LIVE UPDATES
Mysore News: ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಬೀದಿನಾಯಿಗಳಿಗೆ ಆಹಾರ ನಿಷೇಧ ವಿವಾದ; ಕುಲಸಚಿವೆ ಶೈಲಜಾ ಹಠಾತ್ ವರ್ಗಾವಣೆ
Karnataka News Live January 21, 2025 : Mysore News: ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಬೀದಿನಾಯಿಗಳಿಗೆ ಆಹಾರ ನಿಷೇಧ ವಿವಾದ; ಕುಲಸಚಿವೆ ಶೈಲಜಾ ಹಠಾತ್ ವರ್ಗಾವಣೆ
Jan 21, 2025 09:43 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
ಕರ್ನಾಟಕ News Live: Mysore News: ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಬೀದಿನಾಯಿಗಳಿಗೆ ಆಹಾರ ನಿಷೇಧ ವಿವಾದ; ಕುಲಸಚಿವೆ ಶೈಲಜಾ ಹಠಾತ್ ವರ್ಗಾವಣೆ
- ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಬೀದಿ ನಾಯಿಗಳಿಗೆ ಆಹಾರ ಕೊಡುವುದನ್ನು ನಿಷೇಧಿಸಿದ ವಿವಾದದ ಬೆನ್ನಲ್ಲೇ ಮೈಸೂರು ವಿವಿ ಕುಲಸಚಿವರಾಗಿದ್ದ ವಿ.ಆರ್.ಶೈಲಜಾ ಅವರನ್ನು ವರ್ಗ ಮಾಡಲಾಗಿದೆ.
ಕರ್ನಾಟಕ News Live: Indian Railways: ಮೈಸೂರು- ತಾಳಗುಪ್ಪ ರೈಲು ಸಂಚಾರದಲ್ಲಿ ವ್ಯತ್ಯಯ, ಬೆಂಗಳೂರು ಮಲ್ಲೇಶ್ವರಂ ನಿಲ್ದಾಣದಲ್ಲಿ ರೈಲು ನಿಲುಗಡೆ ಮುಂದುವರಿಕೆ
- Indian Railways: ಮೈಸೂರು- ತಾಳಗುಪ್ಪ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಹಾಸನದ ಬಾಗೇಶಪುರ ಬಳಿ ಕಾಮಗಾರಿ ಇರುವುದರಿಂದ ಸಂಚಾರ ವಿಳಂಬವಾಗಲಿದೆ.
ಕರ್ನಾಟಕ News Live: ಕಾಡಿನ ಕಥೆಗಳು: ಚಿರತೆ ಬಂತೆಂಬ ಭಯ ಬಿಡಿ, ಅರಣ್ಯ, ಪ್ರಕೃತಿ, ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡವಳಿಕೆ ಈ ರೀತಿ ರೂಪಿಸಿಕೊಂಡು ನೋಡಿ
- ಕಾಡಿನ ಕಥೆಗಳು: ಕರ್ನಾಟಕದಲ್ಲಿ ಅಂದಾಜು 2500 ಚಿರತೆಗಳಿರಬಹುದು. ಬೆಂಗಳೂರು, ಮೈಸೂರು, ತುಮಕೂರು ಸಹಿತ ಹಲವು ಕಡೆ ಚಿರತೆ ಭಯವಿದೆ. ಭಯ ಯಾರಿಗೆ ಚಿರತೆಗೋ, ಮನುಷ್ಯನಿಗೋ; ಅವುಗಳ ಪ್ರದೇಶದಲ್ಲೇ ಇರುವ ನಮ್ಮ ನಡವಳಿಕೆ ಹೀಗಿದ್ದರೆ ಚೆನ್ನ ಎನ್ನುವುದು ಈ ವಾರದ ಕಾಡಿನ ಕಥೆಗಳ ಕಥನ.
ಕರ್ನಾಟಕ News Live: ಜಲಮಂಡಳಿ ಕೊಳವೆ ಮಾರ್ಗ ದುರಸ್ಥಿ: ಜನವರಿ 23ರಂದು ಬೆಂಗಳೂರು ನಗರದ ವಿವಿಧೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ
- ಬೆಂಗಳೂರು ಜಲಮಂಡಳಿಯಿಂದ ಪೈಪ್‌ಲೈನ್ ದುರಸ್ಥಿ ಕಾರ್ಯ ಇರುವುದರಿಂದ ಗುರುವಾರದಂದು ಬೆಂಗಳೂರಿನ ಹಲವು ಬಡಾವಣೆಗಳ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ.
ಕರ್ನಾಟಕ News Live: Mangaluru: ತಪ್ಪಿಸಿಕೊಳ್ಳಲು ಯತ್ನಿಸಿದ ಕೋಟೆಕಾರು ಬ್ಯಾಂಕ್ ರಾಬರಿ ಆರೋಪಿ, ಪೊಲೀಸರಿಂದ ಗುಂಡಿನ ದಾಳಿ
- ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಯೊಬ್ಬನಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಡೆದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಕರ್ನಾಟಕ News Live: Tumkur News: ತುಮಕೂರಿನ ಸಿದ್ದಗಂಗಾ ಮಠಕ್ಕೆ ಹರಿದು ಬಂದ ಭಕ್ತ ಸಾಗರ, ಡಾ.ಶಿವಕುಮಾರ ಶ್ರೀಗಳ 6ನೇ ಪುಣ್ಯ ಸ್ಮರಣೆ
- ತುಮಕೂರಿನಲ್ಲಿ ಸಿದ್ದಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ ಅವರ ಆರನೇ ಪುಣ್ಯಸ್ಮರಣೆ ಕಾರ್ಯಕ್ರಮ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
- ವರದಿ: ಈಶ್ವರ್ ತುಮಕೂರು
ಕರ್ನಾಟಕ News Live: Belagavi News: ಬಾನಂಗಳದಲ್ಲಿ ಚಿಮ್ಮಿದ ರಂಗು, ಬೆಳಗಾವಿ ಸುವರ್ಣಸೌಧದ ಎದುರು ಬಾಪೂಜಿ ಪುತ್ಥಳಿ ಲೋಕಾರ್ಪಣೆ ಮೆರಗು
- ಬೆಳಗಾವಿಯಲ್ಲಿ ಮಂಗಳವಾರ ಗಾಂಧಿ ಸ್ಮರಣೆ. ಶತಮಾನದ ಹಿಂದೆ ಬೆಳಗಾವಿಗೆ ಗಾಂಧೀಜೀ ಬಂದು ಕಾಂಗ್ರೆಸ್ ಸಮಾವೇಶ ನಡೆಸಿದ ನೆನಪಿನ ಕಾರ್ಯಕ್ರಮ, ಅವರ ಪುತ್ಥಳಿ ಅನಾವರಣವೂ ನಡೆಯಿತು.
ಕರ್ನಾಟಕ News Live: Kotekaru Bank Robbery: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ; ಮೂವರ ಸೆರೆ
- ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿಕೆ.ಸಿ.ರೋಡ್ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಲಾಗಿದೆ.
ಕರ್ನಾಟಕ News Live: ಬೆಂಗಳೂರು: ಹಾಲ್‌ಮಾರ್ಕ್‌ಗೆ ಕಳುಹಿಸಿದ ಚಿನ್ನಾಭರಣ ಕಳವು, ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮ್ಯಾನೇಜರ್ ದೂರು
Bengaluru Crime: ಬೆಂಗಳೂರು ಬಸವನಗುಡಿಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಿಂದ ಹಾಲ್‌ಮಾರ್ಕ್‌ಗೆ ಕಳುಹಿಸಿದ್ದ ಚಿನ್ನಾಭರಣ ಕಳುವಾಗಿದೆ ಎಂದು ಚಿನ್ನದ ಮಳಿಗೆ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆದಿದೆ.
ಕರ್ನಾಟಕ News Live: Udupi Temple: ಉಡುಪಿ ಜಿಲ್ಲೆಯ ಕುಂದಾಪುರದ ತೆಗ್ಗುಂಜೆಯಲ್ಲಿ 17ನೇ ಶತಮಾನದ ಅಪೂರ್ವ ಉಮಾಮಹೇಶ್ವರ ಶಿಲ್ಪ ಪತ್ತೆ
ಈ ಶಿಲ್ಪ ಕಲಾ ಇತಿಹಾಸಕಾರರಿಗೆ ಒಂದು ಅತ್ತ್ಯುತ್ತಮ ಪಾಠದ
ಉದಾಹರಣೆಯಾಗಿದೆ. ಕೇವಲ ಕಲಾಶೈಲಿಯ ಆಧಾರದ ಮೇಲೆ
ಕಾಲನಿರ್ಣಯ ಮಾಡುವುದು ಉಚಿತವಲ್ಲ ಎಂಬುದಕ್ಕೆ ಈ ಶಿಲ್ಪ ಸಾಕ್ಷಿಯಾಗಿದೆ.ಈ ಶಿಲ್ಪವನ್ನು ಅದರ ಪೀಠದಿಂದ ಬೇರ್ಪಡಿಸಿದರೆ, ಪೀಠದ
ಮೇಲ್ಭಾಗದಲ್ಲಿ ಎರಡು ಸಾಲಿನ ಒಂದು ಚಿಕ್ಕ ಶಾಸನವಿದೆ. (ವರದಿ: ಹರೀಶ್ ಮಾಂಬಾಡಿ)
ಕರ್ನಾಟಕ News Live: ವಿಜಯಪುರ: ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆಗೆ ವ್ಯಾಪಕ ಖಂಡನೆ; ಇಬ್ಬರ ಬಂಧನ
- ಕೆಲಸ ಮಾಡುವ ವಿಚಾರವಾಗಿ ಮೂವರು ಕಾರ್ಮಿಕರ ಕಾಲುಗಳನ್ನು ಕಟ್ಟಿ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಸದ್ಯ ಹಲ್ಲೆಗೊಳಗಾದ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರು ಹಲ್ಲೆ ಆರೋಪಿಗಳನ್ನು ಬಂಧಿಸಲಾಗಿದೆ.
ಕರ್ನಾಟಕ News Live: JEE Main 2025: ಜೆಇಇ ಮೇನ್ಸ್ ಡ್ರೆಸ್ ಕೋಡ್ ಏನು? ಪರೀಕ್ಷೆಗೆ ಮುನ್ನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಸ್ತ್ರ ಸಂಹಿತೆ ಬಗ್ಗೆ ತಿಳಿಯಿರಿ
- JEE Main 2025 Dress Code: ಸರಳ ಮತ್ತು ಕಂಫರ್ಟ್ ಆಗಿರುವ ಉಡುಪು ಧರಿಸಿರಬೇಕು. ಭದ್ರತಾ ತಪಾಸಣೆಗೆ ಅನುಕೂಲವಾಗುವಂತಹ ಉಡುಗೆ ತೊಟ್ಟಿರಬೇಕು. ಅಭ್ಯರ್ಥಿಗಳು ಲೋಹದ ವಸ್ತುಗಳು, ಪರಿಕರಗಳನ್ನು ಧರಿಸರಬಾರದು. ಏಕೆಂದರೆ, ಇವು ಭದ್ರತಾ ತಪಾಸಣೆಗೆ ಅಡ್ಡಿಪಡಿಸುತ್ತದೆ. ಆಯಾ ಋತುವಿಗೆ ಅನುಗುಣವಾದ, ಹಗುರವಾದ ಉಡುಪು ಧರಿಸಲು ವಿದ್ಯಾರ್ಥಿಗಳು ಆದ್ಯತೆ ನೀಡಿರಬೇಕು.
ಕರ್ನಾಟಕ News Live: ಏರೋ ಇಂಡಿಯಾ 2025 ಹಿನ್ನೆಲೆ; ಫೆಬ್ರುವರಿ 5ರಿಂದ 14ರವರೆಗೆ ಬೆಂಗಳೂರು ಏರ್‌ಪೋರ್ಟ್ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ
- ಫೆಬ್ರುವರಿ 10ರಿಂದ 14ರವರೆಗೆ ಬೆಂಗಳೂರಿನ ಹೊರವಲಯದ ಯಲಹಂಕದಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದೆ. ಹೀಗಾಗಿ ಫೆಬ್ರುವರಿ 5ರಿಂದ 14ರವರೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಕರ್ನಾಟಕ News Live: BHEL Recruitment 2025: ಬಿಎಚ್‌ಇಎಲ್‌ನಿಂದ ಎಂಜಿನಿಯರ್ ಟ್ರೇನಿಗಳ ನೇಮಕ, 400 ಹುದ್ದೆಗಳಿಗೆ ಅರ್ಜಿ ಆಹ್ವಾನ
- ಬಿಎಚ್‌ಇಎಲ್ ಎಂಜಿನಿಯರ್ ಟ್ರೇನಿ ಮತ್ತು ಸೂಪರ್‌ವೈಸರ್ ಟ್ರೇನಿ(ಟೆಕ್) ನೇಮಕ: ಫೆಬ್ರವರಿ 1ರಿಂದ ಬಿಎಚ್‌ಇಎಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನಾಂಕವಾಗಿದೆ. ಒಟ್ಟು 400 ಹುದ್ದೆಗಳಿಗೆ ಎಂಜಿನಿಯರಿಂಗ್ ಪದವಿ ಮತ್ತು ಡಿಪ್ಲೊಮಾ ವಿದ್ಯಾರ್ಹತೆ ಬಯಸಲಾಗಿದೆ.
ಕರ್ನಾಟಕ News Live: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಅಧ್ಯಕ್ಷರು, ಅವರ ಅಧ್ಯಕ್ಷಗಿರಿಯ ಸಮಸ್ಯೆಗಳು; ಬಹಿರಂಗವಾಗಿದೆ ಕರ್ನಾಟಕ ರಾಜಕೀಯ ಪಕ್ಷಗಳ ಒಳಗುಟ್ಟು
- ಕರ್ನಾಟಕ ರಾಜಕೀಯದಲ್ಲಿ ಸಕ್ರಿಯವಾಗಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಧ್ಯಕ್ಷಗಿರಿಗಾಗಿ ಬೀದಿಜಗಳ ಮಾಡಲು ಆರಂಭಿಸಿವೆ. ಮೂರು ಪಕ್ಷಗಳಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಆರಂಭವಾಗಿದೆ. ಆರಂಭದಲ್ಲಿ ಗುಟ್ಟಾಗಿ ನಡೆಯುತ್ತಿದ್ದ ಒಳಜಗಳಗಳು ಇದೀಗ ಬೀದಿರಂಪವಾಗಿದೆ. ಈ ಕುರಿತ ಒಂದು ವಿಶ್ಲೇಷಣೆ. (ವರದಿ: ಎಚ್.ಮಾರುತಿ).
ಕರ್ನಾಟಕ News Live: ಕಿರುಕುಳ ಆರೋಪ: ರಾಮನಗರದಲ್ಲಿ ಮೈಕ್ರೊ ಫೈನಾನ್ಸ್ ಕಂಪನಿ ವ್ಯವಸ್ಥಾಪಕ ಬಂಧನ; ಬಾಲಕನ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ,ಪೋಕ್ಸೋ ಕೇಸ್ ದಾಖಲು
- ರಾಮನಗರ ತಾಲೂಕಿನಲ್ಲಿ ಮೈಕ್ರೊ ಫೈನಾನ್ಸ್ ಕಂಪನಿಯೊಂದರ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ಸಾಲ ಮರು ಪಾವತಿ ಮಾಡುವಂತೆ ಬಂಧಿತ ಆರೋಪಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದ ಆರೋಪ ಕೇಳಿ ಬಂದಿತ್ತು. 11 ವರ್ಷದ ಬಾಲಕನಿಗೆ 70 ವರ್ಷದ ವೃದ್ಧನೊರ್ವ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ.
ಕರ್ನಾಟಕ News Live: Bangalore Power Cut: ಬೆಂಗಳೂರಿನ ಜನರೇ ಗಮನಿಸಿ: ನಗರದ ಈ ಪ್ರದೇಶದಲ್ಲಿ ಜನವರಿ 21ರ ಮಂಗಳವಾರ ವಿದ್ಯುತ್ ವ್ಯತ್ಯಯ
- ಬೆಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ಜನವರಿ 21ರ ಮಂಗಳವಾರ ವಿದ್ಯುತ್ ವ್ಯತ್ಯಯವಾಗಲಿದೆ. ಯಾವೆಲ್ಲಾ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ, ಸಮಯ ಹಾಗೂ ವಿದ್ಯುತ್ ವ್ಯತ್ಯಯಕ್ಕೆ ಕಾರಣವೇನು ಎಂಬುದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಕರ್ನಾಟಕ News Live: Karnataka Weather: ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣದ ಮುನ್ಸೂಚನೆ; ಬೀದರ್ ನಲ್ಲಿ ಕನಿಷ್ಠ ತಾಪಮಾನ ದಾಖಲು
- ಬೆಂಗಳೂರಿನಲ್ಲಿಂದು ಮುಂಜಾನೆಯಿಂದಲೇ ಮೋಡ ಇಲ್ಲದ ಆಕಾಶವಿದೆ, ಕೆಲವು ಪ್ರದೇಶಗಳಲ್ಲಿ ಮಂಜು ಅಥವಾ ದಟ್ಟ ಮಂಜಿನ ಪರಿಸ್ಥಿತಿ ಇರಲಿದೆ. ರಾಜಧಾನಿ ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಜನವರಿ 21ರ ಮಂಗಳವಾರ ಒಣ ಹವೆ ಇರಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.