logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ದಕ್ಷಿಣ ಒಳನಾಡಿನಲ್ಲಿ ಇಂದು ಮಳೆ ಬರುತ್ತಾ, ನಾಳೆಯಿಂದ ರಾಜ್ಯದಲ್ಲಿ ಮತ್ತೆ ಮಳೆ ಸಿಂಚನ ನಿರೀಕ್ಷೆ

Karnataka Rains: ದಕ್ಷಿಣ ಒಳನಾಡಿನಲ್ಲಿ ಇಂದು ಮಳೆ ಬರುತ್ತಾ, ನಾಳೆಯಿಂದ ರಾಜ್ಯದಲ್ಲಿ ಮತ್ತೆ ಮಳೆ ಸಿಂಚನ ನಿರೀಕ್ಷೆ

Praveen Chandra B HT Kannada

Aug 15, 2023 07:08 AM IST

google News

ಬೆಂಗಳೂರು ಮಳೆ (ಫೈಲ್‌ ಚಿತ್ರ)

    • Karnataka Weather Update: ಸ್ವಾತಂತ್ರ್ಯ ದಿನವಾದ ಇಂದು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರ ಸಾಧಾರಣ ಮಳೆಯಾಗಲಿದೆ. ನಾಳೆಯಿಂದ (ಆಗಸ್ಟ್‌ 16) ಕರ್ನಾಟಕದಲ್ಲಿ ಮತ್ತೆ ಮಳೆಯಾಗುವ ಸೂಚನೆಯಿದೆ.
ಬೆಂಗಳೂರು ಮಳೆ (ಫೈಲ್‌ ಚಿತ್ರ)
ಬೆಂಗಳೂರು ಮಳೆ (ಫೈಲ್‌ ಚಿತ್ರ) (PTI)

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಬಿಸಿಲಿನ ಆಗಮನವಾಗಿದೆ. ಈ ವರ್ಷ ಇಷ್ಟೇ ಮಳೆಯಾ, ಮತ್ತೆ ಮಳೆ ಬರುತ್ತಾ ಎಂದು ರೈತರು ಯೋಚಿಸುತ್ತಿದ್ದಾರೆ. ಭಾರತದ ವಿವಿಧ ರಾಜ್ಯಗಳಲ್ಲಿ ಈಗ ಮಳೆಯ ಅಬ್ಬರವಿದ್ದು, ಕರ್ನಾಟಕದಲ್ಲಿಯೂ ಆಗಸ್ಟ್‌ 16ರಿಂದ ಹಗುರ ಸಾಧಾರಣ ಮಳೆಯಾಗುವ ಸೂಚನೆಯಿದೆ. ದಕ್ಷಿಣ ಒಳನಾಡಿನಲ್ಲಿ ಸ್ವಾತಂತ್ರ್ಯ ದಿನದಂದು ಹಗುರ ಸಾಧಾರಣ ಮಳೆಯಾಗಲಿದೆ. ಕೆಲವು ಜಿಲ್ಲೆಗಳಲ್ಲಿ ಒಣಹವೆಯ ಅಲರ್ಟ್‌ ಅನ್ನು ಹವಾಮಾನ ಇಲಾಖೆ ನೀಡಿದೆ. ಬಳ್ಳಾರಿ, ಬೆಂಗಳೂರು, ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ, ಕೋಲಾರದ ಹವಾಮಾನ ವರದಿ ಇಲ್ಲಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಕ್ಷಿಣ ಒಳನಾಡಿನ ಹವಾಮಾನ ವರದಿ

ಇಂದು ಬಳ್ಳಾರಿ ಒಣಹವೆ ಇರಲಿದೆ. ಬೆಂಗಳೂರು, ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಜಿಲ್ಲೆಗಳ ಕೆಲವೆಡೆ ಹಗುರ ಮಳೆಯಾಗಲಿದೆ. ಈ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಗುಡು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಸ್ವಾತಂತ್ರ್ಯ ದಿನದಂದು ಚಿತ್ರದುರ್ಗದಲ್ಲಿ ಒಣಹವೆ ಇರಲಿದೆ. ದಾವಣಗೆರೆಯಲ್ಲಿ ಹಗುರ ಮಳೆಯಾಗಲಿದೆ. ಹಾಸನ, ಕೊಡಗು ಜಿಲ್ಲೆಯ ಕೆಲವೆಡೆ ಗುಡುಗು ಮಿಂಚು ಸಹಿತ ಹಗುರ/ಸಾಧಾರಣ ಮಳೆ ಇರಲಿದೆ. ಮಂಡ್ಯ ಮೈಸೂರಿನಲ್ಲಿ ಒಣಹವೆ ಇರಲಿದೆ. ರಾಮನಗರದಲ್ಲಿ ಹಗುರ ಮಳೆ ಇರಲಿದೆ. ಶಿವಮೊಗ್ಗ, ತುಮಕೂರುಗಳಲ್ಲಿ ಹಗುರ/ಸಾಧಾರಣ ಮಳೆ ಇರಲಿದೆ. ತುಮಕೂರಿನಲ್ಲಿ ಹಗುರ ಮಳೆ ಇರಲಿದೆ. ವಿಜಯನಗರದಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆಗಸ್ಟ್‌ 16ರಿಂದ ಬೆಂಗಳೂರಿನಲ್ಲಿ ಮಳೆ

ಉದ್ಯಾನನಗರಿ ಬೆಂಗಳೂರಿನಲ್ಲಿ ಆಗಸ್ಟ್‌ 16ರ ಬಳಿಕ ನಾಲ್ಕು ದಿನ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿರುವುದಾಗಿ ವರದಿಗಳು ತಿಳಿಸಿವೆ. ಆಗಸ್ಟ್‌ 16ರಿಂದ 19ರವರೆಗೆ ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳಲಿದೆ. ಈ ನಾಲ್ಕು ದಿನ ಕರ್ನಾಟಕದ ಕೆಲವು ಕಡೆಗಳಲ್ಲಿ ಭಾರಿ ಮಳೆಯಾಗುವ ಸೂಚನೆಯಿದೆ.

ಆಗಸ್ಟ್‌ ಅಂತ್ಯದವರೆಗೆ ಮಳೆಯ ಕಣ್ಣಾಮುಚ್ಚಾಲೆಯಾಟ

ಆಗಸ್ಟ್‌ ತಿಂಗಳ ಕೊನೆಯ ವಾರದಲ್ಲಿ ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸೂಚನೆಯಿದೆ. ಕಳೆದ ವರ್ಷ ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಅಧಿಕ ಮಳೆಯಾಗಿತ್ತು.

ಹೊರರಾಜ್ಯಗಳಲ್ಲಿ ವರುಣಾರ್ಭಟ

ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಹಿಮಚಾಲ ಪ್ರದೇಶದಲ್ಲಿ ಮೇಘಸ್ಫೊಟವಾಗಿ ಸಾಕಷ್ಟು ಅನಾಹುತವಾಗಿದೆ. ಹಿಮಾಚಲ ಪ್ರದೇಶದಲ್ಲಿ ಮತ್ತು ಉತ್ತರಾಖಂಡದಲ್ಲಿ ಇನ್ನೂ ಕೆಲವು ದಿನ ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಬಿಹಾರ, ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಮುಂತಾದ ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ