logo
ಕನ್ನಡ ಸುದ್ದಿ  /  ಕರ್ನಾಟಕ  /  Tumkur: ತಲೆ ಮೇಲೆ ಶಾಲಾ ಬಸ್​ ಹರಿದು ವಿದ್ಯಾರ್ಥಿ ಸಾವು; ಶಾಲೆ ಮುಂಭಾಗದಲ್ಲಿ ಮೃತದೇಹವಿಟ್ಟು ಪ್ರತಿಭಟನೆ

Tumkur: ತಲೆ ಮೇಲೆ ಶಾಲಾ ಬಸ್​ ಹರಿದು ವಿದ್ಯಾರ್ಥಿ ಸಾವು; ಶಾಲೆ ಮುಂಭಾಗದಲ್ಲಿ ಮೃತದೇಹವಿಟ್ಟು ಪ್ರತಿಭಟನೆ

HT Kannada Desk HT Kannada

Sep 04, 2023 08:04 PM IST

google News

ಶಾಲೆ ಮುಂಭಾಗದಲ್ಲಿ ಮೃತದೇಹವಿಟ್ಟು ಪ್ರತಿಭಟನೆ

    • ಬಾಲಕ ಸೋಮವಾರ ಸಂಜೆ ಶಾಲೆ ಮುಗಿಸಿ ಶಾಲಾ ಬಸ್ಸಿನಲ್ಲಿ ಕಟ್ಟಿಗೆಹಳ್ಳಿಗೆ ತೆರಳುವಾಗ ಹಿಂದಿನ ಹಳ್ಳಿಯಾದ ಈಚಲು ಪಾಳ್ಯ ಬಂದಾಗ ಬಸ್‌ನ ಬಾಗಿಲಿನಲ್ಲಿ ನಿಂತಿದ್ದಾನೆ. ಈ ವೇಳೆ ಬಾಲಕ ಬಸ್ಸಿನಿಂದ ಬಿದ್ದಿದ್ದು ನಂತರ ಬಸ್ಸಿನ ಹಿಂಬದಿ ಚಕ್ರ ಬಾಲಕನ ತಲೆಮೇಲೆ ಹತ್ತಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಶಾಲೆ ಮುಂಭಾಗದಲ್ಲಿ ಮೃತದೇಹವಿಟ್ಟು ಪ್ರತಿಭಟನೆ
ಶಾಲೆ ಮುಂಭಾಗದಲ್ಲಿ ಮೃತದೇಹವಿಟ್ಟು ಪ್ರತಿಭಟನೆ

ಕುಣಿಗಲ್ (ತುಮಕೂರು): ಶಾಲೆ ಮುಗಿಸಿ ಶಾಲಾ ಬಸ್ಸಿನಲ್ಲಿ ಮನೆಗೆ ತೆರಳುತ್ತಿದ್ದ ಬಾಲಕ ಶಾಲಾ ಬಸ್‌ನ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಧಾರುಣ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ಇಂದು ಸಂಜೆ (ಸೆಪ್ಟೆಂಬರ್​ 4, ಸೋಮವಾರ) ನಡೆದಿದೆ.

ಮೃತ ಬಾಲಕನನ್ನು ಬಾಲಾಜಿ (10) ಎಂದು ಗುರುತಿಸಲಾಗಿದ್ದು, ಈತ ಕೆಆರ್‌ಎಸ್ ಅಗ್ರಹಾರದಲ್ಲಿನ ಬಿಜಿಎಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ, ಸೋಮವಾರ ಸಂಜೆ ಎಂದಿನಂತೆ ಶಾಲೆ ಮುಗಿಸಿ ವಾಪಸ್ ಬಸ್‌ನಲ್ಲಿ ಸ್ವಗ್ರಾಮಕ್ಕೆ ಹಿಂತಿರುಗುವಾಗ ಘಟನೆ ನಡೆದಿದೆ, ಘಟನೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರಿಗೆ ದೂರು ನೀಡಲಾಗಿದೆ.

ಮೃತ ದೇಹವಿಟ್ಟು ಪ್ರತಿಭಟನೆ

ಶಾಲಾ ಬಸ್ಸಿಗೆ ಸಿಲುಕಿ ಶಾಲಾ ಬಾಲಕ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಶಾಲಾ ಬಸ್ಸಿನ ಸಿಬ್ಬಂದಿ ನಿರ್ಲಕ್ಷ್ಯ ಖಂಡಿಸಿ ಸಾರ್ವಜನಿಕರು, ಪೋಷಕರು ಬಸ್ಸಿಗೆ ಸಿಲುಕಿ ಮೃತಪಟ್ಟ ಬಾಲಕನ ಮೃತದೇಹ ಶಾಲಾ ಮುಂಭಾಗದಲ್ಲಿಟ್ಟು ಪ್ರತಿಭಟನೆ ನಡೆಸಿದರು.

ಘಟನೆಯ ವಿವರ

ಬಾಲಕ ಸೋಮವಾರ ಸಂಜೆ ಶಾಲೆ ಮುಗಿಸಿ ಶಾಲಾ ಬಸ್ಸಿನಲ್ಲಿ ಕಟ್ಟಿಗೆಹಳ್ಳಿಗೆ ತೆರಳುವಾಗ ಹಿಂದಿನ ಹಳ್ಳಿಯಾದ ಈಚಲು ಪಾಳ್ಯ ಬಂದಾಗ ಬಸ್‌ನ ಬಾಗಿಲಿನಲ್ಲಿ ನಿಂತಿದ್ದಾನೆ. ಈ ವೇಳೆ ಬಾಲಕ ಬಸ್ಸಿನಿಂದ ಬಿದ್ದಿದ್ದು ನಂತರ ಬಸ್ಸಿನ ಹಿಂಬದಿ ಚಕ್ರ ಬಾಲಕನ ತಲೆಮೇಲೆ ಹತ್ತಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಚಾಲಕವೇಗವಾಗಿ ವಾಹನ ಚಾಲನೆ ಮಾಡಿದರ ಪರಿಣಾಮವೇ ತಮ್ಮ ಮಗ ಬಿದ್ದಿದ್ದಾನೆ ಎಂದು ಆರೋಪಿಸಿದ ಪೋಷಕರು, ಶಾಲಾ ಬಸ್ಸಿನ ಸಿಬ್ಬಂದಿ ನಿರ್ಲಕ್ಷ್ಯ ಖಂಡಿಸಿದರಲ್ಲದೆ, ಶಾಲಾಡಳಿತ ವಿಭಾಗದ ಕ್ರಮದ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಈ ಮಧ್ಯೆ ಕೆಲವರು ಶಾಲೆಯ ಆಡಳಿತದ ಮುಖ್ಯಸ್ಥರು, ಸ್ವಾಮೀಜಿಗಳು ಸ್ಥಳಕ್ಕಾಗಮಿಸುವ ವರೆಗೂ ಮೃತದೇಹ ತೆರವುಗೊಳಿಸುವುದಿಲ್ಲ ಎಂದು ಪಟ್ಟುಹಿಡಿದಿದ್ದು, ಶಾಲಾ ಸಿಬ್ಬಂದಿ ಧರಣಿ ನಿರತರೊಂದಿಗೆ ಚರ್ಚೆ ನಡೆಸಿದ್ದಾರೆ.

ವರದಿ: ಈಶ್ವರ್ ಎಂ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ