logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live October 3, 2024 : ನವರಾತ್ರಿ ಹಿನ್ನೆಲೆ ಗಗನಮುಖಿಯಾದ ಹೂ ಹಣ್ಣು, ತರಕಾರಿ ಬೆಲೆ; ಗ್ರಾಹಕರ ಜೇಬಿಗೆ ಹೊರೆ, ವ್ಯಾಪಾರಿಗಳು ಖುಷ್
ನವರಾತ್ರಿ ಹಿನ್ನೆಲೆ ಗಗನಮುಖಿಯಾದ ಹೂ ಹಣ್ಣು, ತರಕಾರಿ ಬೆಲೆ; ಗ್ರಾಹಕರ ಜೇಬಿಗೆ ಹೊರೆ, ವ್ಯಾಪಾರಿಗಳು ಖುಷ್

Karnataka News Live October 3, 2024 : ನವರಾತ್ರಿ ಹಿನ್ನೆಲೆ ಗಗನಮುಖಿಯಾದ ಹೂ ಹಣ್ಣು, ತರಕಾರಿ ಬೆಲೆ; ಗ್ರಾಹಕರ ಜೇಬಿಗೆ ಹೊರೆ, ವ್ಯಾಪಾರಿಗಳು ಖುಷ್

Oct 03, 2024 10:12 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Oct 03, 2024 10:12 PM IST

ಕರ್ನಾಟಕ News Live: ನವರಾತ್ರಿ ಹಿನ್ನೆಲೆ ಗಗನಮುಖಿಯಾದ ಹೂ ಹಣ್ಣು, ತರಕಾರಿ ಬೆಲೆ; ಗ್ರಾಹಕರ ಜೇಬಿಗೆ ಹೊರೆ, ವ್ಯಾಪಾರಿಗಳು ಖುಷ್

  • ನವರಾತ್ರಿ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ತರಕಾರಿ, ಹಣ್ಣು ಮತ್ತು ಹೂವಿನ ಬೆಲೆ ಗಗನಕ್ಕೆ ಏರಿದೆ. ಗಣೇಶ ಹಬ್ಬದಿಂದಲೂ ತರಕಾರಿ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ. ಈ ಏರಿಕೆ ಗ್ರಾಹಕನ ಜೇಬಿಗೆ ಹೊರೆಯಾದರೆ, ವ್ಯಾಪಾರಿಗಳು ಖುಷ್‌ ಆಗಿದ್ದಾರೆ. 
Read the full story here

Oct 03, 2024 10:09 PM IST

ಕರ್ನಾಟಕ News Live: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಸುಲಿಗೆ ಪ್ರಕರಣ ದಾಖಲು: ದೂರು ಕೊಟ್ಟವರೂ ಜೆಡಿಎಸ್‌ನಲ್ಲಿ ಸಕ್ರಿಯರಾಗಿದ್ದವರೇ

  • ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ನಗರದ ಪೊಲೀಸರು ಸುಲಿಗೆ ಪ್ರಕರಣ ದಾಖಲಿಸಿದ್ದಾರೆ.
Read the full story here

Oct 03, 2024 06:47 PM IST

ಕರ್ನಾಟಕ News Live: ಸಾಫ್ಟ್‌ವೇರ್‌ ಉನ್ನತೀಕರಣಕ್ಕೆ ಮುಂದಾದ ಬೆಸ್ಕಾಂ; ಈ ಎರಡು ದಿನ ಆನ್‌ಲೈನ್‌ ಸೇವೆ ಅಲಭ್ಯ, ಪವರ್‌ ಕಟ್‌ ಬಗ್ಗೆ ಚಿಂತೆ ಬೇಡ

  • ಐಟಿ ಅಪ್ಲಿಕೇಶನ್‌ಗಳ ಉನ್ನತೀಕರಣಕ್ಕೆ ಸಮಯ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಅಪ್ಲಿಕೇಶನ್‌ ಸೇವೆಗಳು ಲಭ್ಯ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ. 
Read the full story here

Oct 03, 2024 06:43 PM IST

ಕರ್ನಾಟಕ News Live: Tumkur Dasara: ತುಮಕೂರಿನಲ್ಲೂ 10 ದಿನಗಳ ವೈಭವದ ದಸರಾಕ್ಕೆ ಚಾಲನೆಲ; ಡ್ರೋನ್‌, ಹೆಲಿಕಾಪ್ಟರ್‌ ಶೋ ಮೊದಲ ವರ್ಷದ ವಿಶೇಷ

  • ತುಮಕೂರಿನಲ್ಲೂ ಹತ್ತು ದಿನಗಳ ದಸರಾ ಚಟುವಟಿಕೆಗೆ ಮೊದಲ ಬಾರಿಗೆ ಚಾಲನೆ ನೀಡಲಾಗಿದೆ. ವೈವಿಧ್ಯಮಯ ಕಾರ್ಯಕ್ರಮಗಳು ದಸರಾ ಅಂಗವಾಗಿ ಇರಲಿವೆ. 
  • ವರದಿ: ಈಶ್ವರ್‌ ತುಮಕೂರು
Read the full story here

Oct 03, 2024 04:32 PM IST

ಕರ್ನಾಟಕ News Live: Indian Railways: ದಸರಾಗೆ ಯಶವಂತಪುರ, ಮೈಸೂರಿನಿಂದ ಹಾಸನ- ಮಂಗಳೂರು-ಉಡುಪಿ ಮಾರ್ಗದಲ್ಲಿ ಕಾರವಾರಕ್ಕೆ ವಿಶೇಷ ರೈಲುಗಳ ಸಂಚಾರ

  • ದಸರಾ ಅಂಗವಾಗಿ ಯಶವಂತಪುರ ಹಾಗೂ ಮೈಸೂರಿನಿಂದ ಕಾರವಾರಕ್ಕೆ ವಿಶೇಷ ರೈಲು ಸಂಚಾರ ಮಾಡಲು ಭಾರತೀಯ ರೈಲ್ವೆ ಹುಬ್ಬಳ್ಳಿ ವಲಯ ಮುಂದಾಗಿದೆ. ಇದರ ವಿವರ ಇಲ್ಲಿದೆ. 
Read the full story here

Oct 03, 2024 02:08 PM IST

ಕರ್ನಾಟಕ News Live: Mysore Dasara 2024: ಸಂಸದರಾದ ಬಳಿಕ ಮೊದಲ ಖಾಸಗಿ ದರ್ಬಾರ್‌ ಆರಂಭಿಸಿದ ಯದುವೀರ್‌ ಒಡೆಯರ್‌; ಹೀಗಿತ್ತು ರಾಜವೈಭವದ ಕ್ಷಣಗಳು

  • ಮೈಸೂರು ಅರಮನೆ ಆವರಣದಲ್ಲಿ ಖಾಸಗಿ ದರ್ಬಾರ್‌ ಚಟುವಟಿಕೆಗಳು ಧಾರ್ಮಿಕ ವಿಧಿವಿಧಾನಗಳಂತೆ ಆರಂಭಗೊಂಡವು. ಮೈಸೂರು- ಕೊಡಗು ಸಂಸದ ಯದುವೀರ್‌ ಖಾಸಗಿ ದರ್ಬಾರ್‌ ಅನ್ನು ಹಿಂದಿನ ವೈಭವ, ಪರಂಪರೆಯೊಂದಿಗೆ ಆರಂಭಿಸಿದರು.
Read the full story here

Oct 03, 2024 01:10 PM IST

ಕರ್ನಾಟಕ News Live: ಎಫ್‌ಐಆರ್‌ ಆದ ತಕ್ಷಣ ರಾಜೀನಾಮೆ ನೀಡಬೇಕೇ; ದಸರಾದಲ್ಲಿ ಸಿದ್ದರಾಮಯ್ಯ ಪರ ಬ್ಯಾಟ್‌ ಬೀಸಿದ ಜೆಡಿಎಸ್‌ ಶಾಸಕ

  • ಸಿಎಂ ಸಿದ್ದರಾಮಯ್ಯ ಅವರ ಪರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್‌ ಬ್ಯಾಟ್‌ ಬೀಸಿದ ಬೆನ್ನಲ್ಲೇ ಜೆಡಿಎಸ್‌ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಈಗ ಸಿಎಂ ಬೆಂಬಲಿಸಿ ಮಾತನಾಡಿದ್ಧಾರೆ. ಅದೂ ದಸರಾ ವೇದಿಕೆಯಲ್ಲಿಯೇ ಸಿದ್ದರಾಮಯ್ಯ ಬೆಂಬಲಿಸಿ ಪರೋಕ್ಷವಾಗಿ ಜೆಡಿಎಸ್‌ ನಾಯಕರನ್ನು ಟೀಕಿಸಿದ ಜಿ.ಟಿ. ದೇವೇಗೌಡ ಮಾತಿನ ಶೈಲಿ ಹೀಗಿತ್ತು.
Read the full story here

Oct 03, 2024 12:09 PM IST

ಕರ್ನಾಟಕ News Live: ದಸರಾ ಉದ್ಘಾಟನೆಯಲ್ಲಿ ಕರ್ನಾಟಕ ರಾಜಕೀಯ ಪ್ರಸ್ತಾಪ; ಸರ್ಕಾರ ಅಸ್ಥಿರಗೊಳಿಸಬೇಡಿ, 5 ವರ್ಷ ಕಾಯಿರಿ ಎಂದು ಬಿಜೆಪಿ ಜೆಡಿಎಸ್‌ಗೆ ತಿವಿದ ಹಂಪನಾ

  • ಕರ್ನಾಟಕದಲ್ಲಿ ಕೆಲ ದಿನಗಳಿಂದ ನಡೆದಿರುವ ರಾಜಕೀಯ ಬೆಳವಣಿಗೆಗಳನ್ನು ಹಿರಿಯ ಸಾಹಿತಿ ಹಂಪನಾ ಅವರು ತಮ್ಮ ದಸರಾ ಉದ್ಘಾಟನಾ ಭಾಷಣದಲ್ಲಿ ಉಲ್ಲೇಖಿಸಿದರು. ಹೀಗಿತ್ತು ಅವರ ನಯವಾದ ಮಾತಿನ ತಿವಿತ.
Read the full story here

Oct 03, 2024 11:08 AM IST

ಕರ್ನಾಟಕ News Live: ಮೈಸೂರು ದಸರಾ 2024: ಸಿಗಲಿ ಉದ್ಯೋಗ, ನಿಲ್ಲಲಿ ಭ್ರೂಣಹತ್ಯೆ, ಕುಸ್ತಿಗೆ ಬರಲಿ ಮಾನ್ಯತೆ; ದಸರಾ ಉದ್ಘಾಟಿಸಿ ಸರ್ಕಾರಕ್ಕೆ ಕಿವಿಹಿಂಡಿದ ಹಂಪನಾ

  •  ಮೈಸೂರು ದಸರಾ 2024 ಉದ್ಘಾಟಿಸಿದ ಹಿರಿಯ ಸಾಹಿತಿ ಹಂಪನಾ ಅವರು ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಉಲ್ಲೇಖಿಸಿ ಸರ್ಕಾರಕ್ಕೂ ಕಿವಿ ಹಿಂಡುವ ಕೆಲಸ ಮಾಡಿದ್ದಾರೆ. ಅವರ ಭಾಷಣೆ ಪೂರ್ಣ ಪಾಠ ಇಲ್ಲಿದೆ.

Read the full story here

Oct 03, 2024 10:25 AM IST

ಕರ್ನಾಟಕ News Live: ಗೋಬಿ, ಕಾಟನ್‌ ಕ್ಯಾಂಡಿ, ಕಬಾಬ್‌ ಬಳಿಕ ಇದೀಗ ಕೇಕ್ ಗುಣಮಟ್ಟ ಪರೀಕ್ಷೆ: ಇಲ್ಲಿಯೂ ನಿಲ್ಲದ ಕೃತಕ ಬಣ್ಣ, ರಾಸಾಯನಿಕಗಳ ಬಳಕೆ

  • ಕೇಕ್ ಮೇಲಿನ ಕೃತಕ ಬಣ್ಣಗಳತ್ತ ಗಮನನೆಟ್ಟಿರುವ ರಾಜ್ಯ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ರಾಜ್ಯಾದ್ಯಂತ 235 ಕೇಕ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದೆ. ಅವುಗಳಲ್ಲಿ 1 ರಲ್ಲಿ ಕಾರ್ಸಿಯೋಜೆನಿಕ್ ಪದಾರ್ಥಗಳನ್ನು ಸೇರ್ಪಡೆ ಮಾಡಿರುವುದನ್ನು ಪತ್ತೆ ಮಾಡಿದೆ. (ವರದಿ: ಎಚ್. ಮಾರುತಿ)

Read the full story here

Oct 03, 2024 09:49 AM IST

ಕರ್ನಾಟಕ News Live: Mysore Dasara: ಮೈಸೂರು ದಸರಾ ಮತ್ತಷ್ಟು ಸುಂದರ, ಧಾರ್ಮಿಕತೆಯಿಂದ ಬ್ರಾಂಡ್‌ವರೆಗೆ; ಸುದೀರ್ಘ 414 ವರ್ಷಗಳ ಇತಿಹಾಸದ ನಾಡಹಬ್ಬದ 10 ಮುಖಗಳು

  • ಮೈಸೂರು ದಸರಾ ಎನ್ನುವುದು ಬರೀ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವಾಗಿ ಉಳಿಯದೇ ಬ್ರಾಂಡ್‌ ದಸರಾ ಆಗಿ ಬೆಳೆದಿದೆ. ಮೈಸೂರು ದಸರಾ ಎಂದರೆ ಏನೆಲ್ಲಾ ಇದೆ ಎನ್ನುವ ಮಾಹಿತಿ ಇಲ್ಲಿದೆ.
Read the full story here

Oct 03, 2024 09:39 AM IST

ಕರ್ನಾಟಕ News Live: Mysore Dasara 2024: ಮೈಸೂರು ದಸರಾ ಸಂಭ್ರಮ ಆರಂಭ; ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ, ಗಣ್ಯರಿಂದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ

  • ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ದಸರಾದ ಸಡಗರದ ಕ್ಷಣಗಳು ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆಯೊಂದಿಗೆ ಚಾಲನೆ ದೊರಕಿದೆ. 
Read the full story here

Oct 03, 2024 08:46 AM IST

ಕರ್ನಾಟಕ News Live: Madikeri Dasara 2024: ಮಡಿಕೇರಿ ದಸರಾಕ್ಕೂ ಇಂದೇ ಚಾಲನೆ; ಶತಮಾನದಷ್ಟು ಹಳೆಯದಾದ ಕೊಡಗಿನ ಕರಗ ಉತ್ಸವ ಹೀಗಿರಲಿದೆ

  • ಮಡಿಕೇರಿ ದಸರಾಕ್ಕೆ ತನ್ನದೇ ಆದ ಮಹತ್ವವಿದೆ. ದಸರಾ ವೇಳೆ ಕರಗ ಮಹೋತ್ಸವ ಹಾಗೂ ನಾಲ್ಕು ದೇವತೆಯರ ಮೆರವಣಿಗೆ ಇಲ್ಲಿನ ವಿಶೇಷ. ಈ ಕುರಿತ ಮಾಹಿತಿ ಇಲ್ಲಿದೆ.
Read the full story here

Oct 03, 2024 08:31 AM IST

ಕರ್ನಾಟಕ News Live: ಮೈಸೂರು ದಸರಾಕ್ಕೆ ಬರುತ್ತೀದ್ದೀರಾ, ಒಮ್ಮೆ ಗಮನಿಸಿ; ಈ ಬಾರಿ ಹಲವಾರು ಕಾರ್ಯಕ್ರಮಗಳ ಸ್ಥಳಗಳಲ್ಲಿ ಆಗಿದೆ ಬದಲಾವಣೆ, ಟಿಕೆಟ್‌ ದರ ಕೂಡ

  • ಮೈಸೂರು ದಸರಾದ ಚಟುವಟಿಕೆಗಳು ಹಲವು ಕಡೆ ನಡೆಯುತ್ತವೆ. ಈ ಬಾರಿ ಯುವ ದಸರಾ, ಆಹಾರ ಮೇಳ, ಪುಸ್ತಕ ಮೇಳ ಸಹಿತ ಕೆಲವು ದಸರಾ ಕಾರ್ಯಕ್ರಮ ನಡೆಯುವ ಸ್ಥಳ ಬದಲಾವಣೆಯಾಗಿದೆ.ಇದರ ವಿವರ ಇಲ್ಲಿದೆ.
Read the full story here

Oct 03, 2024 08:16 AM IST

ಕರ್ನಾಟಕ News Live: Mysore Dasara 2024: ತೆರೆದುಕೊಳ್ಳಲಿದೆ ಮೈಸೂರು ದಸರಾ ವೈಭವ; ಇಂದಿನಿಂದ 10 ದಿನ ನವರಾತ್ರಿ ಸಡಗರ, ಚಾಮುಂಡಿಬೆಟ್ಟದಲ್ಲಿ ಚಾಲನೆಗೆ ಕ್ಷಣಗಣನೆ

  • ಮೈಸೂರಿನಲ್ಲಿ ನಾಡಹಬ್ಬ ದಸರಾ ಆರಂಭಕ್ಕೆ ಕ್ಷಣಗಣನೆ. ಗುರುವಾರ ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಹತ್ತು ದಿನದ ಹಬ್ಬಕ್ಕೆ ಚಾಲನೆ ಸಿಗಲಿದೆ. ಇದರ ವಿವರ ಇಲ್ಲಿದೆ.
Read the full story here

    ಹಂಚಿಕೊಳ್ಳಲು ಲೇಖನಗಳು