SEIL Experience: ರಾಷ್ಟ್ರೀಯ ಏಕಾತ್ಮತಾ ಯಾತ್ರಾ 2023 - ಏನಿದು ಸೀಲ್ ಎಕ್ಸ್‌ಪೀರಿಯೆನ್ಸ್?; ಇತಿಹಾಸ, ಉದ್ದೇಶ ಮತ್ತು ಇತರೆ ವಿವರ
Feb 08, 2023 10:21 AM IST
ಬೆಂಗಳೂರಿನ ಸರ್. ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಮಂಗಳವಾರ ಸೀಲ್ (SEIL)ನ ರಾಷ್ಟ್ರೀಯ ಏಕಾತ್ಮತಾ ಯಾತ್ರಾ 2023ರ ತಂಡವನ್ನು ನಗರದ ಗಣ್ಯರು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಕಾರ್ಯಕರ್ತರು ಬರಮಾಡಿಕೊಂಡರು.
SEIL Experience: ಸೀಲ್‌ನ ರಾಷ್ಟ್ರೀಯ ಏಕಾತ್ಮತಾ ಯಾತ್ರಾ 2023ರ ತಂಡಗಳ ಪ್ರವಾಸ ಫೆ.1ರಂದು ಶುರುವಾಗಿದೆ. ಪ್ರವಾಸವು 4 ವಿವಿಧ ರಾಜ್ಯಗಳ ವಿವಿಧ ಸ್ಥಳಗಳಿಗೆ ಹೋಗುತ್ತದೆ. ಯಾತ್ರೆಯಲ್ಲಿ 482 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಈ ಪೈಕಿ 24 ವಿದ್ಯಾರ್ಥಿಗಳ 2 ತಂಡ ಕರ್ನಾಟಕಕ್ಕೆ ಬರಲಿದೆ. ಈ ಪೈಕಿ ಒಂದು ತಂಡ ನಿನ್ನೆ (ಫೆ.7) ಬೆಂಗಳೂರಿಗೆ ಆಗಮಿಸಿತು.
ಸೀಲ್ (SEIL)ನ ರಾಷ್ಟ್ರೀಯ ಏಕಾತ್ಮತಾ ಯಾತ್ರಾ 2023ರ ತಂಡ ಮಂಗಳವಾರ ಬೆಂಗಳೂರಿನ ಸರ್. ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಬಂದಿಳಿದಿದೆ. ಇದು ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳ ತಂಡವಾಗಿದ್ದು, ಇವರನ್ನು ನಗರದ ಗಣ್ಯರು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಕಾರ್ಯಕರ್ತರು ಬರಮಾಡಿಕೊಂಡರು.
ಅವರನ್ನು ಡೊಳ್ಳು ಮೇಳ ಹಾಗೂ ಭಾರತಮಾತೆಯ ಘೋಷಣೆಗಳೊಂದಿಗೆ ಸ್ವಾಗತಿಸಲಾಯಿತು. ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ಬಳ್ಳಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಪ್ರಾಂತ ಪ್ರಮುಖ ಪ್ರೊ. ರಾಮಚಂದ್ರ ಶೆಟ್ಟಿ, ದಕ್ಷಿಣ ಮದ್ಯಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪೂರ, ನಗರ ಅದ್ಯಕ್ಷ ಪ್ರೊ.ರಮೇಶ, ನಗರ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಹಿರಿಯ ಕಾರ್ಯಕರ್ತರಾದ ಲವೀನ ಕೊಟ್ಯಾನ್, ವಿನಯ ಜಾಧವ, ಮಹೇಶ, ಕಾರ್ಯಕರ್ತರಾದ ಭುವನ, ವೆಂಕಟೇಶ, ವರುಣ, ಜನಾರ್ಧನ, ಕಾರ್ತಿಕ, ಗಗನ, ನಿತಿನ, ಅಮೂಲ್ಯ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸೀಲ್‌ನ ರಾಷ್ಟ್ರೀಯ ಏಕಾತ್ಮತಾ ಯಾತ್ರಾ 2023ರ ತಂಡಗಳ ಪ್ರವಾಸ ಫೆ.1ರಂದು ಶುರುವಾಗಿದೆ. ಪ್ರವಾಸವು 4 ವಿವಿಧ ರಾಜ್ಯಗಳ ವಿವಿಧ ಸ್ಥಳಗಳಿಗೆ ಹೋಗುತ್ತದೆ. ಯಾತ್ರೆಯಲ್ಲಿ 482 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಈ ಪೈಕಿ 24 ವಿದ್ಯಾರ್ಥಿಗಳ 2 ತಂಡ ಕರ್ನಾಟಕಕ್ಕೆ ಬರಲಿದೆ. ಈ ಪೈಕಿ ಒಂದು ತಂಡ ನಿನ್ನೆ (ಫೆ.7) ಬೆಂಗಳೂರಿಗೆ ಆಗಮಿಸಿತು.
ಏನಿದು ಸೀಲ್, ಇತಿಹಾಸ ಮತ್ತು ಇತರೆ ವಿವರ (What is SEIL, History and other details)
ಅದು 1965ರ ಕಾಲಘಟ್ಟ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್‌ನ ಆಚಾರ್ಯ ಗಿರಿರಾಜ್ ಕಿಶೋರ್ ಅಧ್ಯಕ್ಷತೆಯಲ್ಲಿ ಹೊಸ ಉಪಕ್ರಮವಾಗಿ ಸೀಲ್ (Student’s Experience in Inter-State Living -SEIL) ಎಂಬ ಟ್ರಸ್ಟ್ ಅನ್ನು ಶುರುಮಾಡಲಾಗಿದೆ. ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಏಕತೆಯ ಭಾವನೆಯನ್ನು ಉತ್ತೇಜಿಸುವ ವಿನಮ್ರ ಗುರಿಯೊಂದಿಗೆ ಕೆಲಸ ಮಾಡುವ ಟ್ರಸ್ಟ್ ಇದು. ಈಶಾನ್ಯ ಭಾರತ ಮತ್ತು ರಾಷ್ಟ್ರದ ಇತರ ಯುವಜನರ ನಡುವೆ ಸಹೋದರತ್ವದ ಭಾವನೆಯನ್ನು ಉತ್ತೇಜಿಸುವ ಉದ್ದೇಶ ಇದರದ್ದು.
ಇದರಂತೆ, ಟ್ರಸ್ಟ್ ತನ್ನ ವಾರ್ಷಿಕ ಅಧ್ಯಯನ ಪ್ರವಾಸ ಮತ್ತು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ನಡೆಸಿದೆ. ಯುವಜನರ ನಡುವೆ ಭಾವನಾತ್ಮಕ ಸಂಪರ್ಕದ ಮೇಲೆ ಬಂಧಗಳನ್ನು ಬೆಸೆಯುವ ಪ್ರಯತ್ನದಲ್ಲಿ ಸೀಲ್ ಸ್ಥಳೀಯ ಆತಿಥೇಯ ಕುಟುಂಬದಲ್ಲಿ ಪ್ರತಿ ವಿದ್ಯಾರ್ಥಿಗೆ ಅವಕಾಶ ಕಲ್ಪಿಸುವ ಮಹತ್ಕಾರ್ಯವನ್ನು ಮಾಡಿದೆ. ಅಲ್ಲಿ ಅವರನ್ನು ಅತಿಥಿಯಾಗಿ ಪರಿಗಣಿಸದೆ ಕುಟುಂಬದ ಸದಸ್ಯರಾಗಿ ಪರಿಗಣಿಸುವುದು ರೂಢಿಯಾಗಿದೆ. ಈ ಉಪಕ್ರಮವು ಭೇಟಿ ನೀಡುವ ವಿದ್ಯಾರ್ಥಿಗಳಿಗೆ ಸ್ಥಳೀಯ ಸಂಸ್ಕೃತಿ ಮತ್ತು ಅಭ್ಯಾಸಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ದೇಶದ ಇತರ ಭಾಗಗಳಲ್ಲಿ ಅಸ್ತಿತ್ವದಲ್ಲಿರುವ ಸಂಸ್ಕೃತಿಗಳ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಆತಿಥೇಯರಿಗೂ ನೆರವಾಗುತ್ತಿದೆ.
ಸೀಲ್‌ನ ಉದ್ದೇಶಗಳು
- ಒಂದು ರಾಷ್ಟ್ರ - ಒಂದು ಜನರು - ಒಂದು ಸಂಸ್ಕೃತಿಯು ಸೀಲ್‌ನ ನಂಬಿಕೆ
- ಅನುಭವದ ಮಟ್ಟದಲ್ಲಿ ಭಾವನಾತ್ಮಕ ಏಕೀಕರಣ
- ನಮ್ಮ ರಾಷ್ಟ್ರದ ಅತ್ಯಗತ್ಯ ಏಕತೆಯ ಬಗ್ಗೆ ದೃಢ ಮನವರಿಕೆ
- ವಿಭಿನ್ನ ಜೀವನಶೈಲಿಯಲ್ಲಿ ನಿರ್ದಿಷ್ಟವಾಗಿ ಗಡಿ ಪ್ರದೇಶದ ಹೋಲಿಕೆ ಹೈಲೈಟ್ ಮಾಡಿ ಅರ್ಥೈಸುವುದು
- ದೂರದ ಪ್ರದೇಶಗಳ ಬಗ್ಗೆ ಜಾಗೃತಿ ಮೂಡಿಸಿ
- ವಿವಿಧತೆಯಲ್ಲಿ ಏಕತೆಯನ್ನು ಅನುಭವಿಸಲು ಯುವಜನರಿಗೆ ಅವಕಾಶಗಳನ್ನು ಒದಗಿಸುವುದು
ಇದಲ್ಲದೆ, ಯುವ ವಿಕಾಸ ಕೇಂದ್ರವನ್ನೂ ಟ್ರಸ್ಟ್ ಆರಂಭಿಸಿದೆ. ಇದು ಈಶಾನ್ಯ ಭಾರತದ ಯುವಜನರ ಕೌಶಲ ಅಭಿವೃದ್ಧಿ, ಆರ್ಥಿಕ ಸಾಕ್ಷರತೆ ಮತ್ತು ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಿದೆ. ಯುವ ವಿಕಾಸ ಕೇಂದ್ರದ ಚಟುವಟಿಕೆಗಳಿವು -ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮ, ಶಿಬಿರಗಳು, ಸೆಮಿನಾರ್‌ಗಳು, ಸ್ಪರ್ಧೆಗಳು, ವೃತ್ತಿಪರ ಅಲ್ಪಾವಧಿಯ ಪ್ರಮಾಣಪತ್ರ ಕೋರ್ಸ್‌ಗಳು, ಉಪನ್ಯಾಸ ಕಾರ್ಯಕ್ರಮಗಳು, ಕಾರ್ಯಾಗಾರಗಳು, ಕಂಪ್ಯೂಟರ್ ಕೋರ್ಸ್‌ಗಳು, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ.