logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಹವಾಮಾನ; ಇನ್ನೆರಡು ತಿಂಗಳು ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಕಡೆ ವಾಡಿಕೆಗಿಂತ ಹೆಚ್ಚು ಮಳೆ, ಕೆಲವೆಡೆ ಸಾಧಾರಣ ಮಳೆ ಮುನ್ಸೂಚನೆ

ಕರ್ನಾಟಕದ ಹವಾಮಾನ; ಇನ್ನೆರಡು ತಿಂಗಳು ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಕಡೆ ವಾಡಿಕೆಗಿಂತ ಹೆಚ್ಚು ಮಳೆ, ಕೆಲವೆಡೆ ಸಾಧಾರಣ ಮಳೆ ಮುನ್ಸೂಚನೆ

Umesh Kumar S HT Kannada

Aug 02, 2024 06:15 AM IST

google News

ಕರ್ನಾಟಕದ ಹವಾಮಾನ; ಇನ್ನೆರಡು ತಿಂಗಳು ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಕಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಬಹುದು ಎಂದು ಕೆಲವೆಡೆ ಸಾಧಾರಣ ಮಳೆ ಮುನ್ಸೂಚನೆ ವರದಿ ಹೇಳಿದೆ.

  • Karnataka Weather Update; ಕರ್ನಾಟಕದಲ್ಲಿ ವಿಶೇಷವಾಗಿ ಕರಾವಳಿ ಕರ್ನಾಟಕ ಭಾಗದಲ್ಲಿ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿತ್ತು. ಕರ್ನಾಟಕದ ಹವಾಮಾನ ವರದಿ ಪ್ರಕಾರ, ಇನ್ನೆರಡು ತಿಂಗಳು ಕೂಡ ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಕಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಬಹುದು. ಕೆಲವೆಡೆ ಸಾಧಾರಣ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕರ್ನಾಟಕದ ಹವಾಮಾನ; ಇನ್ನೆರಡು ತಿಂಗಳು ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಕಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಬಹುದು ಎಂದು  ಕೆಲವೆಡೆ ಸಾಧಾರಣ ಮಳೆ ಮುನ್ಸೂಚನೆ ವರದಿ ಹೇಳಿದೆ.
ಕರ್ನಾಟಕದ ಹವಾಮಾನ; ಇನ್ನೆರಡು ತಿಂಗಳು ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಕಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಬಹುದು ಎಂದು ಕೆಲವೆಡೆ ಸಾಧಾರಣ ಮಳೆ ಮುನ್ಸೂಚನೆ ವರದಿ ಹೇಳಿದೆ.

ಬೆಂಗಳೂರು: ಕರ್ನಾಟಕದಲ್ಲಿ ಮೇ ತಿಂಗಳ ಮಧ್ಯಭಾಗದಿಂದ ಮಳೆಯಾಗುತ್ತಿದ್ದು, ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಪರಿಣಾಮ, ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ಕೆಲವು ಜಲಾನಯನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಕಳೆದ ಕೆಲವು ದಿನಗಳಿಂದ ಕರಾವಳಿ ಕರ್ನಾಟಕ ಭಾಗದಲ್ಲಿ ವ್ಯಾಪಕವಾಗಿ ಧಾರಾಕಾರ ಮಳೆಯಾಗುತ್ತಿದ್ದು, ಸಂಕಷ್ಟದ ಸನ್ನಿವೇಶವಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಈ ನಡುವೆ, ಭಾರತೀಯ ಹವಾಮಾನ ಇಲಾಖೆ ಆಗಸ್ಟ್‌ ಮತ್ತು ಸೆಪ್ಟೆಂಬರ್ ತಿಂಗಳ ಮಳೆ ಮುನ್ಸೂಚನೆ ವರದಿಯನ್ನು ಪ್ರಕಟಿಸಿದೆ. ಇದರಂತೆ, ನೈಋತ್ಯ ಮುಂಗಾರು ಅವಧಿಯ ಉಳಿದ ಅವಧಿ (ಆಗಸ್ಟ್, ಸೆಪ್ಟೆಂಬರ್‌)ನಲ್ಲಿ ಬಹುತೇಕ ಕಡೆ ವಾಡಿಕೆಗಿಂತ ಹೆಚ್ಚು ಮತ್ತು ಕೆಲವು ಕಡೆ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ವರದಿ ವಿವರಿಸಿದೆ.

ಆಗಸ್ಟ್‌ ಸೆಪ್ಟೆಂಬರ್‌ ವೇಳೆ ಕರ್ನಾಟಕದಲ್ಲಿ ವಾಡಿಕೆಗಿಂತ ಅಧಿಕ ಮಳೆ, 5 ಅಂಶಗಳು

1) ಹವಾಮಾನ ಇಲಾಖೆಯ ಮುನ್ಸೂಚನೆಯ ಅನ್ವಯ ರಾಜ್ಯದಲ್ಲಿ 2024ರ ನೈಋತ್ಯ ಮುಂಗಾರು ಉಳಿದ ಅವಧಿಗೆ (ಆಗಸ್ಟ್-ಸೆಪ್ಟೆಂಬರ್) ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆಗಳಿದ್ದು, ಅಲ್ಲಲ್ಲಿ ವಾಡಿಕೆ ಮಳೆಯಾಗಲಿದೆ.

2) ಕರ್ನಾಟಕದಲ್ಲಿ ಒಟ್ಟಾರೆ ಮುಂಗಾರು ಹಂಗಾಮು (ಜೂನ್ - ಸೆಪ್ಟೆಂಬರ್) ಅವಧಿಗೆ ವಾಡಿಕೆಯಾಗಿ ಸರಾಸರಿ 85.2 ಸೆಂ.ಮೀ. ಮಳೆಯಿದ್ದು, ಆಗಸ್ಟ್ ತಿಂಗಳಲ್ಲಿ 22.0 ಸೆಂ.ಮೀ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ 16.1 ಸೆಂ.ಮೀನಷ್ಟು ಮಳೆಯಾಗಬಹುದು.

3) ಕರ್ನಾಟಕವೂ ಸೇರಿದಂತೆ ಒಟ್ಟಾರೆ ಭಾರತದಲ್ಲಿ ಶೇಕಡ 35-65% ರಷ್ಟು ವಾಡಿಕೆಗಿಂತ ಅಧಿಕ ಮಳೆಯಾಗಬಹುದು. ಇದರಂತೆ, 2024ರ ಆಗಸ್ಟ್‌ನಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ. ಅಲ್ಲಲ್ಲಿ ವಾಡಿಕೆ ಮತ್ತು ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ವರದಿ ಹೇಳಿದೆ.

ಆಗಸ್ಟ್ ತಿಂಗಳ ಸಂಭಾವ್ಯ ಮಳೆ ಮುನ್ಸೂಚನೆ ನಕ್ಷೆ

4) ಸಾಮಾನ್ಯವಾಗಿ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಅಧಿಕ ಮಳೆಯಾಗಲಿದ್ದು, ಮಳೆ ಮುನ್ಸೂಚನೆಯ ಅನ್ವಯ ರಾಜ್ಯದಲ್ಲಿ ವಾಡಿಕೆಗಿಂತಾ ಅಧಿಕ ಮಳೆಯಾಗುವ ಸಾಧ್ಯತೆಗಳಿರುವುದರಿಂದ, ಸಾಮಾನ್ಯವಾಗಿ ಅತೀವೃಷ್ಟಿ, ಪ್ರವಾಹ, ಭೂಕುಸಿತ, ಮೂಲಭೂತ ಸೌಕರ್ಯಗಳಿಗೆ ಹಾನಿ ಹಾಗೂ ಇತರ ಸಂಭಾವ್ಯ ಅಪಾಯಗಳು ಉಂಟಾಗುವ ಸಾಧ್ಯತೆಗಳಿದೆ ಎಂದು ಹವಮಾನ ಇಲಾಖೆಯ ವರದಿ ವಿವರಿಸಿದೆ.

ಆಗಸ್ಟ್‌ ಮತ್ತು ಸೆಪ್ಟೆಂಬರ್ ತಿಂಗಳ ಮಳೆ ನಕ್ಷೆ

2024ರ ಆಗಸ್ಟ್ ಮಾಹೆಯಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನವು ವಾಡಿಕೆಗಿಂತ ಅಧಿಕವಾಗಿರಲಿದ್ದು, ಈಶಾನ್ಯ ಭಾಗದ ಜಿಲ್ಲೆಗಳಲ್ಲಿ ವಾಡಿಕೆಯಷ್ಟು ತಾಪಮಾನ ಕಂಡುಬರಲಿದೆ. ಗರಿಷ್ಟ ತಾಪಮಾನವು ರಾಜ್ಯದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಅಧಿಕವಾಗಿರುವ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆಯ ವರದಿ ವಿವರಿಸಿದೆ.

ಆಗಸ್ಟ್‌ ತಿಂಗಳಲ್ಲಿ ಸಂಭಾವ್ಯ ಕನಿಷ್ಠ ಮತ್ತು ಗರಿಷ್ಠ ತಾಪಮಾನ ಸೂಚಿಸುವ ನಕ್ಷೆ.

ಅದಾಗ್ಯೂ, ಹೆಚ್ಚಿನ ಮಳೆಯಿಂದಾಗಿ ಕೃಷಿ-ತೋಟಗಾರಿಕೆಗೆ ಅನುಕೂಲವಾಗಲಿದ್ದು, ಜಲಾಶಯಗಳು ಮತ್ತು ಕೆರೆಕಟ್ಟೆಗಳಿಗೆ ಒಳಹರಿವು ಹೆಚ್ಚಾಗಲಿದೆ ಹಾಗೂ ಅಂತರ್ಜಲ ಮಟ್ಟವು ಸುಧಾರಣೆಯಾಗಲಿದೆ ಎಂದು ಹವಾಮಾನ ಇಲಾಖೆಯ ವರದಿ ವಿವರಿಸಿದೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ