ಅಬ್ಬಬ್ಬಾ, ವಿಶ್ವದ ಅತೀ ಸಂಚಾರ ದಟ್ಟಣೆಯ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಆರನೇ ಸ್ಥಾನ, ಇಡೀ ಭಾರತದಲ್ಲಿ ಉದ್ಯಾನಗರಿಯೇ ನಂಬರ್ 1
Oct 24, 2024 05:45 PM IST
ಬೆಂಗಳೂರಿನಲ್ಲಿ ಬುಧವಾರ ಸಂಜೆ ಕಂಡು ಬಂದ ದಟ್ಟಣೆಯ ನೋಟ.
- ಬೆಂಗಳೂರು ನಗರ ಹಲವು ವಿಷಯದಲ್ಲಿ ಖ್ಯಾತಿ ಪಡೆದಿದ್ದರೂ ಸಂಚಾರದ ವಿಚಾರದಲ್ಲಿ ಕುಖ್ಯಾತಿ ಪಡೆದಿದೆ. ಏಕೆಂದರೆ ಸಂಚಾರ ದಟ್ಟಣೆಯಲ್ಲಿ ವಿಶ್ವದಲ್ಲೇ ಬೆಂಗಳೂರಿಗೆ ಆರನೇ ಸ್ಥಾನದಲ್ಲಿ. ಭಾರತದಲ್ಲಿ ಮೊದಲನೇ ಸ್ಥಾನ.
ಬೆಂಗಳೂರು: ಉದ್ಯಾನಗರಿ, ಐಟಿ ನಗರಿ ಎಂಬ ಅಭಿದಾನದ ಬೆಂಗಳೂರು ಮಿತಿ ಮೀರಿದ ಸಂಚಾರ ದಟ್ಟಣೆ ನಗರವೂ ಹೌದು. ಅದೂ ವಿಶ್ವದಲ್ಲಿ ಬೆಂಗಳೂರಿಗೆ ಸಂಚಾರ ದಟ್ಟಣೆಯಲ್ಲ ಆರನೇ ಸ್ಥಾನ. ದೆಹಲಿ, ಮುಂಬೈಗಿಂತಲೂ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯಲ್ಲಿ ಭಾರೀ ಮುಂದಿದೆ. ಹೊಸದಾಗಿ ಬಿಡುಗಡೆಯಾದ ಸಮೀಕ್ಷೆಯೊಂದು ವಿಶ್ವದ ಸಂಚಾರ ದಟ್ಟಣೆಗಳ ಪ್ರಮುಖ ನಗರಗಳ ಪಟ್ಟಿ ಮಾಡಿದೆ. ಭಾರತದಲ್ಲಿಯೇ ಮೊದಲ ನಗರದ ಸ್ಥಾನವನ್ನು, ವಿಶ್ವದಲ್ಲಿ ಆರನೇ ಸ್ಥಾನವನ್ನು ಬೆಂಗಳೂರು ಪಡೆದುಕೊಂಡಿದೆ. ಕೆಲವು ದಿನಗಳಿಂದ ಬೆಂಗಳೂರಿನ ಸಂಚಾರ ಸ್ಥಿತಿ ಹೇಳತೀರದು. ಮಳೆಯಿಂದ ಸಂಚಾರ ದಟ್ಟಣೆ ಮಿತಿ ಮೀರಿದ್ದರೆ, ಬೆಂಗೂರಿನಲ್ಲಿ ನಡೆದಿರುವ ಅಭಿವೃದ್ದಿ ಕಾಮಗಾರಿಗಳ ಕಾರಣದಿಂದಲೂ ದಟ್ಟಣೆ ಅತಿಯಾಗಿ ಹೋಗಿದೆ. ಮನೆಯಿಂದ ಹೊರಡುವ ಮುನ್ನವೇ ಅಬ್ಬಬ್ಬಾ ಇಂದು ಹೇಗೆ ಹೋಗಿ ಬರೋದಪ್ಪ ಎಂದು ಗೊಣಗುತ್ತಲೇ ಸಂಚರಿಸುವವರಿಗೆ ಕಡಿಮೇ ಏನಿಲ್ಲ.
ಟಾಮ್‌ಟಾಮ್‌ನ ಟ್ರಾಫಿಕ್ ಎನ್ನುವ ಸಂಸ್ಥೆ ಸತತ ಹದಿಮೂರು ವರ್ಷದಿಂದ ವಿಶ್ವದ ಒಂದು ಸಾವಿರಕ್ಕೂ ಅಧಿಕ ನಗರಗಳ ಸಂಚಾರ ದಟ್ಟಣೆಯ ಅಧ್ಯಯನ ಮಾಡುತ್ತಾ ಬಂದಿದೆ. ಮುಖ್ಯವಾಗಿ ಏಷಿಯಾ, ಯುಕೆ, ಅಮೆರಿಕಾ ಭಾಗದ ದೇಶಗಳ ಸಂಚಾರ ದಟ್ಟಣೆಯ ಅಧ್ಯಯನ ನಡೆಸುತ್ತದೆ. ಒಂದು ಗಂಟೆಯಲ್ಲಿ ವಾಹನ ಸಂಚರಿಸಬಹುದಾದ ದೂರದ ಕ್ರಮ ಹಾಗೂ ಅದಕ್ಕೆ ಕಾರಣವನ್ನು ಪಟ್ಟಿ ಮಾಡುತ್ತದೆ. ಅದರಲ್ಲೂ ಹತ್ತು ಕಿ.ಮಿ ಸಂಚಾರದ ಸಮಯವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ 2023 ರ ಪ್ರಕಾರ ವಿಶ್ವದ ಟಾಪ್ ಹತ್ತು ನಗರಗಳಲ್ಲಿ ಬೆಂಗಳೂರು ಆರು, ಪುಣೆ ಏಳನೇ ಸ್ಥಾನ ಪಡೆದಿವೆ. ದೆಹಲಿ ಮತ್ತು ಮುಂಬೈ ಕ್ರಮವಾಗಿ 44 ನೇ ಮತ್ತು 54 ನೇ ಶ್ರೇಯಾಂಕದಲ್ಲಿವೆ.
ಪ್ರಮುಖ ದೇಶಗಳ ವಿವರ ಇಲ್ಲಿದೆ
- ಲಂಡನ್, ಯುಕೆ
ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ 2023 ರ ಪ್ರಕಾರ, ಲಂಡನ್ ಸರಾಸರಿ 37 ನಿಮಿಷಗಳು ಮತ್ತು 20 ಸೆಕೆಂಡುಗಳ ಪ್ರಯಾಣದ ಸಮಯದೊಂದಿಗೆ ಮೊದಲ ಸ್ಥಾನದಲ್ಲಿದೆ. ಅಲ್ಲಿನ ಕಿರಿದಾದ ಬೀದಿಗಳು ಮತ್ತು ವಿಸ್ತರಿಸುತ್ತಿರುವ ಜನಸಂಖ್ಯೆಯು ಸಂಚಾರ ವಿಳಂಬ ಪ್ರಯಾಣಿಕರಿಗೆ ನಿರಂತರ ಸವಾಲಾಗಿ ಪರಿಣಮಿಸಿದೆ.
- ಡಬ್ಲಿನ್, ಐರ್ಲೆಂಡ್
ಡಬ್ಲಿನ್ ಲಂಡನ್‌ನ ಹಿಂದೆ ನಿಕಟವಾಗಿಯೇ ಸಂಚಾರ ದಟ್ಟಣೆಯಲ್ಲಿದೆ, ಸರಾಸರಿ ಪ್ರಯಾಣದ ಸಮಯ 29 ನಿಮಿಷಗಳು ಮತ್ತು 30 ಸೆಕೆಂಡುಗಳು ಇದೇ ದೂರಕ್ಕೆ, ಇದು ಜಾಗತಿಕವಾಗಿ ಅತ್ಯಂತ ದಟ್ಟಣೆಯ ನಗರಗಳಲ್ಲಿ ಒಂದಾಗಿದೆ.
- ಟೊರೊಂಟೊ, ಕೆನಡಾ
ಟೊರೊಂಟೊ ಮೂರನೇ ಸ್ಥಾನದಲ್ಲಿದೆ, ಪ್ರಯಾಣಿಕರು 6-ಮೈಲಿ ಪ್ರಯಾಣವನ್ನು ಪೂರ್ಣಗೊಳಿಸಲು ಸರಾಸರಿ 29 ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ. ಇದು ನಗರದ ಹೆಚ್ಚಿನ ಟ್ರಾಫಿಕ್ ದಟ್ಟಣೆಯನ್ನು ಪ್ರತಿಬಿಂಬಿಸುತ್ತದೆ.
- ಮಿಲನ್, ಇಟಲಿ
ವಿಶ್ವದ ಫ್ಯಾಷನ್ ರಾಜಧಾನಿ" ಎಂದು ಕರೆಯಲ್ಪಡುವ ಮಿಲನ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. 2023 ರಲ್ಲಿ, ಪ್ರಯಾಣಿಕರು 10 ಕಿಮೀ ದೂರವನ್ನು ಕ್ರಮಿಸಲು ಸರಾಸರಿ 28 ನಿಮಿಷಗಳು ಮತ್ತು 50 ಸೆಕೆಂಡುಗಳನ್ನು ಕಳೆದಿದ್ದಾರೆ. ರಶ್-ಅವರ್ ನಲ್ಲಿ ಟ್ರಾಫಿಕ್‌ನಿಂದ ವಾರ್ಷಿಕವಾಗಿ 137 ಗಂಟೆಗಳನ್ನು ಕಳೆದುಕೊಳ್ಳುತ್ತಾರೆ.
ಇದನ್ನೂ ಓದಿರಿ: ವರ್ಕ್ ಫ್ರಮ್ ಮಾಡ್ಲಾ ಸರ್ ಇವತ್ತು? ಬೇಡ, ಆಫೀಸ್ ಇರೋದು 8ನೇ ಮಹಡಿಯಲ್ಲಿ; ಬೆಂಗಳೂರು ಮಳೆಯಲ್ಲಿ ಡ್ಯಾನಿಶ್ ಸೇಟ್ ಕಾಮಿಡಿ ವೈರಲ್
- ಲಿಮಾ, ಪೆರು
10 ಕಿ.ಮೀ ಪ್ರಯಾಣಕ್ಕಾಗಿ 28-ನಿಮಿಷ ಮತ್ತು 30-ಸೆಕೆಂಡ್‌ಗಳ ಸರಾಸರಿ ಪ್ರಯಾಣದ ಸಮಯದೊಂದಿಗೆ ಲಿಮಾ ಐದನೇ ಸ್ಥಾನದಲ್ಲಿದೆ, ಇದರಿಂದಾಗಿ ಪ್ರಯಾಣಿಕರು ರಶ್ ಅವರ್‌ನಲ್ಲಿ ವಾರ್ಷಿಕವಾಗಿ 157 ಗಂಟೆಗಳನ್ನು ಕಳೆದುಕೊಳ್ಳುತ್ತಾರೆ.
- ಬೆಂಗಳೂರು, ಭಾರತ
ಬೆಂಗಳೂರು ಆರನೇ ಸ್ಥಾನದಲ್ಲಿದೆ. 10 ಕಿಮೀ ಪ್ರಯಾಣಕ್ಕಾಗಿ ನಗರದ ಸರಾಸರಿ ಪ್ರಯಾಣದ ಸಮಯವು 28 ನಿಮಿಷಗಳು ಮತ್ತು 10 ಸೆಕೆಂಡುಗಳು, ಇದು ಭಾರತದ ಅತ್ಯಂತ ಜನದಟ್ಟಣೆಯ ನಗರಗಳಲ್ಲಿ ಒಂದಾಗಿದೆ
ಇದನ್ನೂ ಓದಿರಿ: ಬೆಂಗಳೂರು ಮಳೆ, ಜಲಾವೃತ ರಸ್ತೆಗಳ ಫೋಟೋ ವಿಡಿಯೋಗಳು ವೈರಲ್ ಆಗ್ತಾ ಇದ್ರೆ, ಇಲ್ಲಿ ಅಂಥದ್ದೇನೂ ಇಲ್ಲ ಅಂತಿದ್ದಾರೆ ಈ ಭಾಗದ ಬೆಂಗಳೂರಿಗರು
- ಪುಣೆ, ಭಾರತ
ಪುಣೆ ಬೆಂಗಳೂರನ್ನು ಅನುಸರಿಸಿ, 10 ಕಿಮೀ ಪ್ರಯಾಣಕ್ಕಾಗಿ ಸರಾಸರಿ 27 ನಿಮಿಷ 50 ಸೆಕೆಂಡುಗಳ ಪ್ರಯಾಣದೊಂದಿಗೆ ಏಳನೇ ಸ್ಥಾನವನ್ನು ಪಡೆದುಕೊಂಡಿದೆ.
- ಬುಕಾರೆಸ್ಟ್, ರೊಮೇನಿಯಾ
ಬುಕಾರೆಸ್ಟ್ ಪಟ್ಟಿಯನ್ನು ಪೂರ್ಣಗೊಳಿಸುತ್ತದೆ, 10 ಕಿಮೀ ಪ್ರಯಾಣಕ್ಕಾಗಿ ಸರಾಸರಿ 27 ನಿಮಿಷಗಳು ಮತ್ತು 40 ಸೆಕೆಂಡುಗಳ ಪ್ರಯಾಣದ ಸಮಯ, ಇದು ಟ್ರಾಫಿಕ್‌ನಲ್ಲಿ ವಾರ್ಷಿಕವಾಗಿ 150 ಗಂಟೆಗಳ ನಷ್ಟಕ್ಕೆ ಕಾರಣವಾಗುತ್ತದೆ.
- ಮನಿಲಾ-ಬ್ರುಸೆಲ್ಸ್
ನಂತರದ ಸ್ಥಾನದಲ್ಲಿ ಫಿಲಿಫೈನ್ಸ್ ನ ಮನಿಲಾ ಹಾಗೂ ಬೆಲ್ಜಿಯಂನ ಬ್ರುಸೆಲ್ಸ್ ನಗರಗಳು ಒಂಬತ್ತು ಹಾಗೂ ಹತ್ತನೇ ಸ್ಥಾನದಲ್ಲಿವೆ.