Karnataka News Live October 28, 2024 : ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ ಪ್ರಮುಖ ಕವಿಗಳ ಹೆಸರುಗಳನ್ನು ನೀವು ಚೆನ್ನಾಗಿಯೇ ಬಲ್ಲಿರಿ, ಅವರ ಕಾವ್ಯನಾಮ ಗೊತ್ತೆ?
Oct 28, 2024 08:14 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
- ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕರ್ನಾಟಕದ ಪ್ರಮುಖ ಸಾಹಿತಿಗಳು ಹಾಗೂ ಅವರ ಕಾವ್ಯನಾಮದ ವಿವರವನ್ನು ಇಲ್ಲಿ ನೀಡಿದೆ. ಹಲವು ಸಾಹಿತಿಗಳು ತಮ್ಮ ಹೆಸರಿಗಿಂತ ಕಾವ್ಯನಾಮದೊಂದಿಗೆ ಬರೆದಿದ್ದೇ ಹೆಚ್ಚು.ಈಗಲೂ ತಮ್ಮಸಾಹಿತ್ಯ ಹಾಗೂ ಕಾವ್ಯನಾಮದಿಂದಲೇ ಜನರ ಮನಸಿನಲ್ಲಿ ಉಳಿದಿದ್ದಾರೆ.
- ದೀಪಾವಳಿ ಹಬ್ಬದ ನಿಮಿತ್ತ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆ ಒಟ್ಟು 55 ರೈಲುಗಳನ್ನು ಓಡಿಸುತ್ತಿದೆ. ವೈಟಿಂಗ್ ಲಿಸ್ಟ್ ಆಧಾರದ ಮೇಲೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗುತ್ತಿದೆ. ಈ ಕುರಿತು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಡಹಿತಿ ನೀಡಿದ್ದಾರೆ.
ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕರ್ನಾಟಕದಲ್ಲಿರುವ ಘಾಟ್ ಸೆಕ್ಷನ್‌ಗಳ ಮಾಹಿತಿ ನೀಡಿದೆ. ಪಶ್ಚಿಮ ಘಟ್ಟದಲ್ಲಿ ದಕ್ಷಿಣ ಕನ್ನಡ, ಕೊಡಗು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಬೆಳಗಾವಿಯಲ್ಲಿ ಹಾದು ಹೋಗಿರುವ ಘಾಟ್ ವಲಯದ ಮಾಹಿತಿ ಇಲ್ಲಿದೆ.
ಮೀನು ಪ್ರಿಯರ ಗಮನಕ್ಕೆ. ಮೀನು ತಿನ್ನುವಾಗ ಅದರ ಮೂಳೆ ಅಥವಾ ಮೀನು ಮುಳ್ಳು ಗಂಟಲಲ್ಲಿ ಸಿಲುಕಿದರೆ ಸಂಕಷ್ಟ ಅಷ್ಟಿಷ್ಟಲ್ಲ. ಮೀನು ಮುಳ್ಳು ಹೊಟ್ಟೆಗಿಳಿದರೆ ಗೊತ್ತಾಗಲ್ಲ. 5ವರ್ಷದಿಂದ ಹೊಟ್ಟೆಯಲ್ಲಿದ್ದ 2ಸೆಂ.ಮೀ. ಉದ್ದದ ಮೀನು ಮುಳ್ಳನ್ನು ಬೆಂಗಳೂರು ವೈದ್ಯರು ಹೊರ ತೆಗೆದಿದ್ದಾರೆ. ಪದೇಪದೇ ಹೊಟ್ಟೆ ನೋವು ಅನುಭವಿಸಿದ್ದ ವ್ಯಕ್ತಿಯ ಹೊಟ್ಟೆಯಲ್ಲಿತ್ತು ಈ ಮೀನಿನ ಮುಳ್ಳು.
- ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ವಿದ್ಯಾರ್ಥಿನಿಯೊಬ್ಬಳು ಅಚ್ಚರಿಯ ರೀತಿಯಲ್ಲಿ ಬದುಕಿ ಬಂದ ಘಟನೆ ತುಮಕೂರಿನಲ್ಲಿ ನಡೆದಿದೆ. ಸತತ 12 ಗಂಟೆಗಳ ಕಾಲ ಕಲ್ಲಿನ ಪೊಟರೆಯಲ್ಲಿ ಸಿಲುಕಿಕೊಂಡು ರಕ್ಷಣೆಗಾಗಿ ಕಾಯುತ್ತಿದ್ದ ಯುವತಿಯನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿದ್ದಾರೆ.
- MUDA Land Site: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿರುವ ದೂರುದಾರ ಸ್ನೇಹಮಯಿ ಕೃಷ್ಣ ಅವರು 928 ನಿವೇಶನಗಳು ಅಕ್ರಮವಾಗಿ ಹಂಚಿಕೆಯಾಗಿದೆ ಎಂದು ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಮತ್ತೊಂದು ದೂರು ನೀಡಿದ್ದಾರೆ.
- ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕರ್ನಾಟಕದ ಪ್ರಮುಖ ಭಾಗವಾಗಿರುವ ಮಧ್ಯ ಕರ್ನಾಟಕದ 10 ವಿಶೇಷ ಸಂಗತಿಗಳ ಪಟ್ಟಿ ಮಾಡಿದೆ. ಕರ್ನಾಟಕದ ವಾಣಿಜ್ಯ ನಗರಿಯೂ ಆಗಿರುವ ದಾವಣಗೆರೆ, ಕೋಟೆ ನಗರಿ ಚಿತ್ರದುರ್ಗ, ಮಲೆನಾಡಿನ ಭಾಗವಾದ ಶಿವಮೊಗ್ಗ ಒಂದಷ್ಟು ಪ್ರದೇಶಗಳು ಮಧ್ಯಕರ್ನಾಟಕವಾಗಿ ಗುರುತಿಸಿಕೊಂಡಿವೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮಕ್ಕೆ ಸಂಬಂಧಿಸಿ
ಮೈಸೂರು, ಬೆಂಗಳೂರು, ಮಂಡ್ಯ ಸೇರಿ ವಿವಿಧೆಡೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಮತ್ತೆ ದಾಳಿ ನಡೆಸಿದರು. ವಿವಿಧೆಡೆ ಕಡತ ಶೋಧ, ಪರಿಶೀಲನೆ ಮತ್ತು ಸಾಕ್ಷ್ಯ ಸಂಗ್ರಹ ಕೆಲಸ ಮಾಡಿದ್ದಾರೆ.
- ಕಾವೇರಿ ನೀರು ಸಂಪರ್ಕಕ್ಕೆ ನಿಯಮಬಾಹಿರವಾಗಿ ಹಣ ಕೇಳಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿಸುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಗಗನ ಚುಂಬಿ ಕಟ್ಟಡಗಳಿವೆ. ಆದರೆ ಅವು ಜನರ ಗಮನಸೆಳೆದಿದೆ. ಇಂಟರ್‌ನೆಟ್‌ನಲ್ಲಿ ಗಮನ ಸೆಳೆದ ಬೆಂಗಳೂರಿನ ಮಾಸ್ಟರ್‌ಪೀಸ್ ಇದು. 250 ಚದರ ಅಡಿ ಜಾಗದಲ್ಲಿ ಗಗನ ಚುಂಬಿ ಕಟ್ಟಡಾನಾ ಎಂದು ಹುಬ್ಬೇರಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಬೆರಗಾದರು ಜನ. ಬೇರೆ ಬೇರೆ ಕಟ್ಟಡಗಳನ್ನೂ ಹೋಲಿಸತೊಡಗಿದ್ದಾರೆ. ಅವುಗಳ ಕಡೆಗೊಂದು ನೋಟ ಇಲ್ಲಿದೆ.
The Beer Association of India: ಆಲ್ಕೋಹಾಲ್ ಅಂಶದ ಆಧಾರದಂತೆ ಬಿಯರ್ ಮೇಲಿನ ಸುಂಕ ಹೆಚ್ಚಿಸಲು ಕರ್ನಾಟಕ ಸರ್ಕಾರ ಪ್ರಸ್ತಾಪ ಸಿದ್ದಪಡಿಸಿದೆ. ಇದರ ಬೆನ್ನಲ್ಲೇ ಬಿಯರ್ ಅಸೋಸಿಯೇಷನ್ ಆಫ್ ಇಂಡಿಯಾ, ಬೆಲೆ ಮತ್ತೆ ಹೆಚ್ಚಾದರೆ ಆದಾಯ ತೆರಿಗೆ 400 ಕೋಟಿ ನಷ್ಟವಾಗಬಹುದು ಎಂದು ಸರ್ಕಾರಕ್ಕೆ ಪತ್ರಬರೆದಿದೆ.
ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕರ್ನಾಟಕದಲ್ಲಿ ಒಂದು ಶತಮಾನದ ಹಿಂದೆ ಆರಂಭಗೊಂಡ ಮೈಸೂರು ವಿಶ್ವವಿದ್ಯಾನಿಲಯ ಸೇರಿ 80 ವಿಶ್ವವಿದ್ಯಾನಿಲಯ ಹೊಂದಿದೆ. ಅದರ ವಿವರ ಇಲ್ಲಿದೆ
- ವಾಯು ಗುಣಮಟ್ಟ ಸೂಚ್ಯಂಕ: ಬೆಂಗಳೂರು ನಗರದಲ್ಲಿ ಗಾಳಿಯ ಗುಣಮಟ್ಟ ಕುಸಿದಿದೆ. ಅದು ಇತ್ತೀಚೆಗೆ ಸುರಿದ ಭಾರೀ ಮಳೆಯ ಕಾರಣದಿಂದ ಗಾಳಿ ಕಲುಷಿತಗೊಡಿದೆ. ಮಳೆಯಿಂದ ಮಲಿನ ಆಗಿದ್ದೇಗೆ, ಅದರಿಂದಾದ ಅನಾಹುತಗಳ ಬಗ್ಗೆ ನಗರ ನಿವಾಸಿಗಳು ವಿವರಿಸಿದ್ದಾರೆ.
- Kannada Rajyotsava: ಕನ್ನಡ ರಾಜ್ಯೋತ್ಸವ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲು ಖಾಸಗಿ ಶಾಲೆಗಳು ನಿರ್ಧಾರ ಕೈಗೊಂಡಿದ್ದು, ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
- ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಹಳೆ ಮೈಸೂರು ಭಾಗದ ಮಹತ್ವವನ್ನು ಬಿಡಿಸಿಟ್ಟಿದೆ. ಮೈಸೂರು ಸಂಸ್ಥಾನದ ಕಾರಣದಿಂದ ಅಭಿವೃದ್ದಿಯ ರೂಪಕ್ಕೆ ಆಗಲೇ ವೇಗ ಪಡೆದಿದ್ದ ಭಾಗ. ಪ್ರವಾಸೋದ್ಯಮ. ನೀರಾವರಿ, ಕೃಷಿ, ಅರಣ್ಯ ಈ ಭಾಗದ ವಿಶೇಷತೆ. ಕಾವೇರಿಯದ್ದು ಬಿಡಿಸಲಾಗದ ನಂಟು.
ನವೆಂಬರ್ ಇನ್ನೇನು ಬಂದೇ ಬಿಡ್ತು. ಕನ್ನಡ ರಾಜ್ಯೋತ್ಸವ, ಅಭಿಮಾನಗಳ ಸಂದರ್ಭ. ಕನ್ನಡ ಎನ್ನುವುದು ನವೆಂಬರ್‌ಗೆ ಸೀಮಿತವಾಗಬಾರದು. ಅದು ಉಸಿರಾಗಬೇಕು, ಬದುಕಾಗಬೇಕು ಎಂಬುದು ಆಶಯ. ಹೀಗಾಗಿ ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರು, “ಯುವ ದಸಾರಾದಲ್ಲಿ ಇಂತಹ ಅವಮಾನವನ್ನು ನಮ್ಮ ಕನ್ನಡಿಗ ಹಾಡುಗಾರರು ಹೇಗೆ ಸಹಿಸಿಕೊಂಡರು, ಏಕೆ ಸಹಿಸಿಕೊಂಡರು?” ಎಂಬುದರ ಒಳನೋಟ ಕೊಟ್ಟಿದ್ದಾರೆ.
Karnataka Weather: ಕರ್ನಾಟಕದಲ್ಲಿ ಮಳೆಯ ವಾತಾವರಣ ನಿಧಾನವಾಗಿ ಮರೆಯಾಗಿದೆ. ಈಗ ಬೆಂಗಳೂರು ಸೇರಿ ವಿವಿಧೆಡೆ ಮುಂಜಾನೆ ಮಂಜು ಆವರಿಸತೊಡಗಿದೆ. ಸ್ವಲ್ಪ ಚಳಿ, ಇಬ್ಬನಿ ತಬ್ಬಿದ ಇಳೆಯ ದೃಶ್ಯ ಕಾಣಬಹುದು. ಇಂದು (ಅಕ್ಟೋಬರ್ 28) ಬೆಂಗಳೂರು ಹವಾಮಾನ ಮತ್ತು ಒಟ್ಟಾರೆ ಕರ್ನಾಟಕದ ಹವಾಮಾನ ಹೀಗಿರಲಿದೆ.