾಗಿದೆ. ಇದಕ್ಕೆ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಶುಕ್ರವಾರ ಚಾಲನೆ ಸಿಕ್ಕಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Private School Fees: ಖಾಸಗಿ ಶಾಲೆಗಳ ಶುಲ್ಕ ನಿಗದಿ ಅಧಿಕಾರ ರಾಜ್ಯಕ್ಕಿಲ್ಲ; ಶಿಕ್ಷಣ ಕಾಯ್ದೆಯ ಕೆಲ ಸೆಕ್ಷನ್‌ ಅಸಾಂವಿಧಾನಿಕ ಎಂದ ಕೋರ್ಟ್‌

Private School Fees: ಕರ್ನಾಟಕದಲ್ಲಿ ಖಾಸಗಿ ಶಾಲೆಗಳಲ್ಲಿ ಶುಲ್ಕ ನಿಗದಿ ಅಧಿಕಾರ ಆಯಾ ಶಾಲಾ ಆಡಳಿತಕ್ಕೆ ಬಿಟ್ಟದ್ದು. ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವಂತೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಮಹತ್ವದ ಆದೇಶ ನೀಡಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Union budget 2023: ಮೆಡಿಟೆಕ್‌ ಸಂಶೋಧನಾ ಸಂಸ್ಥೆ ಸ್ಥಾಪನೆ; ಈ ಸಲದ ಬಜೆಟ್‌ನಲ್ಲಿ ಘೋಷಿಸುವ ನಿರೀಕ್ಷೆ

Union budget 2023: ಕೇಂದ್ರ ಸರ್ಕಾರವು ಈ ಸಲದ ಮುಂಗಡಪತ್ರದಲ್ಲಿ ಮೆಡಿಟೆಕ್‌ ಸಂಶೋಧನಾ ಸಂಸ್ಥೆ ಸ್ಥಾಪಿಸುವ ವಿಚಾರವನ್ನು ಘೋಷಿಸುವ ಸಾಧ್ಯತೆ ಇದೆ. ಇದು ಫಾರ್ಮಾಸ್ಯುಟಿಕಲ್‌ ಕ್ಷೇತ್ರದಲ್ಲಿರುವಂತೆಯೇ ಮೆಡಿಕಲ್‌ ಉಪಕರಣಗಳ ಮೇಲೆ ಸಂಶೋಧನೆಗೆ ಮೀಸಲಾದ ಸಂಸ್ಥೆ ಎಂದು ವರದಿ ಹೇಳಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ