LIVE UPDATES
ನಮ್ಮ ಮೆಟ್ರೋ ಪ್ರಯಾಣ ದರ ಶೇ 15-25ರಷ್ಟು ಏರಿಕೆ ಸಂಭವ; ಪ್ರಯಾಣಿಕರ ಜೇಬಿಗೆ ಹೊರೆ, ಎಸಿಯಲ್ಲೂ ಬೆವರುವ ಪರಿಸ್ಥಿತಿ!
Karnataka News Live October 4, 2024 : ನಮ್ಮ ಮೆಟ್ರೋ ಪ್ರಯಾಣ ದರ ಶೇ 15-25ರಷ್ಟು ಏರಿಕೆ ಸಂಭವ; ಪ್ರಯಾಣಿಕರ ಜೇಬಿಗೆ ಹೊರೆ, ಎಸಿಯಲ್ಲೂ ಬೆವರುವ ಪರಿಸ್ಥಿತಿ!
Oct 04, 2024 10:07 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
ಕರ್ನಾಟಕ News Live: ನಮ್ಮ ಮೆಟ್ರೋ ಪ್ರಯಾಣ ದರ ಶೇ 15-25ರಷ್ಟು ಏರಿಕೆ ಸಂಭವ; ಪ್ರಯಾಣಿಕರ ಜೇಬಿಗೆ ಹೊರೆ, ಎಸಿಯಲ್ಲೂ ಬೆವರುವ ಪರಿಸ್ಥಿತಿ!
- Namma Metro: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಖಚಿತವಾಗಿದ್ದು, ಶೇಕಡಾ 15-25ರಷ್ಟು ಏರಿಕೆ ಸಂಭವ ಸಾಧ್ಯತೆ ಇದೆ. ಪ್ರಯಾಣಿಕರ ಜೇಬಿಗೆ ಹೊರೆ, ಎಸಿಯಲ್ಲೂ ಬೆವರುವ ಪರಿಸ್ಥಿತಿ ಬಂದಿದೆ. (ವರದಿ-ಎಚ್.ಮಾರುತಿ)
ಕರ್ನಾಟಕ News Live: ಬೆಂಗಳೂರಿನ 3 ಇಂಜಿನಿಯರಿಂಗ್ ಕಾಲೇಜುಗಳಿಗೆ ಹುಸಿ ಬಾಂಬ್ ಬೆದರಿಕೆ; ಆತಂಕದಲ್ಲಿ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ
- Hoax bomb Call: ಬೆಂಗಳೂರಿನ ಪ್ರಮುಖ 3 ಇಂಜಿನಿಯರಿಂಗ್ ಕಾಲೇಜುಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಕಾಲೇಜಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಪ್ರಕರಣ ದಾಖಲಾಗಿದೆ. (ವರದಿ-ಎಚ್.ಮಾರುತಿ)
ಕರ್ನಾಟಕ News Live: ದಸರಾ ರಜೆ ಹಿನ್ನೆಲೆ ಹೆಚ್ಚುವರಿ ಬಸ್ಗಳ ವ್ಯವಸ್ಥೆ, ಬೆಂಗಳೂರು-ಮೈಸೂರು ವಿಶೇಷ ಸಾರಿಗೆ; ಒಂದು ದಿನದ ವಿಶೇಷ ಪ್ಯಾಕೇಜ್ ಪ್ರವಾಸ
- Dasara Tourism: ದಸರಾ ರಜೆ ಹಿನ್ನೆಲೆ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ಸಾರಿಗೆ, ಮೈಸೂರಿನಿಂದ ಒಂದು ದಿನದ ವಿಶೇಷ ಪ್ಯಾಕೇಜ್ ಪ್ರವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನೇಕೆ ತಡ, ಹೊರಡೋಣ ಬನ್ನಿ. (ವರದಿ-ಎಚ್. ಮಾರುತಿ)
ಕರ್ನಾಟಕ News Live: ಧಾರವಾಡ: ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರ ಬಂಧನ, 97 ಲಕ್ಷ ಚಿನ್ನಾಭರಣ ಜಪ್ತಿ; ಉಡುಪಿಯಲ್ಲಿ ಕಲುಷಿತ ನೀರು ಸೇವಿಸಿ ಹಲವರು ಅಸ್ವಸ್ಥ
- Karnataka Crime News: ಧಾರವಾಡದಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಇನ್ನು ಉಡುಪಿಯಲ್ಲಿ ಕಲುಷಿತ ನೀರು ಸೇವಿಸಿ ಹಲವರು ಅಸ್ವಸ್ಥಗೊಂಡಿದ್ದಾರೆ.
ಕರ್ನಾಟಕ News Live: ಅಂಚೆ ಇಲಾಖೆಗೆ ಪ್ರೀತಿಯಿಂದ ಪತ್ರ ಬರೆಯಿರಿ, 25 ಸಾವಿರ ರೂ. ಬಹುಮಾನ ಗೆಲ್ಲಿರಿ; ಡಿಸೆಂಬರ್ 14 ಕಡೆಯ ದಿನ
- ಭಾರತೀಯ ಅಂಚೆ ಇಲಾಖೆಯು ಪತ್ರ ಬರೆಯುವ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಅತ್ಯುತ್ತಮವಾಗಿ ಪತ್ರ ಬರೆಯುವವರಿಗೆ ನಗದು ಬಹುಮಾನವಿದ್ದು, ರಾಜ್ಯ ಮಟ್ಟದಲ್ಲಿ ಗೆದ್ದವರು ರಾಷ್ಟ್ರಮಟ್ಟದಲ್ಲೂ ಭಾಗಿಯಾಗಬಹುದು.
ಕರ್ನಾಟಕ News Live: ಮೈಸೂರು ಯುವ ದಸರಾ ಅಕ್ಟೋಬರ್ 6ರಿಂದ ಆರಂಭ; ಶ್ರೇಯಾ ಘೋಷಾಲ್, ಎಆರ್ ರೆಹಮಾನ್ರಿಂದ ಕಾರ್ಯಕ್ರಮ, ಇಲ್ಲಿದೆ ವೇಳಾಪಟ್ಟಿ
- Mysore Yuva Dasara 2024: ಮೈಸೂರು ಯುವ ದಸರಾ ಕಾರ್ಯಕ್ರಮ ಅಕ್ಟೋಬರ್ 6ರಂದು ಆರಂಭವಾಗಲಿದ್ದು, ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ. ಮತ್ತು ಈ ಕಾರ್ಯಕ್ರಮಕ್ಕೆ ಭದ್ರತೆ ಹೇಗಿರಲಿದೆ ಎಂಬುದರ ವಿವರ ಇಲ್ಲಿದೆ ನೋಡಿ.
ಕರ್ನಾಟಕ News Live: Srirangapatna Dasara: ಶ್ರೀರಂಗಪಟ್ಟಣ ದಸರಾದಲ್ಲಿ ನಟ ಶಿವರಾಜಕುಮಾರ್ ಪುಷ್ಪಾರ್ಚನೆ; ಅಂಬಾರಿ ಹೊತ್ತ ಮಹೇಂದ್ರ
- ಮಂಡ್ಯ ಜಿಲ್ಲೆಯ ಕಾವೇರಿ ತೀರದ ಐತಿಹಾಸಿಕ ನಗರಿ ಶ್ರೀರಂಗಪಟ್ಟಣದಲ್ಲಿ ಜಂಬೂ ಸವಾರಿ ಶುಕ್ರವಾರ ಸಾಂಗವಾಗಿ ನೆರವೇರಿತು. ಕಲಾತಂಡಗಳು ಇಡೀ ಉತ್ಸವಕ್ಕೆ ಕಳೆ ತುಂಬಿದವು.
ಕರ್ನಾಟಕ News Live: ಸಿಎಂ ಸಿದ್ದರಾಮಯ್ಯ ಪರ ಜಿಟಿಡಿ ಬ್ಯಾಟಿಂಗ್; ಕಳ್ರು ಒಂದಾಗಿದ್ದಾರೆ ಎಂದ ಸ್ನೇಹಮಯಿ ಕೃಷ್ಣ, ಸಾರಾ ಮಹೇಶ್-ವಿಶ್ವನಾಥ್ ಕಿಡಿ
- Mysore Dasara 2024: ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಜಿಟಿ ದೇವೇಗೌಡ ಬ್ಯಾಟಿಂಗ್ ನಡೆಸಿದ ಹಿನ್ನೆಲೆ ಸ್ನೇಹಮಯಿ ಕೃಷ್ಣ, ಸಾರಾ ಮಹೇಶ್, ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ News Live: ಶ್ರೀರಂಗಪಟ್ಟಣ ದಸರಾದಲ್ಲಿ ಬೆದರಿ ಓಡಿದ ಹಿರಣ್ಯ ಆನೆ, ನಿಯಂತ್ರಣಕ್ಕೆ ಮಾವುತನ ಹರ ಸಾಹಸ, ತಪ್ಪಿದ ಭಾರೀ ಅನಾಹುತ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಂಬೂ ಸವಾರಿಗೆ ಆಗಮಿಸಿದ್ದ ಹಿರಣ್ಯ ಆನೆ ದಿಕ್ಕಾಪಾಲಾಗಿ ನೋಡಿ ಆತಂಕ ಸೃಷ್ಟಿಸಿದ ಸನ್ನಿವೇಶ ನಿರ್ಮಾಣವಾಗಿತ್ತು. ಕೂಡಲೇ ಆನೆ ನಿಯಂತ್ರಣಕ್ಕೆ ತಂದರು ಮಾವುತ ಹಾಗೂ ಕವಾಡಿ.
ಕರ್ನಾಟಕ News Live: ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಗುಡ್ನ್ಯೂಸ್; ಈ ದಿನದಂದು ಎರಡು ತಿಂಗಳ ಹಣವೂ ಒಟ್ಟಿಗೆ ಖಾತೆಗೆ ಜಮೆ
- Gruha Lakshmi Scheme: ನವರಾತ್ರಿ ಪ್ರಯುಕ್ತ ಗೃಹ ಲಕ್ಷ್ಮೀ ಯೋಜನೆ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಸುಮಾರು 5 ಸಾವಿರ ಕೋಟಿ ಹಣ ಫಲಾನುಭವಿಗಳಿಗೆ ಸಂದಾಯ ಮಾಡಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಕರ್ನಾಟಕ News Live: ಕರ್ನಾಟಕದಲ್ಲಿ ಬಂದ್ ಆಗಿದ್ದ ಚಾರಣ ಪುನಾರಂಭ, ನಾಗಮಲೈ, ಕುಮಾರ ಪರ್ವತಕ್ಕೆ ಚಾರಣ ಹೊರಡಬಹದು, ಈ ನಿಯಮ ಪಾಲನೆ ಕಡ್ಡಾಯ
- ಕರ್ನಾಟಕದಲ್ಲಿ ಸ್ಥಗಿತಗೊಂಡಿದ್ದ ಚಾರಣಕ್ಕೆ ಕರ್ನಾಟಕ ಅರಣ್ಯ ಇಲಾಖೆ ಪುನಃ ಚಾಲನೆ ನೀಡಲು ಮುಂದಾಗಿದೆ. ಇದಕ್ಕಾಗಿ ಆನ್‌ಲೈನ್ ನೋಂದಣಿ ವ್ಯವಸ್ಥೆ ಮಾಡಲಾಗಿದೆ. ಐದು ಮಾರ್ಗಗಳಲ್ಲಿ ಚಾರಣ ಮಾಡಬಹುದು.
ಕರ್ನಾಟಕ News Live: Mangalore Dasara 2024: ಮಂಗಳೂರು ದಸರಾಕ್ಕೆ ವಿಧ್ಯುಕ್ತ ಚಾಲನೆ; 9 ದಿನಗಳ ಉತ್ಸವಕ್ಕೆ ನವದುರ್ಗೆಯರು, ಶಾರದಾದೇವಿ ಮೂರ್ತಿ ಸ್ಥಾಪನೆ
- ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇಗುಲದಲ್ಲಿ ನವದುರ್ಗೆಯರ ಸ್ಥಾಪನೆಯೊಂದಿಗೆ ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ದೊರಕಿದೆ. ಏನೇನು ವಿಶೇಷಗಳು ಈ ವರ್ಷದ ದಸರಾದಲ್ಲಿವೆ ಎನ್ನುವ ವಿವರ ಇಲ್ಲಿದೆ
- ವರದಿ: ಹರೀಶ ಮಾಂಬಾಡಿ.ಮಂಗಳೂರು
ಕರ್ನಾಟಕ News Live: ಶ್ರೀರಂಗಪಟ್ಟಣದಲ್ಲಿ ಇಂದೇ ಜಂಬೂಸವಾರಿ, ನಟ ಶಿವರಾಜಕುಮಾರ್ ಚಾಲನೆ; 4 ದಿನ ಉಂಟು ನಾನಾ ಕಾರ್ಯಕ್ರಮ
- ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ದಸರಾ ಸಂಭ್ರಮ ತೆರೆದುಕೊಳ್ಳಲಿದೆ. ನಟ ಶಿವರಾಜಕುಮಾರ್ ಜಂಬೂ ಸವಾರಿಯಲ್ಲಿ ಪುಷ್ಪಾರ್ಚನೆ ಮಾಡುವರು.