Uttara Kannada: ಹೊನ್ನಾವರ ಪೊಲೀಸ್ ಠಾಣೆಯಲ್ಲೇ ಆರೋಪಿ ಆತ್ಮಹತ್ಯೆ; ಈತನ ಮೇಲಿದ್ದ ಆರೋಪವಾದ್ರು ಏನು?
Jun 24, 2023 10:20 PM IST
ಪ್ರಾತಿನಿಧಿಕ ಚಿತ್ರ
- Honnavar police station: ಆರೋಪಿಯನ್ನು ಠಾಣೆಯಲ್ಲಿ ವಿಚಾರಣೆ ನಡೆಸುವ ವೇಳೆ ಈತ ವಿಷ ಸೇವಿಸಿದ್ದ. ಪೊಲೀಸರಲ್ಲಿ ತನಗೆ ಕುಡಿಯಲು ನೀರು ಬೇಕು ಎಂದು ಹೇಳಿ ನೀರು ಕುಡಿಯಲು ಹೋಗಿದ್ದ. ಈ ವೇಳೆ ತನ್ನ ಬಾಟಲಿಗೆ ಕೆಮಿಕಲ್ ಮಿಶ್ರಣ ಮಾಡಿಕೊಂಡು ಅದನ್ನೇ ಸೇವಿಸಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ.
ಹೊನ್ನಾವರ (ಉತ್ತರ ಕನ್ನಡ): ಆರೋಪಿಯೊಬ್ಬ ಪೊಲೀಸ್ ಠಾಣೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.
ಮೃತ ಆರೋಪಿಯನ್ನು ಬಿಹಾರದ ಪಾಟ್ನಾ ಮೂಲದ ದಿಲೀಪ್ ಮಂಡಲ್ (39) ಎಂದು ಗುರುತಿಸಲಾಗಿದೆ. ವಂಚನೆ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಈತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದರು.
ವಂಚನೆ ಕೃತ್ಯ
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುತ್ತಾಡುತ್ತಿದ್ದ ಈತ ಜನರನ್ನು ನಾನಾ ಬಗೆಯಲ್ಲಿ ಬಣ್ಣದ ಮಾತುಗಳಿಂದ ವಂಚಿಸುತ್ತಿದ್ದ. ಬಂಗಾರ ತೊಳೆದು ಕೊಡುವ ನೆಪದಲ್ಲಿ ಜನರನ್ನು ವಂಚಿಸಿ ಬಂಗಾರ ಕದ್ದೊಯ್ಯುತ್ತಿದ್ದ ಆರೋಪ ಈತನ ಮೇಲಿತ್ತು. ತನ್ನ ಸಹಚರನ ಜತೆ ಜನರನ್ನು ವಂಚಿಸುವ ಕೃತ್ಯವೆಸಗುತ್ತಿದ್ದ ಕುರಿತು ಆರೋಪ ಕೇಳಿಬಂದಿತ್ತು.ಈ ಹಿನ್ನೆಲೆಯಲ್ಲಿ ದಿಲೀಪ್ ಮಂಡಲ್ ಹಾಗೂ ಆತನ ಸಹಚರನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದರು.
ವಿಚಾರಣೆ ವೇಳೆ ಏನಾಯಿತು?
ಆರೋಪಿಯನ್ನು ಠಾಣೆಯಲ್ಲಿ ವಿಚಾರಣೆ ನಡೆಸುವ ವೇಳೆ ಈತ ವಿಷ ಸೇವಿಸಿದ್ದ. ಪೊಲೀಸರಲ್ಲಿ ತನಗೆ ಕುಡಿಯಲು ನೀರು ಬೇಕು ಎಂದು ಹೇಳಿ ನೀರು ಕುಡಿಯಲು ಹೋಗಿದ್ದ. ಈ ವೇಳೆ ತನ್ನ ಬಾಟಲಿಗೆ ಕೆಮಿಕಲ್ ಮಿಶ್ರಣ ಮಾಡಿಕೊಂಡು ಅದನ್ನೇ ಸೇವಿಸಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್.ಪಿ ವಿಷ್ಣುವರ್ಧನ್ ಪೊಲೀಸ್ ಅಧಿಕಾರಿಗಳ ಜತೆ ಘಟನೆ ಕುರಿತು ಮಾಹಿತಿ ಪಡೆದರು. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು
ನಿನ್ನೆ (ಜೂನ್ 23, ಶುಕ್ರವಾರ) ಬೆಂಗಳೂರಿನ ತಲ್ಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರು ಆನ್‌ಲೈನ್ ಮುಖಾಂತರ ಫುಡ್ ಆರ್ಡರ್ ಮಾಡಿದ್ದಾರೆ. ಆರ್ಡರ್ ಮಾಡಿದ್ದ ಫುಡ್ ಅನ್ನು ಡೆಲಿವರಿ ಮಾಡಲು ಅಪಾರ್ಟ್‌ಮೆಂಟ್‌ಗೆ 30 ವರ್ಷದ ಫುಡ್ ಡೆಲಿವರಿ ಬಾಯ್ ಬಂದಿದ್ದನು. ಈ ವೇಳೆ, ಅಪಾರ್ಟ್‌ಮೆಂಟ್‌ನ 10 ವರ್ಷದ ಬಾಲಕಿ 13 ನೇ ಮಹಡಿಯಲ್ಲಿರುವ ತನ್ನ ಫ್ಲಾಟ್ಗೆ ತೆರಳಲು ಲಿಫ್ಟ್ನಲ್ಲಿ ತೆರಳುತ್ತಿದ್ದಳು. ಇದೇ ಸಮಯದಲ್ಲಿ ಲಿಫ್ಟ್ ಹತ್ತಿದ ಫುಡ್ ಡೆಲಿವರಿ ಬಾಯ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ