logo
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ಲೋಕಾಯುಕ್ತ ಅಧಿಕಾರಿಗಳ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಿದ ಆರ್​ಟಿಐ ಕಾರ್ಯಕರ್ತ; ಕಾರಣ ಹೀಗಿದೆ

ಮೈಸೂರು ಲೋಕಾಯುಕ್ತ ಅಧಿಕಾರಿಗಳ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಿದ ಆರ್​ಟಿಐ ಕಾರ್ಯಕರ್ತ; ಕಾರಣ ಹೀಗಿದೆ

Prasanna Kumar P N HT Kannada

Oct 15, 2024 03:49 PM IST

google News

ಮೈಸೂರು ಲೋಕಾಯುಕ್ತ ಅಧಿಕಾರಿಗಳ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಿದ ಆರ್​ಟಿಐ ಕಾರ್ಯಕರ್ತ

    • Mysore News: ಮುಡಾ ಹಗರಣಕ್ಕೆ ಸಂಬಂಧಿಸಿ 1 ಸಾವಿರ ದಾಖಲೆ ಸಂಗ್ರಹಿಸಿದ್ದರೂ ದಾಳಿ ನಡೆಸದೆ ಸರ್ಕಾರದ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಆರ್​ಟಿಐ ಕಾರ್ಯಕರ್ತ ಗಂಗರಾಜು ಎನ್ನುವವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಮೈಸೂರು ಲೋಕಾಯುಕ್ತ ಅಧಿಕಾರಿಗಳ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಿದ ಆರ್​ಟಿಐ ಕಾರ್ಯಕರ್ತ
ಮೈಸೂರು ಲೋಕಾಯುಕ್ತ ಅಧಿಕಾರಿಗಳ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಿದ ಆರ್​ಟಿಐ ಕಾರ್ಯಕರ್ತ

ಮೈಸೂರು: ಇಲ್ಲಿ ಲೋಕಾಯುಕ್ತ ಅಧಿಕಾರಿಗಳ ವಿರುದ್ದ ಆರ್​​ಟಿಐ ಕಾರ್ಯಕರ್ತ ಗಂಗರಾಜು ಎನ್ನುವವರು ಇ-ಮೇಲ್ ಹಾಗೂ ಅಂಚೆ ಮೂಲಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಅವರಿಗೆ ದೂರು ನೀಡಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಹಗರಣಕ್ಕೆ ಸಂಬಂಧಿಸಿ 1 ಸಾವಿರ ಪುಟಗಳ ಸಾಕ್ಷ್ಯ ಸಂಗ್ರಹಿಸಿದ್ದರೂ ದಾಳಿ ನಡೆಸದೇ ಸರ್ಕಾರದ ಜೊತೆ ಲೋಕಾಯುಕ್ತ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮೈಸೂರು ಲೋಕಾಯುಕ್ತ ಕಚೇರಿಯ ಇನ್ಸ್‌ಪೆಕ್ಟರ್ ರವಿಕುಮಾರ್ ನೇತೃತ್ವದ ತಂಡವು ಮುಡಾದಲ್ಲಿನ ಅಕ್ರಮಗಳ ಕುರಿತು ಸಾಕ್ಷಿ ಕಲೆ ಹಾಕಿ ಸರ್ಚ್ ವಾರೆಂಟ್ ಕೋರಿ ಅಂದಿನ ಲೋಕಾಯುಕ್ತ ಎಸ್​ಪಿ, ವಿಜೆ ಸುಜಿತ್ ಮೂಲಕ ಲೋಕಾಯುಕ್ತ ಬೆಂಗಳೂರು ಕಚೇರಿಗೆ ಮನವಿ ಸಲ್ಲಿಸಿತ್ತು. ಆದರೆ, ಉದ್ದೇಶಪೂರ್ವಕವಾಗಿ 28 ದಿನಗಳ ಕಾಲ ವಿಳಂಬ ಮಾಡಿ ಲೋಕಾಯುಕ್ತವು ಸರ್ಚ್ ವಾರಂಟ್‌ ನೀಡಿತು.

‘ಮುಡಾದಿಂದ 140 ಕಡತಗಳು ತರಿಸಿಕೊಂಡಿದ್ದರು’

ಅಷ್ಟರೊಳಗೆ ಲೋಕಾಯುಕ್ತದ ಕೆಲವು ಅಧಿಕಾರಿಗಳಿಂದಲೇ ಈ ಮಾಹಿತಿ ಸರ್ಕಾರಕ್ಕೆ ಸೋರಿಕೆ ಆಗಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಐಎಎಸ್‌ ಅಧಿಕಾರಿಗಳ ತಂಡವೊಂದನ್ನು ಕಳುಹಿಸಿ 140ಕ್ಕೂ ಹೆಚ್ಚು ಕಡತಗಳನ್ನು ಮುಡಾ ಕಚೇರಿಯಿಂದ ಬೆಂಗಳೂರಿಗೆ ತರಿಸಿಕೊಂಡಿದ್ದರು. ಜುಲೈ 4ರಂದು ಎಸ್​ಪಿ, ಸುಜಿತ್‌ ಇಲ್ಲಿಂದ ವರ್ಗವಾಗಿದ್ದಾರೆ. ಜುಲೈ 5ರಂದು ಲೋಕಾಯುಕ್ತ ತನ್ನ ಸರ್ಚ್‌ ವಾರಂಟ್‌ ಹಿಂಪಡೆದಿದೆ.

ಲೋಕಾಯುಕ್ತ ಮೈಸೂರು ಡಿವೈಎಸ್‌ಪಿ ಮಾಲತೇಶ್‌ ಈ ದಾಳಿ ಕುರಿತು ಮೊದಲೇ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ಗೆ ಮಾಹಿತಿ ನೀಡಿದ್ದರು. ನಂತರದಲ್ಲಿ ಎಲ್ಲರೂ ಜೊತೆಗೂಡಿ ಹಣ ಪಡೆದು ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ. ಈ ಕಾರಣಕ್ಕಾಗಿಯೇ ಲೋಕಾಯುಕ್ತ ದಾಳಿ ನಡೆಯಲಿಲ್ಲ. ಸರ್ಚ್‌ ವಾರಂಟ್ ನೀಡಲು ವಿಳಂಬ ಮಾಡಿದ್ದರಿಂದ ಮುಡಾದಲ್ಲಿ ಸಾಕಷ್ಟು ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ ಎಂದು ಆರ್​ಟಿಐ ಕಾರ್ಯಕರ್ತ ಗಂಗರಾಜು ಉಲ್ಲೇಖಿಸಿದ್ದಾರೆ.

ರಾಜ್ಯಪಾಲರಿಗೆ ದೂರು ನೀಡಿರುವ ಆರ್​​ಟಿಐ ಕಾರ್ಯಕರ್ತ ಗಂಗರಾಜು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ