logo
ಕನ್ನಡ ಸುದ್ದಿ  /  ಕರ್ನಾಟಕ  /  Viral News: ಈಕೆಯದ್ದು ಮದುವೆಯಾಗಿ ವಿಚ್ಛೇದನೆ ಪಡೆಯೋದೇ ದಂಧೆ, ಇದು ಕಾನೂನಿನ ದುರುಪಯೋಗ ಎಂದು ಮಹಿಳೆಯ ವಿರುದ್ದ ಕಿಡಿಕಾರಿದ ಹೈಕೋರ್ಟ್‌

Viral News: ಈಕೆಯದ್ದು ಮದುವೆಯಾಗಿ ವಿಚ್ಛೇದನೆ ಪಡೆಯೋದೇ ದಂಧೆ, ಇದು ಕಾನೂನಿನ ದುರುಪಯೋಗ ಎಂದು ಮಹಿಳೆಯ ವಿರುದ್ದ ಕಿಡಿಕಾರಿದ ಹೈಕೋರ್ಟ್‌

Umesha Bhatta P H HT Kannada

Jul 29, 2024 01:13 PM IST

google News

ಮಹಿಳೆಯ ಮದುವೆ ಹಾಗೂ ವಿಚ್ಚೇದನದ ನಡೆಯ ಬಗ್ಗೆ ಕರ್ನಾಟಕ ಹೈಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿದೆ.

    • Court news ಮಹಿಳೆಯೊಬ್ಬರು ಮದುವೆಯಾಗಿ ವಿಚ್ಚೇದನ ಪಡೆದು ಸೆಟ್ಲ್‌ ಮೆಂಟ್‌ ಮಾಡಿಕೊಳ್ಳುವ ಪ್ರಕರಣ ಒಂದರಲ್ಲಿ ಕರ್ನಾಟಕ ಹೈಕೋರ್ಟ್‌( Karnataka High court) ಸಿಡಿಮಿಡಿ ಗೊಂಡಿದೆ. 
ಮಹಿಳೆಯ ಮದುವೆ ಹಾಗೂ ವಿಚ್ಚೇದನದ ನಡೆಯ ಬಗ್ಗೆ ಕರ್ನಾಟಕ ಹೈಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿದೆ.
ಮಹಿಳೆಯ ಮದುವೆ ಹಾಗೂ ವಿಚ್ಚೇದನದ ನಡೆಯ ಬಗ್ಗೆ ಕರ್ನಾಟಕ ಹೈಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು: ಆಕೆಗೆ ಮದುವೆಯಾಗೋದು. ಆರು ತಿಂಗಳಿನಿಂದ ಒಂದು ವರ್ಷದೊಳಗೆ ವಿಚ್ಚೇದನ ಪಡೆಯೋದೇ ದಂಧೆ. ಮದುವೆಯಾದ ವ್ಯಕ್ತಿ ವಿರುದ್ದ ದೌರ್ಜನ್ಯ ಪ್ರಕರಣ ದಾಖಲಿಸೋದು. ನ್ಯಾಯಾಲಯ ಮೊರೆ ಹೋಗಿ ವಿಚ್ಚೇದನ ಪಡೆದುಕೊಂಡು ಹೊಂದಾಣಿಕೆ ಮಾಡಿಕೊಳ್ಳೋದು. ಮತ್ತೆ ಇದೇ ರೀತಿ ಮದುವೆ, ವಿಚ್ಚೇದನ, ಸೆಟ್ಲ್‌ಮೆಂಟ್‌. ಈ ರೀತಿ ಏಳನೇ ಬಾರಿ ವಿಚ್ಚೇದನಕ್ಕೆ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದ ಪ್ರಕರಣ ಈಗ ಬಯಲಾಗಿದೆ. ಅದು ಏಳನೆ ಪತಿ ಎಂದು ಹೇಳಿಕೊಂಡವರು ಮಹಿಳೆ ದೌರ್ಜನ್ಯದ ಬಗ್ಗೆ ಹೈಕೋರ್ಟ್‌ ನ್ಯಾಯಮೂರ್ತಿಗಳ ಗಮನಕ್ಕೆ ತಂದಾಗ ಇದು ಬಯಲಾಗಿದೆ. ನ್ಯಾಯಮೂರ್ತಿಗಳು ಇದನ್ನು ಕಾನೂನಿನ ದುರುಪಯೋಗ ಎಂದು ಹೇಳಿ ಆಕ್ರೋಶ ಹೊರ ಹಾಕಿದ್ದಾರೆ.

ಇದು ನಡೆದಿರುವುದು ಬೆಂಗಳೂರಿನಲ್ಲಿ. ಆಕೆ ಮದುವೆಯಾಗುವುದು, ಆನಂತರ ಕೆಲವೇ ದಿನಗಳಲ್ಲಿ ವಿಚ್ಚೇದನ ಪಡೆಯುವುದು ನಡೆದಿದೆ. ಈಗಾಗಲೇ ಆರು ವಿಚ್ಚೇದನ ಪ್ರಕರಣಗಳು ಪೂರ್ಣಗೊಂಡಿವೆ ಕೂಡ. ಏಳನೇ ವ್ಯಕ್ತಿ ಆಕೆಯ ಕುರಿತು ಮಾಹಿತಿ ಕಲೆ ಹಾಕಿ ಈ ಹಿಂದೆ ಆರು ಮಂದಿಗೆ ವಿಚ್ಚೇದನ ನೀಡಿ ಸೆಟ್ಲ್‌ ಮೆಂಟ್‌ ಮಾಡಿಕೊಂಡಿರುವುದು. ಇದೇ ರೀತಿ ಇನ್ನಷ್ಟು ಮಂದಿ ಮದುವೆಯಾಗಿ ದೌರ್ಜನ್ಯ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ನೀವು ಎಷ್ಟನೇ ಪತಿ ಎಂದು ನ್ಯಾಯಮೂರ್ತಿಗಳು ಕೇಳುತ್ತಾರೆ. ನಾನು ಏಳನೆಯವನು ಎಂದು ಅವರು ಹೇಳುತ್ತಾರೆ. ಹಾಗಾದರೇ ಈ ಹಿಂದಿನ ಪ್ರಕರಣಗಳಲ್ಲಿ ವಿಚ್ಚೇದನ ಆಗಿದೆಯಾ ಎಂದು ಕೇಳುತ್ತಾರೆ. ಹೌದು. ಎಲ್ಲಾ ಪ್ರಕರಣದಲ್ಲಿ ವಿಚ್ಚೇದನ ಪಡೆಯಲಾಗಿದೆ. ಈಗ ನನಗೂ ತೊಂದರೆ ನೀಡುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ವಕೀಲರೂ ಕೂಡ ಕಕ್ಷಿದಾರರ ಪರ ದನಿಗೂಡಿಸುತ್ತಾರೆ.

ಕೋರ್ಟ್ ವಿಚಾರಣೆಯ ಈ ವಿಡಿಯೋ ಭಾರೀ ವೈರಲ್ ಆಗಿದೆ. ಮಹಿಳೆ 6 ತಿಂಗಳಿಂದ ಒಂದು ವರ್ಷದೊಳಗೆ ಆರು ಗಂಡಂದರನ್ನು ಬದಲಾವಣೆ ಮಾಡಿಕೊಂಡಿದ್ದಾಳೆ. ಪ್ರತಿ ಬಾರಿ ಗಂಡನ ವಿರುದ್ಧ ಸೆಕ್ಷನ್ 498ಎ ಪ್ರಕರಣ ದಾಖಲಿಸಿ ಮಾನಸಿಕ ಹಿಂಸೆ ನೀಡಿ ಕೋರ್ಟ್‌ ಮೂಲಕ ವಿಚ್ಚೇದನ ಪಡೆದಿರುವುದು ವಿಡಿಯೋ ಸಂಭಾಷಣೆಯಲ್ಲಿ ದಾಖಲಾಗಿದೆ.7ನೇ ಪತಿ ವಿರುದ್ದವೂ 409ಎ ಪ್ರಕರಣ ದಾಖಲಿಸಿದ್ದಾಳೆ. ಇದು ವಿಚಾರಣೆ ಹಂತದಲ್ಲಿದೆ.

ಈ ರೀತಿ ಕಾನೂನನ್ನು ದುರುಪಯೋಗಪಡಿಸಿಕೊಂಡು ಮಾನಸಿಕ ಹಿಂಸೆ ನೀಡೋದು ಒಪ್ಪಲಾಗದು. ಇತರೆ ಆರು ಮಂದಿಯ ಮಾಹಿತಿ ನಿಮ್ಮ ಬಳಿ ಇದ್ದರೆ ಅವರ ಫೋಟೋಗಳ ಸಹಿತ ನೀವು ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿ. ಇದನ್ನಾಧರಿಸಿಯೇ ವಿಚಾರಣೆ ಮಾಡೋಣ. ಹೀಗೆ ಮದುವೆಯಾಗಿ, ವಿಚ್ಚೇದನೆ ಪಡೆಯುವುದು ಎಷ್ಟು ಬಾರಿ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ. ಆಗಷ್ಟ್‌ 21ಕ್ಕೆ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳು ಮುಂದೆ ಹಾಕಿದರು.

ನ್ಯಾಯಮೂರ್ತಿಗಳ ವಿಚಾರಣೆ ವಿಡಿಯೋ ವೈರಲ್‌ ಆಗಿದ್ದು. ಹಲವರು ಈ ರೀತಿ ಕಾನೂನು ದುರುಪಯೋಗ ಪಡಿಸಿಕೊಳ್ಳುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ವಕೀಲರು ಸಮ್ಮತಿಸಿದ್ದು, ಮಾಹಿತಿ ಒದಗಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ