ಉಡುಪಿ ಪರ್ಯಾಯ: ಜನವರಿ 17, 18ರಂದು ವಾಹನಗಳ ಸಂಚಾರ ವ್ಯವಸ್ಥೆ ಬದಲಾವಣೆ, ಡಿಸಿ ಆದೇಶ ಹೀಗಿದೆ
Jan 11, 2024 09:54 PM IST
ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ (ಎಡಚಿತ್ರ-ನೀಲಿ ಸೀರೆ)
- U: dupi Paryayaಜನವರಿ 17 ಮತ್ತು 18ರಂದು ಪರ್ಯಾಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ವಾಹನ ಸಂಚಾರ ವ್ಯವಸ್ಥೆಯನ್ನು ಬದಲಾವಣೆ ಮಾಡಿ ಡಿಸಿ ಆದೇಶ ಹೊರಡಿಸಿದ್ದಾರೆ. (ವರದಿ: ಹರೀಶ ಮಾಂಬಾಡಿ)
ಉಡುಪಿ: ಪರ್ಯಾಯೋತ್ಸವಕ್ಕೆ ಕೆಲವೇ ದಿನಗಳು ಉಳಿದಿದ್ದು, ಸಿದ್ಧತೆಗಳು ಭರದಿಂದ ನಡೆಯುತ್ತಿರುವಂತೆಯೇ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು ವಾಹನ ಸಂಚಾರ ವ್ಯವಸ್ಥೆ ಸಹಿತ ವಿವಿಧ ವಿಚಾರಗಳ ಪರಿಶೀಲನೆಯನ್ನು ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಸೂಚನೆಯೊಂದನ್ನು ಹೊರಡಿಸಿದ್ದು, ಉಡುಪಿಯಲ್ಲಿ ವಾಹನ ಸಂಚಾರ ವ್ಯವಸ್ಥೆಯನ್ನು ಜನವರಿ 17 ಮತ್ತು 18ರಂದು ಪರ್ಯಾಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರೈವೇಟ್ ಬಸ್ಸುಗಳಿಗೆ ಸೂಚನೆ:
ಜ.17 ರಂದು ಸಂಜೆ 4 ಗಂಟೆಯಿಂದ ಮಂಗಳೂರಿನಿಂದ ಉಡುಪಿ ಮತ್ತು ಮಣಿಪಾಲ ಕಡೆಗೆ ಹೋಗುವ ಎಲ್ಲಾ ಪ್ರೈವೇಟ್ ಬಸ್ಸುಗಳು ಸ್ವಾಗತಗೋಪುರ ರಸ್ತೆಯಲ್ಲಿ ಸಂಚಾರ ಮಾಡದೆ ರಾ.ಹೆ-66 ಮೂಲಕ ಕರಾವಳಿ ಜಂಕ್ಷನ್-ಬನ್ನಂಜೆ-ಶಿರಿಬೀಡು-ಸಿಟಿ ಬಸ್ಸು ನಿಲ್ದಾಣ-ಐರೋಡಿಕರ್-ಸರ್ವಿಸ್ ಬಸ್ಸು ನಿಲ್ದಾಣ- ಕಿದಿಯೂರು ಹೊಟೇಲ್ ಮೂಲಕ ಕೆಳಗೆ ಇಳಿದು ಶಿರಿಬೀಡು-ಬನ್ನಂಜೆ - ಕರಾವಳಿ ಜಂಕ್ಷನ್-ರಾ.ಹೆ 66 ಮೂಲಕ ಮಂಗಳೂರಿಗೆ ಸಂಚರಿಸಬೇಕು.
ಜ.17 ರಂದು ಸಂಜೆ 4 ಗಂಟೆಯಿಂದ ಕುಂದಾಪುರ ಕಡೆಯಿಂದ ಉಡುಪಿಗೆ ಬರುವ ಎಲ್ಲಾ ಪ್ರೈವೇಟ್ ಬಸ್ಸುಗಳು ಸಂತೆಕಟ್ಟೆ-ಅಂಬಾಗಿಲು-ನಿಟ್ಟೂರು-ಕರಾವಳಿ ಜಂಕ್ಷನ್-ಬನ್ನಂಜೆ-ಶಿರಿಬೀಡು-ಸಿಟಿ ಬಸ್ಸು ನಿಲ್ದಾಣ- ಐರೋಡಿ ಸರ್ವಿಸ್ ಬಸ್ಸು ನಿಲ್ದಾಣ-ಕಿದಿಯೂರು ಹೋಟೆಲ್ ಮೂಲಕ ಕೆಳಗೆ ಇಳಿದು ಶಿರಿಬೀಡು- ಬನ್ನಂಜೆ -ಕರಾವಳಿ ಜಂಕ್ಷನ್ -ರಾ.ಹೆ. 66 ಮೂಲಕ ಕುಂದಾಪುರಕ್ಕೆ ಸಂಚರಿಸಬೇಕು.
ಜ.17ರಂದು ಸಂಜೆ 4 ಗಂಟೆಯಿಂದ ಕಾರ್ಕಳ, ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ಎಲ್ಲಾ ಪ್ರೈವೇಟ್ ಬಸ್ಸುಗಳು ಇಂದ್ರಾಳಿ-ಎಂ.ಜಿ.ಎಂ-ಕಡಿಯಾಳಿ-ಕಲ್ಸಂಕ- ಉಡುಪಿ ಸಿಟಿ ಬಸ್ಸು ನಿಲ್ದಾಣಕ್ಕೆ ಬಂದು ಅಲ್ಲಿಂದ ತಿರುಗಿಸಿ ವಾಪಸು ಕಲ್ಸಂಕ -ಎಂ.ಜಿ.ಎಂ -ಇಂದ್ರಾಳಿ ಮೂಲಕ ಮಣಿಪಾಲ, ಕಾರ್ಕಳ ಕಡೆಗೆ ಸಂಚಾರ ಮಾಡಬೇಕು.
ಜ.17ರಂದು ಸಂಜೆ 4 ಗಂಟೆಯಿಂದ ರಾಂಪುರ, ಕುಕ್ಕಿಕಟ್ಟೆ, ಮೂಡುಬೆಳ್ಳೆ ಕಡೆಯಿಂದ ಉಡುಪಿಗೆ ಬರುವ ಎಲ್ಲಾ ಪ್ರೈವೇಟ್ ಬಸ್ಸುಗಳು ಮಿಶನ್ ಕಂಪೌಂಡ್ನಿಂದ ಬಲಕ್ಕೆ ತಿರುಗಿ ಅಮ್ಮಣ್ಣಿ ರಾಮಣ್ಣ- ಚಿಟ್ಪಾಡಿ ಜಂಕ್ಷನ್ನಿಂದ ಎಡಕ್ಕೆ ತಿರುಗಿ-ಬೀಡಿನಗುಡ್ಡೆ ಜಂಕ್ಷನ್-ಶಾರದ ಕಲ್ಯಾಣ ಮಂಟಪ ಜಂಕ್ಷನ್ ಎಡಕ್ಕೆ ತಿರುಗಿ-ಕಲ್ಸಂಕ-ಸಿ.ಟಿ ಬಸ್ಸು ನಿಲ್ದಾಣ ಐರೋಡಿಕರ್-ಸಿಟಿ ಬಸ್ಸು ನಿಲ್ದಾಣಕ್ಕೆ ಬಂದು ನಂತರ ಅದೇ ರಸ್ತೆ ಮಾರ್ಗವಾಗಿ ವಾಪಸು ಸಂಚರಿಸಬೇಕು.
ಜ.17ರಂದು ಸಂಜೆ 4 ಗಂಟೆಯಿಂದ ಮಲ್ಪೆ ಕಡೆಯಿಂದ ಉಡುಪಿಗೆ ಬರುವಂತಹ ಖಾಸಗಿ ಬಸ್ಸುಗಳು ಆದಿಉಡುಪಿ-ಕರಾವಳಿ ಜಂಕ್ಷನ್ -ಬನ್ನಂಜೆ-ಶಿರಿಬೀಡು-ಐರೋಡಿಕರ್-ಸಿಟಿ ಬಸ್ಸು ನಿಲ್ದಾಣಕ್ಕೆ ಬಂದು ವಾಪಸು ಶಿರಿಬೀಡು-ಬನ್ನಂಜೆ ಕರಾವಳಿ ಜಂಕ್ಷನ್ -ಆದಿಉಡುಪಿ ಮಾರ್ಗವಾಗಿ ಮಲ್ಪೆ ಕಡೆಗೆ ವಾಪಾಸು ಸಂಚರಿಸಬೇಕು.
ಜ.17 ರಂದು ಬುಕ್ಕಿಂಗ್ ಏಜೆಂಟ್ ಮತ್ತು ಬಸ್ ಕಂಪನಿಯವರು ರಾತ್ರಿ ಉಡುಪಿ ಸಿಟಿ ಒಳಗೆ ಪ್ರವೇಶ ಮಾಡದೇ ಕರಾವಳಿ ಜಂಕ್ಷನ್ನಲ್ಲಿ ಪ್ರಯಾಣಿಕರನ್ನು ಹತ್ತಿಸಿ, ಇಳಿಸಬೇಕು.
ಪಾರ್ಕಿಂಗ್ ಇಲ್ಲಿ ನಿಷೇಧ
ಜ.17 ರಂದು ಸಂಜೆ 6 ಗಂಟೆಯಿಂದ ಜ.18 ರ ಬೆಳಗ್ಗೆ 6 ಗಂಟೆಯ ವರೆಗೆ ಸ್ವಾಗತ ಗೋಪುರ, ಕಿನ್ನಿಮೂಲ್ಕಿ, ಗೋವಿಂದ ಕಲ್ಯಾಣ ಮಂಟಪ, ಜೋಡುಕಟ್ಟೆ, ಟಿ.ಎಂ.ಎ.ಪೈ ಆಸ್ಪತ್ರೆ, ಲಯನ್ಸ್ ಸರ್ಕಲ್, ಹಳೇ ಡಯಾನ ಸರ್ಕಲ್, ಮಿತ್ರ ಜಂಕ್ಷನ್, ತೆಂಕಪೇಟೆ, ರಥಬೀದಿ ರಸ್ತೆಯಲ್ಲಿ ಅಕ್ಕಪಕ್ಕ ವಾಹನ ಸಂಚಾರ ಮತ್ತು ಪಾರ್ಕಿಂಗ್ ನಿಷೇಧಿಸಲಾಗಿರುತ್ತದೆ. ಕಲ್ಸಂಕ ಜಂಕ್ಷನ್ನಿಂದ ವಿದ್ಯೋದ್ಯಯ ಶಾಲೆಯವರೆಗೆ ರಸ್ತೆಯ ಬದಿಯ ಪಾರ್ಕಿಂಗ್ ನಿಷೇಧಿಸಲಾಗಿರುತ್ತದೆ
ಇಲ್ಲಿ ವಾಹನ ಸಂಚಾರವೇ ನಿಷೇಧ
ಜ.17 ರಂದು ಸಂಜೆ 6 ಗಂಟೆಯಿಂದ ಜ.18 ರ ಬೆಳಗ್ಗೆ 6 ಗಂಟೆಯ ವರೆಗೆ ನಾಗಬನಕ್ರಾಸ್ ನಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಕುಂಜೂರು ಎಲೆಕ್ಟ್ರೀಕಲ್ಸ್ ನಿಂದ ಗೀತಾಂಜಲಿ ರಸ್ತೆಯವರೆಗೆ, ಸರ್ವಿಸ್ ಬಸ್ಸು ನಿಲ್ದಾಣದ ಪೊಲೀಸ್ ಔಟ್ ಪೋಸ್ಟ್ನಿಂದ ಕವಿ ಮುದ್ದಣ್ಣ ರಸ್ತೆಯವರೆಗೆ, ವಿಷ್ಣು ಫ್ಲವರ್ ಸ್ಟಾಲ್ನಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಭಾಸ್ಕರ ವಿಹಾರ್ ರಸ್ತೆಯಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಕಲ್ಸಂಕದಿಂದ ಬಡಗುಪೇಟೆ ರಸ್ತೆಯವರೆಗೆ, ಸೌತ್ ಶಾಲೆಯ ಬಳಿ ವೆಂಕಟರಮಣ ದೇವಸ್ಥಾನಕ್ಕೆ ಹೋಗುವ ರಸ್ತೆಯವರೆಗೆ, ಜೋಡುಕಟ್ಟೆಯಿಂದ ಬ್ರಹ್ಮಗಿರಿಗೆ ಹೋಗುವ ರಸ್ತೆಯ ಬೇತಲ್ ಚರ್ಚ್ ಬಳಿ, ಎಲ್.ಐ.ಸಿ ರಸ್ತೆಯ ಸಿಂಡಿಕೇಟ್ ಟವರ್ ಬಳಿ, ಅಲಂಕಾರ್ ಟಾಕೀಸ್ ರಸ್ತೆಯ ಬಳಿ, ಮಿಷನ್ ಆಸ್ಪತ್ರೆಯಿಂದ ಲಯನ್ಸ್ ಸರ್ಕಲ್ ಬರುವ ರಸ್ತೆಯಲ್ಲಿ ಮಿಷನ್ ಆಸ್ಪತ್ರೆ ಎದುರು, ಅಮ್ಮಣ್ಣಿ ರಾಮಣ್ಣ ಹಾಲ್ ಎದುರಿನ ಪಿಪಿಸಿ ಕಾಲೇಜ್ಗೆ ಹೋಗುವ ರಸ್ತೆಯ ಅಮ್ಮಣ್ಣಿ ರಾಮಣ್ಣ ಹಾಲ್ ಎದುರು, ತ್ರಿನಿಟಿ ಐಟಿಐ ಕಾಲೇಜಿನ ಎದುರಿನಿಂದ ಸೌತ್ ಶಾಲೆಗೆ ಹೋಗುವ ರಸ್ತೆಯ, ತ್ರಿನಿಟಿ ಕಾಲೇಜ್ ಎದುರು, ಹಾಗೂ ಬೀಡಿನಗುಡ್ಡೆಯಿಂದ ವೆಂಕಟರಮಣ ದೇವಸ್ಥಾನಕ್ಕೆ ಬರುವ ರಸ್ತೆಯ ಬೀಡಿನಗುಡ್ಡೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.