ಕರ್ನಾಟಕ ಹವಾಮಾನ ಫೆ 13; ಬೆಂಗಳೂರು ಉಷ್ಣಾಂಶ ಹಗಲು 33, ರಾತ್ರಿ 17 ಡಿಗ್ರಿ ಸೆಲ್ಶಿಯಸ್; ಒಳನಾಡುಗಳಲ್ಲಿ ತಾಪಮಾನ ಹೆಚ್ಚಳ
Feb 13, 2024 06:06 AM IST
ಕರ್ನಾಟಕ ಹವಾಮಾನ ಫೆ 13; ಬೆಂಗಳೂರು ಉಷ್ಣಾಂಶ ಹಗಲು 33, ರಾತ್ರಿ 17 ಡಿಗ್ರಿ ಸೆಲ್ಶಿಯಸ್ ಇರಲಿದ್ದು, ಒಳನಾಡುಗಳಲ್ಲಿ ತಾಪಮಾನ ಹೆಚ್ಚಳವಾಗಬಹುದು ಎಂದು ಹವಾಮಾನ ವರದಿ ಹೇಳಿದೆ.
ಕರ್ನಾಟಕ ಹವಾಮಾನ ಫೆ 13: ವಿಶೇಷವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರಗಳಲ್ಲಿ ಮುಂಜಾನೆ ಮಂಜು ಕಾಡಿದರೆ, ಹಗಲು ಉಷ್ಣಾಂಶ ಹೆಚ್ಚಳದ ಬೇಗೆ ಕಾಡಲಿದೆ. ಒಳನಾಡಲ್ಲಿ ರಾತ್ರಿ ಚಳಿ, ಹಗಲು ಬಿಸಿಲಿನ ಬೇಗೆಯ ವಿಪರೀತ ಹವಾಮಾನ ಕಂಗೆಡಿಸಲಿದೆ. ಬೆಂಗಳೂರು ಉಷ್ಣಾಂಶ ಹಗಲು 33, ರಾತ್ರಿ 17ಡಿಗ್ರಿ ಸೆಲ್ಶಿಯಸ್ ಇರಲಿದೆ. ಒಳನಾಡುಗಳಲ್ಲಿ ತಾಪಮಾನ ಹೆಚ್ಚಳದ ಸುಳಿವು ನೀಡಿದೆ ವರದಿ.
ಬೆಂಗಳೂರು: ಮಾಘ ಮಾಸ ಎಂದರೆ ಚಳಿಗಾಲದ ಅವಧಿ. ಫೆಬ್ರವರಿ ತಿಂಗಳ ಮಧ್ಯಭಾಗ ಸಮೀಪವಿದ್ದು, ಹಗಲು ಬೇಸಿಗೆ ತಾಪ ಜನರನ್ನು ಕಾಡತೊಡಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮುಂಜಾನೆ ಮಂಜು ಕಾಡಿದರೆ, ಹಗಲು ಒಣಹವೆ ಕಂಗೆಡುವಂತೆ ಮಾಡಿದೆ. ಹಗಲು ಹೊತ್ತು ಬಿಸಿಲಿನ ಬೇಗೆ ಕಾಡಿದರೆ, ರಾತ್ರಿ ವೇಳೆ ಮೈ ನಡುಕದ ಚಳಿ. ಕಳೆದ ಹತ್ತಾರು ದಿನಗಳಿಂದ ಈ ವಿಪರೀತಿ ಹವಾಮಾನ ಇದ್ದು, ಇಂದು (ಫೆ.13) ಕೂಡ ಮುಂದುವರಿಯಲಿದೆ ಎಂದು ಹವಮಾನ ಮುನ್ಸೂಚನಾ ವರದಿ ಹೇಳಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಜ್ಯದ ಪ್ರಮುಖ ನಗರಗಳಲ್ಲಿ ತಾಪಮಾನ 32-33 ಡಿಗ್ರಿ ಆಸುಪಾಸಿನಲ್ಲಿದೆ. ಮಂಗಳೂರು, ಚಿತ್ರದುರ್ಗ, ಕಲಬುರಗಿ, ಬೆಳಗಾವಿಯ ಕೆಲವೆಡೆ ಮೋಡ ಕವಿದ ವಾತಾವರಣ ಕೆಲ ಹೊತ್ತು ಕಾಣಲಿದೆ. ಮುಂಜಾನೆ ಮಂಜು ಮುಸುಕಿದ ವಾತಾವರಣ ಇರುವಲ್ಲಿ ತೀವ್ರ ಚಳಿ ಕಾಡಬಹುದು.
ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡುಗಳಲ್ಲಿ ಹಗಲು ತಾಪಮಾನ ಹೆಚ್ಚಳವನ್ನು ನಿರೀಕ್ಷಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಗ್ರಾಮೀಣ ಭಾಗದಲ್ಲಿ ರಾತ್ರಿ ಮತ್ತು ಮುಂಜಾನೆ ಚಳಿ ಇದ್ದರೆ, ಹಗಲು ಒಣ ಹವೆ ಮುಂದುವರಿಯಲಿದೆ. ತಾಪಮಾನ ಸ್ವಲ್ಪ ಹೆಚ್ಚಳ ಅಂದರೆ 2 ರಿಂದ 3 ಡಿಗ್ರಿ ಸೆಲ್ಶಿಯಸ್ ತನಕ ಹೆಚ್ಚಾಗಬಹುದು. ಕರಾವಳಿಯಲ್ಲಿ ಸಹಜ ವಾತಾವರಣ ಇರಲಿದೆ ಎಂದು ಹವಾಮಾನ ಮುನ್ಸೂಚನಾ ವರದಿ ಹೇಳಿದೆ.
ಬೆಂಗಳೂರು ಹವಾಮಾನ ಇಂದು
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಮಂಗಳವಾರ (ಫೆ13.) ಕೆಲವೆಡೆ ಮುಂಜಾನೆ ಮಂಜು ಇರಲಿದ್ದು, ಚಳಿ ಕೂಡ ಇರಲಿದೆ. ಬಹುತೇಕ ಕಡೆಗಳಲ್ಲಿ ಹಗಲು ನಿರ್ಮಲ ಆಕಾಶ ಕಾಣಬಹುದು. ಕೆಲವು ಕಡೆ ಸಂಜೆ ವೇಳೆ ಚಳಿ ಕಾಡಲಿದ್ದು, ಹಗಲಲ್ಲಿ ಒಣಹವೆ ಇರಲಿದೆ ಎಂದು ವರದಿ ಹೇಳಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇಂದು (ಫೆ.13) ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ಅನುಭವಕ್ಕೆ ಬರಲಿದೆ. ನಿನ್ನೆ (ಫೆ.12) 31 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 16.5 ಡಿಗ್ರಿ ಸೆಲ್ಶಿಯಸ್ ಇತ್ತು. ಅದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ಇರಲಿದೆ. ನಿನ್ನೆ (ಫೆ.13) ತಾಪಮಾನ 31.6 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 15.4 ಡಿಗ್ರಿ ಸೆಲ್ಶಿಯಸ್ ಇತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಮುಖ ನಗರಗಳಲ್ಲಿ ಈಗಿನ (ಫೆ.13 ರ ಬೆಳಗ್ಗೆ 6 ಗಂಟೆಗೆ) ತಾಪಮಾನ
ಭಾರತೀಯ ಹವಾಮಾನ ಇಲಾಖೆಯ ದತ್ತಾಂಶ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಫೆ.13 ರ) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ತಾಪಮಾನಗಳ ವಿವರ.
ಬೆಂಗಳೂರು - 25 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 41)
ಮಂಗಳೂರು - 28.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 73)
ಚಿತ್ರದುರ್ಗ - 25.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 50)
ಗದಗ - 27.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 38)
ಹೊನ್ನಾವರ - 31 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 58)
ಕಲಬುರಗಿ - 33 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 33)
ಬೆಳಗಾವಿ - 33.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 16)
ಕಾರವಾರ - 32.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 59)
-----------------
(This copy first appeared in Hindustan Times Kannada website. To read more like this please logon to kannada.hindustantime.com)