logo
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: 3 ಡಿಸಿಎಂ ಹುದ್ದೆಗೆ ಯಾರ ವಿರೋಧವಿಲ್ಲ, ಮತ್ತೆ ದೆಹಲಿಯಲ್ಲಿ ಪ್ರಸ್ತಾಪಿಸುತ್ತೇವೆ: ಕೆ.ಎನ್.ರಾಜಣ್ಣ

Tumkur News: 3 ಡಿಸಿಎಂ ಹುದ್ದೆಗೆ ಯಾರ ವಿರೋಧವಿಲ್ಲ, ಮತ್ತೆ ದೆಹಲಿಯಲ್ಲಿ ಪ್ರಸ್ತಾಪಿಸುತ್ತೇವೆ: ಕೆ.ಎನ್.ರಾಜಣ್ಣ

HT Kannada Desk HT Kannada

Jan 11, 2024 01:45 PM IST

google News

ತುಮಕೂರಿನಲ್ಲಿ ಸಚಿವ ಕೆ.ಎನ್‌.ರಾಜಣ್ಣ ಮೂರು ಡಿಸಿಎಂ ಹುದ್ದೆ ಕುರಿತು ಮಾತನಾಡಿದರು.

    • DCm Posts ಕರ್ನಾಟಕದಲ್ಲಿ ಹೈಕಮಾಂಡ್‌ ಹೇಳಿದ ನಂತರವೂ ಮೂರು ಡಿಸಿಎಂ ಹುದ್ದೆ ವಿವಾದ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ದೆಹಲಿಯಲ್ಲಿ ಮತ್ತೆ ಈ ವಿಚಾರ ಪ್ರಸ್ತಾಪಿಸುವುದಾಗಿ ಸಚಿವ ಕೆ.ಎನ್‌.ರಾಜಣ್ಣ ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಸಚಿವ ಕೆ.ಎನ್‌.ರಾಜಣ್ಣ ಮೂರು ಡಿಸಿಎಂ ಹುದ್ದೆ ಕುರಿತು ಮಾತನಾಡಿದರು.
ತುಮಕೂರಿನಲ್ಲಿ ಸಚಿವ ಕೆ.ಎನ್‌.ರಾಜಣ್ಣ ಮೂರು ಡಿಸಿಎಂ ಹುದ್ದೆ ಕುರಿತು ಮಾತನಾಡಿದರು.

ತುಮಕೂರು: ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಡಿಸಿಎಂ ಗುದ್ದಾಟ ಮುಗಿಯುತ್ತಿಲ್ಲ, ಅದರಲ್ಲೂ ತುಮಕೂರು ಜಿಲ್ಲೆಯ ಮಧುಗಿರಿ ಶಾಸಕ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತ್ರ ಹೋದಲ್ಲಿ ಬಂದಲ್ಲಿ ಮೂವರು ಡಿಸಿಎಂ ಆಗ್ಬೇಕು ಅನ್ನೋ ಮಾತನಾಡುತ್ತಲ್ಲೇ ಇದ್ದಾರೆ, ಇದು ಹೈಕಮಾಂಡ್‌ಗೆ ತಲೆಬಿಸಿ ತಂದೊಡಿದೆ.

ತುಮಕೂರಿನಲ್ಲಿ ಬುಧವಾರ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಲ್ಲಿಯವರೆಗೆ ಶಾಸಕರ ಬೆಂಬಲ, ಹೈಕಮಾಂಡ್ ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೆ ಮುಖ್ಯಮಂತ್ರಿಯಾಗಿರುತ್ತಾರೆ, ಈಗಾಗಲೇ ಮೂರು ಡಿಸಿಎಂ ನೇಮಕದ ವಿಚಾರವನ್ನು ಪಕ್ಷದ ಉಸ್ತುವಾರಿ ಸುರ್ಜೇವಾಲಾ ಅವರ ಮುಂದೆ ಪ್ರಸ್ತಾಪ ಮಾಡಿದ್ದೇವೆ, ಇನ್ನು ಮುಂದೆ ಈ ಸಂಬಂಧ ಯಾರು ತೀರ್ಮಾನ ತೆಗೆದುಕೊಳ್ಳುತ್ತಾರೋ ಅವರ ಮುಂದೆ ಈ ವಿಚಾರ ಪ್ರಸ್ತಾಪ ಮಾಡಿದರೆ ಸೂಕ್ತ ಎನ್ನುವುದು ನನ್ನ ಭಾವನೆ ಎಂದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮೂರು ಡಿಸಿಎಂ ಬೇಡಿಕೆ ವಿಚಾರ ಗೊತ್ತಿಲ್ಲ ಎಂದು ಹೇಳಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಗೊತ್ತಿಲ್ಲ ಎಂದರೆ ಹೇಗೆ, ಎಲ್ಲಾ ಮಾಧ್ಯಮಗಳಲ್ಲಿ ಬಿತ್ತರವಾಗಿದೆ ಎಂದರು.

ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಗಾಯ ಗಾಂಧಿ, ರಾಹುಲ್ ಗಾಂಧಿಯವರ ಮುಂದೆ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡುತ್ತೇವೆ, ನಂತರ ಅವರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಮೂರು ಡಿಸಿಎಂ ನೇಮಕದ ವಿಚಾರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ ಹೊಸದಾಗಿ ಆಗುವ ಡಿಸಿಎಂಗಳು ಡಿ.ಕೆ.ಶಿವಕುಮಾರ್ ಅವರ ಖಾತೆಗಳನ್ನು ಕಿತ್ತೊಳ್ಳಲ್ಲ. ಮೂರು ಡಿಸಿಎಂ ನೇಮಕ ಬೇಡಿಕೆಗೆ ಯಾವ ಸಚಿವರೂ ವಿರೋಧ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಹೆಚ್‌ಡಿಕೆಗೆ ತಿರುಗೇಟು

ಕಾಂಗ್ರೆಸ್ ದಲಿತರ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿಲ್ಲ, ಎಲ್ಲಾ ಬಡವರ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ, ಬಡವರು, ದಲಿತರು ಸೇರಿದಂತೆ ಎಲ್ಲಾ ವರ್ಗದ ಶೋಷಿತರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಕೆ.ಎನ್.ರಾಜಣ್ಣ, ಕುಮಾರಸ್ವಾಮಿ ಯಾರ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ನಾವು ಇನ್ನೊಬ್ಬರ ಕಡೆ ಒಂದು ಬೊಟ್ಟು ಮಾಡಿ ತೋರಿಸಿ ಟೀಕೆ ಮಾಡಿದರೆ ಇನ್ನು ಮೂರು ಬೊಟ್ಟು ನಮ್ಮ ಕಡೆ ತೋರಿಸುತ್ತವೆ. ಇದನ್ನು ನಾವುಗಳು ಬೇರೆಯವರ ಬಗ್ಗೆ ಮಾತನಾಡುವ ಮುನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಸಮುದ್ರ ಇದ್ದಂತೆ

ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ, ಸಮುದ್ರಕ್ಕೆ ಶುದ್ಧ ಗಂಗಾ ನದಿಯ ನೀರು ಹರಿದು ಬರುತ್ತದೆ, ಹಾಗೆಯೇ ಚರಂಡಿ ನೀರು ಸಹ ಬರುತ್ತದೆ, ಹಾಗಾಗಿ ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸುತ್ತೇವೆ, ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಸಚಿವ ವಿ.ಸೋಮಣ್ಣ ಸೇರಿದಂತೆ ಯಾರೇ ಬಂದರೂ ಸ್ವಾಗತಿಸುತ್ತೇವೆ. ಆದರೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರ ಅಂತಿಮವಾಗಿ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇವೆ ಎಂದರು.

ಕೊಬ್ಬರಿ ಬೆಲೆ: ಕೇಂದ್ರ ಹೆಚ್ಚಳ ಮಾಡಲಿ

ಕೇಂದ್ರ ಸರ್ಕಾರ ಮೊದಲು ಕ್ವಿಂಟಾಲ್ ಕೊಬ್ಬರಿಗೆ 12 ಸಾವಿರ ರೂ. ಬೆಲೆ ನೀಡಲಿ, ನಂತರ ರಾಜ್ಯ ಸರ್ಕಾರ 3 ಸಾವಿರ ಸೇರಿಸಿ ಕ್ವಿಂಟಾಲ್‌ಗೆ 15 ಸಾವಿರ ರೂ. ನೀಡುತ್ತದೆ ಎಂದರು.

ನಾಫೆಡ್ ಮೂಲಕ 15 ಸಾವಿರಕ್ಕೆ ರೈತರಿಂದ ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರ ಪ್ರಕ್ಯೂರ್‌ಮೆಂಟ್ ಮಾಡಲು ಅನುಮತಿ ನೀಡಬೇಕು, ಪ್ರಕ್ಯೂರ್‌ಮೆಂಟ್ ಮಾಡಿದರೆ ಕಳೆದ ಬಾರಿಯಂತೆ 15 ಸಾವಿರ ರೂ.ಗಳಿಗೆ ರೈತರಿಂದ ನಾಫೆಡ್ ಮೂಲಕ ಕೊಬ್ಬರಿ ಖರೀದಿ ನಡೆಯಲಿದೆ ಎಂದು ರಾಜಣ್ಣ ತಿಳಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ