logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಆಲಮಟ್ಟಿ, ಕೆಆರ್‌ಎಸ್‌ ಒಳಹರಿವಿನ ಪ್ರಮಾಣ ಏರಿಕೆ, ನೀರಿನ ಮಟ್ಟ ಯಾವ ಜಲಾಶಯದಲ್ಲಿ ಎಷ್ಟಿದೆ

Karnataka Reservoirs: ಆಲಮಟ್ಟಿ, ಕೆಆರ್‌ಎಸ್‌ ಒಳಹರಿವಿನ ಪ್ರಮಾಣ ಏರಿಕೆ, ನೀರಿನ ಮಟ್ಟ ಯಾವ ಜಲಾಶಯದಲ್ಲಿ ಎಷ್ಟಿದೆ

Umesha Bhatta P H HT Kannada

Sep 06, 2024 11:37 AM IST

google News

ವಿಜಯನಗರ ಜಿಲ್ಲೆ ತುಂಗಭದ್ರಾ ಜಲಾಶಯ ಮತ್ತೆ ತುಂಬಿ ತುಳುಕುತ್ತಿದೆ.

    • Karnataka Dam levels  ಕರ್ನಾಟಕದಲ್ಲಿ  ಅಲ್ಲಲ್ಲಿ ಮಳೆಯಾಗುತ್ತಿರುವ ನಡುವೆಯೇ ಜಲಾಶಯಗಳ ನೀರಿನ ಮಟ್ಟದಲ್ಲೂ ಏರಿಕೆ ಕಂಡು ಬಂದಿದೆ. ಅದರ ವಿವರ ಇಲ್ಲಿದೆ. 
ವಿಜಯನಗರ ಜಿಲ್ಲೆ ತುಂಗಭದ್ರಾ ಜಲಾಶಯ ಮತ್ತೆ ತುಂಬಿ ತುಳುಕುತ್ತಿದೆ.
ವಿಜಯನಗರ ಜಿಲ್ಲೆ ತುಂಗಭದ್ರಾ ಜಲಾಶಯ ಮತ್ತೆ ತುಂಬಿ ತುಳುಕುತ್ತಿದೆ.

ಬೆಂಗಳೂರು: ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ( Belagavi Rains) ಮತ್ತೆ ಮಳೆಯಾದ ಪರಿಣಾಮವಾಗಿ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ( Almatti Reservoir) ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಜಲಾಶಯಕ್ಕೆ ಸುಮಾರು 64 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಅದೇ ರೀತಿ ಕೊಡಗಿನಲ್ಲೂ( Kodgu Rains) ಮಳೆಯಾಗಿದ್ದರಿಂದ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯಕ್ಕೂ( KRS Dam) ನೀರಿನ ಒಳ ಹರಿವು ಅಧಿಕವಾಗಿದೆ. ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿದ್ದರಿಂದ ತುಂಗಭದ್ರಾ ಜಲಾಶಯದ ನೀರಿನ ಒಳ ಹರಿವು ಯಥಾರೀತಿ ಇದೆ. ಆದರೆ ಕಬಿನಿ ಸಹಿತ ಇತರ ಜಲಾಶಯಗಳ ಒಳ ಹರಿವಿನ ಪ್ರಮಾಣದಲ್ಲಿ ತಗ್ಗಿದೆ. ಕರ್ನಾಟಕದ ಕರಾವಳಿ ಮಲೆನಾಡು, ಕಾವೇರಿ ಸೀಮೆಯಲ್ಲಿ ಕಳೆದ ಎರಡು ತಿಂಗಳು ಉತ್ತಮ ಮಳೆಯಾಗಿದ್ದರಿಂದ ಬಹುತೇಕ ಜಲಾಶಯಗಳೂ ಈಗಲೂ ತುಂಬಿವೆ. ನೀರಿನ ಒಳ ಹರಿವು ನೋಡಿಕೊಂಡು ಹೊರಕ್ಕೆ ನೀರನ್ನು ಹರಿಸಲಾಗುತ್ತಿದೆ.

ಆಲಮಟ್ಟಿ ಜಲಾಶಯ

ಮಹಾರಾಷ್ಟ್ರ ಮತ್ತು ಬೆಳಗಾವಿಯಲ್ಲಿ ಮಳೆ ಬಿಡುವಿನ ಬಳಿಕ ಮತ್ತೆ ಬಂದಿದ್ದರಿಂದ ಕೃಷ್ಣಾ ನದಿಯಲ್ಲಿ ನೀರು ಏರಿಕೆಯಾಗಿದೆ. ಇದರಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೂ ನೀರು ಏರಿಕೆ ಕಂಡಿದೆ. ಶುಕ್ರವಾರ ಬೆಳಿಗ್ಗೆ ಜಲಾಶಯಕ್ಕೆ 64,322 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.

ನಾಲೆಗಳಿಗೂ ಸೇರಿ ಒಟ್ಟು 70,875 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 519.53 ಮೀಟರ್‌ ಇದೆ. ಜಲಾಶಯದಲ್ಲಿ 121.782 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 123.081 ಟಿಎಂಸಿ ನೀರು ಸಂಗ್ರಹಿಸಬಹುದು. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್‌.

ಕೆಆರ್‌ಎಸ್‌ ಜಲಾಶಯ

ಕೊಡಗು ಭಾಗದಲ್ಲಿ ಮಳೆಯಾಗಿದ್ದರಿಂದ ಕಾವೇರಿ ನದಿ ಮೂಲಕ ಮಂಡ್ಯದ ಕೆಆರ್‌ಎಸ್‌ ಜಲಾಶಯಕ್ಕೆ ನಿರಂತರ ನೀರು ಹರಿದು ಬರುತ್ತಿದೆ. ಶುಕ್ರವಾರವೂ ಜಲಾಶಯಕ್ಕೆ ಒಳ ಹರಿವು ಏರಿಕೆ ಕಂಡಿದ್ದು. 16012 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಸದ್ಯ 15570 ಕ್ಯೂಸೆಕ್‌ ನೀರನ್ನು ಜಲಾಶಯದಿಂದ ಹೊರಕ್ಕೆ ಹರಿಸಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 124.48 ಅಡಿ ಇದೆ. ಜಲಾಶಯದಲ್ಲಿ 49.005 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ124.80 ಅಡಿ ಹಾಗು ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ.

ತುಂಗಭದ್ರಾ ಜಲಾಶಯ

ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗಿ ಈಗ ಕಡಿಮೆಯಾಗಿದ್ದರೂ ವಿಜಯನಗರ ಜಿಲ್ಲೆ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಈಗಲೂ ನೀರು ಹರಿದು ಬರುತ್ತಿದೆ. ಜಲಾಶಯಕ್ಕೆ ಶುಕ್ರವಾರ 32,047 ಕ್ಯೂಸೆಕ್‌ ಇದೆ. ಹೊರ ಹರಿವು ಕೂಡ ಅಷ್ಟೇ ಪ್ರಮಾಣದಲ್ಲಿ ಇರಿಸಲಾಗಿದೆ. ಜಲಾಶಯದ ನೀರಿನ ಮಟ್ಟವು 1632 ಅಡಿ ಇದೆ. ಜಲಾಶಯದ ಗರಿಷ್ಠ ಮಟ್ಟವು 1633 ಅಡಿ. ಜಲಾಶಯದಲ್ಲಿ ಈಗಾಗಲೇ 101.773 ಟಿಎಂಸಿ ನೀರು ಸಂಗ್ರಹವಾಗಿದೆ. 105.33 ಟಿಎಂಸಿ ನೀರನ್ನು ಇಲ್ಲಿ ಸಂಗ್ರಹಿಸಬಹುದು.

ಕಬಿನಿ ಜಲಾಶಯ

ಕೇರಳದಲ್ಲಿ ಬಹುತೇಕ ಮಳೆ ತಗ್ಗಿರುವುದರಿಂದ ಮೈಸೂರು ಜಿಲ್ಲೆ ಕಬಿನಿ ಜಲಾಶಯಕ್ಕೆ ಒಳ ಹರಿವು ಕಡಿಮೆಯಾಗಿದೆ. ಜಲಾಶಯಕ್ಕೆ 4,445 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದ 5,298 ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ.ಜಲಾಶಯದಲ್ಲಿ ಸದ್ಯ 2283.40 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 19.12ಟಿಎಂಸಿ ನೀರಿದೆ. ಜಲಾಶಯದ ಗರಿಷ್ಠ ಮಟ್ಟವು 2284 ಅಡಿ ಹಾಗೂ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ