logo
ಕನ್ನಡ ಸುದ್ದಿ  /  ಕರ್ನಾಟಕ  /  Republic Day: ಎಡಿಜಿಪಿ ಸೌಮೇಂದು ಮುಖರ್ಜಿ ಸೇರಿ ಕರ್ನಾಟಕದ 23 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

Republic Day: ಎಡಿಜಿಪಿ ಸೌಮೇಂದು ಮುಖರ್ಜಿ ಸೇರಿ ಕರ್ನಾಟಕದ 23 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

Meghana B HT Kannada

Jan 25, 2024 06:34 PM IST

google News

ಎಡಿಜಿಪಿ ಸೌಮೇಂದು ಮುಖರ್ಜಿ (ಎಡಚಿತ್ರ), ಸುಧೀರ್ ಎಂ ಹೆಗ್ಡೆ ಹಾಗೂ ಪಂಕಜ್ ಕುಮಾರ್ ಠಾಕೂರ್ (ಬಲಚಿತ್ರ)

    • President's Medal: ಹಿರಿಯ ಐಪಿಎಸ್ ಅಧಿಕಾರಿಗಳಾದ ಸೌಮೇಂದು ಮುಖರ್ಜಿ, ರಮಣ್ ಗುಪ್ತ, ಪಂಕಜ್ ಕುಮಾರ್ ಠಾಕೂರ್ ಸೇರಿ 23 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕ ಘೋಷಿಸಲಾಗಿದೆ. (ವರದಿ: ಎಚ್.ಮಾರುತಿ)
ಎಡಿಜಿಪಿ ಸೌಮೇಂದು ಮುಖರ್ಜಿ (ಎಡಚಿತ್ರ), ಸುಧೀರ್ ಎಂ ಹೆಗ್ಡೆ ಹಾಗೂ ಪಂಕಜ್ ಕುಮಾರ್ ಠಾಕೂರ್ (ಬಲಚಿತ್ರ)
ಎಡಿಜಿಪಿ ಸೌಮೇಂದು ಮುಖರ್ಜಿ (ಎಡಚಿತ್ರ), ಸುಧೀರ್ ಎಂ ಹೆಗ್ಡೆ ಹಾಗೂ ಪಂಕಜ್ ಕುಮಾರ್ ಠಾಕೂರ್ (ಬಲಚಿತ್ರ)

2024ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಕರ್ನಾಟಕದ 23 ಪೊಲೀಸ್ ಅಧಿಕಾರಿಗಳು ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕ ಸೇರಿ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ಈ ಪೈಕಿ 19 ಮಂದಿ ರಾಜ್ಯದಲ್ಲೇ ಕಾರ್ಯನಿರ್ವಹಿಸುತ್ತಿರುವ ಪೊಲೀಸದ ಅಧಿಕಾರಿಗಳಾಗಿದ್ದು, ಇಬ್ಬರು ನವದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ಕೇಡರ್​ನ ಅಧಿಕಾರಿಗಳಾಗಿದ್ದಾರೆ.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಸೌಮೇಂದು ಮುಖರ್ಜಿ ಮತ್ತು ಕೆಎಚ್​​ಆರ್​​ಸಿ ಡಿವೈಎಸ್​​ಪಿ ಸುಧೀರ್ ಎಂ ಹೆಗ್ಡೆ ಅವರಿಗೆ ವಿಶಿಷ್ಟ ಸೇವಾ ಪದಕ ಘೋಷಿಸಲಾಗಿದೆ. ಕೇಂದ್ರ ಗೃಹ ಇಲಾಖೆಯ ಜಂಟಿ ನಿರ್ದೇಶಕರಾದ ಪಂಕಜ್ ಕುಮಾರ್ ಠಾಕೂರ್ ಅವರೂ ಕೂಡ ವಿಶಿಷ್ಟ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಹಾಗಯೇ ದೆಹಲಿ ಸಿಬಿಐ ಜಂಟಿ ನಿರ್ದೇಶಕರಾದ ಪ್ರವೀಣ್ ಮಧುಕರ್ ಪವಾರ್ ಮತ್ತು ಕೇಂದ್ರ ಗೃಹ ಇಲಾಖೆಯ ಉಪ ನಿರ್ದೇಶಕರಾದ ಕೌಶಲೇಂದ್ರ ಕುಮಾರ್ ಅವರಿಗೆ ಶ್ಲಾಘನೀಯ ಸೇವಾ ಪದಕ ಘೋಷಿಸಲಾಗಿದೆ.

ಶ್ಲಾಘನೀಯ ಸೇವಾ ಪದಕಕ್ಕೆ ಆಯ್ಕೆಯಾದ ಕರ್ನಾಟಕದ ಇತರೆ ಪೊಲೀಸ್​ ಅಧಿಕಾರಿಗಳು:

1.ರಮಣ್ ಗುಪ್ತ ಅಪರ ಪೊಲೀಸ್ ಆಯುಕ್ತರು, ಪೂರ್ವ, ಬೆಂಗಳೂರು ನಗರ,

2.ಅನಿಲ್ ಕುಮಾರ್ ಎಸ್. ಭೂಮರೆಡ್ಡಿ ಅಪರ ಪೊಲೀಸ್ ಅಧೀಕ್ಷಕರು ಶಿವಮೊಗ್ಗ

3.ನಾಗರಾಜ ಎ, ಕಮಾಂಡೆಂಟ್ ಕೆಎಸ್ಐಎಸ್ಎಫ್ 1ನೇ ಪಡೆ ಬೆಂಗಳೂರು

4.ಎಸ್ ಪಿ ಧರಣೇಶ ಅಪರ ಪೊಲೀಸ್ ಅಧೀಕ್ಷಕರು ಯಾದಗಿರಿ

5.ನಾರಾಯಣಸ್ವಾಮಿ ವಿ, ಸಹಾಯಕ ಪೊಲೀಸ್ ಆಯುಕ್ತರು, ಜಯನಗರ ಬೆಂಗಳೂರು

6.ವಿ. ರಘು ಕುಮಾರ್ ಸಹಾಯಕ ನಿರ್ದೇಶಕರು ರಾಜ್ಯ ಗುಪ್ತವಾರ್ತೆ ಬೆಂಗಳೂರು

7.ಬಿ ಎಸ್ ಶ್ರೀನಿವಾಸ ರಾಜ್ ಡಿವೈಎಸ್ಪಿ, ಸಿಐಡಿ ಬೆಂಗಳೂರು

8.ಎಸ್ ಆರ್ ವೀರೇಂದ್ರ ಪ್ರಸಾದ್ ಪೊಲೀಸ್ ಇನ್ ಸ್ಪೆಕ್ಟರ್ ಚನ್ನರಾಯಪಟ್ಟಣ, ಬೆಂಗಳೂರು ಗ್ರಾಮಾಂತರ ಜಿಲ್ಲೆ

9.ಎಂ.ಆರ್. ಹರೀಶ್ ಪೊಲೀಸ್ ಇನ್ ಸ್ಪೆಕ್ಟರ್ ದೊಡ್ಡ ಬೆಳವಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ

10.ಆರ್ ಪುಂಡಲಿಕ ಸ್ಪೆಶಲ್, ಆರ್​​ಎಸ್ಐ 6ನೇ ಪಡೆ , ಕೆಎಸ್ಆರ್ಪಿ, ಕಲಬುರಗಿ

11.ರಾಮು, ಸಹಾಯಕ ಪೊಲೀಸ್ ನಿರ್ದೇಶಕರು ಬಜ್ಪೆ ಪೊಲೀಸ್ ಠಾಣಾ ಮಂಗಳೂರು ನಗರ

12.ಸುರೇಶ್ ಆರ್ ಪುಡಕಲಕಟ್ಟಿ ಎಎಸ್ಐ (ವೈರ್ ಲೆಸ್) ಕೇಂದ್ರ ಕಚೇರಿ ಬೆಂಗಳೂರು

13.ದಾದಾ ಪೀರ್ ಎಚ್. ಎ ಆರ್ ಎಸ್ಐ ಜಿಲ್ಲಾ ಶಶಸ್ತ್ರ ಮೀಸಲು ಪಡೆ ದಾವಣಗೆರೆ

14.ವೆಂಕಟೇಶ ಸಿ ಸಹಾಯಕ ಗುಪ್ತಚರ ಅಧಿಕಾರಿ ರಾಜ್ಯ ಗುಪ್ತವಾರ್ತೆ ಬೆಂಗಳೂರು

15.ಶಮಂತ್ ಯಶ್ ಜಿ. ಎಎಸ್ಐ, ಸಿಐಡಿ ಬೆಂಗಳೂರು

16.ಸಿ ವಿ ಗೋವಿಂದರಾಜು ಹೆಚ್ ಸಿ 4ನೇ ಪಡೆ, ಕೆಎಸ್ಆರ್ಪಿ, ಬೆಂಗಳೂರು

17.ಮಣಿಕಂಠ ಎಂ. ಸಿಹೆಚ್​ಸಿ, ಸಹಾಯಕ ಪೊಲೀಸ್ ಆಯುಕ್ತರ ಕಚೇರಿ, ಪಾಂಡೇಶ್ವರ ಮಂಗಳೂರು ನಗರ

18.ಎಸ್ ಎನ್ ನರಸಿಂಹರಾಜು ಸಿಹೆಚ್​ಸಿ, ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ವಿಭಾಗ ತುಮಕೂರು ಜಿಲ್ಲೆ

(ವರದಿ: ಎಚ್.ಮಾರುತಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ