logo
ಕನ್ನಡ ಸುದ್ದಿ  /  ಕರ್ನಾಟಕ  /  Vijayapura: ಕರೆಂಟ್ ನೀಡದ್ದಕ್ಕೆ ವಿದ್ಯುತ್​​ ಕಚೇರಿಗೆ ಮೊಸಳೆ ತಂದುಬಿಟ್ಟ ರೈತ Video

Vijayapura: ಕರೆಂಟ್ ನೀಡದ್ದಕ್ಕೆ ವಿದ್ಯುತ್​​ ಕಚೇರಿಗೆ ಮೊಸಳೆ ತಂದುಬಿಟ್ಟ ರೈತ VIDEO

HT Kannada Desk HT Kannada

Oct 20, 2023 05:50 PM IST

google News

ಕರೆಂಟ್ ನೀಡದ್ದಕ್ಕೆ ವಿದ್ಯುತ್​​ ಕಚೇರಿಗೆ ಮೊಸಳೆ ತಂದುಬಿಟ್ಟ ರೈತ

    • ಹಗಲು ಹೊತ್ತಿನಲ್ಲಿ ತ್ರಿಫೇಸ್ ವಿದ್ಯುತ್ ರೈತರ ಜಮೀನುಗಳಿಗೆ ದೊರಕುತ್ತಿಲ್ಲ. ನಿನ್ನೆ ರಾತ್ರಿ ಪಾಳಿಯಲ್ಲಿ ನೀರು ಉಣಿಸುವಾಗ ಹೊಲದಲ್ಲಿ ಮೊಸಳೆ ಕಾಣಿಸಿಕೊಂಡಿದೆ, ಅದೇ ಮೊಸಳೆಯನ್ನ ಹಿಡಿದು ಟ್ರ್ಯಾಕ್ಟರ್ ಮೂಲಕ ವಿದ್ಯುತ್ ವಿತರಣಾ ಕೇಂದ್ರಕ್ಕೆ ತಂದಿದ್ದಾರೆ.
ಕರೆಂಟ್ ನೀಡದ್ದಕ್ಕೆ ವಿದ್ಯುತ್​​ ಕಚೇರಿಗೆ ಮೊಸಳೆ ತಂದುಬಿಟ್ಟ ರೈತ
ಕರೆಂಟ್ ನೀಡದ್ದಕ್ಕೆ ವಿದ್ಯುತ್​​ ಕಚೇರಿಗೆ ಮೊಸಳೆ ತಂದುಬಿಟ್ಟ ರೈತ

ವಿಜಯಪುರ: ಸರಿಯಾದ ಸಮಯಕ್ಕೆ ಕರೆಂಟ್ ನೀಡದಕ್ಕೆ ಬೇಸರಗೊಂಡ ರೈತರು ಹೆಸ್ಕಾಂ ವಿದ್ಯುತ್ ವಿತರಣಾ ಘಟಕದ ಆವರಣಕ್ಕೆ ಮೊಸಳೆ ತಂದು ಬಿಟ್ಟ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ್ ಗ್ರಾಮದಲ್ಲಿ ನಡೆದಿದೆ.

ಪ್ರತಿದಿನ ತಡರಾತ್ರಿ ಕರೆಂಟ್ ನೀಡುತ್ತಾರೆ, ಕತ್ತಲೆಯಲ್ಲಿ ಹೊಲಗಳಿಗೆ ಹೋಗಿ ನೀರುಣಿಸುವುದು ಹೇಗೆ ಎಂದು ರೈತ ಅಳಲು ತೋಡಿಕೊಂಡಿದ್ದಾನೆ. ಕತ್ತಲೆಯಲ್ಲಿ ಜಲಚರ ಪ್ರಾಣಿಗಳಿಂದ ತೊಂದರೆ ಇದೆ ಎಂಬುದನ್ನು ಸಾಂಕೇತಿಕರಿಸಲು ರೈತ ಈ ಕ್ರಮಕ್ಕೆ ಮುಂದಾಗಿದ್ದಾನೆ.

ರಾತ್ರಿ ವೇಳೆ ಕರೆಂಟ್ ನೀಡಿದರೆ ನಮಗೆ ಏನು ಪ್ರಯೋಜನ? ನಮ್ಮ ಸಮಸ್ಯೆ ಅಧಿಕಾರಿಗಳಿಗೆ ಅರ್ಥವಾಗಲಿ ಎಂದು ಮೊಸಳೆಯನ್ನ ತಂದಿದ್ದೇವೆ ಎಂದರು.

ಹಗಲು ಹೊತ್ತಿನಲ್ಲಿ ತ್ರಿಫೇಸ್ ವಿದ್ಯುತ್ ರೈತರ ಜಮೀನುಗಳಿಗೆ ದೊರಕುತ್ತಿಲ್ಲ. ಹಗಲು ಹೊತ್ತಿನಲ್ಲಿ ತ್ರಿಫೇಸ್ ವಿದ್ಯುತ್ ಇಲ್ಲದೇ ತೊಂದರೆ ಅನುಭವಿಸುತ್ತಿರುವ ರೈತರು ನಿದ್ದೆಗೆಟ್ಟು ತಡರಾತ್ರಿ ನೀರು ಹರಿಸುವ ಕಾರ್ಯಕ್ಕೆ ಅಣಿಯಾಗಬೇಕಿದೆ.

ನಿನ್ನೆ ರಾತ್ರಿ ಪಾಳಿಯಲ್ಲಿ ನೀರು ಉಣಿಸುವಾಗ ಹೊಲದಲ್ಲಿ ಮೊಸಳೆ ಕಾಣಿಸಿಕೊಂಡಿದೆ, ಅದೇ ಮೊಸಳೆಯನ್ನ ಹಿಡಿದು ಟ್ರ್ಯಾಕ್ಟರ್ ಮೂಲಕ ವಿದ್ಯುತ್ ವಿತರಣಾ ಕೇಂದ್ರಕ್ಕೆ ತಂದಿದ್ದಾರೆ. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮನವೊಲಿಸಿ ಮೊಸಳೆ ತೆಗೆದುಕೊಂಡು ಹೋಗಿದ್ದಾರೆ.

ವರದಿ: ಸಮೀವುಲ್ಲಾ ಉಸ್ತಾದ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ