Tejasvi Surya: ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದ ಸಂಸದ ತೇಜಸ್ವಿ ಸೂರ್ಯ, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್
Jan 18, 2023 03:14 PM IST
ಸಂಸದ ತೇಜಸ್ವಿ ಸೂರ್ಯ(HT PHOTO)
- ವಿಮಾನದ ತುರ್ತು ನಿರ್ಗಮನ ದ್ವಾರದ ಬಾಗಿಲು ತೆರೆದು ಸಹ ಪ್ರಯಾಣಿಕರಿಗೆ ಆತಂಕ ಉಂಟು ಮಾಡಿದ ಘಟನೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ದೇಶಾದ್ಯಂತ ಚರ್ಚೆಗಳು ನಡೆಯುತ್ತಿವೆ. ವಿಶೇಷವಾಗಿ, ತುರ್ತು ನಿರ್ಗಮನ ತೆರೆಯಲು ಪ್ರಯತ್ನಿಸಿರುವ ವಿಚಾರವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಬೆಂಗಳೂರು: ಕಳೆದ ತಿಂಗಳು ಚೆನ್ನೈ ವಿಮಾನದಲ್ಲಿ ಹಾರಾಟಕ್ಕೆ ಸಜ್ಜಾಗುತ್ತಿದ್ದ ವಿಮಾನದ ತುರ್ತು ನಿರ್ಗಮನ ದ್ವಾರದ ಬಾಗಿಲು ತೆರೆದು ಸಂಸದ ತೇಜಸ್ವಿ ಸೂರ್ಯ ಸಹ ಪ್ರಯಾಣಿಕರಿಗೆ ಆತಂಕ ಉಂಟು ಮಾಡಿದ ಘಟನೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ದೇಶಾದ್ಯಂತ ಚರ್ಚೆಗಳು ನಡೆಯುತ್ತಿವೆ. ವಿಶೇಷವಾಗಿ, ತುರ್ತು ನಿರ್ಗಮನ ತೆರೆಯಲು ಪ್ರಯತ್ನಿಸಿರುವ ವಿಚಾರವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಏನಿದು ಘಟನೆ?
ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿಇನ್ನೇನು ಹಾರಾಟಕ್ಕೆ ಸಜ್ಜಾಗುತ್ತಿದ್ದ ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದು ಪ್ರಯಾಣಿಕರಿಗೆ ಆತಂಕ ಉಂಟು ಮಾಡಿದ್ದರು. ಈ ಘಟನೆಯು ಇಂಡಿಗೋ ವಿಮಾನದಲ್ಲಿ (6ಇ-7339) 2022ರ ಡಿ. 10ರಂದು ನಡೆದಿದ್ದರು. ಈ ಸಮಯದಲ್ಲಿ ಇಂಡಿಗೊ ಇವರಿಂದ ಕ್ಷಮಾಪಣಾ ಪತ್ರ ಬರೆಸಿಕೊಂಡಿತ್ತು ಎನ್ನಲಾಗಿದೆ. ಆದರೆ, ಇದು ದೊಡ್ಡ ಮಟ್ಟದ ಅಪರಾಧವಾಗಿದ್ದು, ಸಂಸದರಾಗಿರುವುದರಿಂದ ಪ್ರಕರಣವನ್ನು ತಣ್ಣಗಾಗಿಸಲಾಯಿತೇ ಎಂಬ ಪ್ರಶ್ನೆ ಕಾಡಿದೆ.
‘ಡಿಸೆಂಬರ್ 10ರಂದು 6ಇ7339 ವಿಮಾನದಲ್ಲಿ ನಡೆದಿದ್ದೇನು? ವಿಮಾನಯಾನ ಸಚಿವಾಲಯ ಸೈಲೆಂಟ್ ಆಗಿರುವುದೇಕೆ? ಒಬ್ಬ ವ್ಯಕ್ತಿಯ ಅಚಾತುರ್ಯದಿಂದಾಗಿ ನಾವು 70 ಜನರ ಜೀವ ಕಳೆದುಕೊಳ್ಳಬೇಕಾಗಿತ್ತು’ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಟ್ವೀಟ್ ಮಾಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆ ನಡೆದ ಬಳಿಕ ಎಲ್ಲಾ ಪ್ರಯಾಣಿಕರನ್ನು ಇಳಿಸಿ ತಪಾಸಣೆ ನಡೆಸಲಾಗಿತ್ತು. ಇದರಿಂದ ವಿಮಾನ ಪ್ರಯಾಣ ಎರಡು ಗಂಟೆ ತಡವಾಗಿತ್ತು.
ಈ ಘಟನೆ ನಡೆದ ಬಳಿಕ ತೇಜಸ್ವಿ ಸೂರ್ಯ ಹೆಸರು ಬಹಿರಂಗಪಡಿಸಿರಲಿಲ್ಲ. ಪ್ರಯಾಣಿಕರೊಬ್ಬರು ತುರ್ತು ನಿರ್ಗಮನ ಬಾಗಿಲನ್ನು ತೆರೆದರು. ತಕ್ಷಣ ವಿಮಾನದ ಸಿಬ್ಬಂದಿಯು ಆ ಬಾಗಿಲು ಮುಚ್ಚಿದ್ದರು. ಬಳಿಕ ಎಲ್ಲಾ ಸುರಕ್ಷತಾ ಪರೀಕ್ಷೆ ನಡೆಸಿದ ಬಳಿಕ ವಿಮಾನಕ್ಕೆ ಟೇಕಾಫ್ ಆಗಲು ಅನುಮತಿ ನೀಡಲಾಯಿತು ಎಂದು ಎಎನ್‌ಐ ವರದಿ ಮಾಡಿತ್ತು. ಆದರೆ, ಡಿಜಿಸಿಎ ಮತ್ತು ಇಂಡಿಗೋ ಏರ್‌ಲೈನ್ಸ್ ಈ ಕುರಿತು ಯಾವುದೇ ವಿವರ ತಿಳಿಸಿರಲಿಲ್ಲ.
ಸೆಂಥಿಲ್ ಟ್ವೀಟ್ ಮಾಡಿದ ಬಳಿಕ ಈ ರೀತಿ ಮಾಡಿದ ಪ್ರಯಾಣಿಕ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಎಂದು ಹೇಳಲಾಯಿತು. ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಟ್ವೀಟ್ ಮಾಡಿದ ಬಳಿಕ ಈ ಘಟನೆ ನಡೆದಿರುವುದಾಗಿ ಡಿಜಿಸಿಎ ಮತ್ತು ಇಂಡಿಗೊ ಸಂಸ್ಥೆ ಒಪ್ಪಿಕೊಂಡಿದ್ದವು.
ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಬಳಿಕ ಇಂಡಿಗೊ ಪ್ರಕಟಣೆಯಲ್ಲಿ ತಿಳಿಸಿತ್ತು. "ಹಾರಲು ಸಿದ್ಧವಾಗುತ್ತಿದ್ದ ವೇಳೆ ಪ್ರಯಾಣಿಕರೊಬ್ಬರು ವಿಮಾನದ ಎಮರ್ಜೆನ್ಸಿ ಎಕ್ಸಿಟ್ ಡೋರ್ ತೆಗೆದಿದ್ದರು. ಅದಕ್ಕಾಗಿ ಕ್ಷಮೆ ಯಾಚಿಸಿದ್ದರು. ಬಳಿಕ ಸುರಕ್ಷತಾ ಎಂಜಿನಿಯರ್‌ಗಳು ಪರಿಶೀಲಿಸಿದ್ದಾರೆ. ತಪಾಸಣೆ ಬಳಿಕ ಹಾರಾಟಕ್ಕೆ ಅನುಮತಿ ನೀಡಲಾಯಿತುʼʼ ಎಂದು ಇಂಡಿಗೊ ತಿಳಿಸಿತ್ತು.
ತೇಜಸ್ವಿ ಸೂರ್ಯ ತುರ್ತು ನಿರ್ಗಮನ ಬಾಗಿಲು ತೆರೆದಿರುವುದಕ್ಕೆ ಟ್ವಿಟ್ಟರ್ ಬಳಕೆದಾರರು ಒಂದೊಂದು ರೀತಿಯ ಚಿತ್ರಗಳನ್ನು, ಟ್ರೋಲ್‌ಗಳನ್ನು, ಮೀಮ್ಸ್‌ಗಳನ್ನು ಹರಿದುಬಿಡುತ್ತಿದ್ದಾರೆ.
ಎಮರ್ಜೆನ್ಸಿ ಫೈಟರ್?: ತುರ್ತು ನಿರ್ಗಮನ ಬಾಗಿಲು ತೆರೆಯಬೇಕಾದರೆ ನನ್ನನ್ನು ಸಂಪರ್ಕಿಸಿ
ನಟ ಸಿದ್ಧಾರ್ಥ್ ಟ್ವೀಟ್ ಬಗ್ಗೆ
ಮಿಷನ್ ಇಂಪಾಸಿಬಲ್
ವಿಮಾನ ಹೊರಡುವ ಮುನ್ನ ಆ ಬಾಗಿಲನ್ನು ತೆರೆಯಲು ಪ್ರಯತ್ನಿಸುವುದು/ ತೆರೆಯುವುದು ಅಷ್ಟು ಗಂಭೀರ ತಪ್ಪೇ ಎಂಬ ಪ್ರಶ್ನೆ ಕೆಲವರಲ್ಲಿ ಇರಬಹುದು. ವಿಮಾನಯಾನ ನಿಯಮಗಳ ಪ್ರಕಾರ, ವಿಮಾನದ ತುರ್ತು ನಿರ್ಗಮನವನ್ನು ಉದ್ದೇಶಪೂರ್ವಕವಲ್ಲದೆ ಇದ್ದರೂ ತೆರೆಯುವುದು ತಪ್ಪು ಅಥವಾ "ಅಶಿಸ್ತಿನ" ನಡವಳಿಕೆ ಎಂದು ಪರಿಗಣಿಸಲಾಗುತ್ತದೆಯಂತೆ. ಈ ರೀತಿ ಮಾಡಿರುವ ಪ್ರಯಾಣಿಕರನ್ನು ನಿರ್ದಿಷ್ಟ ಅವಧಿಗೆ ವಿಮಾನ ಪ್ರಯಾಣಕ್ಕೆ ಬ್ಯಾನ್ ಮಾಡಬಹುದು.