logo
ಕನ್ನಡ ಸುದ್ದಿ  /  ಕರ್ನಾಟಕ  /  South Bengaluru On High Alert: ತುರಹಳ್ಳಿ ಅರಣ್ಯ ಸಮೀಪ ಚಿರತೆ; ರಾತ್ರಿ ಸಂಚಾರಕ್ಕೆ ನಿರ್ಬಂಧ - ಚಿರತೆ ಸೆರೆಗೆ ಕಾರ್ಯಾಚರಣೆ ಶುರು

South Bengaluru on high alert: ತುರಹಳ್ಳಿ ಅರಣ್ಯ ಸಮೀಪ ಚಿರತೆ; ರಾತ್ರಿ ಸಂಚಾರಕ್ಕೆ ನಿರ್ಬಂಧ - ಚಿರತೆ ಸೆರೆಗೆ ಕಾರ್ಯಾಚರಣೆ ಶುರು

HT Kannada Desk HT Kannada

Nov 23, 2022 12:31 PM IST

google News

ಜಿಲ್ಲೆಯ ಕೆಲವೆಡೆ ಚಿರತೆ ಚಿರತೆ ಕಂಡು ಬಂದಿದೆ ಎಂದು ಒಕ್ಕಲಿಗರ ಹಿತರಕ್ಷಣಾ ವೇದಿಕೆ ಪ್ರತಿನಿಧಿ ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ)

  • South Bengaluru on high alert: ದಕ್ಷಿಣ ಬೆಂಗಳೂರಿನ ಬನಶಂಕರಿ ಆರನೇ ಹಂತದ ತುರಹಳ್ಳಿ ಅರಣ್ಯ ಸಮೀಪದ ವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ. ಆ ಪ್ರದೇಶದಲ್ಲಿ ಅಘೋಷಿತ ಹೈ ಅಲರ್ಟ್‌ ಚಾಲ್ತಿಯಲ್ಲಿದ್ದು,  ರಾತ್ರಿ ಸಂಚಾರ ನಿರ್ಬಂಧಕ್ಕೆ ಮನವಿ ಮಾಡಲಾಗಿದೆ. ಚಿರತೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಶುರುವಾಗಿದೆ.

ಜಿಲ್ಲೆಯ ಕೆಲವೆಡೆ ಚಿರತೆ ಚಿರತೆ ಕಂಡು ಬಂದಿದೆ ಎಂದು ಒಕ್ಕಲಿಗರ ಹಿತರಕ್ಷಣಾ ವೇದಿಕೆ ಪ್ರತಿನಿಧಿ ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ)
ಜಿಲ್ಲೆಯ ಕೆಲವೆಡೆ ಚಿರತೆ ಚಿರತೆ ಕಂಡು ಬಂದಿದೆ ಎಂದು ಒಕ್ಕಲಿಗರ ಹಿತರಕ್ಷಣಾ ವೇದಿಕೆ ಪ್ರತಿನಿಧಿ ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ದಕ್ಷಿಣ ಬೆಂಗಳೂರಿನ ಬನಶಂಕರಿ ಆರನೇ ಹಂತದ ತುರಹಳ್ಳಿ ಅರ‍ಣ್ಯ ಸಮೀಪದಲ್ಲಿ ಚಿರತೆ ಕಾಣಿಸಿಕೊಂಡಿದೆ. ಈ ಪ್ರದೇಶಕ್ಕೆ ಶನಿವಾರ ಚಿರತೆಯೊಂದು ನುಗ್ಗಿ ಕರುವನ್ನು ಕೊಂದಾಗಿನಿಂದ ದಕ್ಷಿಣ ಬೆಂಗಳೂರಿನ ನಿವಾಸಿಗಳು ಹೈ ಅಲರ್ಟ್‌ ಆಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ಚಿರತೆಯನ್ನು ಹಿಡಿದು ರಕ್ಷಿಸುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ತುರಹಳ್ಳಿ ಅರಣ್ಯ ಪ್ರದೇಶದ ಸಮೀಪದ ಬನಶಂಕರಿ 6ನೇ ಹಂತದಲ್ಲಿ ಚಿರತೆ ಕರುವನ್ನು ಬೇಟೆಯಾಡಿದ ವರದಿಯನ್ನು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದೆ. ಕರುವಿನ ಮೃತದೇಹ ಪತ್ತೆಯಾಗಿದ್ದು, ಅದೇ ಜಾಗಕ್ಕೆ ಚಿರತೆ ಮತ್ತೊಮ್ಮೆ ಭೇಟಿ ನೀಡಬಹುದು ಎಂಬ ಅಂದಾಜಿನ ಮೇರೆಗೆ ಅದರ ಬಳಿ ಪಂಜರ ಒಂದನ್ನು ಅರಣ್ಯಾಧಿಕಾರಿಗಳು ಇರಿಸಿದ್ದಾರೆ. ತಲಘಟ್ಟಪುರ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

"ಕೆಂಗೇರಿ ಸುತ್ತಮುತ್ತ ಚಿರತೆಗಳ ಇರುವಿಕೆ ಮತ್ತು ಚಲನವಲನ ದಾಖಲಾಗಿದ್ದರೆ, ಇಷ್ಟು ದಿನ ಈ ಪ್ರದೇಶಗಳಲ್ಲಿ ಅವುಗಳ ಚಲನವಲನ ಕೇವಲ ವದಂತಿಗಳಾಗಿದ್ದವು. ಆದರೆ ಈ ಭಾಗದಲ್ಲಿ ಇಂತಹ ಚಲನವಲನ ಮತ್ತು ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವುದು ಇದೇ ಮೊದಲು" ಎಂದು ಅರಣ್ಯ ಅಧಿಕಾರಿ ವಿವರಿಸಿದ್ದಾರೆ.

ಚಿರತೆ ಕುರಿತು ಕಟ್ಟೆಚ್ಚರ ವಹಿಸಿದ್ದು, ಅದರ ಚಲನವಲನದ ಮೇಲೆ ನಿಗಾ ಇಡಲಾಗಿದೆ ಎಂದು ಕಗ್ಗಲಿಪುರದ ಅರಣ್ಯಾಧಿಕಾರಿ ತಿಳಿಸಿದ್ದಾರೆ. ಅವರು ಹತ್ತಿರದ ಪ್ರದೇಶಗಳು ಮತ್ತು ನಿವಾಸಿ ಕಲ್ಯಾಣ ಸಂಘಗಳಿಗೆ (RWAs) ಅಪಾಯ ಕುರಿತಾದ ಅರಿವನ್ನು ನೀಡಿದ್ದಾರೆ. ವಿಶೇಷವಾಗಿ ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಗುಂಪುಗಳಲ್ಲಿ ಸಂಚರಿಸುವಂತೆ ಸ್ಥಳೀಯರಿಗೆ ಮಾರ್ಗದರ್ಶನ ನೀಡಿದ್ದಾರೆ.

ಬನಶಂಕರಿ 6ನೇ ಹಂತದಲ್ಲಿರುವ ಒಕ್ಕಲಿಗರ ಹಿತರಕ್ಷಣಾ ವೇದಿಕೆಯ ಪ್ರತಿನಿಧಿಯೊಬ್ಬರು ಈ ಕುರಿತು ಮಾಹಿತಿ ನೀಡಿ, ‘ಇಲ್ಲಿನ ಕೆಲವೆಡೆ ಚಿರತೆ ಹುಳಗಳು ಕಾಣಿಸಿಕೊಂಡಿವೆ. ಈ ಪ್ರದೇಶವು ದಟ್ಟವಾದ ಸಸ್ಯವರ್ಗವನ್ನು ಹೊಂದಿದ್ದು, ಆಕ್ರಮಿತ ಜಮೀನುಗಳಲ್ಲಿನ ಪೊದೆಗಳನ್ನು ತೆರವುಗೊಳಿಸಲು ಅರ್ಥ್‌ ಮೂವರ್ ಅನ್ನು ಬಳಸಲಾಗಿದೆ ಎಂದು ಹೇಳಿದರು.

ತುರಹಳ್ಳಿ ಅರಣ್ಯವು ಕೊನೆಯದಾಗಿ ಕಾಡಿನಲ್ಲಿ ಸುಟ್ಟು ಕರಕಲಾದ ಶವ ಪತ್ತೆಯಾದಾಗ ಸುದ್ದಿಯಾಗಿತ್ತು. ಅರಣ್ಯ ಭೂಮಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಿಯಲ್ ಎಸ್ಟೇಟ್ ಯೋಜನೆಗಳ ವಿರುದ್ಧ ನಿವಾಸಿಗಳು ಮತ್ತು ಸಂರಕ್ಷಣಾವಾದಿಗಳಿಂದ ಪ್ರತಿಭಟನೆಗಳೂ ನಡೆದಿವೆ.

ಗಮನಿಸಬಹುದಾದ ಇತರೆ ವಿಚಾರಗಳು

ತೆಲಂಗಾಣದಲ್ಲಿ ಕರೋನಾ ವಾಸಿಯಾದ ಕಾರಣ ಕಲಬುರಗಿಯ ಘತ್ತರಗಿ ಭಾಗಮ್ಮದೇವಿಗೆ ಉರುಳು ಸೇವೆ ಹರಕೆ ಪೂರೈಸುತ್ತಿರುವ ತಾಯಿ!

ʻUrulu seveʼ exvoto: ಎರಡು ಮೂರು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಕರೊನಾ ರೋಗವನ್ನು ರಾಜ್ಯದಿಂದ ತೊಲಗಿಸಿದರೆ 200 ಕಿ.ಮೀ. ಉರುಳುಸೇವೆ ಮಾಡುವುದಾಗಿ ಕಲಬುರಗಿಯ ಘತ್ತರಗಿ ಭಾಗಮ್ಮದೇವಿಗೆ ಹರಕೆ ಹೊತ್ತುಕೊಂಡಿದ್ದರು ಈ ತಾಯಿ. ತೆಲಂಗಾಣದಲ್ಲಿ ಈಗ ಕರೋನಾ ಕಡಿಮೆ ಆಗಿದೆ. ಹರಕೆ ತೀರಿಸಲು ತಮ್ಮೂರಿಂದ ಘತ್ತರಗಿಗೆ ಉರುಳುಸೇವೆ ಶುರುಮಾಡಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

ಚುನಾವಣೇಲಿ ಗೆದ್ದರೆ ಮೇರಠ್‌ಗೆ ನಾಥುರಾಮ್‌ ಗೋಡ್ಸೆ ನಗರ ಎಂದು ಮರುನಾಮಕರಣ; ಹಿಂದು ಮಹಾಸಭಾ ಭರವಸೆ!

Meerut as Nathuram Godse Nagar: ಉತ್ತರ ಪ್ರದೇಶದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಡಿಸೆಂಬರ್‌ನಲ್ಲಿ ನಡೆಯಲಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಿಂದು ಮಹಾಸಭಾ ಕೂಡ ಚುನಾವಣೆಗೆ ಸಜ್ಜಾಗಿದ್ದು, ಗೆದ್ದರೆ ಮೇರಠ್‌ ನಗರದ ಹೆಸರನ್ನು ನಾಥುರಾಮ್‌ ಗೋಡ್ಸೆ ನಗರ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿ ಗಮನಸೆಳೆದಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ